Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಬಾಲಿವುಡ್ ಬೆಡಗಿ ಮೃನಾಲ್ ಠಾಕೂರ್ ಫಿಟ್‌ನೆಸ್ ಸೀಕ್ರೆಟ್ ಏನು?
ಮೃನಾಲ್ ಠಾಕೂರ್ ಸದ್ಯ ಬಾಲಿವುಡ್ ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯಲ್ಲೂ ಈ ಹೆಸರು ಚಾಲ್ತಿಯಲ್ಲಿದೆ. ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇನೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕ್ಯೂಟ್ ಹುಡುಗಿ ಮೃನಾಲ್ ಆರಂಭದಲ್ಲಿ ಕಷ್ಟಗಳನ್ನೇ ಕಂಡರೂ ಕೂಡ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಒಂದಾದ ಮೇಲೊಂದರಂತೆ ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬರ್ತಿದೆ.

ಇತ್ತೀಚಿಗೆ ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಸೀತಾರಾಮಂ ಸಿನಿಮಾ ಮೃನಾಲ್‌ಗೆ ಸಿಕ್ಕಾಪಟ್ಟೆ ಹೆಸರನ್ನು ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಮೃನಾಲ್ ನಟನೆಯನ್ನು ಎಲ್ಲರೂ ಮೆಚ್ಚುಕೊಂಡಿದ್ರು. ಹೀರೋಯಿನ್ ಅಂದ ಮೇಲೆ ಫಿಟ್‌ನೆಸ್ ತುಂಬಾನೇ ಮುಖ್ಯವಾಗುತ್ತದೆ. ಮೃನಾಲ್ ಠಾಕೂರ್ ಫಿಟ್‌ನೆಸ್ ಕಾಪಾಡಿಕೊಳ್ಳಲು ಏನು ಮಾಡ್ತಾರೆ? ಅವರ ಫಿಟ್‌ನೆಸ್ ಸೀಕ್ರೆಟ್ ಏನು ಅನ್ನೋದನ್ನ ಹೇಳ್ತೀವಿ.
ಫೇವರೇಟ್ ಹಿರೋಯಿನ್ ಡಯೇಟ್ ಸೀಕ್ರೇಟ್ ಬಗ್ಗೆ ತಿಳಿದುಕೊಳ್ಳೋ ಕುತುಹಲವಂತೂ ಅಭಿಮಾನಿಗಳಿಗೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತು ಮೃನಾಲ್ ಠಾಕೂರು ಅವರ ಫಿಟ್‌ನೆಸ್ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ.
1. ಆರೋಗ್ಯಕರ ಜೀವನಶೈಲಿಗೆ ಆರೋಗ್ಯಕರ ಆಹಾರ
ಮೃನಾಲ್ ನಿತ್ಯದ ಆಹಾರ ಕ್ರಮವನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ಪ್ರತಿನಿತ್ಯ ಎಂಟು ಲೋಟದಷ್ಟು ಬಿಸಿನೀರನ್ನು ಸೇವನೆ ಮಾಡುತ್ತಾರೆ. ಕಾರ್ಬೋಹೈಡ್ರೇಡ್ ಹೊಂದಿರುವ ಪದಾರ್ಥವನ್ನು ಸೇವಿಸುವುದಿಲ್ಲ. ಜೊತೆಗೆ ಆದಷ್ಟು ಸಮತೋಲಿತ ಆಹಾರವನ್ನು ಸೇವನೆ ಮಾಡುತ್ತಾರೆ.
ಇನ್ನೂ ಶೂಟಿಂಗ್ ಮಧ್ಯದಲ್ಲಿ ಅವರು ಯಾವುದೇ ತರಹದ ತಿಂಡಿಯನ್ನು ಸೇವಿಸುವುದಿಲ್ಲ. ಬದಲಾಗಿ ಹಣ್ಣುಗಳನ್ನು ತಿನ್ನುತ್ತಾರೆ. ಇನ್ನು ಇವರ ನಿತ್ಯದ ಆಹಾರದಲ್ಲಿ ಪ್ರೋಟೀನ್, ಧಾನ್ಯಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅನೇಕ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
2. ಸ್ಥಿರತೆ ಯಶಸ್ಸಿನ ಮಂತ್ರ
ಏನೇ ಕೆಲಸ ಮಾಡಬೇಕಾದರೂ ಅಲ್ಲಿ ಸ್ಥಿರತೆ ಅನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಇವತ್ತು ಭಾನುವಾರವೆಂದು ವರ್ಕ್‌ಔಟ್ ಮಾಡದೇ ಇರುವುದು, ಸಿಕ್ಕಸಿಕ್ಕದ್ದನ್ನೆಲ್ಲಾ ತಿನ್ನಬಾರದು. ಮೃನಾಲ್ ಠಾಕೂರ್ ಅವರು ಎಲ್ಲಾ ದಿನವೂ ತಮ್ಮ ಫಿಟ್‌ನೆಸ್‌ಗೆ ಬೇಕಾಗುವ ಚಟುವಟುಕೆಗಳನ್ನು ತಪ್ಪದೇ ಮಾಡುತ್ತಾರಂತೆ.
ನಿರಂತರವಾಗಿ ನಮ್ಮ ಡಯೇಟ್ ಚಾರ್ಟ್ ಫಾಲೋ ಮಾಡಿದರೆ ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಇನ್ನೂ ಫಿಟ್ ಆಗಿರಬೇಕು ಅಂತ ದಿನಕ್ಕೆ ಮೂರು ಗಂಟೆಗೂ ಅಧಿಕವಾಗಿ ಜಿಮ್‌ನಲ್ಲಿ ದೇಹವನ್ನು ದಂಡಿಸಿದರೆ ಒಳ್ಳೆಯದಲ್ಲ. ಒತ್ತಡದ ಸಮಸ್ಯೆ, ಸ್ನಾಯುರಜ್ಜು ಮತ್ತು ಸ್ನಾಯುವಿನ ಒತ್ತಡದಂತಹ ಸಮಸ್ಯೆಗಳು ಎದುರಾಗುವ ಸಾದ್ಯತೆ ಇದೆ.
3. ಸ್ನೇಹಿತರ ಜೊತೆಗೆ ವರ್ಕ್‌ಔಟ್ ಮಾಡಿ
ಮೃನಾಲ್ ಪ್ರಕಾರ ಒಬ್ಬರೇ ವರ್ಕ್‌ಔಟ್ ಮಾಡುವುದಕ್ಕಿಂತ ಸ್ನೇಹಿತರ ಜೊತೆಗೆ ವರ್ಕ್‌ಔಟ್ ಮಾಡುವುದರಿಂದ ಹಲವಾರು ಲಾಭಗಳಿದೆ. ನಿಮ್ಮ ಸ್ನೇಹಿತ ನಿಮ್ಮನ್ನು ಮತ್ತಷ್ಟು ವರ್ಕ್‌ಔಟ್ ಮಾಡಲು ಪ್ರೇರೇಪಿಸುತ್ತಾನೆ. ಇನ್ನೂ ವರ್ಕ್ ಔಟ್ ಮಾಡುವಾಗ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮುಂಜಾಗರೂಕತೆ ವಹಿಸೋದು ಉತ್ತಮ. ವರ್ಕ್‌ಔಟ್ ಮಾಡುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ತುಂಬಾನೇ ಉತ್ತಮ ಆತನೇ ನಿಮಗೆ ಪ್ರೇರಣೆಯಾಗುತ್ತಾನೆ, ಇದರಿಂದ ನಿಮ್ಮೊಳಗೆ ವರ್ಕ್‌ಔಟ್ ಮಾಡುವ ಹಠ ಹೆಚ್ಚಾಗುತ್ತದೆ.
4. ಎಲ್ಲೇ ಹೋದರೂ ವರ್ಕ್‌ಔಟ್ ಮಿಸ್ ಮಾಡ್ಲೇಬೇಡಿ
ಮೃನಾಲ್ ಮನೆಯಲ್ಲಿ ಇರುವ ಸಂದರ್ಭದಲ್ಲಿ ಜಿಮ್‌ಗೆ ಹೋಗೋದನ್ನ ಮರೆಯೋದಿಲ್ಲ. ಆದ್ರೆ ಮನೆಯಿಂದ ಹೊರಗಡೆ ಶೂಟಿಂಗ್‌ನಲ್ಲಿ ಇದ್ದಾಗ ವರ್ಕ್‌ಔಟ್ ಕಷ್ಟವಾಗುತ್ತದೆ. ಆಗ ಅವರು ಸಾಧ್ಯವಾದಷ್ಟು ಅಲ್ಲೇ ಇರುವ ಸವಲತ್ತುಗಳನ್ನು ಬಳಸಿಕೊಂಡು ವರ್ಕ್‌ಔಟ್ ಮಾಡುತ್ತಾರಂತೆ. ಒಂದು ದಿನವೂ ವರ್ಕ್‌ಔಟ್ ಮಿಸ್ ಮಾಡೋದೇ ಇಲ್ಲ.
5. ನೆವರ್ ಗಿವ್‌ಅಪ್
ಮೃನಾಲ್ ಅವರು ತಮ್ಮ ಮುಂದಿನ ಸಿನಿಮಾಗಳಿಗಾಗಿ ನಿರಂತರವಾಗಿ ಹಾರ್ಡ್‌ವರ್ಕ್ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಟಿಆರ್‌ಎಕ್ಸ್ ವ್ಯಾಯಾಮ, ಕಾರ್ಡಿಯೋ ವ್ಯಾಯಾಮವನ್ನು ಅವರು ತಪ್ಪಿಸುವುದಿಲ್ಲ. ಮೃನಾಲ್ ಹೇಳೋ ಪ್ರಕಾರ ನಮ್ಮ ವರ್ಕ್‌ಔಟ್ ದಿನಚರಿ ಒಂದೆರಡು ದಿನಕ್ಕೆ ಸೀಮಿತವಾಗಬಾರದು ಅದು ನಿರಂತರವಾಗಿರಲೇಬೇಕು. ಹಾಗಾದಾಗ ಮಾತ್ರ ಫಿಟ್ ಆಗಿರಲು ಸಾಧ್ಯ.
ಸುಂದರವಾದ ದೇಹವನ್ನು ಹೊಂದಬೇಕು, ಸುಂದರವಾಗಿ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕೇವಲ ಅವರಿವರನ್ನು ನೋಡಿ ಆಸೆ ಪಟ್ಟರೆ ಸಾಲದು ಅದಕ್ಕಾಗಿ ಶ್ರಮಪಟ್ಟು ಕೆಲಸ ಮಾಡಬೇಕಾಗುತ್ತದೆ. ನಮ್ಮ ಆಸೆಯನ್ನು ಪೂರೈಸಿಕೊಳ್ಳಬೇಕಾದರೆ ಅದರ ಕಡೆ ನಮ್ಮ ನಿರಂತರ ಪ್ರಯತ್ನ ಇರಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


