ಋತುಚಕ್ರದ ಆಹಾರಕ್ರಮ

By Hemanth P

ಋತುಚಕ್ರ ಅಥವಾ ಅವಧಿ ನೀವು ತುಂಬಾ ಕೆರಳುವ, ದಣಿಯುವ ಮತ್ತು ಸಂಪೂರ್ಣವಾಗಿ ಹತಾಶೆಗೊಳಗಾಗುವ ತಿಂಗಳ ಅವಧಿ. ಕೆಲವು ಮಂದಿ ಅನುಭವಿಸುವ ಖಿನ್ನತೆ, ನೋವು, ಸಿಟ್ಟು ಹಾಗೂ ಆತಂಕಕ್ಕೆ ಕಾರಣವಾಗಬಹುದು. ಕೆಲವರಿಗೆ ಮಾಂಸಖಂಡಗಳ ಸೆಳೆತ, ಕೆಟ್ಟ ಆರೋಗ್ಯ, ವಾಕರಿಕೆ ಇತ್ಯಾದಿ ಅನುಭವಿಸುತ್ತಾರೆ. ಋತುಚಕ್ರದ ಅವಧಿಯಲ್ಲಿ ಕೆಲವು ಮಂದಿಗೆ ಮೊದಲ ಎರಡು ದಿನ ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ದೀರ್ಘಕಾಲಕ್ಕೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೀವು ಋತುಚಕ್ರಕ್ಕಾಗಿ ಆರೋಗ್ಯಕರ ಆಹಾರ ತಿನ್ನುವುದು ತುಂಬಾ ಮುಖ್ಯ. ಋತುಚಕ್ರದ ಆಹಾರ ಕ್ರಮದಿಂದಾಗಿ ನಿಮ್ಮ ಶಕ್ತಿ ಹೆಚ್ಚಾಗಿ, ನಿಮ್ಮ ಅಂಗಾಂಗಗಳು ನಯವಾಗಿ ಕೆಲಸ ಮಾಡಲು ಮತ್ತು ನೀವು ಅನುಭವಿಸುವ ನೋವು ಕಡಿಮೆ ಮಾಡಲು ನೆರವಾಗಲಿದೆ.

ಈ ಆಹಾರಕ್ರಮದಲ್ಲಿರುವ ಕೆಲವೊಂದು ಆಹಾರಗಳು ಅಗತ್ಯವಿರುವ ಶಕ್ತಿ ಒದಗಿಸುತ್ತದೆ. ನಿಮ್ಮ ಋತುಚಕ್ರದ ವೇಳೆ ಶಕ್ತಿ ಪಡೆಯಲು ನೆರವಾಗುವಂತಹ ಋತುಚಕ್ರದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಋತುಚಕ್ರ ಕ್ರಿಯೆ ನಿಲ್ಲುವಾಗ ಕಂಡು ಬರುವ ಲಕ್ಷಣಗಳು

ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಸೇವನೆ

ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಸೇವನೆ

ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಗಳಾದ ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ನಿಮ್ಮ ಋತುಚಕ್ರದ ಆಹಾರ ಕ್ರಮದಲ್ಲಿ ಸೇರಿಸಿ. ಕ್ಯಾರೆಟ್, ಏಪ್ರಿಕಾಟ್, ಕಿತ್ತಳೆ, ಪ್ಲಮ್ಸ್ ಇತ್ಯಾದಿಗಳನ್ನು ತಿನ್ನಬಹುದು. ಋತುಚಕ್ರದ ಸಮಯದಲ್ಲಿ ಉಂಟಾಗುವ ಸಕ್ಕರೆ ಕಡುಬಯಕೆಯನ್ನು ಇದು ಕಡಿಮೆ ಮಾಡುತ್ತದೆ.

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ನಿಮ್ಮ ಆಹಾರ ಕ್ರಮದಲ್ಲಿ ಡಾರ್ಕ್ ಚಾಕಲೇಟ್ ಸೇರಿಸಲು ಇದು ಒಳ್ಳೆಯ ಸಮಯ. ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಡಾರ್ಕ್ ಚಾಕಲೇಟ್ ಸೆರೊಟೋನಿನ್ ಹೆಚ್ಚಿಸಿ ನಿಮ್ಮ ಮನಸ್ಥಿತಿ ಉತ್ತಮಪಡಿಸುತ್ತದೆ. ಋತುಚಕ್ರದ ಆಹಾರಕ್ರಮದಲ್ಲಿ ಡಾರ್ಕ್ ಚಾಕಲೇಟ್ ನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಿ.

ವಿಟಮಿನ್ ಇರುವ ಮೊಟ್ಟೆ:

ವಿಟಮಿನ್ ಇರುವ ಮೊಟ್ಟೆ:

ಋತುಚಕ್ರದ ಆಹಾರಕ್ರಮದಲ್ಲಿ ವಿಟಮಿನ್ ಸೇರಿಸುವುದು ತುಂಬಾ ಮುಖ್ಯ. ವಿಟಮಿನ್ ಇ ನಿಮ್ಮ ಪಿಎಂಎಸ್ ಲಕ್ಷಣದಿಂದ ದೂರ ಮಾಡಲಿದೆ. ವಿಟಮಿನ್ ಇ ಪಡೆಯಲು ಬೆಣ್ಣೆಹಣ್ಣು ಮತ್ತು ಮೊಟ್ಟೆಯ ಹಳದಿ ಭಾಗ ತಿನ್ನಿ. ವಿಟಮಿನ್ ಬಿ6 ಹೊಟ್ಟೆ ಉಬ್ಬರ ನಿವಾರಿಸಲು ನೆರವಾಗುತ್ತದೆ. ವಿಟಮಿನ್ ಸಿ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಪಡೆಯಲು ದ್ರಾಕ್ಷಿ ಮತ್ತು ನಿಂಬೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ವಿಟಮಿನ್ ಬಿ6 ಪಡೆಯಲು ಆಹಾರಕ್ರಮದಲ್ಲಿ ಬಟಾಟೆಗಳನ್ನು ಆಹಾರಕ್ರಮದಲ್ಲಿ ಸೇರಿಸಿ.

ಕೆಫಿನ್ ಕಡೆಗಣಿಸಿ

ಕೆಫಿನ್ ಕಡೆಗಣಿಸಿ

ಋತುಚಕ್ರದ ಅವಧಿಯಲ್ಲಿ ನೀವು ಕೆಫಿನ್ ಯುಕ್ತ ಆಹಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಬೇಕು. ಕೆಫಿನ್ ಸೇವನೆ ಮಾಡಿದರೆ ಆಗ ಹೊಟ್ಟೆಯ ಆಮ್ಲಗಳು ಹೆಚ್ಚಾಗಿ ಅದು ನೋವು ಹೆಚ್ಚಿಸಬಹುದು. ಕೆಫಿನ್ ಸೇವಿಸಬೇಕೆಂದು ನಿಮಗೆ ಭಾವನೆಯಾಗುತ್ತಿದ್ದರೆ ಆಗ ನೀವು ಕಾಫಿ ಬದಲಿಗೆ ಟೀ ಸೇವನೆ ಮಾಡಿ. ಟೀ ಯಾವುದೇ ಸಮಯದಲ್ಲೂ ಒಳ್ಳೆಯದು ಮತ್ತು ಕೆಫಿನ್ ಸೇವನೆಯ ಕಡುಬಯಕೆಗೆ ಇದು ಬದಲಿಯಾಗಲಿದೆ.

ಅತ್ಯಾವಶ್ಯಕ ಕೊಬ್ಬಿನ ಆಮ್ಲಗಳು

ಅತ್ಯಾವಶ್ಯಕ ಕೊಬ್ಬಿನ ಆಮ್ಲಗಳು

ಋತುಚಕ್ರದ ವೇಳೆ ನೀವು ತೀವ್ರ ಹೊಟ್ಟೆಯ ಸೆಳೆತಕ್ಕೆ ಒಳಗಾಗುತ್ತೀರಿ. ಈ ಸೆಳೆತದಿಂದ ನಿಮ್ಮನ್ನು ದೂರ ಮಾಡಲು ಅತ್ಯಾವಶ್ಯಕ ಕೊಬ್ಬಿನ ಆಮ್ಲಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಕೊಬ್ಬಿನಾಮ್ಲಗಳಿರುವ ಆಹಾರಗಳು ಋತುಚಕ್ರದ ಅವಧಿಯಲ್ಲಿ ಉಂಟಾಗುವ ಹಾರ್ಮೋನು ಅಸಮತೋಲನವನ್ನು ನಿಯಂತ್ರಿಸುವುದರಿಂದ ಇದು ಋತುಚಕ್ರದ ಆರೋಗ್ಯಕಾರಿ ಆಹಾರ. ಅಗಸೆ, ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜಗಳ ಸೇವಿಸಬೇಕು. ಇದರಲ್ಲಿ ಲಿನೋಲೆನಿಕ್ ಆಮ್ಲವಿದೆ ಮತ್ತು ಇದು ಮೂತ್ರವಿಸರ್ಜನೆ ಸ್ನಾಯುಗಳನ್ನು ಸಡಿಲಿಸಿ ನಿಮ್ಮಲ್ಲಿನ ಸೆಳೆತ ಕಡಿಮೆ ಮಾಡುತ್ತದೆ.

ಕಬ್ಬಿನಾಂಶವಿರುವ ಹಸಿರೆಲೆ ತರಕಾರಿಗಳು:

ಕಬ್ಬಿನಾಂಶವಿರುವ ಹಸಿರೆಲೆ ತರಕಾರಿಗಳು:

ಋತುಚಕ್ರದ ಸಮಯದಲ್ಲಿ ನೀವು ಹೆಚ್ಚಾಗಿ ರಕ್ತ ಕಳಕೊಳ್ಳುತ್ತೀರಿ. ಇದನ್ನು ನಿಮ್ಮ ದೇಹದಲ್ಲಿ ಮರಳಿ ಪಡೆಯಲು ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರದಿಂದ ನೀವು ರಕ್ತಹೀನತೆ ವಿರುದ್ಧ ಹೋರಾಡಬಹುದು ಮತ್ತು ನಷ್ಟವಾದ ಹಿಮೋಗ್ಲೊಬಿನ್ ಸರಿದೂಗಿಸಬಹುದು. ಇದರಿಂದ ನೀವು ನಿತ್ರಾಣ ಮತ್ತು ಖಿನ್ನತೆಗೊಳಗಾಗುವುದು ತಪ್ಪುತ್ತದೆ. ಇದು ಖಿನ್ನತೆ ನಿವಾರಿಸುತ್ತದೆ. ಕೆಂಪು ಮಾಂಸ, ಕೋಳಿ, ಮಾಂಸ, ಒಣಗಿದ ಬೀಜಗಳು, ಕಾಕಂಬಿ ಮತ್ತು ಹಸಿರೆಲೆ ತರಕಾರಿಗಳು ನಿಮ್ಮ ಆಹಾರ ಕ್ರಮದಲ್ಲಿದ್ದರೆ ಆಗ ಅಗತ್ಯವಾಗಿರುವ ಕಬ್ಬಿನಾಂಶ ಸಿಗುತ್ತದೆ.

ಏಕದಳ ಧಾನ್ಯಗಳು, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಿಮಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಸಿಗುತ್ತದೆ. ಸಮತೋಲಿತ ಆಹಾರಕ್ರಮ ಪಾಲಿಸಿ. ನಿಮ್ಮ ಆಹಾರಕ್ರಮದಲ್ಲಿ ಆದಷ್ಟು ಮಟ್ಟಿಗೆ ನೀರನ್ನು ಸೇರಿಸಿ. ಋತುಚಕ್ರದ ವೇಳೆ ಹೆಚ್ಚು ನೀರು ಕುಡಿಯಿರಿ. ಋತುಚಕ್ರದ ಒಳ್ಳೆಯ ಆಹಾರಕ್ರಮವು ನಿಮ್ಮನ್ನು ಆರೋಗ್ಯವಾಗಿಡಬಲ್ಲದು.


Story first published: Saturday, January 11, 2014, 11:04 [IST]
X
Desktop Bottom Promotion