Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಅಲೂ ಜ್ಯೂಸಿನಲ್ಲಿರುವ ಸತ್ವಗಳ ಸತ್ಯಾಂಶಗಳೇನು?
ಆಲೂಗಡ್ಡೆ ಪ್ರಪಂಚದಲ್ಲಿ ಸಾಕಷ್ಟು ಜನರ ಮನಗೆದ್ದ ತರಕಾರಿ, ಕ್ರಂಚಿ ತಿನಿಸುಗಳಿಗೆ ಇದು ಹೆಸರುವಾಸಿ. ಇದು ರುಚಿಯೊಂದಿಗೆ ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ ಮತ್ತು ಇದರ ಜ್ಯೂಸ್ ನಿಂದ ಅರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದನ್ನು ಸಾಕಷ್ಟು ಜನರಿಗೆ ತಿಳಿದಿಲ್ಲ. ಆಲೂಗಡ್ಡೆಯಲ್ಲಿ ಆರೋಗ್ಯಕ್ಕೆ ಅನುಕೂಲಕರವಾದ ನಾರಿನಂಶ, ಪೌಷ್ಟಿಕಾಂಶ, ಕ್ಯಾಲ್ಸಿಯಂ, ಸತುವಿನ ಅಂಶ, ಮತ್ತು ಜೀವಸತ್ವ ಎ,ಬಿ ಮತ್ತು ಸಿ ಗಳಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಣ್ಣುಗಳಲ್ಲಿರುವ ಮಿಟಮಿನ್‌ನ ಸತ್ಯಾಂಶಗಳೇನು?
ಗಮನಿಸಬೇಕಾದ ಅಂಶಗಳು:
೧. ಹೊಟ್ಟೆಯ ತೊಂದರೆ ಇದ್ದಲ್ಲಿ ಅಲೂ ಜ್ಯೂಸ್ ಬಳಸಬೇಡಿ.
೨. ಕೆಲವೊಮ್ಮೆ ಆಲೂಗಡ್ಡೆ ಬಳಸುವುದರಿಂದ ಡಯೇರಿಯ ಆಗಬಹುದು.
೩. ಅಲೂ ಜ್ಯೂಸ್ ತಯಾರಿಸಲು ಯಾವಾಗಲು ತಾಜಾ ಮತ್ತು ಕಳಿತ ಅಲೂವನ್ನೇ ಬಳಸಿ.
೪. ಅಲೂ ಜ್ಯೂಸ್ ನ ರುಚಿಯನ್ನು ಹೆಚ್ಚಿಸಬೇಕೆಂದಿದ್ದಲ್ಲಿ ಅದರ ಜೊತೆಗೆ ಕ್ಯಾರೆಟ್ ಮತ್ತು ಕೆಲವು ಸೊಪ್ಪುಗಳನ್ನು ಬಳಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗಂಟಲು ಸೋಂಕಿಗಾಗಿ ಮನೆಮದ್ದುಗಳು
ಅಲೂಗಡ್ಡೆಯಿಂದಾಗುವ ಆಹಾರ ಮತ್ತು ಸೌಂದರ್ಯ ವೃದ್ಧಿ :

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:
ಆಲೂ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ. ಜೊತೆಗೆ ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ವೃದ್ಧಿಸಲು ಸಹಕಾರಿ.

ಹೃದಯಸಂಬಂಧಿ ಕಾಯಿಲೆಗಳಿಗೆ ಪರಿಹಾರ:
ಹೃದಯ ಕಾಯಿಲೆ ಮತ್ತು ಸ್ಟ್ರೋಕ್ ಕಡಿಮೆ ಮಾಡಲು ಇದು ಉತ್ತಮವಾದ ಅಡುಗೆಮನೆ ಪದಾರ್ಥ. ಆಲೂ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್,ಹೃದಯಾಘಾತ,ಗಡ್ಡೆಗಳು ಇವುಗಳಿಗೆ ಪರಿಹಾರ ದೊರಕಲಿದೆ.

ತೂಕವನ್ನು ಕಡಿಮೆ ಮಾಡುತ್ತದೆ:
ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಮೊದಲು ಮುಂಜಾನೆ ಒಂದು ಲೋಟ ಆಲೂ ಜ್ಯೂಸ್ ಅಥವಾ ರಾತ್ರಿ ಊಟಕ್ಕೆ ೨-೩ ಗಂಟೆ ಮೊದಲು ಒಂದು ಲೋಟ ಆಲೂ ಜ್ಯೂಸ್ ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಕಿಡ್ನಿ ಆರೋಗ್ಯ ಹೆಚ್ಚುತ್ತದೆ:
ಕಿಡ್ನಿ ಆರೋಗ್ಯಯುತವಾಗಿರಲು ಆಲೂ ಜ್ಯೂಸ್ ಹೆಚ್ಚು ಸಹಕಾರಿ,ಜೊತೆಗೆ ಇದು ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯನ್ನು ಕೂಡ ಕಡಿಮೆ ಮಾಡುತ್ತದೆ. ಮೂತ್ರಕೋಶದಲ್ಲಿ ಕಲ್ಲಾಗುವುದನ್ನು ಕೂಡ ಆಲೂ ಜ್ಯೂಸ್ ಕುಡಿಯುವುದರಿಂದ ಹೋಗಲಾಡಿಸಬಹುದು.

ಕ್ಯಾನ್ಸರ್
ಪ್ರತಿದಿನ ಒಂದು ಅಥವಾ ಎರಡು ಲೋಟ ಆಲೂ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್,ಮಧುಮೇಹ,ಕಿಡ್ನಿ ತೊಂದರೆ,ಹೃದಯ ಕಾಯಿಲೆ,ಲಿವರ್ ತೊಂದರೆ,ಕೈಗಳ ನೋವು ಇವುಗಳಿಂದ ಪರಿಹಾರ ಕಂಡುಕೊಳ್ಳಬಹುದು.

ನಿಮ್ಮ ಕೂದಲ ಬೆಳವಣಿಗೆ ಅಧಿಕವಾಗುತ್ತದೆ:
ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಆಗಾಗ ಆಲೂ ಮಾಸ್ಕ್ ಅನ್ನು ಹಚ್ಚುವುದರಿಂದ ಸಹಾಯಕವಾಗುತ್ತದೆ. ಆಲೂಗಡ್ಡೆ ತೆಗೆದುಕೊಂಡು ಅದರ ಸಿಪ್ಪೆಯನ್ನು ಕೀಳಬೇಕು,ನಂತರ ಅದನ್ನು ಹೆಚ್ಚಿ ಚೆನ್ನಾಗಿ ರುಬ್ಬಿ. ನಂತರ ಅದರಿಂದ ರಸವನ್ನು ಹಿಂಡಿ ಆ ರಸಕ್ಕೆ ಜೇನು ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿ. ಇದನ್ನು ನಿಮ್ಮ ನೆತ್ತಿ ಮತ್ತು ತಲೆಗೆ ಹಚ್ಚಿ. ನಂತರ ೨ ಗಂಟೆಗಳ ವರೆಗೆ ಬಿಟ್ಟು,ಶಾಂಪೂ ಬಳಸಿ ತಲೆಸ್ನಾನ ಮಾಡಿ.



Click it and Unblock the Notifications
