Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಇನ್ಸುಲಿನ್ ನಿಂದ ಸೈಡ್ ಎಫೆಕ್ಟ್ ಸಾಧ್ಯತೆಯಿದೆಯೆ?

ಇನ್ಸುಲಿನ್ ನೈಸರ್ಗಿಕ ಹಾರ್ಮೋನ್ ಆಗಿದ್ದು, ಸೈಡ್ ಎಫೆಕ್ಟ್ ಸಾಧ್ಯತೆ ತುಂಬಾ ಕಮ್ಮಿ. ಆದರೆ, ಕೆಲವೊಮ್ಮೆ ಪ್ರಾಣಿಜನ್ಯ ಇನ್ಸುಲಿನ್ ಬಳಕೆಯಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ದೇಹದ ತೂಕದಲ್ಲಿ ಸ್ವಲ್ಪಮಟ್ಟಿಗೆ ಏರಿಕೆ ಕಾಣಿಸುವ ಸಾಧ್ಯತೆಗಳಿವೆ. ಹೆಚ್ಚಿನ ಪ್ರಕರಣಗಳಲ್ಲಿ ಉತ್ತಮವಾದ ನಿಯಂತ್ರಣದಿಂದ ಹೀಗಾಗುತ್ತದೆ(ಸಕ್ಕರೆ ಪ್ರಮಾಣದಲ್ಲಿ ವ್ಯತ್ಯಯವಾದರೆ ತೂಕ ಇಳಿಯುತ್ತದೆ ಹಾಗೂ ಸಕ್ಕರೆ ಪ್ರಮಾಣ ನಿಯಂತ್ರಣಗೊಂಡಾಗ ಕಳೆದುಕೊಂಡ ತೂಕ ಮರಳುತ್ತದೆ). ಅನಿಯಮಿತ ಆಹಾರ ಪದ್ಧತಿ ಮತ್ತು ಇನ್ಸುಲಿನ್ ಪ್ರಮಾಣ ತೆಗೆದುಕೊಳ್ಳುವಿಕೆಯಿಂದ ಸಕ್ಕರೆ ಪ್ರಮಾಣ ಇಳಿಕೆ(hypo) ಸ್ಥಿತಿ ತಲುಪಬಹುದು.
U-40 ಹಾಗೂ U-100 ಇನ್ಸುಲಿನ್ ನಡುವಿನ ವ್ಯತ್ಯಾಸವೇನು?
ಇದು ಇನ್ಸುಲಿನ್ ಪ್ರಮಾಣವನ್ನು ಸೂಚಿಸುತ್ತದೆ: U-40 ಅಂದರೆ 1 ಮಿ.ಲೀ ದ್ರಾವಣದಲ್ಲಿ 40 ಯೂನಿಟ್ ಇನ್ಸುಲಿನ್ ಇರುತ್ತದೆ ಹಾಗೂ U-100 ನಲ್ಲಿ 100 ಯೂನಿಟ್ ಗಳಿರುತ್ತದೆ. ದುರಾದೃಷ್ಟವೆಂದರೆ ಎರಡೂ ಪ್ರಮಾಣದಲ್ಲಿ ಇನ್ಸುಲಿನ್ ಭಾರತದಲ್ಲಿ ಲಭ್ಯವಿದ್ದು, ಭವಿಷ್ಯತ್ತಿನಲ್ಲಿ U-100 ಮಾತ್ರ ಲಭ್ಯವಾಗುವಂತೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಆದರೆ, ನೀವು ಬಳಸುವ ಇನ್ಸುಲಿನ್ ಇಂಜೆಕ್ಷನ್ ಸಿರಂಜ್ 40 ಅಥವಾ 100 ಪ್ರಮಾಣ ಏಕರೂಪದಲ್ಲಿರಬೇಕು. ಇಲ್ಲದಿದ್ದರೆ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ, ಅಪಾಯವಾಗುತ್ತದೆ. ಉದಾ: U-40 ಸಿರೆಂಜ್ ನಲ್ಲಿ u-100 ಇನ್ಸುಲಿನ್ ತೆಗೆದುಕೊಂಡರೆ, ಅಗತ್ಯಕ್ಕಿಂತ ಎರಡೂವರೆ ಪಟ್ಟು ಹೆಚ್ಚಿನ ಪ್ರಮಾಣದ ಇನ್ಸುಲಿನ್ ದೇಹಕ್ಕೆ ಸೇರುತ್ತದೆ(20 ಯೂನಿಟ್ ಗಳನ್ನು ತೆಗೆದುಕೊಳ್ಳುವ ಬದಲು 50 ಯೂನಿಟ್ ಗಳು ದೇಹವನ್ನು ಸೇರುತ್ತದೆ)
ಇಂಜೆಕ್ಷನ್ ಇಲ್ಲದೆ ಇನ್ಸುಲಿನ್ ತೆಗೆದುಕೊಳ್ಳಲು ಸಾಧ್ಯವೇ?
ಇಂಜೆಕ್ಷನ್ ಇಲ್ಲದೆ ಇನ್ಸುಲಿನ್ ತೆಗೆದುಕೊಳ್ಳುವ ದಿನವನ್ನು ಎಲ್ಲರೂ ಎದುರುನೋಡುತ್ತಿದ್ದಾರೆ. ಈ ಬಗ್ಗೆ ಅನೇಕ ಸಂಶೋಧನೆ ನಡೆಯುತ್ತಿದ್ದು, ಇಂಜೆಕ್ಷನ್ ಇಲ್ಲದೆ ಇನ್ಸುಲಿನ್ ಸೇವಿಸುವ ದಿನಗಳು ದೂರವಿಲ್ಲ ಎಂದು ನಂಬಲಾಗಿದೆ. ಸದ್ಯಕ್ಕಂತೂ ಇಂಜೆಕ್ಷನ್ ಮೂಲಕವೇ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
