Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮಹಿಳೆಯರೇ ದೇಹದಲ್ಲಿ ಈ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ, ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಾಗಿದೆ ಎಂದರ್ಥ
ಆರೋಗ್ಯದ ಬಗ್ಗೆ ಹೇಳುವುದಾದರೆ ನಮ್ಮ ಶಾರೀರ ಏನು ಹೇಳುತ್ತದೆ ಎಂಬುವುದನ್ನು ನಾವು ಗಮನಿಸಬೇಕಾಗುತ್ತದೆ. ಎಷ್ಟೋ ಆರೋಗ್ಯ ಸಮಸ್ಯೆಗಳ ಬಗ್ಗೆ ಆರಂಭದಲ್ಲಿಯೇ ನಮ್ಮ ಶರೀರ ಸೂಚನೆ ನೀಡುತ್ತಿರುತ್ತದೆ, ಆದರೆ ನಾವು ನಿರ್ಲಕ್ಷ್ಯ ಮಾಡುತ್ತೇವೆ. ಮಹಿಳೆಯರೇ, ನಿಮ್ಮ ದೇಹದಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ, ಈ ಲಕ್ಷಣಗಳು ನಿಮ್ಮಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗಿದೆ ಎಂದು ಸೂಚಿಸುವ ಸೂಚನೆಗಳಾಗಿವೆ:
ಮಹಿಳೆಯರ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾದರೆ ಈ ಲಕ್ಷಣಗಳು ಕಂಡು ಬರುವುದು:

ಹೊಟ್ಟೆಯಲ್ಲಿ ಸೆಳೆತ
ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ಹೆಚ್ಚಾದಾಗ ಆಗಾಗ ಹೊಟ್ಟೆಯಲ್ಲಿ ಸೆಳೆತ ಉಂಟಾಗುವುದು, ಈ ರೀತಿಯಾದಾಗ ಸಹಿಸಲು ಅಸಾಧ್ಯವಾದ ಹೊಟ್ಟೆ ನೋವು ಉಂಟಾಗುವುದು. ಹೊಟ್ಟೆ ನೋವು ಪದೇ ಪದೇ ಉಂಟಾಗುತ್ತಿದ್ದರೆ ನೀವು ಹಾರ್ಮೋನ್ ಪರೀಕ್ಷೆ ಮಾಡಿಸಿದರೆ ಈಸ್ಟ್ರೋಜನ್‌ನಲ್ಲಿ ವ್ಯತ್ಯಾಸ ಉಂಟಾಗಿದ್ದರೆ ತಿಳಿದು ಬರುವುದು.
ಹೊಟ್ಟೆ ಉಬ್ಬುವುದು
ಆಗಾಗ ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಇದು ಇತರ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಹೊಟ್ಟೆಯಲ್ಲಿ ಗಡ್ಡೆ, ಗರ್ಭಕೋಶದ ಕ್ಯಾನ್ಸರ್ ಈ ರೀತಿ ಉಂಟಾದಾಗ ಈಸ್ಟ್ರೋಜನ್ ಹಾರ್ಮೋನ್‌ನಲ್ಲಿ ವ್ಯತ್ಯಾಸ ಉಂಟಾಗುವುದು, ಹಾಗಾಗಿ ನೀವು ಗ್ಯಾಸ್ಟ್ರಿಕ್ ಅಂತ ಸ್ವಯಂ ಚಿಕಿತ್ಸೆ ಮಾಡುತ್ತಾ ಇರಬೇಡಿ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಹಕಾರಿ.
ಮೂಡ್‌ಸ್ವಿಂಗ್
ಆಗಾಗ ಮೂಡ್‌ಸ್ವಿಂಗ್ ಉಂಟಾಗುತ್ತಿದ್ದರೆ ಅದು ಹಾರ್ಮೋನ್‌ಗಳ ವ್ಯತ್ಯಾಸದಿಂದಿರಬಹುದು, ಖಿನ್ನತೆ, ಕಾರಣವಿಲ್ಲದೆ ಅಳು, ಕೋಪ ಇವೆಲ್ಲಾ ಖಿನ್ನತೆಯ ಲಕ್ಷಣಗಳಾಗಿವೆ. ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಹಾರ್ಮೋನ್‌ಗಳ ಸಮತೋಲನದಲ್ಲಿಡಲು ಚಿಕಿತ್ಸೆ ಪಡೆದರೆ ಒಳ್ಳೆಯದು.
ಮುಟ್ಟಿನ ಸಮಯದಲ್ಲಿ ವಿಪರೀತ ನೋವು
ಮುಟ್ಟಿನ ಸಮಯದಲ್ಲಿ ನೋವು ಕಂಡು ಬರುವುದು ಸಹಜ. ಆದರೆ ಕೆಲ ಹೆಣ್ಮಕ್ಕಳಿಗೆ ತುಂಬಾನೇ ನೋವುಂಟಾಗುವುದು. ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ತುಂಬಾ ಅಧಿಕವಾದಾಗ ಈ ರೀತಿಯಾಗುವುದು. ನೀವು ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಿದ್ದರೆ ಹಾರ್ಮೋನ್ ಪರೀಕ್ಷೆ ಮಾಡಿಸಿ.
ತಲೆನೋವು
ಪದೇಪದೇ ಕಾಡುವ ತಲೆನೋವು, ತಲೆಸುತ್ತು, ವಾಂತಿ ಬಂದಂತೆ ಅನಿಸುವುದು ಇವೆಲ್ಲಾ ಹಾರ್ಮೋನ್‌ಗಳ ಅಸಮತೋಲನ ಉಂಟಾಗಿದೆ ಎಂಬುವುದನ್ನು ಸೂಚಿಸುತ್ತದೆ.
ಅನಿಯಮಿತ ಮುಟ್ಟು
ಹಾರ್ಮೋನ್‌ಗಳ ವ್ಯತ್ಯಾಸ ಉಂಟಾದಾಗ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು. ಈ ಅನಿಯಮಿತ ಮುಟ್ಟಿನ ಸಮಸ್ಯೆ ಗರ್ಭಧಾರಣೆಗೂ ತೊಂದರೆಯಾಗುವುದು. ಹಾರ್ಮೋನ್ ನಿಯಂತ್ರಿಸಲು ಚಿಕಿತ್ಸೆ ಪಡೆಯುವುದರಿಂದ ಮುಟ್ಟು ನಿಯಮಿತವಾಗಿ ಆಗುವಂತೆ ಮಾಡಬಹುದು, ಇದರ ಜೊತೆಗೆ ಜೀವನಶೈಲಿಯಲ್ಲಿಯೂ ತುಂಬಾನೇ ಬದಲಾವಣೆ ಮಾಡಬೇಕಾಗುತ್ತದೆ.
ಈಸ್ಟ್ರೋಜನ್ ಹೆಚ್ಚಾದಾದರೆ ಆ ಆರೋಗ್ಯ ಸಮಸ್ಯೆ ಬರುವ ಅಪಾಯಗಳಿರುವುದರಿಂದ ನಿರ್ಲಕ್ಷ್ಯ ಮಾಡಬೇಡಿ:
ಕ್ಯಾನ್ಸರ್ ಅಪಾಯ ಹೆಚ್ಚು
ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗುವುದರಿಂದ ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಮುಂತಾದ ಕ್ಯಾನ್ಸರ್ ಅಪಾಯ ಹೆಚ್ಚು.
ಪಿಸಿಒಡಿ ಸಮಸ್ಯೆ ಉಂಟಾಗುವುದು: ಹಾರ್ಮೋನ್‌ಗಳ ಅಸಮತೋಲನದಿಂದ ಪಿಸಿಒಎಸ್ ಸಮಸ್ಯೆ ಉಂಟಾಗುವುದು
ಮಧುಮೇಹದ ಅಪಾಯ ಕೂಡ ಹೆಚ್ಚಾಗುವುದು.
ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗಲು ಕಾರಣವೇನು?
ಕೆಲವೊಂದು ಬಗೆಯ ಔಷಧಗಳು
ಕೆಲವೊಂದು ಔಷಧಗಳು, ಗರ್ಭನಿರೋಧಕ ಮಾತ್ರೆಗಳು ಇವೆಲ್ಲಾ ಈಸ್ಟ್ರೋಜನ್ ಪ್ರಮಾಣ ಹೆಚ್ಚಿಸುತ್ತದೆ
ಅತ್ಯಧಿಕ ಮೈ ತೂಕ
ಅತ್ಯಧಿಕ ಮೈ ತೂಕದಿಂದ ಕೂಡ ದೇಹದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು.
ಅನಾರೋಗ್ಯಕರ ಆಹಾರಕ್ರಮ
ಕಲುಷಿತ ಪರಿಸರ
ಅನಾರೋಗ್ಯ ಜೀವನಶೈಲಿ
ಅತ್ಯಧಿಕ ಮಾನಸಿಕ ಒತ್ತಡ ಇವೆಲ್ಲಾ ಕಾರಣಗಳಿಂದಲೂ ಹಾರ್ಮೋನ್‌ಗಳ ಅಸಮತೋಲನ ಉಂಟಾಗುವುದು.
ಹಾರ್ಮೋನ್‌ಗ:ಳ ಅಸಮತೋಲನ ಉಂಟಾದಾಗ ಚಿಕಿತ್ಸೆ ಪಡೆಯುವುದರ ಜೊತೆಗೆ ಆರೋಗ್ಯಕರ ಜೀವನಶೈಲಿ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
