Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕಲಿ ORS ಲೇಬಲ್‌ಗೆ ಬ್ರೇಕ್: ಗ್ರಾಹಕರ ದಾರಿತಪ್ಪಿಸುತ್ತಿದ್ದ ಕಂಪನಿಗಳಿಗೆ ಶಾಕ್!
ನೀವು ಹಲವು ಸಮಯದಲ್ಲಿ ORS ಕುಡಿದಿರುತ್ತೀರಿ, ಆಯಾಸ, ಸುಸ್ತು, ಜ್ವರದಂತಹ ಚಿಕ್ಕ ಪುಟ್ಟ ದೈಹಿಕ ಸಮಸ್ಯೆಗಳಿದ್ದಾಗ ಒಆರ್‌ಎಸ್ ಸೇವನೆಯನ್ನು ವೈದ್ಯರು ಕೂಡ ಶಿಫಾರಸ್ಸು ಮಾಡುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ನೀವು ನೋಡುವ ಬಹುತೇಕ ಹಣ್ಣಿನ ಪ್ಯಾಕೆಟ್‌ಗಳ ಮೇಲೆ ORS ಎಂದು ಬರೆದಿರುವುದು ನೋಡಿರಬಹುದು. ಆದ್ರೆ ಅದೆಲ್ಲವೂ ORS ಆಗಿರೋದಿಲ್ಲ.
ಓರಲ್ ರೀಹೈಡ್ರೇಶನ್ ಸೊಲ್ಯೂಷನ್ ಎಂಬುದು ನಿರ್ದಿಷ್ಟ ಸಂಯುಕ್ತಗಳಿಂದ ಮಾಡಲಾಗತ್ತದೆ. ಈಗ ಭಾರತದ ಆಹಾರ ನಿಯಂತ್ರಕವು ಆಹಾರ ಮತ್ತು ಪಾನೀಯ ಕಂಪನಿಗಳಿಗೆ ಎಲ್ಲಾ ಉತ್ಪನ್ನ ಹೆಸರುಗಳು, ಲೇಬಲ್‌ಗಳು ಮತ್ತು ಟ್ರೇಡ್‌ಮಾರ್ಕ್‌ಗಳಿಂದ ORS ಎಂಬ ಪದವನ್ನು ತೆಗೆದು ಹಾಕುವಂತೆ ಸೂಚಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಹಣ್ಣುಗಳ ಬಳಸಿ, ಕಾರ್ಬೊನೇಟೆಡ್ ಅಲ್ಲದ ಅಥವಾ ಪಾನೀಯಕ್ಕೆ ಸಿದ್ಧವಾದ ಉತ್ಪನ್ನಗಳು ಸೇರಿದಂತೆ ಜ್ಯೂಸ್‌ಗಳಿಗೆ ORS ಎಂಬ ಪದ ಬಳಸುವುದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
2022 ಮತ್ತು 2024 ರಲ್ಲಿ ನೀಡಲಾದ ಅವಕಾಶದಲ್ಲಿ ಕಂಪನಿಗಲು ತಮ್ಮ ಉತ್ಪನ್ನದ ಮೇಲೆ ಒಆರ್‌ಎಸ್ ಎಂಬ ಪದ ಬಳಸಲು ಅವಕಾಶ ನೋಡಲಾಗಿತ್ತು. ಆದ್ರೆ WHO ಶಿಫಾರಸು ಮಾಡಿದಂತೆ ಉತ್ಪನ್ನವು ORS ಸೂತ್ರಗಳ ಒಳಗೊಂಡಿಲ್ಲ ಎಂದು ತಿಳಿದುಬಂದಿತ್ತು. ಆಹಾರ ಉತ್ಪನ್ನಗಳ ಮೇಲೆ ಓಆರ್‌ಎಸ್ ಎಂಬ ಪದ ಬಳಕೆ ಮಾಡುವುದು ಗ್ರಾಹಕರಿಗೆ ಮೋಸ ಹಾಗೂ ವಂಚನೆಗೊಳಿಸುವಂತಿದೆ ಎಂದು ಹೇಳಲಾಗಿದೆ. ಹಲವರು ಇದನ್ನು ವೈದ್ಯರ ಶಿಫಾರಸು ಮಾಡುವ ಒಆರ್‌ಎಸ್ ಎಂದೇ ಭಾವಿಸುತ್ತಾರೆ. ಹಾಗೆ ಉಳಿದ ಜ್ಯೂಸ್‌ಗಿಂತಲೂ ಕಂಪನಿಗಳು ಇವುಗಳ ದರ ಏರಿಕೆ ಮಾಡಿರುತ್ತವೆ ಎಂದು ತಿಳಿದುಬಂದಿದೆ.
ವೈದ್ಯರೊಬ್ಬರ ಹೋರಾಟ ಸಿಕ್ಕಿತು ಫಲ
ಜ್ಯೂಸ್ ಕಂಪನಿಗಳು ಕೂಡ ತಮ್ಮ ಉತ್ಪನ್ನದ ಮೇಲೆ ಒಆರ್‌ಎಸ್ ಎಂದು ಮುದ್ರಿಸುತ್ತಿದ್ದ ಹಿನ್ನಲೆ ಹೈದರಾಬಾದ್‌ನ ವೈದ್ಯರೊಬ್ಬರು ಹೋರಾಟ ನಡೆಸಿದ್ದರು. ಸತತ 8 ವರ್ಷಗಳ ಕಾಲ ಈ ಕುರಿತಾದ ಅಭಿಯಾನ ಆರಂಭಿಸಿದ್ದರು. ಹೈದರಾಬಾದ್ ಮಕ್ಕಳ ತಜ್ಞ ಡಾ. ಶಿವರಂಜನಿ ಸಂತೋಷ್ ಅವರ ಎಂಟು ವರ್ಷಗಳ ಅಭಿಯಾನದ ನಂತರ, FSSAI ಪಾನೀಯ ತಯಾರಕರು ORS ಲೇಬಲ್ ಅನ್ನು ಬಳಸುವುದನ್ನು ನಿಷೇಧಿಸಿದೆ.
ಈ ನಿರ್ಧಾರವು WHO ಅನುಮೋದಿತ ವೈದ್ಯಕೀಯ ORS ಮಾತ್ರ ಹೆಸರನ್ನು ಹೊಂದಿರಬಹುದು ಎಂದು ಖಚಿತಪಡಿಸುತ್ತದೆ, ಹಾನಿಕಾರಕ ಸಕ್ಕರೆ ಪಾನೀಯಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಹಿರಿಯ ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ ಅವರು ತಮ್ಮ ಪಾನೀಯಗಳನ್ನು ORS ಎಂದು ಚಿಲ್ಲರೆ ಮಾರಾಟ ಮಾಡುವ ತಯಾರಕರ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದರು.
ಈ ಒಆರ್‌ಎಸ್ ಸೇವನೆಯ ಬಳಿಕ ಮಕ್ಕಳಲ್ಲಿ ಅತಿಸಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದವು. ORS ಎಂಬುದು WHO ಶಿಫಾರಸು ಮಾಡಿದ ಔಷಧಿಯಾಗಿದ್ದು, ಇದು ದೇಶದ ಔಷಧ ನಿಯಂತ್ರಕ ಸಂಸ್ಥೆಯಾದ CDSCO ನಿಂದ ಅನುಮೋದನೆಯನ್ನು ಪಡೆದಿರಬೇಕು. ಆದ್ರೆ ಇದೆಲ್ಲವನ್ನು ಗಾಳಿಗೆ ತೂರಿದ್ದ ಹಲವು ಕಂಪನಿಗಳು ಹಣ್ಣಿನ ರಸಗಳನ್ನೇ ಒಆರ್‌ಎಸ್ ಎಂಬುದಾಗಿಯೂ ಹಾಗೆ ಕಂಪನಿಯ ಹೆಸರನ್ನೇ ಒಆರ್‌ಎಸ್ ಎಂದು ಮುದ್ರಿಸಿ ಮಾರಾಟ ಮಾಡುತ್ತಿರುವುದು ವರದಿಯಾಗಿತ್ತು.
ಸದ್ಯ ಈಗ ಹಲವು ಕಂಪನಿಗಳಿಗೆ ಒಆರ್‌ಎಸ್ ಪಾನಿಯ ಈಗ ಕಗ್ಗಂಟಾಗಬಹುದು. ಅನಗತ್ಯವಾಗಿ ಒಆರ್‌ಎಸ್ ಎಂದು ಮುದ್ರಿಸುವುದಕ್ಕೆ ಕಡಿವಾಣ ಬೀಳಲಿದೆ. ಇದರಿಂದ ಗ್ರಾಹಕರಲ್ಲಿದ್ದ ಗೊಂದಲ ಸರಿಹೋಗಲಿದೆ.



Click it and Unblock the Notifications