Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀರ್ಣ, ಕಿಡ್ನಿ, ಶಕ್ತಿ.. ಹಸು ಹಾಲು ಒಳ್ಳೆಯದಾ, ಎಮ್ಮೆ ಹಾಲು ಒಳ್ಳೆಯದಾ? ತಜ್ಞರು ಹೇಳಿದ ಸತ್ಯ
ಡಾಕ್ಟರ್ ಹೇಳಿದ ಸತ್ಯ ಇದು! ಹಸುವಿನ ಹಾಲು ಮತ್ತು ಎಮ್ಮೆಯ ಹಾಲು. ಯಾವ ಹಾಲು ನಿಮ್ಮ ಆರೋಗ್ಯಕ್ಕೆ ಯಾವುದು ಸೂಕ್ತ? ಹೌದು, ಎಲ್ಲರ ಮನೆಗಳಲ್ಲಿ ಹಸುವಿನ ಹಾಲು (Cow Milk) ಮತ್ತು ಎಮ್ಮೆಯ ಹಾಲಿನ (Buffalo Milk) ಬಗ್ಗೆ ಚರ್ಚೆ ಸಾಮಾನ್ಯ. ಯಾವುದು ಹೆಚ್ಚು ಆರೋಗ್ಯಕರ, ಯಾವುದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಯಾವುದು ಹೆಚ್ಚು ಶಕ್ತಿ ನೀಡುತ್ತದೆ ಎಂಬ ಪ್ರಶ್ನೆಗಳು ಅನೇಕ ಬಾರಿ ಮೂಡುತ್ತವೆ. ಈ ಎರಡೂ ಬಗೆಯ ಹಾಲುಗಳು ತಮ್ಮದೇ ಆದ ಪ್ರಯೋಜನಗಳನ್ನು (Milk benefits) ಹೊಂದಿದ್ದರೂ, ನಿಮ್ಮ ಆರೋಗ್ಯ ಮತ್ತು ಜೀವನಶೈಲಿಗೆ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಹಾಲು ನಮ್ಮ ದೈನಂದಿನ ಆಹಾರದಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ, ಎಲ್ಲರಿಗೂ ಹಾಲು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಮನೆಮನೆಗಳಲ್ಲಿ ಸದಾ ಕೇಳಿಬರುವ ಪ್ರಶ್ನೆ ಒಂದೇ.. ಹಸು ಹಾಲು ಒಳ್ಳೆಯದಾ? ಎಮ್ಮೆ ಹಾಲು ಒಳ್ಳೆಯದಾ? ಎರಡೂ ಹಾಲಿಗೂ ತನ್ನದೇ ಆದ ವಿಶೇಷತೆಗಳಿವೆ. ಆರೋಗ್ಯದ ಅಗತ್ಯ, ಪಚನಶಕ್ತಿ ಮತ್ತು ದೈಹಿಕ ಅವಶ್ಯಕತೆಗಳ ಮೇಲೆ ಅವಲಂಬಿಸಿ ಯಾವ ಹಾಲು ಸೇವಿಸಬೇಕೆಂಬುದು ತೀರ್ಮಾನವಾಗುತ್ತದೆ. ಹಾಗಿದ್ರೆ, ಯಾವ ಹಾಲು (Cow Milk vs Buffalo Milk) ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಅಂತ ಈಗಲೇ ತಿಳಿದುಕೊಳ್ಳಿ.

ಹಸು ಹಾಲಿನ ವಿಶೇಷತೆಗಳು
• ಹಸು ಹಾಲಿನಲ್ಲಿ ಕೊಬ್ಬು ಮತ್ತು ಪ್ರೋಟೀನ್ ಪ್ರಮಾಣ ಎಮ್ಮೆ ಹಾಲಿಗಿಂತ ಕಡಿಮೆ.
• ಇದರಿಂದ ಅದು ಹಗುರವಾಗಿ, ಸುಲಭವಾಗಿ ಜೀರ್ಣವಾಗುತ್ತದೆ.
• ಅಜೀರ್ಣ, ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳಿರುವವರಿಗೆ ಹಸು ಹಾಲು ಸೂಕ್ತ.
• ವಿಟಮಿನ್ ಎ, ಕ್ಯಾಲ್ಸಿಯಂ ಹೇರಳವಾಗಿ ಇದ್ದು, ಹೊರಳು ಮತ್ತು ಕಣ್ಣುಗಳಿಗೆ ಹಿತಕರ.
• ಕಿಡ್ನಿ ಸಮಸ್ಯೆ ಇರುವವರಿಗೆ ವೈದ್ಯರು ಹೆಚ್ಚಾಗಿ ಹಸು ಹಾಲನ್ನು ಶಿಫಾರಸು ಮಾಡುತ್ತಾರೆ.
ಎಮ್ಮೆ ಹಾಲಿನ ವಿಶೇಷತೆಗಳು
• ಎಮ್ಮೆ ಹಾಲಿನಲ್ಲಿ ಹೆಚ್ಚು ಕೊಬ್ಬು ಮತ್ತು ಪ್ರೋಟೀನ್.
• ಇದರಿಂದ ಅದು ಗಟ್ಟಿಯಾಗಿ, ಕ್ರೀಮಿ ಸ್ವಾದ ನೀಡುತ್ತದೆ.
• ಜಿಮ್ ಮಾಡುವವರು, ಶಾರೀರಿಕವಾಗಿ ಹೆಚ್ಚು ಕೆಲಸ ಮಾಡುವವರು ಅಥವಾ ಬಾಡಿ ಬಿಲ್ಡಿಂಗ್ ಮಾಡುವವರಿಗೆ ಇದು ಹೆಚ್ಚು ಶಕ್ತಿದಾಯಕ.
• ಆದರೆ, ಪಚನಕ್ಕೆ ಹಸು ಹಾಲಿಗಿಂತ ಸ್ವಲ್ಪ ಭಾರಿಯಾಗಬಹುದು.
• ಕಿಡ್ನಿ ಬಲಹೀನತೆ ಇರುವವರಿಗೆ ಸೂಕ್ತವಲ್ಲ.
ತಜ್ಞರ ಅಭಿಪ್ರಾಯ ಏನು?
ಕಿಡ್ನಿ ಆರೋಗ್ಯ: ಎಮ್ಮೆ ಹಾಲಿನಲ್ಲಿನ ಹೆಚ್ಚಿನ ಪ್ರೋಟೀನ್ ಕಿಡ್ನಿಗೆ ಒತ್ತಡ ತರಬಹುದು. ಹೀಗಾಗಿ ಕಿಡ್ನಿ ರೋಗಿಗಳಿಗೆ ಹಸು ಹಾಲೇ ಉತ್ತಮ. ಹಾಲು ಕುಡಿದ ನಂತರ ಹೊಟ್ಟೆ ತುಂಬುವುದು, ಗ್ಯಾಸ್ ಅಥವಾ ಅಜೀರ್ಣದ ತೊಂದರೆ ಇದ್ದರೆ ಹಸು ಹಾಲು ಸೇವಿಸಬೇಕು. ಆರೋಗ್ಯಕರರಿಗೆ ಎಮ್ಮೆ ಹಾಲು ಸಹ ಪೂರಕವಾಗಿರಬಹುದು.
ಯಾವ ಹಾಲು ಕುಡಿಯಬೇಕು?
• ಹಸು ಹಾಲು: ಹಗುರ, ಸುಲಭವಾಗಿ ಜೀರ್ಣವಾಗುವ ಹಾಲು ಬೇಕಿದ್ದರೆ. ವಿಶೇಷವಾಗಿ ಕಿಡ್ನಿ ದುರ್ಬಲತೆ ಇರುವವರಿಗೆ ಒಳ್ಳೆಯದು.
• ಎಮ್ಮೆ ಹಾಲು: ಶಕ್ತಿ, ಪ್ರೋಟೀನ್ ಹಾಗೂ ಉರ್ಜೆ ಅಗತ್ಯವಿರುವವರಿಗೆ ಸೂಕ್ತ.
ಹಸುವಿನ ಹಾಲು ಮತ್ತು ಎಮ್ಮೆಯ ಹಾಲು ಎರಡೂ ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ನಿಮ್ಮ ಆಯ್ಕೆಯು ನಿಮ್ಮ ವೈಯಕ್ತಿಕ ಅಗತ್ಯತೆಗಳು ಮತ್ತು ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮಗೆ ಹಗುರವಾದ, ಸುಲಭವಾಗಿ ಜೀರ್ಣವಾಗುವ ಹಾಲು ಬೇಕಿದ್ದರೆ ಅಥವಾ ನಿಮ್ಮ ಆರೋಗ್ಯವು ಸೂಕ್ಷ್ಮವಾಗಿದ್ದರೆ, ಹಸುವಿನ ಹಾಲು ಉತ್ತಮ. ಆದರೆ, ಹೆಚ್ಚಿನ ಶಕ್ತಿ, ಸ್ನಾಯುಗಳ ಬೆಳವಣಿಗೆ ಅಥವಾ ದಪ್ಪ ಹಾಲು ಬೇಕಿದ್ದರೆ ಎಮ್ಮೆಯ ಹಾಲು ಹೆಚ್ಚು ಪ್ರಯೋಜನಕಾರಿ. ಹೀಗಾಗಿ, ಹಾಲಿನ ಆಯ್ಕೆ ನಿಮ್ಮ ದೇಹದ ಅವಶ್ಯಕತೆ, ಆರೋಗ್ಯ ಮತ್ತು ಜೀವನಶೈಲಿ ಮೇಲೆ ಅವಲಂಬಿಸಿರುತ್ತದೆ.
ಸೂಚನೆ: ಇಲ್ಲಿ ನೀಡಿದ ಮಾಹಿತಿ ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಯಾವುದೇ ಆಹಾರ ಪದ್ಧತಿಯನ್ನು ಬದಲಿಸುವ ಮೊದಲು ಅಥವಾ ಯಾವುದೇ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಮೊದಲು ದಯವಿಟ್ಟು ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













