Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮಲಬದ್ಧತೆ ಸಮಸ್ಯೆವಿದೆಯೇ? ತುಪ್ಪದ ಕಾಫಿ ಹೀಗೆ ಮಾಡಿ ಕುಡಿದು ನೋಡಿ
ನೀವು ಕಾಫಿ ಪ್ರಿಯರೇ? ಹಾಗಾದರೆ ಕಾಫಿಗೆ ತುಪ್ಪ ಹಾಕಿ ಕುಡಿಯುವುದರ ಪ್ರಯೋಜನ ಬಗ್ಗೆ ತಿಳಿಯಲೇಬೇಕು, ತುಪ್ಪ ಹಾಕಿ ಕಾಫಿ ಕುಡಿಯುವುದರಿಂದ ದೊರೆಯುವ ಪ್ರಯೋಜನವೇನು? ಇದು ಯಾವೆಲ್ಲಾ ಸಮಸ್ಯೆಗೆ ಅತ್ಯುತ್ತಮವಾದ ಮನೆಮದ್ದಾಗಿದೆ.
ತುಪ್ಪದ ಕಾಫಿ
ತುಪ್ಪ ಕಾಫಿ ಎಂದರೆ ನಾರ್ಮಲ್ ಬ್ಲ್ಯಾಕ್ ಕಾಫಿ, ಅದಕ್ಕೆ ಒಂದು ಚಮಚ ತುಪ್ಪ ಹಾಕಿ ಕುಡಿಯುವುದು. ಈ ತುಪ್ಪ ಹಾಕಿದ ಟೀ ಕುಡಿಯುವುದರಿಂದ ದೇಹಕ್ಕೆ ತುಂಬಾನೇ ಒಳ್ಳೆಯದು. ಈ ತುಪ್ಪದ ಕಾಫಿ ಕುಡಿಯುವುದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ:

ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತದೆ
ಯಾರಿಗೆ ಮಲಬದ್ಧತೆ ಸಮಸ್ಯೆವಿದೆಯೋ ಅವರು ಕಾಫಿಗೆ ತುಪ್ಪ ಹಾಕಿ ಕುಡಿದರೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ತುಂಬಾನೇ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆ ಉಂಟಾದರೆ ಮಲವಿಸರ್ಜನೆಗೆ ಹೋಗುವಾಗ ತುಂಬಾನೇ ನೋವುಂಟಾಗುವುದು, ಅಲ್ಲದೆ ದೀರ್ಘ ಸಮಯದಿಂದ ಮಲಬದ್ಧತೆ ಸಮಸ್ಯೆ ಉಂಟಾದರೆ ಮೂಲವ್ಯಾಧಿ ಸಮಸ್ಯೆ ಕೂಡ ಉಂಟಾಗಬಹುದು. ಅದೇ ತುಪ್ಪದ ಕಾಫಿ ಕುಡಿಯುವುದರಿಂದ ಮಲ ಮೃದುವಾಗುವುದು, ಸಲೀಸಾಗಿ ಹೋಗುವುದು ಹಾಗಾಗಿ ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ತುಪ್ಪದ ಕಾಫಿ ತುಂಬಾನೇ ಪ್ರಯೋಜನಕಾರಿ Journal of Ayurveda and Integrative Medicine ಕೂಡ ಹೇಳಿದೆ.
ತುಪ್ಪದ ಕಾಫಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು
ತುಪ್ಪದಲ್ಲಿರುವ Butyric ಆಮ್ಲ ಕರುಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಚಯಪಚಯ ಕ್ರಿಯೆ ಉತ್ತಮ ಪಡಿಸಲು ತುಂಬಾನೇ ಸಹಕಾರಿ. ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.
ಕೊಬ್ಬಿನಂಶದ ಆಹಾರ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಹೀಗಾಗಿ ಬ್ಲ್ಯಾಕ್ ಕಾಫಿಗೆ ತುಪ್ಪ ಹಾಕಿ ಕುಡಿಯುವುದು ತುಂಬಾನೇ ಒಳ್ಳೆಯದು.
ಮಲ ಸುಲಭವಾಗಿ ಹೊರ ಹಾಕಬಹುದು
ಮಲ ಗಟ್ಟಿಯಾದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಕಾಫಿಗೆ ತುಪ್ಪ ಹಾಕಿ ಕುಡಿದಾಗ ಮಲ ಮೃದುವಾಗುವುದು, ತುಪ್ಪ ಹಾಕಿದ ಕಾಫಿ ಕುಡಿಯುವುದರಿಂದ ಮಲವನ್ನು ಮೃದುವಾಗಿಸುತ್ತದೆ. ಇದರಿಂದ ಮಲ ಸರಾಗವಾಗಿ ಹೋಗುವುದು. ಗುದದ್ವಾರದ ನೋವು ಕಡಿಮೆ ಮಾಡುವುದು.
ನೀವು ಕಾಫಿ ಮಾಡಿ ಅದಕ್ಕೆ ಚಮಚ ತುಪ್ಪ ಹಾಕಿ ಕುಡಿಯುರಿ, ಹೀಗೆ ಕುಡಿಯುವುದರಿಂದ ಹೊಟ್ಟೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಈ ತುಪ್ಪ ಕಾಫಿಯನ್ನು ನೀವು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.
ತುಪ್ಪ ಕಾಫಿಯಿಂದ ಅಡ್ಡಪರಿಣಾಮವಿದೆಯೇ?
ಮಿತಿಯಲ್ಲಿ ಸೇವಿಸಿ: ನೀವು ಒಂದು ಲೋಟ ಕಾಫಿಗೆ ಒಂದು ತುಪ್ಪ ಹಾಕಿ ಕುಡಿದರೆ ಒಳ್ಳೆಯದು, ಅದೇ ನೀವು ಎರಡು ಮೂರು ಚಮಚ ತುಪ್ಪ ಹಾಕಿ ಕುಡಿದರೆ ಬೇಧಿ ಉಂಟಾಗಬಹುದು.
ಕೊಲೆಸ್ಟ್ರಾಲ್ ಹೆಚ್ಚಾಗುವುದು: ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಂಶವಿದೆ, ಆದರೆ ಇದನ್ನು ಮಿತಿ ಮೀರಿ ಕುಡಿದರೆ ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುತ್ತೆ. ಹೃದಯದ ಸಮಸ್ಯೆ ಇರುವವರಿಗೆ ಅತ್ಯಧಿಕ ಕ್ಯಾಲೋರಿ ಆಹಾರ ಒಳ್ಳೆಯದಲ್ಲ.
ಹೊಟ್ಟೆ ಉಬ್ಬಿದ ಅನುಭವ ಉಂಟಾಗುವುದು: ಕೆಲವರಿಗೆ ತುಪ್ಪದ ಕಾಫಿ ಕುಡಿದರೆ ಹೊಟ್ಟೆ ಉಬ್ಬದಂತೆ ಅನಿಸುವುದು, ಅಮಥವರು ಜಾಗ್ರತೆವಹಿಸಬೇಕು.
ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ನೀವು ಒಂದು ಚಮಚ ಅಥವಾ 5 ಗ್ರಾಂ ತುಪ್ಪ ಹಾಕಿ ಕುಡಿಯವುದು ಒಳ್ಳೆಯದು. ನೀವು ಇದನ್ನು ಇದೇ ಮೊದಲ ಬಾರಿಗೆ ತೆಗೆದುಕೊಳ್ಳುವುದಾದರೆ ಸ್ವಲ್ಪ ಕಡಿಮೆ ಹಾಕಿ ಕುಡಿಯಿರಿ.
ತುಪ್ಪದ ಕಾಫಿ ದಿನಾ ಕುಡಿಯಬಹುದಾ?
ತುಪ್ಪದ ಕಾಫಿ ದಿನಾ ಕುಡಿಯುವುದು ಒಳ್ಳೆಯದು, ಆದರೆ ನಿಮ್ಮ ದೇಹಕ್ಕೆ ಹೇಗೆ ಸೂಟ್ ಆಗುತ್ತದೆ ಎಂಬುವುದರ ಕಡೆಗೂ ಗಮನಹರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
