ಪುರುಷರೇ ಜನನಾಂಗದಲ್ಲಿ ಈ 10 ಬದಲಾವಣೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ

ಪುರುಷರಲ್ಲಿ ಅವರ ಗುಪ್ತಾಂಗಕ್ಕೆ ಸಂಬಂಧಿಸಿದ ಸಮಸ್ಯೆ ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವುದು, ಈ ರೀತಿಯಾದಾಗ ಅವರಿಗೆ ಲೈಂಗಿಕ ತೃಪ್ತಿ ಸಿಗುವುದಿಲ್ಲ ಎಂಬುವುದು ಹೆಚ್ಚಿನವರ ಆಲೋಚನೆಯಾಗಿದೆ. ಆದರೆ ಪುರುಷರಲ್ಲಿ ಗುಪ್ತಾಂಗದ ಸಮಸ್ಯೆ ಯಾವುದೇ ವಯಸ್ಸಿನಲ್ಲಿಯೂ ಕಂಡು ಬರಬಹುದು. ಅಲ್ಲದೆ ಇದರಿಂದ ಲೈಂಗಿಕ ಸಮಸ್ಯೆ ಮಾತ್ರ ಉಂಟಾಗುವುದಲ್ಲ, ಪುರುಷರ ಒಟ್ಟು ಮೊತ್ತದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಬಹುತೇಕ ಪುರುಷರು ಪ್ರಾರಂಭದಲ್ಲಿ ಇದರ ಬಗ್ಗೆ ಗಮನ ಹರಿಸುವುದೇ ಇಲ್ಲ.

2018ರಲ್ಲಿFamily Medicine and Primary Care ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಪುರುಷರು ತಮ್ಮ ಜನನಾಂಗದ ಆರೋಗ್ಯದ ಸಮಸ್ಯೆ ಬಗ್ಗೆ ತುಂಬಾನೇ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಹೇಳಿದೆ. ಈ ಬಗೆಯ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸುವುದರಿಂದ ಅದನ್ನು ಗುಣಪಡಿಸುವುದು ಸುಲಭ ಅಲ್ಲದೆ ಇದರಿಂದ ಮುಂದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾಗುವುದನ್ನು ತಡೆಗಟ್ಟಬಹುದು.

Common Male Organ Health Problem Men Shouldnt Ognore In Kannada

1. ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುವ ಜನನಾಂಗದ ಸಮಸ್ಯೆಗಳೆಂದರೆ

ಶಿಶ್ನ ಗಾತ್ರ ಚಿಕ್ಕದಾಗಿರುವುದು: ಶಿಶ್ನದ ಗಾತ್ರ ತುಂಬಾ ಕಿರಿದಾಗಿದ್ದರೆ ಮಕ್ಕಳಾಗಿದ್ದಾಗ ಆದರೆ ಪೋಷಕರು ಗಮನಿಸಿ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ. ಅದೇ ಹದಿ ಹರೆಯದ ಪ್ರಾಯಕ್ಕೆ ಬಂದಾಗ ಅಥವಾ ಯೌವನ ಪ್ರಾಯಕ್ಕೆ ಬಂದಾಗ ಈ ಸಮಸ್ಯೆ ಕುರಿತು ಮನೆಯವರ ಬಳಿ ಹೇಳಿಕೊಳ್ಳಲು ತುಂಬಾ ಜನ ಹಿಂಜರಿಯುತ್ತಾರೆ. ಅನೇಕ ಕಾರಣಗಳಿಂದಾಗಿ ಈ ರೀತಿ ಉಂಟಾಗುವುದು. ನಿದ್ದೆ ಕಡಿಮೆಯಾದಾಗ, ತುಂಬಾ ನೋವು, ಕ್ಯಾನ್ಸರ್ ಅಥವಾ ಏನಾದರೂ ಮಾನಸಿಕ ಸಮಸ್ಯೆ ಅಥವಾ ಮತ್ತಿತರ ಕಾರಣಗಳಿಂದ ಈ ರೀತಿಯಾಗುವುದು. ಈ ರೀತಿಯಾದಾಗ ಸೂಕ್ತ ಚಿಕಿತ್ಸೆ ಪಡೆದರೆ ಈ ಸಮಸ್ಯೆ ಸರಿಪಡಿಸಬಹುದು.

2. ಮೂತ್ರ ಲೀಕ್ ಆಗುವುದು

ಈ ಸಮಸ್ಯೆ ತುಂಬಾ ಪುರುಷರಲ್ಲಿ ಇರುತ್ತದೆ, ಆದರೆ ಕೆಲವರು ನಾಚಿಕೆಯಿಂದ ಈ ಸಮಸ್ಯೆ ಬಗ್ಗೆ ಹೇಳುವುದೇ ಇಲ್ಲ. ಮೂತ್ರ ಹನಿ ಹನಿಯಾಗಿ ಹೋಗುತ್ತಿರುತ್ತದೆ. ಇನ್ನು ಕೆಲವರಿಗೆ ಎಲ್ಲಾ ಸಮಯದಲ್ಲಿ ಹೋಗುವುದಿಲ್ಲ, ಕೆಮ್ಮಿದಾಗ, ಸೀನಿದಾಗ, ಜೋರಾಗಿ ನಕ್ಕಾಗ, ವ್ಯಾಯಾಮ ಮಾಡಿದಾಗ, ಏನಾದರೂ ಭಾರ ಎತ್ತಿದಾಗ ಸ್ವಲ್ಪ ಮೂತ್ರ ಹೋಗುವುದು. ಬ್ಲೇಡರ್‌ ಮೇಲೆ ಒತ್ತಡ ಬೀಳುವುದರಿಂದ ಈ ರೀತಿಯಾಗುವುದು. ಈ ರೀತಿ ಉಂಟಾದರೆ ನಾಚಿಕೆಯಿಂದ ಸಮಸ್ಯೆ ಮರೆಮಾಚಲು ಯತ್ನಿಸುವ ಬದಲಿಗೆ ವೈದ್ಯರನ್ನು ಕಾಣಿ, ಅವರು ನಿಮಗೆ ಸೂಕ್ತ ಪರಿಹಾರ ನೀಡುತ್ತಾರೆ.

3. ತಲೆಸುತ್ತು ಬರುವುದು:

ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಅಥವಾ ಇಲ್ಲದಿರುವುದು, ಸ್ಟಾಮಿನಾ ಕಡಿಮೆಯಾಗುವುದು ಈ ರೀತಿಯಾದಾಗ ಕೆಲವರಿಗೆ ತಲೆಸುತ್ತು ಉಂಟಾಗುವುದು. ವೃಷಣದಲ್ಲಿ ಗಾಯ, ಹಾರ್ಮೋನ್‌ ಅಸಮತೋಲನ, ಮಧುಮೇಹ , ಮತ್ತಿತರ ಆರೋಗ್ಯ ಸಮಸ್ಯೆ ಉಂಟಾದಾಗ ಈ ರೀತಿ ಉಂಟಾಗುವುದು.

5. ಶೀಘ್ರ ಸ್ಖಲನ ಅಥವಾ ಸ್ಖಲನ ಆಗದೇ ಇರುವುದು:

ಈ ರೀತಿಯ ಸಮಸ್ಯೆ ಪುರುಷರಲ್ಲಿ ಆತ್ಮವಿಶ್ವಾಸ ಕುಗ್ಗಿಸುತ್ತದೆ. ತನ್ನಿಂದ ಲೈಂಗಿಕ ಸುಖ ನೀಡುವ ಸಾಮರ್ಥ್ಯವಿಲ್ಲ ಎಂಬ ಭಾವನೆ ಮೂಡಿಸುತ್ತದೆ. ಅಲ್ಲದೆ ಈ ಸಮಸ್ಯೆ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಮೂಡಲು, ದಾಂಪತ್ಯ ಜೀವನದಲ್ಲಿ ನಿರಾಸಕ್ತಿ, ಅನೈಂತಿಕ ಸಂಬಂಧ ಬೆಳೆಯಲು ಕೂಡ ಕಾರಣವಾಗುವುದು. ಆದ್ದರಿಂದ ಈ ಬಗೆಯ ಸಮಸ್ಯೆಯಿದ್ದರೆ ಚಿಕಿತ್ಸೆ ಪಡೆಯಲು ಹಿಂಜರಿಯುವ ಬದಲಿಗೆ ಲೈಂಗಿಕ ತಜ್ಞರನ್ನು ಭೇಟಿಯಾದರೆ ಅವರು ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತಾರೆ. ಹಿಂಜರಿಯುವುದರಿಂದ ನಿಮ್ಮ ಬದುಕಿನಲ್ಲಿ ಸಮಸ್ಯೆ ಹೆಚ್ಚಾಗುವುದು.

6. ಶಿಶ್ನದ ಗಾತ್ರ

ಶಿಶ್ನದ ಗಾತ್ರದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಉಂಟಾದರೆ , ಆ ಭಾಗದಲ್ಲಿ ನೋವು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಇದು ಕ್ಯಾನ್ಸರ್ ಸೇರಿದಂತೆ ಮತ್ತಿತರ ರೋಗದ ಲಕ್ಷಣವಿರಬಹುದು. ಆದ್ದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ.

7. ಬಂಜೆತನ:

ಬಂಜೆತನ ಎಂಬುವುದು ಮಹಿಳೆಯರಿಗೆ ಮಾತ್ರ ಉಂಟಾಗುತ್ತದೆ ಎಂಬುವುದು ತಪ್ಪು ಕಲ್ಪನೆ. ಸಾಕಷ್ಟು ದಂಪತಿಗೆ ಪುರುಷನಲ್ಲಿರುವ ಬಂಜೆತನ ಸಮಸ್ಯೆಯಿಂದಾಗಿ ಮಕ್ಕಳಾಗಿರುವುದಿಲ್ಲ. ಪುರುಷರಿಗೆ ಬಂಜೆತನ ಸಮಸ್ಯೆಯಿದೆ ಎಂದರೆ ಅದನ್ನು ಒಪ್ಪಿಕೊಳ್ಳುವುದೇ ತುಂಬಾ ಪುರುಷರಿಗೆ ಕಷ್ಟವಾಗುವುದು. ಈ ಕಾರಣಕ್ಕೆ ತುಂಬಾ ಹೆಣ್ಮಕ್ಕಳು ಮಕ್ಕಳಾಗಿಲ್ಲ ಎಂದು ಸಮಾಜದ ಚುಚ್ಚು ಮಾತು ಕೇಳಬೇಕಾಗುತ್ತದೆ. ಆದ್ದರಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೂ ಗರ್ಭಧಾರಣೆಯಾಗಿಲ್ಲ ಎಂದು ಬರೀ ಮಹಿಳೆ ಮಾತ್ರವಲ್ಲ, ಪುರುಷರೂ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ಏನಾದರೂ ಸಮಸ್ಯೆಯಿದ್ದರೆ ವೈದ್ಯರು ನಿಮಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ.

8. ಪುರುಷರಲ್ಲಿ ಸ್ತನಗಳು:

ಪುರುಷರಲ್ಲಿ ಸ್ತನಗಳ ಗಾತ್ರ ದೊಡ್ಡದಾಗಿದ್ದರೆ ಅದು ಕೂಡ ಅವರಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವುದು. ಮೈ ತೂಕ ಅಧಿಕವಿರುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು. ಮೈ ತೂಕ ಕಡಿಮೆ ಮಾಡಿದರೆ ಅಥವಾ ವೈದ್ಯರಲ್ಲಿ ಈ ಕುರಿತು ಹೇಳಿದರೆ ಅವರು ನಿಮಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ.

9. ಶಿಶ್ನಗಳಲ್ಲಿ ದುರ್ವಾಸನೆ:

ಬೆವರಿನಿಂದ ಈ ರೀತಿ ದುರ್ವಾಸನೆ ಬರುತ್ತಿರಬಹುದು ಎಂದು ಭಾವಿಸಬಹುದು. ಆದರೆ ಏನಾದರೂ ಬ್ಯಾಕ್ಟಿರಿಯಾ ಸೋಂಕು ಉಂಟಾದಾಗ ಅಥವಾ ಫಂಗಲ್ ಸೋಂಕು ಉಂಟಾದಾಗ ಈ ರೀತಿ ಉಂಟಾಗುವುದು. ಆದ್ದರಿಂದ ಇಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Common Male Organ Health Problem Men Shouldn't Ignore In Kannada

Problem In Male Organ: These are the common male organ problem every man shouldn't ognore, read on.
X
Desktop Bottom Promotion