Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ನಿಮ್ಮ ಬ್ಲಡ್ ಗ್ರೂಪ್ ಯಾವುದು? ಈ ರಕ್ತದ ಗುಂಪಿನವರಲ್ಲಿ ಸ್ಟ್ರೋಕ್ ಅಪಾಯ ಹೆಚ್ಚಂತೆ!!
ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ನೀವು ಕೂಡ ಗಮನಿಸಿರಬಹುದು. ಅದ್ರಲ್ಲೂ ಚಿಕ್ಕ ವಯಸ್ಸಿನವರಲ್ಲೂ ಕೂಡ ಸ್ಟ್ರೋಕ್ ಕಾಣಿಸಿಕೊಳ್ಳುತ್ತಿರುವುದು ಹೊಸ ರೀತಿಯ ಆತಂಕಕ್ಕೆ ಕಾರಣವಾಗಿದೆ. ಇಂತಹ ಅಪಾಯಗಳ ಹೆಚ್ಚಳಕ್ಕೆ ನಮ್ಮ ಜೀವನ ಶೈಲಿಯೂ ಕೂಡ ಒಂದು ಕಾರಣವಾದರೆ ನಿಮ್ಮ ನಿಯಂತ್ರಣದಲ್ಲಿ ಇರದ ಹಲವು ಕಾರಣಗಳನ್ನು ಕೂಡ ಪಟ್ಟಿ ಮಾಡಬಹುದು.
ಹಾಗೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ಒಂದು ನಿರ್ಧಿಷ್ಟ ರಕ್ತದ ಮಾದರಿ ಹೊಂದಿರುವ ಮಂದಿಯಲ್ಲಿ ಅದ್ರಲ್ಲೂ ಇವರಲ್ಲಿ 60 ವರ್ಷಕ್ಕಿಂತಲೂ ಮೊದಲು ಈ ಸ್ಟ್ರೋಕ್ ಉಂಟಾಗುವ ಅಪಾಯವಿದೆ ಎಂದು ಹೇಳಲಾಗಿದೆ. ಇದು ಅಪಾಯ ಹಾಗೂ ಆತಂಕ ಎರಡಕ್ಕೂ ಕಾರಣವಾಗಿದೆ.

ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಸಂಶೋಧಕರು ರಕ್ತದ ಮಾದರಿ ಹಾಗೂ ಸ್ಟ್ರೋಕ್ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಇದು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ತುತ್ತಾದ 17,000 ಕ್ಕೂ ಹೆಚ್ಚು ಜನರನ್ನು ಮತ್ತು ಸುಮಾರು 600,000 ಪಾರ್ಶ್ವವಾಯು ಮುಕ್ತ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಈ ಅಧ್ಯಯನದಲ್ಲಿ ವಿಶ್ಲೇಷಣೆಗಳಿಗೆ ಒಳಪಡಿಸಲಾಗಿದೆ. ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿದು ನಿರ್ಬಂಧಿಸಿದಾಗ ಉಂಟಾಗುವ ಸ್ಟ್ರೋಕ್ ಕುರಿತಾಗಿ ಹೊಸ ರೀತಿಯ ವಿಚಾರಗಳ ಕಂಡುಕೊಂಡಿದ್ದಾರೆ.
ಈ ಅಧ್ಯಯನದಲ್ಲಿ A ರಕ್ತದ ಗುಂಪು ಹೊಂದಿರುವ ಮಂದಿ 60 ವರ್ಷದೊಳಗೆ ಸ್ಟ್ರೋಕ್‌ಗೆ ಒಳಗಾಗುವ ಸಾಧ್ಯತೆ ಶೇ.16ರಷ್ಟು ಹೆಚ್ಚು ಎಂದು ತಿಳಿದುಬಂದಿದೆ. ಸಾಮಾನ್ಯ ರಕ್ತದ ಪ್ರಕಾರವಾದ O ರಕ್ತದ ಪ್ರಕಾರ ಹೊಂದಿರುವ ಜನರು ಆರಂಭಿಕ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಶೇ.12 ರಷ್ಟು ಎಂದಿದೆ. ಹಾಗೆ ಕಿರಿಯ ವಯಸ್ಕರಲ್ಲಿ ಪಾರ್ಶ್ವವಾಯು ಹೆಚ್ಚಾಗುತ್ತಿದೆ. ಆದರೆ ಆರಂಭಿಕ ಪಾರ್ಶ್ವವಾಯುವಿಗೆ ನಿಖರ ಕಾರಣವೇನು ಎಂಬುದನ್ನು ಕೂಡ ನಿಖರವಾಗಿ ಹೇಳಲು ಆಗಿಲ್ಲ.
ಹಿಂದಿನ ಸಂಶೋಧನೆಯು A ರಕ್ತದ ಪ್ರಕಾರವು ಹೆಪ್ಪುಗಟ್ಟುವಿಕೆ ಅಂಶಗಳು ಅಥವಾ ಉರಿಯೂತದ ಘಟನೆಗಳಿಗೆ ಸಂಬಂಧ ಹೊಂದಿರಬಹುದು ಎಂದು ಸೂಚಿಸುತ್ತದೆ, ಇದು ಅಪಧಮನಿಗಳು ನಿರ್ಬಂಧಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಬಹುತೇಕ ಸ್ಟ್ರೋಕ್ ಪ್ರಕರಣಗಳಲ್ಲಿ ನಮ್ಮ ಜೀವನಶೈಲಿ ಕಾರಣವಾಗಿರುತ್ತದೆ. ವಾಕಿಂಗ್ ಆರೋಗ್ಯಕರ ಆಹಾರ, ಧೂಮಪಾನ ಮಾಡದಿರುವುದು ಮತ್ತು ನಿಮ್ಮ ರಕ್ತದ ಪ್ರಕಾರವನ್ನು ಲೆಕ್ಕಿಸದೆ ನಿಮ್ಮ ರಕ್ತದೊತ್ತಡದ ಮೇಲೆ ನಿಗಾ ಇಡುವುದು ಸ್ಟ್ರೋಕ್ ಬಾರದಂತೆ ತಡೆಯುವ ಮಾರ್ಗವಾಗಿರಲಿದೆ. ಇನ್ನು ಮಹಿಳೆಯರಿಗಿಂತಲೂ ಪುರುಷರಲ್ಲೇ ಸ್ಟ್ರೋಕ್ ಅಪಾಯ ಹೆಚ್ಚು ಎಂದು ತಿಳಿದುಬರಲಿದೆ.
ಸ್ಟ್ರೋಕ್ ಲಕ್ಷಣಗಳೇನು?
- ಸುಸ್ತು, ದೇಹ ಮರಗಟ್ಟಿದಂತಾಗುವುದು
- ಮಾತನಾಡಲು ಕಷ್ಟವಾಗುವುದು
- ಮೈ ಬೆವರುವುದು, ತುಟಿ ಒಂದು ಪಕ್ಕಕ್ಕೆ ತಿರುಗುವುದು
- ಕೆಲವರಲ್ಲಿ ಸ್ಟ್ರೋಕ್ ಲಕ್ಷಗಳು ವಾರಗಳಿಗೂ ಮೊದಲೇ ಗೋಚರವಾಗಲು ಆರಂಭಿಸುತ್ತದೆ.
ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣಗಳು
- ಅಧಿಕ ರಕ್ತದೊತ್ತಡ
- ರಕ್ತನಾಳಗಳಿಗೆ ಹಾನಿ
- ತಲೆಗೆ ಪೆಟ್ಟಾಗಿದ್ದರೆ
ಯಾರಲ್ಲಿ ಸ್ಟ್ರೋಕ್‌ನ ಅಪಾಯ ಹೆಚ್ಚು?
- ಅಧಿಕ ತೂಕ ಇರುವವರು
- ದೈಹಿಕ ಚಟುವಟಿಕೆ ಕಡಿಮೆ ಇರುವುದು
- ಮದ್ಯ ಸೇವಿಸುವವರು
- ಡ್ರಗ್ಸ್ ಸೇವನೆ
- ಧೂಮಪಾನಿಗಳು
- ನಿದ್ರಾಹೀನತೆ
ಸ್ಟ್ರೋಕ್‌ನಲ್ಲಿನ ವಿಧಗಳೇನು?
- ಇಸ್ಕೆಮಿಕ್ ಸ್ಟ್ರೋಕ್
- ಹೆಮರಾಜಿಕ್ ಸ್ಟ್ರೋಕ್
- ಇಸ್ಕೆಮಿಕ್ ಸ್ಟ್ರೋಕ್
ಸ್ಟ್ರೋಕ್ ತಡೆಯಬಹುದಾದ ಆಹಾರಗಳು
ಎಲೆ ತರಕಾರಿಗಳು
ಪಾಲಕ್, ಕೋಸು, ಸೇರಿದಂತೆ ಹಸಿರು ತರಕಾರಿಗಳು ಸ್ಟ್ರೋಕ್ ತಡೆಯುವ ಅಂಶಗಳ ಹೊಂದಿರಲಿವೆ. ಇವುಗಳಲ್ಲಿನ ನೈಟ್ರೇಟ್‌ಗಳು ರಕ್ತ ಪರಿಚಲನೆಗೆ ಕಾರಣವಾಗುತ್ತವೆ. 2021 ರ ಅಧ್ಯಯನವು ದಿನಕ್ಕೆ ಕನಿಷ್ಠ 60 ಮಿಲಿಗ್ರಾಂ ನೈಟ್ರೇಟ್ ತರಕಾರಿ ಸೇವಿಸುವುದರಿಂದ ಇಸ್ಕೆಮಿಕ್ ಸ್ಟ್ರೋಕ್ ಅಪಾಯವು ಶೇ.17ರಷ್ಟು ಕಡಿಮೆಯಾಗಲಿದೆ ಎಂದು ತಿಳಿದಬಂದಿದೆ.
ವಾಲ್ನಟ್
ಸಿಟ್ರಸ್ ಹಣ್ಣುಗಳು
ಕೊಬ್ಬಿನ ಮೀನು
ಮೊಸರು
ಹಸಿ ತರಕಾರಿಗಳು



Click it and Unblock the Notifications
