Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಅಡುಗೆಗೆ ಬಳಸೋ ಸ್ಟೌವ್‌ನಿಂದ ಕ್ಯಾನ್ಸರ್: ಅಮರಿಕ ತಜ್ಞರು ಕಂಡುಕೊಂಡಿದ್ದೇನು?
ಹಿಂದಿನ ಕಾಲದಿಂದಲೂ ಅಡುಗೆ ಮನೆಯಲ್ಲಿ ಸಾಂಪ್ರದಾಯಿಕವಾಗಿ ಅಡುಗೆ ಮಾಡುವುದರಿಂದ ಹಿಡಿದು ಈಗ ಅತ್ಯಾಧುನಿಕ ಅಡುಗೆ ಪ್ರಯೋಗಗಳು ಬಂದಿವೆ. ಎಲೆಕ್ಟ್ರಿಕ್ ಗ್ಯಾಸ್ ಸ್ಟೌವ್‌ನಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಡುಗೆ ಮನೆಗಳು ಕೂಡ ಈಗ ಟೆಕ್ನಾಲಜಿಯಲ್ಲಿ ತುಂಬಿಕೊಂಡಿದೆ. ಆದ್ರೆ ಅಡುಗೆ ಮನೆಯಿಂದಲೂ ಅನಾರೋಗ್ಯ ಸಮಸ್ಯೆಗಳು ಬರುವುದು ನೋಡಬಹುದು.
ಈಗ ನೀವು ಬಳಸುವ ಗ್ಯಾಸ್ ಸ್ಟೌವ್‌ನಿಂದಾಗಿಯೇ ಅನಾರೋಗ್ಯ ಬರುತ್ತಿದೆ ಎಂಬುದು ನಿಮಗೆ ತಿಳಿದಿದ್ಯಾ? ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ ಮತ್ತು ಇತರ ಸಂಸ್ಥೆಗಳ ಸಂಶೋಧಕರ ತಂಡವು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.
ನೀವು ಅಡುಗೆಗೆ ಬಳಸುವಂತಹ ಅನಿಲವು ನಿಮ್ಮಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಲು ಕಾರಣವಾಗಿದೆ ಎಂದು ಅಂಶೋದನೆಯಲ್ಲಿ ತಿಳಿದುಬಂದಿದೆ. ಎಲ್‌ಪಿಜಿ ದಹನ ಪ್ರಕ್ರಿಯೆಯಲ್ಲಿ ಹಲವು ರೀತಿಯ ಅಂಶಗಳು ಪರಿಸರಕ್ಕೆ ಸೇರಿಕೊಳ್ಳುತ್ತದೆ. ಅದರಲ್ಲಿ ಈ ಬೆಂಜೀನ್ ಎಂಬ ಅನಿಲ ಹೊರಸೂಸುವುದು ಗಮನಿಸಬಹುದು. ಈ ಅನಿಲವು ಇದು ಸಿಗರೇಟ್ ಹೊಗೆಯಲ್ಲಿ ಕಂಡುಬರುವಂತಹ ಪ್ರಬಲ ಕ್ಯಾನ್ಸರ್ ಜನಕವಾಗಿದೆ.

ಬೆಂಜೀನ್ ಇದು ಬಣ್ಣರಹಿತ, ವಾಸನೆ ರಹಿತ, ಹೈಡ್ರೋಕಾರ್ಬನ್ ಆಗಿದೆ. ಇದು ಇಂಗಾಲ ಹೈಡ್ರೋಜನ್ ಪರಮಾಣುಗಳಿಂದ ರೂಪಿತವಾಗಿರಲಿದೆ. ಹೊಸ ಅಧ್ಯಯನದಲ್ಲಿ ತಂಡವು 87 ಮನೆಗಳಲ್ಲಿ ಗ್ಯಾಸ್ ಸ್ಟೌವ್‌ಗಳಿಂದ ಬೆಂಜೀನ್ ಎಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಕುರಿತು ತಿಳಿಯಲು ಅಳತೆಗೆ ಮುಂದಾಯಿತು. ಈ ಮಾಪನದಲ್ಲಿ ಸುಮಾರು ಶೇ.5ರಷ್ಟು ಮನೆಯ ಸ್ಟೌವ್‌ಗಳಲ್ಲಿ ಆರೋಗ್ಯಕರ ಅಪಾಯಗಳ ಹೆಚ್ಚಿಸಿರುವುದು ನೋಡಬಹುದು.
ಗ್ಯಾಸ್ ಸ್ಟೌವ್‌ಗಳಿಂದ ಬೆಂಜೀನ್‌ಗೆ ಸಂಬಂಧಿಸಿದ ಹೆಚ್ಚುವರಿ ಜೀವಿತಾವಧಿಯ ಕ್ಯಾನ್ಸರ್ ಅಪಾಯವು ತುಂಬಾ ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮಲಗುವ ಕೋಣೆಗಳಿಗೆ ಪ್ರವೇಶಿಸಿದ ಬೆಂಜೀನ್‌ನಿಂದ ಬರುವ ಅಪಾಯವು ಮಕ್ಕಳಲ್ಲಿ ಒಂದು ಮಿಲಿಯನ್ ಹೆಚ್ಚುವರಿ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು ಎರಡರಿಂದ 12 ರವರೆಗೆ ಮತ್ತು ವಯಸ್ಕರಲ್ಲಿ ಒಂದು ಮಿಲಿಯನ್‌ನಲ್ಲಿ ಒಂದರಿಂದ 6ರ ವರೆಗೆ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಹಾಗೆ ಇಡೀ ಮನೆಯಾದ್ಯಂತ ಹರಡುವಿಕೆಯನ್ನು ಲೆಕ್ಕ ಹಾಕಿದಾಗ ಬೆಂಜೀನ್‌ನಿಂದ ಮಕ್ಕಳಿಗೆ ಕ್ಯಾನ್ಸರ್ ಅಪಾಯವು ವಯಸ್ಕರಿಗಿಂತ 1.85 ಪಟ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ. ಈ ಅಪಾಯ ಅಡುಗೆ ಮಾಡುವಾಗ ಮಾತ್ರವಲ್ಲ ಗ್ಯಾಸ್ ಸ್ಟೌವ್ ಆಗಿದ್ದಾಗಲು ಕೂಡ ಈ ಅನಿಲ ಬಿಡುಡೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಅನಿಲ ಹರಡುವಿಕೆಯಿಂದ ಹೊರಬರಲು ಬಾಗಿಲು ಕಿಟಕಿ ತೆರೆದು ಅಡುಗೆ ಮಾಡುವುದು, ಫ್ಯಾನ್‌ಗಳ ಬಳಕೆ ಮಾಡಬಹುದು. ಅಥವಾ ಈ ಅನಿಲ ಸ್ಟೌನ್‌ನಿಂದ ಮುಕ್ತಿ ಪಡೆದು ಎಲೆಕ್ಟ್ರಾನಿಕ್ ಸ್ಟೌವ್ ಬಳಕೆ ಕೂಡ ಮಾಡಬಹುದು. ಅಮೆರಿಕದ ಸುಮಾರು 38% ಮನೆಗಳು ನೀಲಿ ಬಣ್ಣದ ಒಲೆಯ ಉರಿ ನೋಡಬಹುದಂತೆ. ಸರಿಸುಮಾರು 47 ಮಿಲಿಯನ್ ಮನೆಗಳಲ್ಲಿ, 6.3 ಮಿಲಿಯನ್ ಅಮೆರಿಕನ್ನರು ಗ್ಯಾಸ್ ಸ್ಟೌವ್‌ಗಳಿಂದ ಬೆಂಜೀನ್ ಅನ್ನು ಉಸಿರಾಡುತ್ತಿದ್ದಾರೆ ಎಂದು ತಂಡ ಅಂದಾಜಿಸಿದೆ.



Click it and Unblock the Notifications