Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಮೆನ್‌ಸ್ಟ್ರಲ್ ಕಪ್ ಬಳಸಿ ಈಜಾಡಬಹುದೇ, ಸುರಕ್ಷಿತವೇ? ಲೀಕ್ ಆಗುವುದಿಲ್ಲವೇ?
ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ಆಟವಾಡಬಾರದು, ನದಿಗೆ, ಈಜುಕೊಳ್ಳಕ್ಕೆ ಇಳಿಯಬಾರದು ಎಂದು ಅಮ್ಮ ಅಥವಾ ಅಜ್ಜಿ ಹೇಳಿರುವುದನ್ನು ಕೇಳಿರಬಹುದು. ಅಲ್ಲದೆ ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ಇಳಿಯಲು ನಾವೂ ಹಿಂಜರಿಯುತ್ತೇವೆ ಅಲ್ವಾ? ಪ್ಯಾಡ್ ಧರಿಸಿದಾಗ ನೀರಿನಲ್ಲಿ ಇಳಿದಾಗ ಒಂಥರಾ ಕಿರಿಕಿರಿಯಾಗುವುದು. ಆದರೆ ಮೆನ್‌ಸ್ಟ್ರಲ್ ಕಪ್ ಧರಿಸಿದರೆ ಸ್ವಿಮ್ಮಿಂಗ್ ಮಾಡಬಹುದೇ?

ಮುಟ್ಟಿನ ಸಮಯದಲ್ಲಿ ಈಜಾಡಬಹುದೇ?
ಮುಟ್ಟಿನ ಸಮಯದಲ್ಲಿ ಈಜಾಡಬಹುದು, ಆದರೆ ಟ್ಯಾಂಫೂನ್ ಅಥವಾ ಪಿರೀಡ್ ಫ್ರೆಂಡ್ಲಿ ಸ್ವಿಮ್ಮರ್ ಧರಿಸುವುದು, ಮೆನ್‌ಸ್ಟ್ರಲ್ ಕಪ್ ಧರಿಸಿ ಈಜಾಡಬಹುದು. ಆದರೆ ಸುರಕ್ಷತೆ ಕಡೆಗೆ ಗಮನಹರಿಸಬೇಕು.
ಮೆನ್‌ಸ್ಟ್ರಲ್ ಕಪ್ ಸುರಕ್ಷಿತವೇ?
ಮೆನ್‌ಸ್ಟ್ರಲ್ ಕಪ್ ಧರಿಸಿ ಈಜಾಡುವುದು ಸುರಕ್ಷಿತ. ಮುಟ್ಟಿನ ಸಮಯದಲ್ಲಿ ಮೆನ್‌ಸ್ಟ್ರಲ್ ಕಪ್ ಧರಿಸುವುದು ಟ್ಯಾಂಫೂನ್‌ಗಿಂತ ಉತ್ತಮ, ಇದನ್ನು ಧರಿಸುವುದರಿಂದ ಈಜುಕೊಳ್ಳದ ನೀರು ಜನನೇಂದ್ರೀಯ ಒಳಗಡೆ ಹೋಗಲ್ಲ, ಅಲ್ಲದೆ ಲೀಕಿಂಗ್ ಆಗುತ್ತೆ ಎಂದು ಭಯ ಪಡಬೇಕಾಗಿಲ್ಲ. ಅಲ್ಲದೆ ಮೆನ್‌ಸ್ಟ್ರಲ್ ಕಪ್ ಧರಿಸಿದರೆ 12 ಗಂಟೆ ಬದಲಾಯಿಸಬೇಕಾಗಿಲ್ಲ. ಸರಿಯಾದ ಸೈಜ್‌ನ ಕಪ್ ಬಳಸಿದರೆ ಲೀಕ್ ಆಗುತ್ತೆ ಎಂಬ ಆತಂಕವೂ ಬೇಕಾಗಿಲ್ಲ, ಆರಾಮವಾಗಿ ನೀರಿನಲ್ಲಿ ಆಟವಾಡಬಹುದು. ಆದರೆ ಈ ಸುರಕ್ಷಿತ ಫೀಲ್ ಪ್ಯಾಡ್ ಅಥವಾ ಟ್ಯಾಂಫೂನ್ ಬಳಸಿ ನೀರಿಗಿಳಿದರೆ ಉಂಟಾಗಲ್ಲ.
ಮೆನ್‌ಸ್ಟ್ರಲ್ ಕಪ್ ಬಳಸುವಾಗ ಈ ಅಂಶಗಳನ್ನು ಗಮನಿಸಿ
ಸರಿಯಾದ ಸೈನ್‌ನದು ಬಳಸಬೇಕು
ನೀವು ನಿಮಗೆ ತಕ್ಕ ಸರಿಯಾದ ಸೈಜ್‌ನ ಮೆನ್‌ಸ್ಟ್ರಲ್ ಕಪ್ ಬಳಸಿ. ಸರಿಯಾದ ಸೈಜ್‌ನ ಮೆನ್‌ಸ್ಟ್ರಲ್ ಕಪ್ ಬಳಸಿದರೆ ಲೀಕ್ ಆಗುವುದಿಲ್ಲ.
ಸರಿಯಾದ ಸೈಜ್ ತಿಳಿಯುವುದು ಹೇಗೆ?
ಮದುವೆಯಾಗದೆ ಇರುವವರೆಗೆ
ಮದುವೆಯಾಗದೆ ಇರುವವರು ಸ್ಮಾಲ್ ಸೈಜ್ ಮೆನ್‌ಸ್ಟ್ರಲ್ ಕಪ್ ಬಳಸಿ.
C-ಸೆಕ್ಷನ್ ಹೆರಿಗೆಯಾಗಿದ್ದರೆ?
ಸಿ ಸೆಕ್ಷನ್ ಹೆರಿಗೆಯಾಗಿದ್ದರೆ ಮೀಡಿಯಂ ಸೈಜ್‌ನ ಮೆನ್‌ಸ್ಟ್ರಲ್ ಕಪ್ ಬಳಸಿ.
ಸಹಜ ಹೆರಿಗೆಯಾಗಿದ್ದರೆ
ಸಹಜ ಹೆರಿಗೆಯಾದರೆ ಲಾರ್ಜ್ ಸೈಜ್‌ನ ಮೆನ್‌ಸ್ಟ್ರಲ್ ಕಪ್ ಬಳಸಿ.
ಸ್ವಿಮ್ಮಿಂಗ್ ಮಾಡುವ ಮುನ್ನ ಮೆನ್‌ಸ್ಟ್ರಲ್ ಕಪ್‌ನ ಖಾಲಿ ಮಾಡಿ
ಸ್ವಿಮ್ಮಿಂಗ್ ಮಾಡುವ ಮುನ್ನ ಮೆನ್‌ಸ್ಟ್ರಲ್ ಕಪ್ ಮಾಡಿ, ಮೆನ್‌ಸ್ಟ್ರಲ್ ಕಪ್‌ನಲ್ಲಿ 30 mL ಬ್ಲಡ್ ಹಿಡಿಯುತ್ತದೆ. ರಕ್ತಸ್ರಾವ ಸಹಜವಾಗಿದ್ದರೆ ಬೇಗ ಏನೂ ತುಂಬುವುದಿಲ್ಲ, 8 ಗಂಟೆಯವರೆಗೆ ಬಳಸಬಹುದು. ಸುರಕ್ಷತೆಗಾಗಿ 6 ಗಂಟೆಗೊಮ್ಮೆ ಬದಲಾಯಿಸಿದರೆ ಒಳ್ಳೆಯದು. ನೀರಿನಲ್ಲಿ ಹೆಜ್ಜೆಂದರೆ ಕೆಲವೊಂದು ಗಂಟೆಗಳು ಆಡುತ್ತೇವೆ, 6 ಗಂಟೆ ನೀರಿನಲ್ಲಿ ಇರುವವರು ತುಂಬಾ ಕಡಿಮೆ, ಒಂದು ವೇಳೆ ಹಚ್ಚು ಹೊತ್ತು ನೀರಿನಲ್ಲಿ ಇರುವುದಾದರೆ ಕಪ್ ಖಾಲಿ ಮಾಡಿ ಬಳಸುವುದು ಒಳ್ಳೆಯದು.
ಅಭ್ಯಾಸವಾಗುವವರೆಗೆ ಇದನ್ನು ಬಳಸುವುದು ಅಷ್ಟು ಕಂಫರ್ಟ್ ಅನಿಸಲ್ಲ
ಮೆನ್‌ಸ್ಟ್ರಲ್ ಕಪ್ ಮೊದ ಮೊದಲು ಬಳಸುವಾಗ ಅಷ್ಟು ಕಂಫರ್ಟ್ ಅನಿಸಲ್ಲ. ಆದರೆ ಬಳಸಿ ಅಭ್ಯಾಸವಾದ ಮೇಲೆ ನಿಮಗೆ ತುಂಬಾನೇ ಕಂಫರ್ಟ್ ಅನಿಸುವುದು. ಮೆನ್‌ಸ್ಟ್ರಲ್ ಕಪ್ ಬಳಸಿ ಈಜಾಡಲು ಕಷ್ಟವಾಗಲ್ಲ. ಇದನ್ನು ಬಳಸುವಾಗ ಆತ್ಮವಿಶ್ವಾಸ ಹೆಚ್ಚಾಗುವುದು. ಆದ್ದರಿಂದ ಮೊದಮೊದಲಿಗೆ ಸ್ವಲ್ಪ ಹಿಂಜರಿಕೆಯಾಗಬಹುದು.
ಮೆನ್‌ಸ್ಟ್ರಲ್ ಕಪ್ ಶುಚಿತ್ವ ತುಂಬಾನೇ ಮುಖ್ಯ
ಮೆನ್‌ಸ್ಟ್ರಲ್ ಕಪ್ ಅನ್ನು ಶುದ್ಧ ಮಾಡಿ ಬಳಸಬೇಕು. ನೀವು ಬಿಸಿ ನೀರಿನಲ್ಲಿ ಹಾಕಿ ಬಳಸಿ. ಮೆನ್‌ಸ್ಟ್ರಲ್ ಕಪ್‌ನ ಶುಚಿತ್ವ ಕಾಪಾಡದಿದ್ದರೆ ಸೋಂಕು ಉಂಟಾಗಬಹುದು, ಆದ್ದರಿಂದ ಮೆನ್‌ಸ್ಟ್ರಲ್ ಕಪ್ ಬಳಸುವಾಗ ಶುಚಿತ್ವ ಕಡೆ ಗಮನಹರಿಸಬೇಕು. ಇನ್ನು ಮುಟ್ಟಿನ ಅವಧಿ ಮುಗಿದ ಬಳಿದ ಅನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಒರೆಸಿ ಒಂದು ಚಿಕ್ಕ ಬಟ್ಟೆಯ ಕವರ್‌ನಲ್ಲಿ ಹಾಕಿಡಿ. ನಂತರ ಬಳಸುವಾಗ ಮುನ್ನ ಬಿಸಿ ನೀರಿಗೆ ಹಾಕಿ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications