Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಹೈಪರ್ ಥೈರಾಯ್ಡ್ ಇದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವುದೇ? ವೈದ್ಯರು ಹೇಳುವುದೇನು?
ಥೈರಾಯ್ಡ್ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಮಧುಮೇಹದಂತೆ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಥೈರಾಯ್ಡ್ ಗ್ರಂಥಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ಒಟ್ಟು ಮೊತ್ತ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅವಶ್ಯಕ. ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾದರೆ ಅದನ್ನು ಥೈರಾಯ್ಡ್ ಸಮಸ್ಯೆ ಎಂದು ಕರೆಯಲಾಗುವುದು.ಈ ಸಮಸ್ಯೆ ಮಹಿಳೆಯರಲ್ಲಿ, ಪುರುಷರಲ್ಲಿಯೂ ಕಂಡು ಬರುವುದು.

ಥೈರಾಯ್ಡ್ ಸಮಸ್ಯೆಯಲ್ಲಿ ಎರಡು ವಿಧ
1. ಹೈಪೋಥೈರಾಯ್ಡ್
2. ಹೈಪರ್ ಥೈರಾಯ್ಡ್
ಹೈಪೋಥೈರಾಯ್ಡ್: ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾದರೆ ಅದು ಹೈಪೋಥೈರಾಯ್ಡ್, ಹೈಪೋಥೈರಾಯ್ಡ್ ಉಂಟಾದರೆ ಮೈ ತೂಕ ಹೆಚ್ಚಾಗುವುದು.
ಹೈಪರ್‌ಥೈರಾಯ್ಡ್: ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾದರೆ ಅದು ಹೈಪರ್‌ಥೈರಾಯ್ಡ್ . ಹೈಪರ್‌ಥೈರಾಯ್ಡ್‌ನಲ್ಲಿ ಮೈ ತೂಕ ತುಂಬಾ ಕಡಿಮೆಯಾಗುವುದು.
ಥೈರಾಯ್ಡ್ ಸಮಸ್ಯೆಯಲ್ಲಿ ಹೈಪರ್ ಥೈರಾಯ್ಡ್ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ? ಹೈಪರ್ ಥೈರಾಯ್ಡ್‌ಗೆ ಚಿಕಿತ್ಸೆಯೇನು? ಹೈಪರ್ ಥೈರಾಯ್ಡ್‌ನಿಂದ ಥೈರಾಯ್ಡ್ ಹಾರ್ಮೋನ್ ನಿಯಂತ್ರಣಲ್ಲಿಡಲು endocrinologist ಡಾ. ರೇಖಾ ಭಟ್ ಇದರ ಬಗ್ಗೆ ನಮಗೆ ವಿವರಿಸಿದ್ದು ಹೀಗೆ...
ಮೊದಲಿಗೆ ಥೈರಾಯ್ಡ್ ಕ್ಯಾನ್ಸರ್ ಲಕ್ಷಣ ನೋಡುವುದಾದರೆ
ವಿಪರೀತ ಕೆಮ್ಮು
ಉಸಿರಾಟದಲ್ಲಿ ತೊಂದರೆ
ನುಂಗಲು ಕಷ್ಟವಾಗುವುದು
ಕುತ್ತಿಗೆ ನೋವು
ಧ್ವನಿಯಲ್ಲಿ ಬದಲಾವಣೆ
ಕುತ್ತಿಗೆ ಭಾಗದಲ್ಲಿ ಗಂಟು ಕಂಡು ಬಂದರೆ
ಹೈಪರ್ ಥೈರಾಯ್ಡ್ ಇದ್ದರೆ ಕ್ಯಾನ್ಸರ್ ಆಗಿ ಬದಲಾವಣೆಯಾಗಬಹುದೇ?
ವೈದ್ಯರ ಪ್ರಕಾರ ಹೈಪೋ ಥೈರಾಯ್ಡ್‌ನಲ್ಲಿ ಥೈರಾಯ್ಡ್ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ, ಆದರೆ ಹೈಪರ್ ಥೈರಾಯ್ಡ್‌ನಲ್ಲಿ ಕ್ಯಾನ್ಸರ್ ಸಾಧ್ಯತೆ ತುಂಬಾ ವಿರಳ. ಥೈರಾಯ್ಡ್ ಹಾರ್ಮೋನ್‌ಗಳು ನಿಯಂತ್ರಣ ಮೀರಿ ಉತ್ಪತ್ತಿಯಾಗುತ್ತದೆ, ಹೀಗಾಗಿ ಇತರ ಯಾವುದೇ ಕಣಗಳು ಉತ್ಪತ್ತಿಯಾದರೆ ಅದು ಬೆಳೆಯದಂತೆ ನಾಶ ಮಾಡುತ್ತದೆ, ಹಾಗಾಗಿ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾನೇ ಕಡಿಮೆ.
ಹೈಪರ್ ಥೈರಾಯ್ಡ್ ಲಕ್ಷಣಗಳು
ತೂಕ ಇಳಿಕೆ
ಹೈಪರ್ ಥೈರಾಯ್ಡ್ ಸಮಸ್ಯೆಯಿದ್ದರೆ ಮೈ ತೂಕ ಕಡಿಮೆಯಾಗುವುದು ಅಲ್ಲದೆ ಇವರಿಗೆ ಸೆಕೆ ತಡೆಯಲು ಸಾಧ್ಯವಾಗಲ್ಲ
ಸುಸ್ತು
ಸ್ನಾಯುಗಳು ಬಲಹೀನವಾಗುವುದರಿಂದ ಸುಸ್ತು, ಕೈಗಳಲ್ಲಿ ನಡುಕ, ಭಯ, ಆತಂಕ, ಮೂಡ್ ಸ್ವಿಂಗ್, ನಿದ್ದೆಯಲ್ಲಿ ವ್ಯತ್ಯಾಸ ಈ ಬಗೆಯ ಸಮಸ್ಯೆ ಕಂಡು ಬರುವುದು.
ಹೃದಯ ಬಡಿತ
ಹೃದಯ ವೆಗವಾಗಿ ಬಡಿದುಕೊಳ್ಳುತ್ತೆ, ಅಲ್ಲದೆ ರಕ್ತದೊತ್ತಡ ಸಮಸ್ಯೆ ಕಂಡು ಬರುವುದು. ಉಸಿರಾಟದ ಸಮಸ್ಯೆ ಕಂಡು ಬರುವುದು.
ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು
ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಕಿಬ್ಬೊಟ್ಟೆ ನೋವು, ವಾಂತಿ, ತಲೆಸುತ್ತು ಈ ಬಗೆಎಯ ಸಮಸ್ಯೆ ಕಂಡು ಬರುವುದು.
ಹೈಪರ್‌ಥೈರಾಯ್ಡ್‌ನಿಂದ ಯಾವೆಲ್ಲಾ ಸಮಸ್ಯೆಗಳಾಗಬಹುದು?
ಹೃದಯ ಸಮಸ್ಯೆ: ಹೃದಯ ಸಮಸ್ಯೆಯಿಂದಾಗಿ ಪಾರ್ಶ್ವವಾಯು, ಹೃದಯಾಘಾತದ ಸಮಸ್ಯೆಯಿದೆ.
ಕಣ್ಣಿನ ಸಮಸ್ಯೆ: ಮಂಜಾಗಿ ಕಾಣುವುದು, ಡಬಲ್ ಡಬಲ್ ಆಗಿ ಕಾಣುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಗರ್ಭಧಾರಣೆಗೆ ತೊಂದರೆಯಾಗುವುದು: ಹೈಪರ್‌ಥೈರಾಯ್ಡ್ ನಿಯಂತ್ರಣದಲ್ಲಿರದಿದ್ದರೆ pre-eclampsia(ರಕ್ತದೊತ್ತಡ ಹೆಚ್ಚಾಗುವುದು), ಗರ್ಭಪಾತ, ಅವಧಿಪೂರ್ವ ಮಗು ಜನಿಸುವ ಸಾಧ್ಯತೆ ಇದೆ.
ಮೂಳೆಗಳು ದುರ್ಬಲವಾಗುವುದು: ಅತ್ಯಧಿಕ ಥೈರಾಯ್ಡ್ ಹಾರ್ಮೋನ್‌ಗಳು ಕ್ಯಾಲ್ಸಿಯಂ, ರಂಜಕಂಶವನ್ನು ಹೀರಿಕೊಳ್ಳುತ್ತದೆ, ಇದರಿಂದ ಮೂಳೆಗಳು ಬಲಹೀನವಾಗುವುದು.
ಥೈರಾಯ್ಡ್ ಸ್ಟ್ರೋಮ್: ಇದು ಅಪರೂಪವಾಗಿ ಕಂಡು ಬರುವುದು, ಆದರೆ ಈ ಲಕ್ಷಣಗಳು ಕಂಡು ಬಂದ ತಕ್ಷಣ ತುರ್ತು ಚಿಕಿತ್ಸೆ ಅಗ್ಯತವಿರುತ್ತದೆ, ಅತ್ಯಧಿಕ ಜ್ವರ, ಎದೆಬಡಿತದಲ್ಲಿ ವ್ಯತ್ಯಾಸ, ತಲೆಸುತ್ತು, ಪ್ರಜ್ಞೆ ಇಲ್ಲದಿರುವುದು ಇ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು.
ಥೈರಾಡಿಸಂಗೆ ಚಿಕಿತ್ಸೆಯೇನು?
ಮಾತ್ರೆ: ವೈದ್ಯರು ಎಷ್ಟು ಡೋಸ್ ಮಾತ್ರೆ ಸೂಚಿಸುತ್ತಾರೋ ಅಷ್ಟು ಡೋಸ್ ತೆಗೆದುಕೊಳ್ಳಬೇಕು, ನಿಧಾನಕ್ಕೆ ಈ ಡೋಸ್ ಪ್ರಮಾಣ ಕಡಿಮೆ ಮಾಡಲಾಗುವುದು. ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಬಂದಾಗ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಸ್ಟಾಪ್ ಮಾಡಬಹುದು.
ರೇಡಿಯೋ ಆಕ್ಟಿವ್ ಅಯೋಡಿಯನ್: ಸಾಮಾನ್ಯವಾಗಿ ಮಹಿಳೆಯಾದರೆ ಫಲವತ್ತತೆಯ ಸಮಯದ ನಂತರ ಅಂದರೆ ಮಮೆನೋಪಾಸ್ ನಂತರ ಇದನ್ನು ಮಾಡಿಸಲು ಸಲಹೆ ನೀಡಲಾಗುವುದು
ಸರ್ಜರಿ: ಸರ್ಜರಿ ಊಲಕ ಹೆಚ್ಚು ಥೈರಾಯ್ಡ್ ಹಶಾರ್ಮೋನ್ ಉತ್ಪತ್ತಿ ಮಾಡುವ ಗ್ರಂಥಿಗಳನ್ನು ತೆಗೆಯಲಾಗುವುದು, ಇದರಿಂದ ಹೈಪೋಥೈರಾಯ್ಡ್ ಉಂಟಾಗುವುದು, ಹೈಪೋಥೈರಾಯ್ಡ್‌ಗೆ ಜೀವನಪರ್ಯಾಂತ ಮಾತ್ರೆ ತೆಗೆದುಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
