Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
9-14 ಪ್ರಾಯದಹೆಣ್ಮಕ್ಕಳಿಗೆ HPV ಲಸಿಕೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಬಜೆಟ್‌ನಲ್ಲಿ ಮಹತ್ವದ ಹೆಜ್ಜೆ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 9-14ರ ಪ್ರಾಯದ ಬಾಲಕಿಯರಿಗೆ ಶಾಲೆಯಲ್ಲಿಯೇ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಮೂಲಕ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ದೇಶವು ಮಹತ್ವದ ಹೆಜ್ಜೆ ಇಟ್ಟಿದೆ.
ಮಹಿಳೆಯರಿಗೆ ಬರುತ್ತಿರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಬಳಿಕ ಕಂಡು ಬರುತ್ತಿರುವುದು ಗರ್ಭಕಂಠದ ಕ್ಯಾನ್ಸರ್. ಆದರೆ ಮುನ್ನೆಚ್ಚರಿಕೆವಹಿಸಿದರೆ ಈ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.

9-14 ವರ್ಷದ ಹೆಣ್ಮಕ್ಕಳಿಗೆ HPV ಲಸಿಕೆ ಕಡ್ಡಾಯ ಏಕೆ?
ಲಸಿಕೆಯನ್ನು ಪ್ರಾಥಮಿಕವಾಗಿ ಶಾಲೆಗಳ ಮೂಲಕ ಒದಗಿಸಲಾಗುವುದು. ಈ ಸಮಯದಲ್ಲಿ ಶಾಲೆಗೆ ಹಾಜರಾಗದ ವಿದ್ಯಾರ್ಥಿನಿಯರು ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯಬಹುದು. ಇನ್ನು ಶಾಲೆಯಿಂದ ಹೊರಗುಳಿದಿರುವ ಹುಡುಗಿಯರಿಗೆ ಆಶಾಕಾರ್ಯತರ ಮೂಲಕ ಗುರುತಿಸಿ ಲಸಿಕೆಯನ್ನು ನೀಡಲಾಗುವುದು. ಆದರೆ ಈ ಲಸಿಕೆ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಅವಶ್ಯಕ ಏಕೆ?
ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ಗೆ (ಎಚ್‌ಪಿವಿ) ಸಂಬಂಧಿಸಿವೆ, ಮಹಿಳೆಯರು ವೈರಸ್‌ಗೆ ತೆರೆದುಕೊಳ್ಳುವ ಮೊದಲು ಅಂದರೆ ಬಾಲಕಿಯಾಗಿರುವಾಗಲೇ ಲಸಿಕೆಯನ್ನು ನೀಡಿದರೆ ಎಚ್‌ಪಿವಿ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುತ್ತದೆ. ಆದ್ದರಿಂದ 9ರಿಮದ 14 ವರ್ಷದ ಪ್ರಾಯದಲ್ಲಿ ಹೆಣ್ಮಕ್ಕಳಿಗೆ ಈ ಲಸಿಕೆ ಕೊಡಸಬೇಕು.
ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ?
ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿ ಲೈಂಗಿಕ ಸೋಂಕಿನಿಂದ ಬರುತ್ತದೆ. HPV ಅಂದರೆ human papillomaviruses ಲೈಂಗಿಕ ಸೋಂಕಿನಿಂದಾಗಿ ಬರುತ್ತದೆ. ಈ ಲೈಂಗಿಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದು. ಮಹಿಳೆಯರಿಗೆ ಈ ಸೋಂಕು ತಗುಲಿದಾಗ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಪಡೆಯುವುದರಿಂದ ಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಆದ್ದರಿಂದ ಹೆಣ್ಮಕ್ಕಳಿಗೆ ಈ ಲಸಿಕೆಯನ್ನು ಮೊದಲೇ ನೀಡಿದರೆ ಮದುವೆಯಾದ ಮೇಲೆ ಲೈಂಗಿಕ ಚಟುವಟಿಕೆಯಿಂದ ಅವರಿಗೆ ಈ ಸೋಂಕು ಹರಡುವುದಿಲ್ಲ.
ಗರ್ಭಕಂಠದ ಕ್ಯಾನ್ಸರ್ ಗುಣಪಡಿಸಬಹುದೇ?
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಯನ್ನು ಹದಿಹರೆಯದ ಪ್ರಾಯದಲ್ಲಿಯೇ ತೆಗೆದುಕೊಳ್ಳುವುದರಿಂದ ಮುಂದೆ ಈ ಕ್ಯಾನ್ಸರ್ ತಡೆಗಟ್ಟಬಹುದು.
ಈ ಲಸಿಕೆ ತೆಗೆದುಕೊಂಡೆ ಅಡ್ಡಪರಿಣಾಮವಿದೆಯೇ?
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಪಡೆದಾಗ ಈ ಸಣ್ಣಪುಟ್ಟ ಅಡ್ಡಪರಿಣಾಮಗಳು ಕಂಡು ಬರುವುದು
ಸುಸ್ತು
ಲಸಿಕೆ ಚುಚ್ಚಿದ ಭಾಗದಲ್ಲಿ ನೋವು
ಮೈಕೈ ನೋವು
ಸಂಧಿಗಳಲ್ಲಿ ನೋವು
ಈ ಲಸಿಕಾ ಅಭಿಯಾನದ ಯಶಸ್ವಿಗೆ ಕೈಗೊಂಡ ಕ್ರಮಗಳೇನು?
* ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಕೇಂದ್ರಗಳನ್ನು ತೆರೆಯುವುದು
. * ಜಿಲ್ಲಾ ಲಸಿಕಾ ಅಧಿಕಾರಿಯನ್ನು ಬೆಂಬಲಿಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಜಿಲ್ಲಾ ಲಸಿಕಾ ಕಾರ್ಯಪಡೆಯ (ಡಿಟಿಎಫ್‌ಐ) ಪ್ರಯತ್ನಗಳ ಭಾಗವಾಗಲು ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಿರ್ದೇಶನ ನೀಡುವುದು.
* ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸುವುದು. * ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿ ಶಾಲೆಯಲ್ಲಿ ನೋಡಲ್ ವ್ಯಕ್ತಿಯನ್ನು ಗುರುತಿಸುವುದು. ಇವರು ಶಾಲೆಯಲ್ಲಿ 9-14 ವರ್ಷ ವಯಸ್ಸಿನ ವಿದ್ಯಾರ್ಥಿನಿಯರ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಾರೆ.
* ಪೋಷಕರ ಸಭೆ ಕರೆದು ಎಲ್ಲಾ ಪೋಷಕರಿಗೆ ಶಾಲಾ ಶಿಕ್ಷಕರ ಮೂಲಕ ಜಾಗೃತಿ ಮೂಡಿಸುವುದು.
* ಪರೀಕ್ಷೆ ಮತ್ತು ರಜೆಯ ತಿಂಗಳುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಸಿಕಾ ಅಭಿಯಾನವನ್ನು ಯೋಜಿಸಲು ಆರೋಗ್ಯ ಇಲಾಖೆಗಳು ಮುಂದಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
