Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಬೈಲ್ ಫೋನ್ ದಾಸರಾಗಿದ್ದೀರಾ..? ಬಳಕೆ ಕಡಿಮೆ ಮಾಡೋದು ಹೇಗೆ? ಅದರಿಂದ ಲಾಭವೇನು?
ಮೊಬೈಲ್ ಫೋನ್ ಬಳಕೆ ಈಗ ಎಲ್ಲರಿಗೂ ಅತಿ ಅವಶ್ಯಕತೆ. ನಿತ್ಯ ಕೆಲಸಗಳಿಗೆ ಈ ಮೊಬೈಲ್ ಫೋನ್ ಇರಲೇಬೇಕಿದೆ. ಹಾಗೆ ಈ ಪೋನ್ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಈ ಸಂಖ್ಯೆ ಅತ್ಯಧಿಕ ಆಗಿದೆ. ಈಗ ಬೆಳಗ್ಗೆ ಎಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲೇ ಹಿಡಿದಿರುತ್ತಾರೆ. ಮಕ್ಕಳು ಕೂಡ ಈಗ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ ಎಂಬ ಸ್ಥಿತಿ ತಲುಪಿದ್ದಾರೆ. ಊಟ, ತಿಂಡಿ, ನಿದ್ರೆಯ ಸಮಯದಲ್ಲೂ ಈಗ ಅವರು ಮೊಬೈಲ್ ಹಿಡಿದಿರುತ್ತಾರೆ.
ಕೆಲವರಿಗೆ ಮೊಬೈಲ್ ಫೋನ್ ಬಳಕೆ ಅನಿವಾರ್ಯವಾಗಿರುತ್ತದೆ. ಏಕೆಂದರೆ ನಿತ್ಯದ ಹಲವು ರೀತಿಯ ಕೆಲಸಗಳು, ಕಾರ್ಯಗಳು, ಸಂವಹನಕ್ಕೆ ಅತಿ ಅವಶ್ಯಕತವಾಗುತ್ತದೆ. ಮತ್ತೆ ಕೆಲವರಲ್ಲಿ ಇದು ಗೀಳಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಳ ಕಾಲ ಹರಟುವುದು, ಕಾಲಿಂಗ್, ವಿಡಿಯೋ, ರೀಲ್ಸ್ ಹೀಗೆ ಜನರು ತಮ್ಮ ಅತ್ಯಮೂಲ್ಯ ಸಮಯ ಇದರಲ್ಲೇ ಕಳೆಯುತ್ತಿದ್ದಾರೆ.

ಈಗ ಸಾಮಾಜಿಕ ಮಾಧ್ಯಮಗಳು ಕೂಡ ಬಹುದೊಡ್ಡ ಉದ್ಯಮಗಳಾಗಿವೆ. ಹಾಗೆ ಟೆಲಿಕಾಮ್ ಕಂಪನಿಗಳು, ಮೊಬೈಲ್ ತಯಾರಿಕಾ ಕಂಪನಿಗಳು ಕೂಡ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಲೇ ಇವೆ. ಬಹುತೇಕ ಇತ್ತಿಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಸಕಾರಾತ್ಮಕ ಪರಿಣಾಮಕ್ಕೂ ಹೆಚ್ಚಾಗಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿರುವುದೇ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ತಮ್ಮ ಸಮಯವನ್ನು ಹೆಚ್ಚಾಗಿ ಮೊಬೈಲ್‌ನಲ್ಲಿ ಕಳೆಯುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
ಹಾಗೆ ಈಗ ಮೊಬೈಲ್‌ನಿಂದ ಹತ್ತು ಹಲವು ಸಮಸ್ಯೆಗಳು ಹುಟ್ಟಿಕೊಂಡಿರುವುದು ಕೂಡ ನಾವು ನೋಡಬಹುದು. ಅತೀಯಾದ ಮೊಬೈಲ್ ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಮಸ್ಯೆಯೂ ಕಾಡುತ್ತಿದೆ. ಮೊಬೈಲ್ ಬಳಕೆಗಾಗಿ ದುಬಾರಿ ವೆಚ್ಚದ ರಿಚಾರ್ಜ್‌ಗಳು ಹಾಗೆ ಮೊಬೈಲ್ ಫೋನ್ ಮೂಲಕ ಸೈಬರ್ ಕ್ರೈಮ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಹಾಗೆ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಫೋನ್ ಬಳಕೆ ಒಂದು ಚಟವಾಗಿ, ವ್ಯಸನವಾಗಿ ಬದಲಾಗಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಹಾಗೆ ಶಾಲಾ ಮಕ್ಕಳಿಗೆ ಹೇಗೆ ನೋ ಬ್ಯಾಗ್ ಡೇ ಎಂಬ ದಿನ ಮೀಸಲಿಡಲಾಗಿದ್ಯೋ ಹಾಗೆ ಫೋನ್‌ನಿಂದ ದೂರವಿರಲು ನೋ ಫೋನ್ ಡೇ ಕೂಡ ಹಲವು ಕಡೆ ಚಾಲ್ತಿಯಲ್ಲಿದೆ. ಆದ್ರೆ ಸ್ಮಾರ್ಟ್ ಫೋನ್‌ನಿಂದ ದೂರ ಉಳಿಯುವುದು ಅಷ್ಟು ಸುಲಭದ ಮಾತಲ್ಲ.
ಈ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು ಕೂಡ ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಕಾರಣ ಕೆಲವೊಂದು ಅಂಶವನ್ನು ನಾವು ಅನುಸರಿಸಿ ಪ್ರಜ್ಞಾವಂತರಾಗಿ ಮೊಬೈಲ್ ಫೋನ್ ಬಳಕೆ ಮಾಡಲು ಸಲಹೆ ನೀಡಲಾಗಿದೆ. ಅದ್ರಲ್ಲೂ ಫೋನ್ ಬಳಕೆ ಕಡಿಮೆ ಮಾಡುವುದರಿಂದಾಗುವ ಕೆಲವು ಲಾಭಗಳು ಹಾಗೆ ಫೋನ್ ಗೀಳು ಯಾವ ರೀತಿಯ ಸಮಸ್ಯೆ ಉಂಟುಮಾಡಲಿವೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ಮೊಬೈಲ್ ಫೋನ್ ಗೀಳಿಗೆ ಒಳಗಾದರೆ ಅದರಿಂದ ಹೊರಬರುವುದು ಹೇಗೆ ಅನ್ನೋದನ್ನು ಮೊದಲು ತಿಳಿದುಕೊಳ್ಳೋಣ.
ಸ್ಕ್ರೀನ್ ಟೈಮ್ ಮಿತಗೊಳಿಸಿ
ನೀವು ಸಂಪೂರ್ಣವಾಗಿ ಮೊಬೈಲ್ ಬಳಕೆ ಬಿಡಲು ಸಾಧ್ಯವಿಲ್ಲ ಆದ್ರೆ ಈ ಸಮಯವನ್ನು ಮಿತಗೊಳಿಸಬಹುದು. ಅದರಲ್ಲೂ ಆಂಡ್ರಾಯ್ಡ್ ಅಥವಾ ಐಫೋನ್ ಎರಡರಲ್ಲೂ ಈ ರೀತಿಯ ತಂತ್ರಾಂಶಗಳು ಸಿಗುತ್ತವೆ. ಅದು ನಿಮ್ಮ ಸ್ಕ್ರೀನ್ ಟೈಮ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಹೇಗೆ ಮಿತಿಗೊಳಿಸಬೇಕು. ಯಾವ ಸಮಯದಲ್ಲಿ ನೀವು ಹೆಚ್ಚಾಗಿ ಮೊಬೈಲ್ ಬಳಸುತ್ತೀರಿ ಎಲ್ಲವರನ್ನು ಅವು ಗಮನಿಸುತ್ತದೆ. ಹಾಗೆ ನೀವಾಗಿಯೇ ಮೊಬೈಲ್ ಬಳಕೆಯ ಸಮಯವನ್ನು ಕಡಿಮೆ ಮಾಡಬಹುದು. ರಾತ್ರಿ ಮಲಗುವ ಮುನ್ನ ಹಾಗೆ ಕೆಲಸದ ನಡುವೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಬಹಳ ಉತ್ತಮ.
ಅನಗತ್ಯ ಮೆಸೇಜ್‌ಗಳ ಬಂದ್ ಮಾಡಿ
ನಿಮಗೆ ಮೊಬೈಲ್ ಕುರಿತು ನೆನಪಾದಾಗ ಹೆಚ್ಚು ಬಳಸುತ್ತೀರಿ. ಮೊಬೈಲ್ ಶಬ್ದ ಮಾಡಿದಾಗ ಅದನ್ನು ಕೈಗೆತ್ತಿಕೊಳ್ಳುತ್ತೀರಿ. ಹೀಗಾಗಿ ನಿಮಗೆ ಬೇಕಾದ ಆಪ್‌ನಿಂದ ಮಾತ್ರವೇ ಸಂದೇಶ ಬರುವಂತೆ ಸೆಟ್ಟಿಂಗ್ಸ್ ಮಾಡಿಟ್ಟುಕೊಳ್ಳಿ. ಅನಗತ್ಯ ಆಪ್‌ಗಳು ಸಂದೇಶಗಳನ್ನು ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಿ. ಅದರಲ್ಲೂ ಯೂಟ್ಯೂಬ್, ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ಶಾಪಿಂಗ್ ಆಪ್‌ಗಳಿಂದ ಬರುವ ಸಂದೇಶಗಳು ನಿಮ್ಮನ್ನು ಮೊಬೈಲ್ ಬಳಸುವಂತೆ ಪ್ರೇರೇಪಿಸುತ್ತವೆ.
ಫೋನ್ ಎಲ್ಲಿ ಬಳಸಬಾರದು ಎಂಬುದನ್ನು ನೀವೆ ನಿರ್ಧರಿಸಿ
ನೀವು ಬಾತ್‌ರೂಮ್‌ಗೂ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದರೆ ಅಂತಹ ಅಭ್ಯಾಸಗಳ ಬಿಟ್ಟುಬಿಡಿ. ಹಾಗೆ ಊಟ ಮಾಡುವಾಗ, ದೇವರ ಪೂಜೆ ವೇಳೆ, ಧ್ಯಾನ, ಯೋಗ, ಓದಿಕೊಳ್ಳುವಾಗ ಮೊಬೈಲ್ ಬಳಸದಿರಲು ನೀವೇ ಒಂದು ಬೌಂಡರಿ ಹಾಕಿಕೊಳ್ಳಿ. ಇದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಬಹುದು.
ಮೊಬೈಲ್ ಬಳಕೆ ಕಡಿಮೆ ಮಾಡುವುದರ ಪ್ರಯೋಜನವೇನು?
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
ನಿರಂತರ ಮೊಬೈಲ್ ಬಳಕೆಯು ಒತ್ತಡ ಹೆಚ್ಚಿಸುವುದರಿಂದ ನೀವು ಮೊಬೈಲ್ ಬಳಕೆ ಕಡಿಮೆ ಮಾಡುವುದು ನಿಮ್ಮ ಆತಂಕ ಹಾಗೂ ಒತ್ತಡ ಕಡಿಮೆ ಮಾಡಲಿದೆ. ನಿಮ್ಮ ಮನಸ್ಸನ್ನು ಶಾಂತವಾಗಿಡುತ್ತದೆ.
ಅತ್ಯುತ್ತಮ ನಿದ್ರೆ ಬೇಕಿದ್ದರೆ ಮೊಬೈಲ್ ಬಿಡಿ
ನಿಮಗೆ ನಿದ್ರೆಯ ಸಮಸ್ಯೆ ಇದ್ದರೆ ಮೊಬೈಲ್ ಬಳಕೆ ಕಡಿಮೆ ಮಾಡಿ ನೋಡಿ. ಏಕೆಂದರೆ ಮೊಬೈಲ್‌ನಿಂದ ಬರುವ ಬೆಳಕು ನಿಮ್ಮ ಕಣ್ಣಿನ ಮೇಲೆ ಬೀಳುವುದು ನಿದ್ರೆ ಕಸಿಯುವ ಒಂದು ಸಮಸ್ಯೆಯಾಗಲಿದೆ. ಹೀಗಾಗಿ ಮಲಗುವಾಗ ಮೊಬೈಲ್ ಬಳಸದಿರುವುದು ಬಹಳ ಉತ್ತಮ.
ನಿಮ್ಮಲ್ಲಿ ಸೃಜನ ಶೀಲತೆ ಹೆಚ್ಚಾಗಲಿದೆ
ಮೊಬೈಲ್ ನಿಮ್ಮ ಆಲೋಚನೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ವಿಭಿನ್ನ ಆಲೋಚನೆಗಳನ್ನು ಮೊಬೈಲ್ ಬಳಕೆ ಹಾಳು ಮಾಡುತ್ತದೆ. ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮಾಧ್ಯಮಕ್ಕೆ ಒಗ್ಗಿಕೊಳ್ಳುವುದು ಮೆದುಳಿನ ಕಾರ್ಯಕ್ಷಮತೆ ನಿಧಾನವಾಗಿಸುತ್ತದೆ. ಹೀಗಾಗಿ ಈ ಫೋನ್ ಬಳಕೆ ಕಡಿಮೆ ಮಾಡುವುದು ಸಂವಹನ ಕೌಶಲ್ಯ ಹೆಚ್ಚಿಸಲಿದೆ.
ಮಾನಸಿಕ ಆರೋಗ್ಯ ವೃದ್ಧಿ
ನೀವು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡುವುದು ನಿಮ್ಮ ಒಟ್ಟಾರೆ ಮಾನಸಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ಫೋನ್ ಬಳಕೆಗಿಂತಲೂ ದಿನ ಪತ್ರಿಕೆ, ಪುಸ್ತಕ ಓದು ನಿಮ್ಮಲ್ಲಿ ಮಾನಸಿಕ ಆರೋಗ್ಯ ಸುಧಾರಿಸಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


