Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನಕ್ಕೆರಡು ತುಪ್ಪದಲ್ಲಿ ಫ್ರೈ ಮಾಡಿದ ಲವಂಗ ಸವಿದು ನೋಡಿ..! ಅದೆಷ್ಟು ಲಾಭವಿದೆ ಗೊತ್ತಾ?
ನೀವು ಅಡುಗೆ ಮನೆಯಲ್ಲಿ ಲವಂಗ ಬಳಕೆ ಮಾಡುತ್ತಿರುತ್ತೀರಿ. ಅದರಲ್ಲೂ ಮಸಾಲೆ ಪದಾರ್ಥಗಳ ಜೊತೆಗೆ ಲವಂಗ ಯಾವಾಗಲು ಇದ್ದೇ ಇರುತ್ತೆ. ಇದರಿಂದ ಹಲವು ಬಗೆ ಖಾದ್ಯದ ರುಚಿ ಮತ್ತಷ್ಟು ಹೆಚ್ಚಾಗುತ್ತೆ. ಲವಂಗ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ. ಹಾಗೆ ಲವಂಗವು ಹಲವು ರೀತಿಯ ಔಷಧಿಗಳಲ್ಲಿ ಬಳಕೆಯಾಗುತ್ತೆ. ಆಯುರ್ವೇದದಲ್ಲಿ ಈ ಲವಂಗ ಪ್ರಮುಖ ಔಷಧಿ ವಸ್ತುವಾಗಿ ನೋಡಬಹುದು.
ಹಾಗೆ ಅಡುಗೆಯಲ್ಲಿ ಲವಂಗ ಬಳಸುವುದು ಕೂಡ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಆದ್ರೆ ಲವಂಗವನ್ನು ತುಪ್ಪದಲ್ಲಿ ಹುರಿದು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನಿಮಗೆ ಗೊತ್ತಾ? ಲವಂಗ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಉತ್ಕರ್ಷಣ ನಿರೋಧಕಗಳು, ಖನಿಜಗಳ ಹೊಂದಿದೆ. ಲವಂಗ ಕೆಮ್ಮು, ನೋವು ನಿವಾಕರ ಹಾಗೆ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಹಾಗಾದ್ರೆ ನಾವಿಂದು ತುಪ್ಪದಲ್ಲಿ ಹುರಿದ ಲವಂಗದಿಂದಾಗಿ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ತುಪ್ಪವನ್ನು ಕೂಡ ಹಲವು ಔಷಧಿಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಶೀತ, ಕೆಮ್ಮು ಇದ್ದಾಗ ಮಕ್ಕಳಿಗೆ ನೀಡುವುದು ನೋಡಬಹುದು.
ಶೀತ ಮತ್ತು ಕೆಮ್ಮಿಗೆ ಲವಂಗ ಮದ್ದು
ಶೀತ ಹಾಗೂ ಕೆಮ್ಮಿಗೆ ಲವಂಗ ಅತ್ಯಂತ ಸುಲಭದ ಹಾಗೆ ಪರಿಣಾಮಕಾರಿ ಔಷಧಿಯಾಗಿದೆ. ಲವಂಗವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಬಹುಮುಖ ಮಸಾಲೆಯಾಗಿದೆ. ಅವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿವೆ. ಲವಂಗವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಇದು ಬಾಯಿಯ ಆರೋಗ್ಯವನ್ನು ಹಲವು ವಿಧಗಳಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಕೂಡ ಸಹಾಯ ಮಾಡಲಿದೆ.
ವಯಸ್ಕರು ದಿನವೊಂದಕ್ಕೆ ಈ ರೀತಿಯ 2ರಿಂದ 3 ಲವಂಗ ಸವಿಯಬಹುದು. ಹಾಗೆ 6 ವರ್ಷ ಮೇಲ್ಪಟ್ಟ ಮಗು 1 ರಿಂದ 2 ಲವಂಗ ಸವಿಯಬಹುದು. ಯಾರೆಲ್ಲಾ ದೀರ್ಘಕಾಲದ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಾರೋ ಅಂತವರು ಈ ತುಪ್ಪದಲ್ಲಿ ಹುರಿದಂತಹ ಲವಂಗ ಸವಿದರೆ ಕೆಮ್ಮು ಕಡಿಮೆಯಾಗುತ್ತದೆ.
ಲವಂಗದ ನೀರು ಮತ್ತಷ್ಟು ಒಳ್ಳೆಯದು
ನಿತ್ಯ ಒಂದೆರಡು ಲವಂಗ ಸವಿದರೆ ಎಷ್ಟು ಆರೋಗ್ಯ ವೃದ್ಧಿಗೆ ಉತ್ತಮವೋ ಹಾಗೆ ಲವಂಗ ನೀರು ಕೂಡ ಆರೋಗ್ಯಕ್ಕೆ ಬಹಳ ಉತ್ತಮ. ಲವಂಗ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಕಂಡುಬರುವ ತ್ರಿದೋಷವನ್ನು ಸಹ ಸಮತೋಲನಗೊಳಿಸಬಹುದು. ವಾತ, ಪಿತ್ತ ಮತ್ತು ಕಫಕ್ಕೂ ಕೂಡ ಇದು ಅತ್ಯುತ್ತಮವಾಗಿದೆ. ಹಾಗೆ ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದರೂ ಕೂಡ ಲವಂಗದ ನೀರು ಪರಿಹಾರ ನೀಡಲಿದೆ.
ನಿಮಗೆ ತುಂಬಾ ಬಾಯಾರಿಕೆ ಮತ್ತು ಹೊಟ್ಟೆ ಉರಿ ಅಂತಹ ಸಮಸ್ಯೆ ಇದ್ದರೆ ಈ ಲವಂಗದ ನೀರು ತಂಪಾಗಿಸಲಿದೆ. ನಿಮ್ಮ ಬಾಯಾರಿಕೆ ಕೂಡ ನಿವಾರಣೆ ಮಾಡಲಿದೆ. ಹಾಗೆ ಲವಂಗದ ನೀರು ತೂಕ ಇಳಿಸಲು ಬಹಳಷ್ಟು ಸಹಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರು ಕುಡಿಯುವುದು ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ.
ಈ ಲವಂಗದ ನೀರು ಮಾಡುವುದು ಹೇಗೆ?
ರಾತ್ರಿಯೇ ಒಂದಿಷ್ಟು ಲವಂಗವನ್ನು ನೀರಿನಲ್ಲಿ ನೆನೆಸಿಡಬೇಕು. ಬಳಿಕ ಬೆಳಗ್ಗೆ ಈ ನೀರನ್ನು ಬಿಸಿ ಮಾಡಿ ಅಥವಾ ಹಾಗೆಯೇ ಕುಡಿಯಬಹುದು. ಈ ಲವಂಗ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ. ಇದರಲ್ಲಿ ಆಂಟಿವೈರಲ್ ಗುಣ ಹೊಂದಿದ್ದು, ಸೋಂಕು ತಡೆಗೆ ಅತ್ಯುತ್ತಮ ಹಾಗೆ ನಿಮ್ಮ ಒಸಡಿನ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications