ಮುಟ್ಟಿನ ಸಮಯದಲ್ಲಿ ರಕ್ತ ಗಟ್ಟಿ ಗಟ್ಟಿ ಹೋಗುತ್ತಿದೆಯೇ?

ಮುಟ್ಟಾದಾಗ ಹೆಚ್ಚಿನ ಮಹಿಳೆಯರಲ್ಲಿ ಹೆಪ್ಪುಗಟ್ಟಿದಂತಿರುವ ರಕ್ತದ ತುಣುಕುಗಳು ಸ್ರಾವವಾಗುವುದು ಸಾಮಾನ್ಯ. ಅದು ಕೆಲವೊಮ್ಮೆ ಹೆಪ್ಪುಗಟ್ಟಿದ ರಕ್ತ, ಅಂಗಾಂಶ ಅಥವಾ ರಕ್ತದ ಜೆಲ್‌ ತರಹ ಇರಬಹುದು. ಇದು ತಿಳಿ ಕೆಂಪು ಬಣ್ಣದಿಂದ ಗಾಢ ಕೆಂಪು ಬಣ್ಣದಲ್ಲೂ ಇರಬಹುದು.

ಆದರೆ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆಗಿಂತ ಕಾಲು ಭಾಗದಷ್ಟು ಬ್ಲಡ್‌ ಕ್ಲಾಟ್‌ ಅಂದರೆ ಹೆಪ್ಪುಗಟ್ಟಿದ ರಕ್ತವು ಸ್ರಾವವಾದರೆ ಸ್ವಲ್ಪ ಗಮನವಹಿಸಬೇಕಾದ ಅವಶ್ಯವಿದೆ. ಇದು ಯಾಕಾಗುತ್ತೆ..? ಹೀಗಾಗೋದು ಸಾಮಾನ್ಯವೇ, ಯಾವ ಸಂದರ್ಭದಲ್ಲಿ ವೈದ್ಯರನ್ನು ಕಾಣಬೇಕು ಎನ್ನುವ ವಿವರಣೆ ಇಲ್ಲಿದೆ.

period blood clots

ಮುಟ್ಟಿನ ರಕ್ತ ಹೆಪ್ಪುಗಟ್ಟುವಿಕೆ ಹೇಗಾಗುತ್ತೆ..?
ಸಾಮಾನ್ಯವಾಗಿ ಋತುಮತಿಯಾದ ನಂತರ ಪ್ರತಿ 28 ರಿಂದ 35 ದಿನಗಳಿಗೊಮ್ಮೆ ಗರ್ಭಾಶಯದ ಒಳಪದರಲ್ಲಿ ಸಂಗ್ರಹವಾದ ರಕ್ತವು ಮುಟ್ಟಿನ ಸ್ರಾವವಾಗಿ ಹೊರಚೆಲ್ಲಲ್ಪಡುತ್ತದೆ. ಗರ್ಭಾಶಯದ ಒಳಪದರವಾದ ಎಂಡೋಮೆಟ್ರಿಯಂನಲ್ಲಿ ರಕ್ತ, ರಕ್ತದ ಉಪ ಉತ್ಪನ್ನಗಳು, ಲೋಳೆ, ಅಂಗಾಂಶಗಳು ಸೇರಿ ತಿಂಗಳಾದ್ಯಂತ ಬೆಳೆಯುತ್ತದೆ ಮತ್ತು ದಪ್ಪವಾಗುತ್ತದೆ. ಈ ಅವಧಿಯಲ್ಲಿ ಗರ್ಭಾವಸ್ಥೆ ಸಂಭವಿಸದಿದ್ದರೆ ಇತರ ಹಾರ್ಮೋನ್‌ಗಳ ಪ್ರಭಾವದಿಂದ ಈ ಒಳಪದರವು ಹೊರಹಾಕಲ್ಪಡುತ್ತದೆ. ಇದನ್ನೇ ಮುಟ್ಟು ಎನ್ನುತ್ತಾರೆ.

ಈ ದಪ್ಪಗಾದ ರಕ್ತ ಮತ್ತು ಅಂಗಾಂಶದ ವಿಘಟನೆಯಲ್ಲಿ ಸಹಾಯ ಮಾಡಲು, ದೇಹವು ಹೆಪ್ಪುರೋಧಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ವಸ್ತುವನ್ನು ತೆಳುಗೊಳಿಸಲು ಮತ್ತು ಹೆಚ್ಚು ಮುಕ್ತವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ರಕ್ತದ ಹರಿವು ಹೆಪ್ಪುರೋಧಕಗಳನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವನ್ನು ಮೀರಿದಾಗ, ಮುಟ್ಟಿನ ಹೆಪ್ಪುಗಟ್ಟುವಿಕೆ ಬಿಡುಗಡೆಯಾಗುತ್ತದೆ. ಹೆಚ್ಚು ರಕ್ತಸ್ರಾವವಾಗುವ ದಿನ ಹೆಪ್ಪುಗಟ್ಟಿದ ರಕ್ತಸ್ರಾವವಾಗುವುದು ಸಾಮಾನ್ಯ. ಕೆಲವರಿಗೆ ಮುಟ್ಟಿನ ಐದಾರು ದಿನವೂ ಈ ರೀತಿಯ ಸ್ರಾವವಾಗಬಹುದು. ಮುಟ್ಟಿನ ಅವಧಿಯಲ್ಲಿ ಹೆಚ್ಚು ರಕ್ತಸ್ರಾವವಾಗುವರಲ್ಲಿ ಹೆಚ್ಚು ಹೆಪ್ಪುಗಟ್ಟಿದ ರಕ್ತಸ್ರಾವವಾಗುತ್ತದೆ.

ಮುಟ್ಟಿನ ಹೆಪ್ಪುಗಟ್ಟುವಿಕೆಗೆ ಮೂಲ ಕಾರಣಗಳೆಂದರೆ..
ದೈಹಿಕ ಮತ್ತು ಹಾರ್ಮೋನ್ ಅಂಶಗಳು ನಿಮ್ಮ ಋತುಚಕ್ರದ ಮೇಲೆ ಪ್ರಭಾವ ಬೀರಬಹುದು ಮತ್ತು ಹೆಚ್ಚು ರಕ್ತಸ್ರಾವ ಉಂಟುಮಾಡಬಹುದು. ಈ ರೀತಿ ಆದರೆ ನಿಮ್ಮಲ್ಲಿ ಮುಟ್ಟಿನ ಹೆಪ್ಪುಗಟ್ಟುವಿಕೆಯೂ ಹೆಚ್ಚಾಗಿರಬಹುದು. ಇದಲ್ಲದೇ ಇನ್ನಿತರ ಕಾರಣಗಳೂ ರಕ್ತದ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸಬಹುದು ಅವೆಂದರೆ,

ಗರ್ಭಾಶಯದ ಸಮಸ್ಯೆಗಳು
ಗರ್ಭಾಶಯವನ್ನು ಹಿಗ್ಗಿಸುವ ಅಥವಾ ಸಂಕೋಚಿಸುವ ಪರಿಸ್ಥಿತಿಗಳು ಗರ್ಭಾಶಯದ ಗೋಡೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಅದು ಮುಟ್ಟಿನ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುತ್ತದೆ. ಇತರ ಸಮಸ್ಯೆಗಖು ಗರ್ಭಾಶಯದ ಸಂಕೋಚನದ ಸಾಮರ್ಥ್ಯವನ್ನು ಸಹ ಅಡ್ಡಿಪಡಿಸಬಹುದು. ಗರ್ಭಾಶಯವು ಸರಿಯಾಗಿ ಸಂಕುಚಿತಗೊಳ್ಳದಿದ್ದಾಗ, ರಕ್ತವು ಗರ್ಭಾಶಯದ ಕುಹರದೊಳಗೆ ಶೇಖರಣೆಯಾಗುತ್ತದೆ ಮತ್ತು ಹೆಪ್ಪುಗಟ್ಟುತ್ತದೆ ಮತ್ತು ನಂತರ ಹೊರಹಾಕಲ್ಪಡುತ್ತದೆ.

ಗರ್ಭಾಶಯದ ಸಮಸ್ಯೆಗಳು ಫೈಬ್ರಾಯ್ಡ್ಗಳು, ಎಂಡೊಮೆಟ್ರಿಯೊಸಿಸ್, ಅಡೆನೊಮೈಯೋಸಿಸ್‌, ಕ್ಯಾನ್ಸರ್ ಗೆಡ್ಡೆಗಳಿಂದ ಉಂಟಾಗಬಹುದು.

ಫೈಬ್ರಾಯ್ಡ್ಗಳು
ಫೈಬ್ರಾಯ್ಡ್‌ಗಳು ಸಾಮಾನ್ಯವಾಗಿ ಕ್ಯಾನ್ಸರ್ ರಹಿತ, ಗರ್ಭಾಶಯದ ಗೋಡೆಯಲ್ಲಿ ಬೆಳೆಯುವ ಸ್ನಾಯುವಿನ ಗೆಡ್ಡೆಗಳಾಗಿವೆ. ಹೀಗಿದ್ದಾಗ ಹೆಚ್ಚು ಮುಟ್ಟಿನ ರಕ್ತಸ್ರಾವದ ಜೊತೆಗೆ, ಹೆಪ್ಪುಗಟ್ಟಿದ ರಕ್ತಸ್ರಾವವಾಗಬಹುದು.ಅನಿಯಮಿತ ಮುಟ್ಟಿನ ರಕ್ತಸ್ರಾವ, ಬೆನ್ನು ನೋವು,
ಲೈಂಗಿಕತೆಯ ಸಮಯದಲ್ಲಿ ನೋವು, ಚಾಚಿಕೊಂಡಿರುವ ಹೊಟ್ಟೆ, ಫಲವತ್ತತೆ ಸಮಸ್ಯೆಗಳು ಇವೆಲ್ಲವೂ ಫೈಬ್ರಾಯ್ಡ್‌ನಿಂದಾಗಿಯೂ ಆಗಬಹುದು.

ಎಂಡೊಮೆಟ್ರಿಯೊಸಿಸ್
ಎಂಡೊಮೆಟ್ರಿಯೊಸಿಸ್ ಎನ್ನುವುದು ಗರ್ಭಾಶಯದ ಒಳಪದರವನ್ನು ಹೋಲುವ ಜೀವಕೋಶಗಳು. ಎಂಡೊಮೆಟ್ರಿಯಲ್ ಕೋಶಗಳು ಎಂದು ಕರೆಯಲ್ಪಡುವ ಒಂದು ಸ್ಥಿತಿಯಾಗಿದ್ದು, ಗರ್ಭಾಶಯದ ಹೊರಗೆ ಮತ್ತು ಸಂತಾನೋತ್ಪತ್ತಿ ಪ್ರದೇಶದಲ್ಲಿ ಬೆಳೆಯುತ್ತದೆ. ಈ ಸಮಸ್ಯೆ ಇದ್ದಾಗ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಸೆಳೆತ,ವಾಕರಿಕೆ, ವಾಂತಿ ಮತ್ತು ಅತಿಸಾರ, ಲೈಂಗಿಕ ಸಮಯದಲ್ಲಿ ಅಸ್ವಸ್ಥತೆ, ಬಂಜೆತನ, ಶ್ರೋಣಿಯ ನೋವು, ಅಸಹಜ ರಕ್ತಸ್ರಾವ ಮತ್ತು ಇದು ಹೆಪ್ಪುಗಟ್ಟುವಿಕೆಯನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು.

ಅಡೆನೊಮೈಯೋಸಿಸ್
ಕೆಲವೊಂದು ಕಾರಣಗಳಿಗಾಗಿ ಗರ್ಭಾಶಯದ ಒಳಪದರವು ಗರ್ಭಾಶಯದ ಗೋಡೆಯೊಳಗೆ ಬೆಳೆದಾಗ ಅಡೆನೊಮೈಯೋಸಿಸ್ ಸಂಭವಿಸುತ್ತದೆ. ಇದು ಗರ್ಭಾಶಯವನ್ನು ಹಿಗ್ಗಿಸಲು ಮತ್ತು ದಪ್ಪವಾಗಲು ಕಾರಣವಾಗುತ್ತದೆ. ಹೀಗಿದ್ದಾಗ ದೀರ್ಘಕಾಲದ, ಭಾರೀ ರಕ್ತಸ್ರಾವದ ಜೊತೆಗೆ, ಈ ಸಾಮಾನ್ಯ ಸ್ಥಿತಿಯು ಗರ್ಭಾಶಯವು ಅದರ ಸಾಮಾನ್ಯ ಗಾತ್ರದ ಎರಡರಿಂದ ಮೂರು ಪಟ್ಟು ಬೆಳೆಯಲು ಕಾರಣವಾಗಬಹುದು.

ಕ್ಯಾನ್ಸರ್
ಅಪರೂಪವಾಗಿದ್ದರೂ, ಗರ್ಭಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್ ಗೆಡ್ಡೆಗಳು ಹೆಚ್ಚು ಮುಟ್ಟಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಹಾರ್ಮೋನ್ ಅಸಮತೋಲನ
ಎಂಡೋಮೆಟ್ರಿಯಂ ಸರಿಯಾಗಿ ಬೆಳೆಯಲು ಮತ್ತು ದಪ್ಪವಾಗಲು, ಗರ್ಭಾಶಯದ ಒಳಪದರವು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಸಮತೋಲನವನ್ನು ಅವಲಂಬಿಸಿದೆ. ಈ ಹಾರ್ಮೋನ್‌ಗಳೆರಡರಲ್ಲಿ ಹೆಚ್ಚು ಅಥವಾ ಕಡಿಮೆ ಇದ್ದರೆ, ನೀವು ಅಧಿಕ ಮುಟ್ಟಿನ ರಕ್ತಸ್ರಾವವನ್ನು ಹೊಂದಿರಬಹುದು.

ಪೆರಿಮೆನೋಪಾಸ್, ಋತುಬಂಧ, ಒತ್ತಡ, ಗಮನಾರ್ಹ ತೂಕ ಹೆಚ್ಚಳ ಅಥವಾ ನಷ್ಟವೂ ಹಾರ್ಮೋನ್‌ ಅಸಮತೋಲನದ ಲಕ್ಷಣವಾಗಿರಬಹುದು ಅಲ್ಲದೇ ಅನಿಯಮಿತ ಮುಟ್ಟಿನ ಸಮಸ್ಯೆಯೂ ಉಂಟಾಗಬಹುದು. ಉದಾಹರಣೆಗೆ, ನಿಮ್ಮ ಅವಧಿಗಳು ಸಾಮಾನ್ಯಕ್ಕಿಂತ ತಡವಾಗಿರಬಹುದು ಅಥವಾ ಹೆಚ್ಚು ಇರಬಹುದು ಅಥವಾ ನೀವು ಮುಟ್ಟಾಗದೆಯೂ ಇರಬಹುದು.

ಗರ್ಭಪಾತ
ಗರ್ಭ ಧರಿಸಿದ ನಂತರ ಎಲ್ಲವೂ ಯಶಸ್ವಿಯಾಗುವುದಿಲ್ಲ. ಅರ್ಧದಷ್ಟು ಗರ್ಭಪಾತದಲ್ಲಿ ಕೊನೆಗೊಳ್ಳುತ್ತದೆ. ಈ ಗರ್ಭಾವಸ್ಥೆಯ ನಷ್ಟಗಳಲ್ಲಿ ಹೆಚ್ಚಿನವು ಮಹಿಳೆಯು ತಾನು ಗರ್ಭಿಣಿ ಎಂದು ತಿಳಿಯುವ ಮೊದಲು ಸಂಭವಿಸುತ್ತವೆ.ಆರಂಭಿಕ ಗರ್ಭಾವಸ್ಥೆಯು ಕಳೆದುಹೋದಾಗ, ಅದು ಭಾರೀ ರಕ್ತಸ್ರಾವ, ಸೆಳೆತ ಮತ್ತು ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.

ಯಾವಾಗ ವೈದ್ಯರನ್ನು ಕಾಣಬೇಕು..?
ನಿಮಗೆ ಮುಟ್ಟಿನ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ರಕ್ತದ ಹೆಪ್ಪುಗಟ್ಟುವಿಕೆಯು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ. ಕಬ್ಬಿಣಾಂಶದ ಕೊರತೆಯಿಂದಾಗಿ ಉಂಟಾಗುವ ರಕ್ತಹೀನತೆಯಿಂದಲೂ ಹೆಚ್ಚು ರಕ್ತಸ್ರಾವ ಉಂಟಾಗಬಹುದು. ಆಯಾಸ, ದೌರ್ಬಲ್ಯ, ಕಣ್ಣು ಮಂಜಾಗುವುದು, ಉಸಿರಾಟದ ತೊಂದರೆ ಮತ್ತು ಎದೆ ನೋವು ಇದ್ದಲ್ಲಿ ವೈದ್ಯರನ್ನು ತಪ್ಪದೇ ಭೇಟಿ ಮಾಡಿ.

ನಿಮ್ಮ ಮುಟ್ಟಿನ ಅವಧಿಯಲ್ಲಿ ಹೆಪ್ಪುಗಟ್ಟಿದ ರಕ್ತಸ್ರಾವವು ಹೆಚ್ಚಾಗಿದ್ದಲ್ಲಿ, ಈ ಮೇಲೆ ತಿಳಿಸಿದ ಕಾರಣಗಳನ್ನು ತಿಳಿದುಕೊಳ್ಳಲು ವೈದ್ಯರು ಎಂಆರ್‌ಐ ಅಥವಾ ಅಲ್ಟ್ರಾಸೌಂಡ್‌ ಮಾಡಿಸಲು ಹೇಳಬಹುದು.ಹೆಚ್ಚು ಮುಟ್ಟಿನ ರಕ್ತಸ್ರಾವವನ್ನು ನಿಯಂತ್ರಿಸುವುದು ಮುಟ್ಟಿನ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೇ ವೈದ್ಯರು ರಕ್ತಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಔಷಧಿಗಳನ್ನೂ ನೀಡಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

blood clot during period, it is normal or is there any health concern?

What are the causes for menstrual clots and how to diagnose menstrual clots...
Story first published: Saturday, April 15, 2023, 19:15 [IST]
X
Desktop Bottom Promotion