Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ: ಚಿಕನ್ , ಮೊಟ್ಟೆ ತಿನ್ನಬಹುದೇ? ಹಕ್ಕಿ ಜ್ವರದ ಲಕ್ಷಣಗಳೇನು?
ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿಕಾಡಿದೆ. ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದಲ್ಲಿ ಹಕ್ಕ ಜ್ವರ ದೃಢಪಟ್ಟಿದ್ದು ಅಲ್ಲಿನ ಫಾರಂಗಳಲ್ಲಿ ನೂರಾರು ಕೋಳಿಗಳನ್ನು ಕೊಲ್ಲಲಾಗಿದೆ. ಆಂಧ್ರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ ರಾಜ್ಯಕ್ಕೂ ಬಂದಿದೆ, ಹೀಗಾಗಿ ಕೋಳಿ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ.
ಕೋಳಿಗಳಲ್ಲಿ ತೂಕಡಿಕೆ ಕಂಡು ಬರುತ್ತಿದ್ದು ಸಾಕಷ್ಟು ಕೋಳಿಗಳು ಸಾವನ್ನಪ್ಪಿದೆ, ಈ ಹಿನ್ನೆಲೆಯಲ್ಲ ಪರೀಕ್ಷೆ ಮಾಡಿದಾಗ ಹಕ್ಕಿಜ್ವರ ದೃಢಪಟ್ಟಿದೆ. ಗ್ರಾಮದಲ್ಲಿದ್ದ ಬಹುತೇಕ ಮನೆಗಳಲ್ಲಿನ ಕೋಳಿಗಳಿಗೆ ಹಕ್ಕಿಜ್ವರ ದೃಢಪಟ್ಟಿದೆ, ಅವುಗಳನ್ನೆಲ್ಲಾ ಕೊಂದು ಹೂತು ಹಾಕಲಾಗಿದೆ. ಕೆಲವರು ತಾವು ಸಾಕಿರುವ ಕೋಳಿಗಳನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ, ಆದರೆ ಈ ಹಕ್ಕಿಜ್ವರ ಹರಡುವ ಮುನ್ನ ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮುಂದಾಗಿದೆ.

ಹಕ್ಕಿ ಜ್ವರ ಮನುಷ್ಯರಿಗೂ ಹರಡಬಹುದಾಗಿರುವುದರಿಂದ ಜಾಗ್ರತೆವಹಿಸಬೇಕು:
ಹಕ್ಕಿ ಜ್ವರ ಬಾಧಿಸಿರುವ ಹಕ್ಕಿಗಳನ್ನು ತಿನ್ನುವುದರಿಂದ ರೋಗ ಬರುವ ಸಾಧ್ಯತೆ ಇದೆ, ಹೀಗಾಗಿ ಹಕ್ಕಿ ಜ್ವರದ ಬಗ್ಗೆ ತುಂಬಾೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹಕ್ಕಿಜ್ವರ ಮನುಷ್ಯರ ಪ್ರಾಣಕ್ಕೂ ಅಪಾಯಕಾರಿ.
ಹಕ್ಕಿ ಜ್ವರದ ಲಕ್ಷಣಗಳೇನು?
ಜ್ವರ
ಕೆಮ್ಮು
ಗಂಟಲು ಕೆರೆತ, ನೋವು
ಉಸಿರಾಟದ ಸಮಸ್ಯೆ
ನ್ಯೂಮೋನಿಯಾ ಕೂಡ ಉಂಟಾಗಿ ಮನುಷ್ಯರ ಪ್ರಾಣಕ್ಕೆ ಸಂಚಕಾರವಾಗಬಹುದು.
ಹಕ್ಕಿಜ್ವರ ಕಾಣಿಸಿಕೊಂಡಾಗ ಚಿಕಿತ್ಸೆಯೇನು?
ಹಕ್ಕಿಜ್ವರ ಕಾಣಿಸಿದಾಗ ಆ್ಯಂಟಿವೈರಲ್ ಔಷಧವಾಗಿರುವ oseltamivir (Tamiflu) and zanamivir (Relenza) ನೀಡಲಾಗುವುದು, ಈ ಔಷಧ ರೋಗ ಕ್ಷಣಗಳು ಉಲ್ಬಣವಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಸಿಡಿಸಿ ಹೇಳಿದೆ.
ಮೊದಲೇ ಚುಚ್ಚುಮದ್ದು ಪಡೆದು ಈ ಹಕ್ಕಿಜ್ವರ ತಡೆಗಟ್ಟಬಹುದೇ?
ಹಕ್ಕಿಜ್ವರ ಹಾಗೇ ತಡೆಗಟ್ಟಲು ಸಾಧ್ಯವಿಲ್ಲ, ಕೊರೊನಾ ಬರುವುದನ್ನು ತಡೆಗಟ್ಟಲು ಔಷಧ ಇರುವಂತೆ ಏವಿಯನ್ ಇನ್‌ಫ್ಲುಂಜಾ ವೈರಸ್ ತಡೆಗಟ್ಟಲು ಯಾವುದೇ ಲಸಿಕೆಯಲ್ಲ. ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು.
ಈ ಸಮಯದಲ್ಲಿ ಚಿಕನ್ ತಿನ್ನುವುದು ಸುರಕ್ಷಿತವೇ?
ನೀವು ಕೋಳಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು, ಬೇಯಿಸುವಾಗ ಕುಕ್ಕರ್‌ನಲ್ಲಿ ಬೇಯಿಸುವ ಬದಲಿಗೆ ಸಾರು ಪಾತ್ರೆಯಲ್ಲಿ ಮುಚ್ಚಳ ತೆಗೆದಿಟ್ಟು ಬೇಯಿಸಬೇಕು, ಮೊಟ್ಟೆ ಕೂಡ ಹಸಿ ತಿನ್ನುವುದಕ್ಕಿಂತ ಚೆನ್ನಾಗಿ ಬೇಯಿಸಿ ತಿನ್ನಬೇಕು. ಮಂಸ ಸ್ವಚ್ಛಗೊಳಿಸಿದ ಬಳಿಕ ಕೈಗಳನ್ನು ಚೆನ್ನಾಗಿ ಸೋಪು ಹಚ್ಚಿ ತೊಳೆಯಿರಿ. ಮೊಟ್ಟೆ ಕತ್ತರಿಸಿದ ಕತ್ತಿ, ತೊಳೆದ ಪಾತ್ರೆ ಎಲ್ಲವನ್ನೂ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ, ಮೊಟ್ಟೆಯನ್ನು ಕೂಡ ಚೆನ್ನಾಗಿ ಬೇಯಿಸಿ ತಿನ್ನಿ.
ಹಕ್ಕಿಜ್ವರ ಕಾಣಿಸಿದ ಕಡೆ ಕೋಳಿಗಳೆನ್ನೆಲ್ಲಾ ಕೊಲ್ಲಬೇಕೆ?
ಹಕ್ಕಿಜ್ವರ ಕಾಣಿಸಿದ ಕಡೆ ಆ ಕೋಳಿಗಳು ಆರೋಗ್ಯವಾಗಿದ್ದರೂ ಕೊಲ್ಲಲಾಗುತ್ತಿದೆ. ಸುತ್ತಮುತ್ತಲಿನ ಊರಿನವರು ಕೂಡ ಎಚ್ಚರವಹಿಸಬೇಕು, ತಾವು ಸಾಕಿದ ಕೋಳಿಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ನಷ್ಟವಾಗುತ್ತೆ ಈ ವಿಷಯ ಬಚ್ಚಿಡದೆ ನಿಮ್ಮ ಹಾಗೂ ಮನೆಯವರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಗೆ ವಿಷಯ ಮುಟ್ಟಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications