Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮಾವು ಪ್ರಿಯರು ಎಚ್ಚರಿಕೆಯಿಂದಿರಿ: ರಾಸಾಯನಿಕಯುಕ್ತ ಮಾವು ಪತ್ತೆ ಮಾಡೋದು ಹೇಗೆ ಗೊತ್ತಾ?
ಮಾರುಕಟ್ಟೆಯಲ್ಲೀಗ ಮಾವಿನ ಹಣ್ಣುಗಳ ರಾಶಿಯನ್ನೇ ನಾವು ನೋಡಬಹುದು. ನೀವು ಎಲ್ಲಿಯೇ ಹೋದರು ಮಾವಿನ ಹಣ್ಣಿನ ಸ್ವಾದ ನಿಮ್ಮ ಮೂಗಿಗೆ ಹೊಡೆಯುತ್ತದೆ. ಅದರಲ್ಲೂ ವಿಭಿನ್ನ ತಳಿಯ ಮಾವಿನ ರುಚಿ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಹಾಗೆ ನಮ್ಮ ದೇಹಕ್ಕೆ ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಬಹಳ ಅಗತ್ಯ. ಹಾಗೆ ಅದರಿಂದ ಮಾಡುವ ಹಲವು ರೆಸಿಪಿಗಳು ಕೂಡ ನಮಗೆ ಇಷ್ಟವಾಗುತ್ತವೆ.
ಹಳ್ಳಿಗಳಲ್ಲಿ ಆದರೆ ಮಾವಿನ ಹಣ್ಣುಗಳನ್ನು ಮನೆ ಮನೆಯಲ್ಲೂ ಬೆಳೆಯುವುದು ನೋಡಬಹುದು. ಎಲ್ಲರ ಮನೆಯಲ್ಲಿ ಒಂದು ಅಥವಾ ಎರಡು ಮರಗಳು ಇದ್ದೇ ಇರುತ್ತವೆ. ಇನ್ನು ನಗರದಲ್ಲಿ ಮಾರುಕಟ್ಟೆಯಿಂದಲೇ ಖರೀದಿಸಿ ತಂದು ಸವಿಯುತ್ತಾರೆ. ಹೀಗೆ ಮಾರುಕಟ್ಟೆಯಿಂದ ತರುವಾಗ ಅವುಗಳ ಸುರಕ್ಷತೆಯ ಕುರಿತಾಗಿ ಪ್ರಶ್ನೆ ಇದ್ದೇ ಇರುತ್ತೆ.

ಮಾವಿನ ಹಣ್ಣುಗಳನ್ನು ಈಗ ರಾಸಾಯನಿಕ ಪ್ರಕ್ರಿಯೆಯ ಮೂಲಕ ಹಣ್ಣು ಮಾಡುವುದು, ಬಹುಬೇಗ ಹಾಳಾಗದಂತೆ ಇಡಲು ಅವುಗಳಿಗೆ ರಾಸಾಯನಿಕ ಬೆರೆಸುವುದು, ಅವು ಕೆಂಪು, ಅರಶಿಣ ಬಣ್ಣ ಬರುವಂತೆ ಮಾಡಲು ಕೆಮಿಕಲ್ ಬಳಸುವುದು ಹೀಗೆ ಹತ್ತಾರು ರೀತಿಯಲ್ಲಿ ಮಾವಿನ ಹಣ್ಣುಗಳನ್ನು ಸಂಸ್ಕರಿಸುವುದು ನೋಡಬಹುದು. ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಂತು ಖಚಿತ.
ಹೀಗಾಗಿ ಮಾರುಕಟ್ಟೆಯಲ್ಲಿ ಎಷ್ಟೇ ಸುಂದರವಾದ, ಸುವಾಸನೆ ಭರಿತ ಮಾವಿನ ಹಣ್ಣು ನೋಡಿದರು ಅದನ್ನು ಮನೆಗೆ ತಂದಾದ ಬಳಿಕ ಸವಿಯಲು ಹಿಂದು ಮುಂದು ನೋಡುವಂತಹ ಸಮಯ ಇದಾಗಿದೆ. ಯಾವ ಹಣ್ಣಗಳನ್ನು ಈ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಲಾಗಿರುತ್ತದೆ ಎಂಬುದನ್ನು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹಾಗೆ ಎಲ್ಲಾ ಮಾವುಗಳನ್ನು ನೈಸರ್ಗಿಕ ವಿಧಾನವಾಗಿ ಬೆಳೆದಿರುವುದಿಲ್ಲ, ಹಾಗೆ ಹಣ್ಣು ಕೂಡ ಮಾಡಿರುವುದಿಲ್ಲ.
ಆದ್ರೆ ಇಲ್ಲೊಬ್ಬರು ನೀವು ಯಾವ ಮಾವಿನ ಹಣ್ಣು ಸೇವನೆಗೆ ಯೋಗ್ಯ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂಬುದನ್ನು ವಿವರಿಸಿದ್ದಾರೆ. ಅದರಲ್ಲೂ ಲ್ಯೂಕ್ ಕೌಟಿನ್ಹೋ ಎಂಬ ಲೈಫ್‌ಸ್ಟೈಲ್ ಟೀಚರ್ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತಾಗಿ ಒಂದು ವಿಡಿಯೋ ಹಂಚಿಕೊಂಡಿದ್ದು, ನಾವು ರಾಸಾಯನಿಕ ಮಾವುಗಳು ಅಥವಾ ಕೃತಕವಾಗಿ ಹಣ್ಣು ಮಾಡಲಾದ ಮಾವುಗಳನ್ನು ಸುಲಭವಾಗಿ ಗುರುತಿಸಲು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.
ಮೊದಲು ಮಾವಿನ ಹಣ್ಣು ಖರೀದಿಸುವಾಗಲೇ ನಾವು ಎಚ್ಚರಿಕೆ ವಹಿಸಬೇಕು. ಮಾವಿನ ಹಣ್ಣಿನ ಮೇಲೆ ಕಪ್ಪು ಕಲೆಗಳಿದ್ದರೆ ಅಥವಾ ಸಣ್ಣ ಸಣ್ಣ ಕಪ್ಪು ಮಚ್ಚೆಗಳಂತಹ ರಚನೆಗಳು ಮೂಡಿದ್ದರೆ ಅದನ್ನು ಖರೀದಿಸಬಾರದಂತೆ. ಮಾವಿನ ಹಣ್ಣು ಒಂದೇ ಬಣ್ಣದಲ್ಲಿರಬೇಕು, ಅಂದರೆ ಹಣ್ಣುಗಳ ಮೇಲೆ ಕಲೆಗಳಿಲ್ಲದೆ ಇದ್ದರೆ ಸೂಕ್ತ ಎಂದು ಅವರು ಹೇಳಿದ್ದಾರೆ.
ಹಾಗೆ ಮಾವಿನ ಹಣ್ಣುಗಳು ಕೈಯಲ್ಲಿ ಹಿಡಿದಾಗ ಅದು ಗಟ್ಟಿಯಾಗಿರಬೇಕು. ಕೆಲವೊಮ್ಮೆ ನೀವು ಮಾವಿನ ಹಣ್ಣುನ್ನು ಕೈಯಲ್ಲಿ ಹಿಡಿದರೆ ಅದು ಹತ್ತಿಯಂತೆ ಮೃದು ಅಥವಾ ಮೆತ್ತಗಿನ ಅನುಭವ ನೀಡಿದರೆ ಅದನ್ನು ಖರೀದಿಸಬೇಡಿ. ಅಂಗಡಿಯವರು ಈ ಹಣ್ಣು ಚೆನ್ನಾಗಿ ಮಾಗಿದೆ ಎಂಬ ಸಮಜಾಯಿಷಿ ನೀಡುತ್ತಾರೆ. ಆದರೆ ಇದನ್ನು ರಾಸಾಯನಿಕ ಬಳಸಿ ಅಲ್ಲವೆ ಕೃತಕವಾಗಿ ಹಣ್ಣು ಮಾಡಿರುವ ಸಾಧ್ಯತೆ ಹೆಚ್ಚಾಗಿರಲಿದೆ.
ಹಾಗೆ ಮನೆಯಲ್ಲಿ ಒಂದು ಜಗ್ ತೆಗೆದುಕೊಂಡು ಅದರಲ್ಲಿ ನೀರು ಹಾಕಿಕೊಳ್ಳಿ. ಈಗ ಈ ನೀರಿಗೆ ಮಾವಿನ ಹಣ್ಣನ್ನು ಹಾಕಿಕೊಳ್ಳಿ. ಮಾವಿನ ಹಣ್ಣು ಮುಳುಗಿದರೆ ಅದು ಉತ್ತಮ ಮಾವು. ಒಂದು ವೇಳೆ ನೀರಿನಲ್ಲಿ ಮಾವಿನ ಹಣ್ಣು ತೇಲುತ್ತಿದ್ದರೆ ಅದರಲ್ಲಿ ಕಾರ್ಬೈಡ್ ಎಂಬ ರಾಸಾಯನಿಕದಲ್ಲಿ ಸಂಸ್ಕರಿಸಬಹುದು. ಇದರಿಂದ ಮಾವು ಹಗುರವಾಗುತ್ತದೆ. ಅದು ತೇಲುವಂತೆ ಮಾಡಲಿದೆ ಎಂದು ಅವರು ವಿವರಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
