Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಚೀನಾದಲ್ಲಿ 'ಮಾರಕ ಬ್ರೈನ್ ವೈರಸ್' ಪತ್ತೆ: ಸಾಂಕ್ರಾಮಿಕಕ್ಕೆ ಕಾರಣವಾಗಬಹುದೇ?
ಚೀನಾದಲ್ಲಿ ಹೊಸ ವೈರಸ್‌ಗಳು ಕಾಣಿಸಿಕೊಳ್ಳುವುದು ಹೊಸತೇನಲ್ಲ. ಅದ್ರಲ್ಲು ಇಡೀ ವಿಶ್ವಕ್ಕೆ ಸಂಕಷ್ಟ ತಂದಿದ್ದ ಕೋವಿಡ್ ವೈರಸ್ ಕುರಿತು ನಿಮಗೆಲ್ಲಾ ತಿಳಿದಿರಬಹುದು. ಇದಾದ ಬಳಿಕ ಹಲವು ವೈರಸ್‌ಗಳು ಅಲ್ಲಿ ಕಾಣಿಸಿಕೊಂಡಿವೆ. ಈಗ ಬಾವಲಿಗಳಿಂದ ಹರಡುವಂತಹ ಮತ್ತೊಂದು ವೈರಸ್ ಆತಂಕಕ್ಕೆ ಕಾರಣವಾಗಿದೆ.
ಚೀನಾದ ಪ್ರಾಂತ್ಯದಲ್ಲಿ ಬಾವಲಿಗಳ ಮೂಲಕ ಹರಡುವಂತಹ ಭಯಾನಕ ವೈರಲ್ ಪತ್ತೆಯಾಗಿದೆ. 142 ಬಾವಲಿಗಳ ಮೂತ್ರಪಿಂಡ ಅಂಗಾಂಶಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿರುವಾಗ ಅಲ್ಲಿ 22 ರೀತಿಯ ಹೊಸ ವೈರಸ್‌ಗಳು ಪತ್ತೆಯಾಗಿವೆ. ಇದರಲ್ಲಿ ಎರಡು ವೈರಸ್‌ಗಳು ನಿಪಾ ಮತ್ತು ಹೈಡ್ರಾ ವೈರಸ್‌ಗೆ ಹೋಲುತ್ತವೆ ಎಂದು ತಿಳಿದುಬಂದಿದೆ.

ಈ ಎರಡೂ ವೈರಸ್‌ಗಳು ಬಹಳ ಅಪಾಯಕಾರಿ ಏಕೆಂದರೆ ಇವು ರೋಗಿಯ ಮೆದುಳಿನಲ್ಲಿ ಊತ ಉಂಟು ಮಾಡುತ್ತವೆ. ಹಾಗೆ ಇದು ಉಸಿರಾಟ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಹಾಗೆ ಈ ಹೊಸ ವೈರಸ್‌ಗಳು ಕಂಡುಬರುತ್ತಿರುವುದು ವುಹಾನ್ ಪ್ರಾಂತ್ಯದಲ್ಲಿ ಇಲ್ಲಿಯೇ ಕೋವಿಡ್ ವೈರಸ್ ಕೂಡ ಕಾಣಿಸಿಕೊಂಡಿತ್ತು.
2017 ಮತ್ತು 2021 ರ ನಡುವೆ ಸಂಶೋಧಕರು ವುಹಾನ್ ಪ್ರಾಂತ್ಯದ ಐದು ವಿಭಿನ್ನ ಸ್ಥಳಗಳಿಂದ 142 ಬಾವಲಿಗಳ ಮೂತ್ರಪಿಂಡದ ಅಂಗಾಂಶದ ಮಾದರಿಗಳನ್ನು ತೆಗೆದುಕೊಂಡಿದ್ದರು. ಜೀನೋಮ್ ಅನುಕ್ರಮದ ನಂತರ ಅವುಗಳಲ್ಲಿ 22 ವಿಭಿನ್ನ ವೈರಸ್‌ಗಳು ಇರುವುದು ಕಂಡುಬಂದಿದೆ, ಅವುಗಳಲ್ಲಿ 20 ಸಂಪೂರ್ಣವಾಗಿ ಹೊಸದಾಗಿವೆ.
ಈ ಹೊಸದಾಗಿ ಪತ್ತೆಯಾದ ವೈರಸ್‌ಗಳಲ್ಲಿ ಎರಡು ಹೆನಿಪಾವೈರಸ್‌ಗಳು - ಯುನ್ನಾನ್ ಬ್ಯಾಟ್ ಹೆನಿಪಾವೈರಸ್ -1 ಮತ್ತು ಯುನ್ನಾನ್ ಬ್ಯಾಟ್ ಹೆನಿಪಾವೈರಸ್ -2 - ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿವೆ. ಈ ವೈರಸ್‌ಗಳು ನಿಪಾ ಹಾಗೂ ಹೆಂಡ್ರಾ ವೈರಸ್‌ನೊಂದಿಗೆ ಶೇ.71ರಷ್ಟು ಹೋಲಿಕೆಯಾಗುತ್ತವೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಬಾವಲಿಗಳು ಇತರೆ ಪ್ರಾಣಿಗಳು, ಮಾನವರು ಸೇವಿಸುವ ಹಣ್ಣುಗಳಿಂದ, ಮೂತ್ರ, ಮಲದಿಂದಾಗಿ ವೈರಸ್ ಹರಡಬಹುದು, ಇದು ಹರಡುವಿಕೆ ವೇಗ ಪಡೆಯಲು ಕಾರಣವಾಗಲಿದೆ.
ನಿಪಾ ವೈರಸ್‌ನ 1998-99ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಮಲೇಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಅದೇ ವರ್ಷದಲ್ಲಿ 100ಕ್ಕೂ ಹೆಚ್ಚು ಸಾವು ಸಂಭವಿಸಿತ್ತು. ನಿಪಾ ಮರಣ ಪ್ರಮಾಣ ಶೇ.75ರಷ್ಟಿದ್ದು, ಇದು ಅಪಾಯಕಾರಿ ವೈರಸ್ ಎಂದು ಗುರುತಿಸಲ್ಪಟ್ಟಿದೆ.
ಇನ್ನು ಹೆಂಡ್ರಾ ವೈರಸ್ ಕೂಡ ಅಪಾಯಕಾರಿ ವೈರಸ್‌ಗಳಲ್ಲಿ ಒಂದಾಗಿದೆ. ಇದು ಕುದುರೆಗಳ ಮೂಲಕ ಮನುಷ್ಯರಿಗೆ ಹರಡುತ್ತಿದ್ದ ವೈರಸ್ ಆಗಿದೆ. ಇದು ಕೂಡ ಗಂಭೀರ ಸ್ವರೂಪದ ನರ ವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈಗ ಚೀನಾದಲ್ಲಿ ಪತ್ತೆಯಾದ ವೈರಸ್‌ಗಳು ಕೂಡ ಈ ಎರಡು ವೈರಸ್‌ನ ಹೋಲುವುದು ನೋಡಬಹುದು.
ಪ್ರಸ್ತುತ ಈ ವೈರಸ್‌ಗಳಿಂದ ಯಾವುದೇ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ, ಆದರೆ ನಾವು ಅಜಾಗರೂಕರಾಗಿರಬೇಕೆಂದು ಇದರ ಅರ್ಥವಲ್ಲ. ಈ ವೈರಸ್‌ಗಳು ಮನುಷ್ಯರಿಗೆ ಸೋಂಕು ತಗುಲಬಹುದೇ ಅಥವಾ ಇಲ್ಲವೇ ಎಂಬುದನ್ನು ವಿಜ್ಞಾನಿಗಳು ಇನ್ನೂ ಕಂಡುಹಿಡಿಯಬೇಕಾಗಿದೆ. ಹಾಗೆ ಇವು ರೂಪಾಂತರ ಮೂಲಕ ಹರಡುವಿಕೆ ಆರಂಭಗೊಂಡದರೆ ಬಹುದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
ಈ ವೈರಸ್ ಸಂಬಂಧ ಈಗ ಚೀನಾದಲ್ಲಿ ಎಚ್ಚರಿಕೆ ಇಡಲಾಗಿದೆ. ಅದ್ರಲ್ಲೂ ವಿಶೇಷವಾಗಿ ರೈತರು ಅಥವಾ ತೊಟಗಳಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಲ್ಲಿನ ಈ ಬಾವಲಿಗಳಲ್ಲಿ ಕಂಡುಬಂದ ಹೊಸ ವೈರಸ್‌ಗಳು ಬ್ರೈನ್ ಫೀವರ್‌ನಂತಹ ಲಕ್ಷಣಗಳ ಹೊಂದಲಿವೆ ಎಂದು ಕೂಡ ತಿಳಿದುಬಂದಿದೆ. ಇದು ಜಾಗತಿಕ ಮಟ್ಟದಲ್ಲೂ ಅಪಾಯ ತಂದೊಡ್ಡುವ ಸೂಚನೆ ಇಲ್ಲದಿದ್ದರೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.



Click it and Unblock the Notifications
