Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿರಾ? ತೂಕ ಇಳಿಯೋದಿಲ್ಲ ದೇಹಕ್ಕಿದೆ ಅಪಾಯ, ಹಲವು ಸಮಸ್ಯೆ!
ಇತ್ತೀಚಿಗೆ ಜನರ ಜೀವನ ಶೈಲಿ ಯಾವ ರೀತಿಯಲ್ಲಿ ಬದಲಾಗಿದೆ ಎಂದರೆ ಅವರು ಆರೋಗ್ಯದ ಕಡೆ ಗಮನ ಹರಿಸುವ ನಿಟ್ಟಿನಲ್ಲಿ ಹಲವು ರೀತಿಯ ಸಮಸ್ಯೆಗಳ ಮಾಡಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ತಮ್ಮ ಸೌಂದರ್ಯ ವೃದ್ಧಿಸುವುದು, ತೂಕ ಇಳಿಸಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಕಾರ್ಯದಲ್ಲಿ ತೊಡಗುವುದು ನೋಡಬಹುದು. ಹಾಗೆ ತೂಕ ಇಳಿಸಲು ಈಗ ಜನರು ಏನೆಲ್ಲಾ ಮಾಡುತ್ತಾರೆ ಅನ್ನೋದನ್ನು ಸಹ ನೀವು ನೋಡಿರುತ್ತೀರಿ.
ಅದಕ್ಕಾಗಿ ಊಟ ತಿಂಡಿ ಬಿಡುವುದು, ಡಯೆಟ್ ಮಾಡುವುದು, ಕಡಿಮೆ ಆಹಾರ ಸೇವಿಸುವುದು, ಧ್ಯಾನ, ವ್ಯಾಯಾಮ, ಜಿಮ್ ಹೀಗೆ ಹಲವು ರೀತಿಯ ಸಾಹಸಗಳ ಮಾಡುವುದು ನೋಡಬಹುದು. ಅದ್ರಲ್ಲೂ ತೂಕ ಇಳಿಸಲು ಹಲವರು ಆಯ್ಕೆ ಮಾಡಿಕೊಳ್ಳುವ ಸುಲಭದ ಮಾರ್ಗ ಅಂದರೆ ಅದು ಊಟ ತಿಂಡಿ ನಿಲ್ಲಿಸುವುದು. ಆದ್ರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಸಮಸ್ಯೆಗಳನ್ನು ನೀವಾಗಿಯೇ ತಂದುಕೊಂಡಂತೆ.

ಅದ್ರಲ್ಲೂ ಬಹುತೇಕರು ಈಗ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವುದು ಅಥವಾ ತ್ಯಜಿಸುವುದು ನೋಡಬಹುದು. ಹಲವರಲ್ಲಿ ಈಗ ಬ್ರಂಚ್ ಎಂಬ ಹೊಸ ಸಂಸ್ಕೃತಿ ಬೆಳೆದಿದೆ. ಬೆಳಗಿನ ತಿಂಡಿ ಹಾಗೆ ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುವುದು ನೋಡಬಹುದು. ಬೆಳಗ್ಗೆ ತಡವಾಗಿ ಏಳುವುದು ಅದರೊಂದಿಗೆ ಬೆಳಗಿನ ತಿಂಡಿ ಮಾಡದೆ ನೇರವಾಗಿ ಊಟ ಮಾಡುವುದು ಸಹ ನೋಡಬಹುದು.
ಬೆಳಗ್ಗೆ ತಿಂಡಿಯನ್ನು ಬಿಡುವುದು ನಿಮ್ಮ ತೂಕ ಇಳಿಸುವಲ್ಲಿ ಯಾವ ರೀತಿ ಸಹಕಾರಿ ಎಂಬುದು ನಿಮಗೆ ಗೊತ್ತಿದ್ಯಾ? ಇತ್ತೀಚಿಗೆ ಧುರಂದರ್ ಸಿನಿಮಾ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಆಗಿರುವುದು ನಿಮಗೂ ತಿಳಿದಿದೆ. ಹಾಗೆ ಈ ಸಮಯದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟ ಅಕ್ಷಯ್ ಖನ್ನಾ ಕೂಡ ಇದೇ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅದ್ರಲ್ಲೂ ನಟ ಅಕ್ಷಯ್ ಖನ್ನಾ ಬೆಳಗಿನ ತಿಂಡಿ ಸೇವಿಸುವುದಿಲ್ಲ ಅದೆ ಅನ್ನ ಫಿಟ್‌ನೆಸ್ ಮಂತ್ರ ಎಂದಿದ್ದಾರೆ.
ಅವರ ಈ ಹೇಳಿಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬ್ರೇಕ್ ಫಾಸ್ಟ್ ಮಾಡದೆ ಇರುವುದು ತೂಕ ಇಳಿಸಲು ಸಹಾಯವಾಗುತ್ತದೆ ಎಂಬ ತಪ್ಪು ಕಲ್ಪನೆಗೆ ಮತ್ತಷ್ಟು ಇಂಬು ನೀಡುವಂತಿತ್ತು. ' ನಾನು ಬೆಳಗಿನ ಉಪಹಾರ ಸೇವಿಸುವುದಿಲ್ಲ. 10 ಗಂಟೆಗಳ ಕಾಲ ನಿದ್ರೆ ಮಾಡುತ್ತೇನೆ. ನಾನು ಮಧ್ಯಾಹ್ನ ಮತ್ತು ನಂತರ ರಾತ್ರಿ ಊಟವನ್ನು ಮಾತ್ರ ತಿನ್ನುತ್ತೇನೆ ಮತ್ತು ಈ ಊಟಗಳ ನಡುವೆ, ನಾನು ತಿಂಡಿ ತಿನ್ನುವುದಿಲ್ಲ ಎಂದು ಹೇಳಿದ್ದಾರೆ.
ಬೆಳಗಿನ ಉಪಹಾರ ಬಿಡುವುದು ದೀರ್ಘಕಾಲ ಜೀರ್ಣಕ್ರಿಯೆಗೆ ವಿಶ್ರಾಂತಿ ನೀಡಿದಂತಾಗುತ್ತದೆ, ಇದು ದೇಹಕ್ಕೆ ಉತ್ತಮ ಎಂಬ ಕಲ್ಪನೆ ಕೂಡ ಇದೆ. ಹಾಗಾದ್ರೆ ನಾವಿಂದು ಈ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಬೆಳಗಿನ ಉಪಹಾರ ಬಿಡುವುದರಿಂದ ಯಾವೆಲ್ಲಾ ರೀತಿ ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ? ಈ ಕುರಿತಾದ ತಪ್ಪು ಕಲ್ಪನೆಗಳು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರಾತ್ರಿ ಲಘುವಾಗಿ ಊಟ ಮಾಡಿ ಮಲಗಿದ ಬಳಿಕ ಬೆಳಗ್ಗೆ ಎದ್ದು ಸೇವಿಸುವ ಉಪಹಾರವು ನಿಮ್ಮ ಉಪವಾಸವನ್ನು ಮುರಿಯುವ ಹಂತವಾಗಿರುತ್ತದೆ. ಹೀಗಾಗಿ ಬೆಳಗಿನ ಉಪಹಾರವನ್ನು ಚೆನ್ನಾಗಿ ಸೇವಿಸಬೇಕು ಎಂದು ಹೇಳಲಾಗುತ್ತದೆ. ನಿಮ್ಮ ಇಡೀ ದಿನದ ಅಥವಾ ನಿಮ್ಮ ಕೆಲಸಕ್ಕೆ ಅಗತ್ಯವಾಗಿ ಬೇಕಾಗುವ ಶಕ್ತಿ, ಎನರ್ಜಿಯು ಬೆಳಗಿನ ಉಪಹಾರದಿಂದ ಮಾತ್ರ ನಿಮ್ಮ ದೇಹಕ್ಕೆ ಸಿಗುತ್ತದೆ. ಹೀಗಾಗಿ ಬೆಳಗಿನ ಉಪಹಾರ ನಿಮ್ಮ ದೇಹಕ್ಕೆ ಬಹಳ ಮುಖ್ಯವಾದ ಅಂಶವಾಗಿರಲಿದೆ.
ಬೆಳಗ್ಗೆ ತಿಂಡಿ ಬಿಡುವುದರಿಂದ ಏನೆಲ್ಲಾ ಆಗಲಿದೆ?
ಬೆಳಗ್ಗೆ ಎದ್ದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕಡಿಮೆಯಾಗುತ್ತವೆ ಮತ್ತು ನೀವು ದೀರ್ಘಕಾಲದವರೆಗೆ ಈ ಸ್ಥಿತಿಯಲ್ಲಿದ್ದರೆ. ಆಯಾಸ ಅಥವಾ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಬಹುಬೇಗ ಸುಸ್ತಾಗುವುದು, ತಲೆ ತಿರುಗುವುದು ಸೇರಿ ಹಲವು ರೀತಿಯ ಅನಾರೋಗ್ಯ ಸಮಸ್ಯೆ ಎದುರಿಸಬಹುದು.
ಹೃದಯ ಸಮಸ್ಯೆ ಹೆಚ್ಚಾಗುವ ಭೀತಿ
ಬೆಳಗಿನ ಉಪಹಾರವು ನಿಮ್ಮ ದೇಹ ಸಮತೋಲನದಲ್ಲಿರಲು ಸಹಕಾರಿಯಾಗಿರಲಿದೆ. ನೀವು ಬೆಳಗಿನ ಉಪಹಾರ ಸೇವಿಸದೆ ಇರುವುದು ಹೃದಯ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಬಹುದಂತೆ. ದೀರ್ಘಕಾಲ ತನಕ ಉಪವಾಸದಿಂದ ಇದ್ದರೆ ಅದು ದೇಹಕ್ಕೆ ಮತ್ತಷ್ಟು ಒತ್ತಡ ಹೇರುವುದು ಮತ್ತು ದೇಹವು ಮತ್ತಷ್ಟು ಕಠಿಣವಾಗಿ ಕೆಲಸ ಮಾಡುವಂತೆ ಮಾಡುವುದು. ಅತಿಯಾದ ಕೆಲಸವು ಚಯಾಪಚಯದಲ್ಲಿ ವ್ಯತ್ಯಯ ಉಂಟು ಮಾಡಬಹುದು ಮತ್ತು ಹೃದಯಾಘಾತದ ಸಮಸ್ಯೆಗೆ ಕಾರಣವಾಗಬಹುದು. ಹಾಗೆ ನಿಮ್ಮಲ್ಲಿ ಹೃದಯ ಸಮಸ್ಯೆ ಇರುವ ಇತಿಹಾಸ ಹೊಂದಿದ್ದರೆ ಎಂದಿಗೂ ಬೆಳಗಿನ ಉಪಹಾರ ಬಿಡುವುದು ಉತ್ತಮ ಅಭ್ಯಾಸವಲ್ಲವಂತೆ.
ತೂಕ ಇಳಿಯೋದಿಲ್ಲ ಹೆಚ್ಚಾಗುವ ಸಾಧ್ಯತೆ ಅಧಿಕ
ಹಲವರು ಬೆಳಗ್ಗೆ ತಿಂಡಿ ಬಿಡುವುಸು ತೂಕ ಇಳಿಸಲು ನೆರವಾಗುತ್ತೆ ಎಂದುಕೊಂಡಿದ್ದಾರೆ. ಆದ್ರೆ ಇದರಿಂದ ತೂಕ ಇಳಿಯುವ ಬದಲು ಹೆಚ್ಚಾಗುವ ಸಾಧ್ಯತೆ ಅಧಿಕ. ಏಕೆಂದರೆ ಬೆಳಗ್ಗೆ ತಿಂಡಿ ಸೇವನೆ ಮಾಡದೆ ಇರುವುದು ನಿಮ್ಮಲ್ಲಿ ಹಸಿವು ಹೆಚ್ಚಾಗಲು ಕಾರಣವಾಗಿರಲಿದೆ. ಇದರಿಂದ ಮಧ್ಯಾಹ್ನದ ಊಟವನ್ನು ನೀವು ಹೆಚ್ಚಾಗಿ ಮಾಡಬಹುದು. ಇಲ್ಲವೆ ದೇಹಕ್ಕೆ ಅಗತ್ಯವಾಗಿರುವ ಕ್ಯಾಲೋರಿಗಿಂತ ಹೆಚ್ಚು ಸೇವಿಸಬಹುದು. ಇದರಿಂದ ನಿಮ್ಮ ತೂಕ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕ್ಯಾಲೋರಿ ಕಡಿಮೆಯಾಗುವ ಭೀತಿ
ದಿನವೊಂದಕ್ಕೆ ಆರೋಗ್ಯವಂತ ದೇಹಕ್ಕೆ ಅಗತ್ಯ ಕ್ಯಾಲೋರಿಗಳು ಬೇಕಾಗುತ್ತದೆ. ಸಾಮಾನ್ಯವಾಗಿ 1200ರಿಂದ 2000 ಕ್ಯಾಲೋರಿ ನಮ್ಮ ದೇಹಕ್ಕೆ ಅಗತ್ಯವಿರುತ್ತದೆ. ಆದ್ರೆ ನೀವು ಬೆಳಗ್ಗೆಯ ಈ ಉಪಹಾರ ಸ್ಕಿಪ್ ಮಾಡಿದರೆ ಉಳಿದ ಊಟ ಹಾಗೂ ಆಹಾರದಿಂದ ದಿನದ ಅಗತ್ಯ ಕ್ಯಾಲೋರಿಯನ್ನು ಸಂಗ್ರಹಿಸಬೇಕು. ಇದು ಸಾಧ್ಯವಾಗದೆ ಇದ್ದರೆ ದೇಹ ದಣಿದಂತೆ, ಆಯಾಸವಾದಂತೆ ಹಾಗೆ ಹಲವು ರೀತಿಯ ಸಮಸ್ಯೆಗಳ ನೀವು ಎದುರಿಸಬಹುದು.



Click it and Unblock the Notifications











