Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಆನ್‌ಲೈನ್ ಮೂಲಕ ಔಷಧಿ ಖರೀದಿಸುತ್ತೀರಾ? ಎಚ್ಚರ.! ಈ ಅಂಶ ಗಮನದಲ್ಲಿಡಿ..!
ಇತ್ತೀಚಿಗೆ ಎಲ್ಲಾ ವಸ್ತುಗಳನ್ನು ನಾವು ಆನ್‌ಲೈನ್ ಮೂಲಕ ಖರೀದಿಸುವುದು ಹೆಚ್ಚಾಗಿದೆ. ಈಗ ಇದೊಂದು ಟ್ರೆಂಡ್ ಅಂದರೂ ತಪ್ಪಾಗಲ್ಲ. ಎಲ್ಲರೂ ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ತಮಗೆ ಬೇಕಾದ ವಸ್ತುಗಳ ತರಿಸಿಕೊಳ್ಳುವುದು ನೋಡಬಹುದು. ಅದು ಫುಡ್ ಇಂದ ಹಿಡಿದು ಮನೆಗೆ ಬೇಕಾದ ಅಗತ್ಯ ವಸ್ತುಗಳು, ತಿಂಡಿಗಳು, ಗೃಹಪಯೋಗಿ ವಸ್ತುಗಳು ಸೇರಿ ಹಲವು ವಸ್ತುಗಳು ಮನೆಗೆ ಬರುತ್ತಿವೆ.
ಹಾಗೆ ಮನೆಯಲ್ಲೇ ಕುಳಿತು ನೀವು ವೈದ್ಯರ ಮೂಲಕ ಚಿಕಿತ್ಸೆಯನ್ನೂ ಪಡೆಯಬಹುದು. ಅಷ್ಟೇ ಅಲ್ಲ ಆನ್‌ಲೈನ್ ಮೂಲಕ ನಿಮಗೆ ಬೇಕಾದ ಔಷಧಿಗಳನ್ನು ಕೂಡ ಖರೀದಿಸಬಹುದು. ಆನ್‌ಲೈನ್ ಔಷಧಿ ಮಾರಾಟ ಕುರಿತು ಹಲವು ರೀತಿಯ ಪರ ವಿರೋಧ ಚರ್ಚೆಗಳು ಹುಟ್ಟಿಕೊಳ್ಳುತ್ತಿರುವುದು ನೋಡಬಹುದು. ಆದ್ರೆ ಇದು ಬಹುಕೋಟಿ ಉದ್ಯಮವಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಆನ್‌ಲೈನ್ ಮೂಲಕ ಔಷಧಿ ವ್ಯಾಪಾರದಲ್ಲಕಿ ತೊಡಗಿರುವುದು ನೋಡಬಹುದು.

ಹಲವರ ಪ್ರಕಾರ ಆನ್‌ಲೈನ್‌ನಲ್ಲಿ ಔಷಧಿ ಖರೀದಿಯು ವೆಚ್ಚ ಕಡಿಮೆ ಮಾಡುತ್ತದೆ ಹಾಗೆ ಸಮಯ ಉಳಿಸುತ್ತದೆ ಎಂಬುದಾಗಿದೆ. ಆದರೆ ಅದು ಎಷ್ಟು ಸುರಕ್ಷಿತ ಎಂಬುದರ ಮೇಲೆ ಇನ್ನು ಚರ್ಚೆಗಳಿವೆ. ಆನ್‌ಲೈನ್‌ನಲ್ಲಿ ಔಷಧಿಗಳನ್ನು ಖರೀದಿಸುವುದು ಅನುಕೂಲತೆ, ಗೌಪ್ಯತೆ ಮತ್ತು ಸಾಂಪ್ರದಾಯಿಕ ಔಷಧಾಲಯಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚ ಹೊಂದಿದೆ. ಆದರೆ ನೀವು ವಿಶ್ವಾಸಾರ್ಹ ಮೂಲವನ್ನು ಆಯ್ಕೆ ಮಾಡುವ ಬಗ್ಗೆ ಜಾಗರೂಕರಾಗಿಲ್ಲದಿದ್ದರೆ ಅಪಾಯಕ್ಕೆ ಕಾರಣವಾಗಬಹುದು.
ಹಾಗಾದ್ರೆ ಸುರಕ್ಷಿತವಾಗಿ ಆನ್‌ಲೈನ್‌ಲ್ಲಿ ಔಷಧಿ ಖರೀದಿಸುವುದು ಹೇಗೆ? ಅಪಾಯಕಾರಿ ಮೂಲಗಳನ್ನು ಪತ್ತೆ ಮಾಡುವುದಾದರು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲಿಗೆ ನೀವು ಆನ್‌ಲೈನ್ ಮೂಲಕ ಔಷಧಿ ಖರೀದಿಗೆ ಮುಂದಾದಾರೆ ಆ ಸಂಸ್ಥೆ ಔಷಧಿ ಮಾರಾಟಕ್ಕೆ ಪರವಾನಗಿ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿ. ವೆಬ್‌ಸೈಟ್‌ನ ಕೊನೆಯಲ್ಲಿ ಈ ಲೈಸೆನ್ಸ್ ಕುರಿತ ಮಾಹಿತಿ ಸಿಗಬಹುದು. ಹಾಗೆ ಆ ಸಂಸ್ಥೆ ಎಷ್ಟು ವರ್ಷದಿಂದ ಈ ಸೇವೆ ನೀಡುತ್ತಿದೆ ಎಂಬುದನ್ನು ಅರಿತುಕೊಳ್ಳಿ. ಇತ್ತೀಚಿಗೆ ಆರಂಭಗೊಂಡಿರುವ ಅಥವಾ ಅನಧಿಕೃತ ಎಂಬ ಅನುಮಾನ ಬಂದರೆ ಅಂತಹ ವೆಬ್‌ಸೈಟ್‌ನಿಂದ ಔಷಧಿ ವ್ಯವಹಾರ ಮಾಡದಿರುವುದು ಉತ್ತಮ.
ಹಾಗೆ ನೀವು ಔಷಧಿ ತರಿಸಿಕೊಂಡಾಗ ಅನುಮಾನಾಸ್ಪದಾಗಿ ಕಂಡರೆ ಅಂದನ್ನು ಪರಿಶೀಲನೆಗೆ ಒಳಪಡಿಸಿ ಬಳಸುವುದು ಉತ್ತಮ. ಔಷಧಿಯ ರೂಪದಲ್ಲಿ ಅಥವಾ ನಿಮಗೆ ಬಂದಿರುವ ಪ್ಯಾಕೇಜ್‌ನ ರೂಪ ಬದಲಾಗಿದ್ದರೆ ಇಲ್ಲವೆ ನಿಮಗೆ ಅನುಮಾನ ಮೂಡಿಸಿದ್ದರೆ ಮತ್ತೊಮ್ಮೆ ಪರಿಶೀಲನೆ ಮಾಡಿ ಉಪಯೋಗಿಸಿ. ಕೆಲವೊಮ್ಮೆ ನಕಲಿ ಔಷಧಿ ಕೈಸೇರುವ ಅಪಾಯ ಹೆಚ್ಚಾಗಿರಲಿದೆ.
ಹಾಗೆ ನೀವು ಔಷಧಿ ತರಿಸಿಕೊಂಡಾಗ ಅನುಮಾನಾಸ್ಪದಾಗಿ ಕಂಡರೆ ಅಂದನ್ನು ಪರಿಶೀಲನೆಗೆ ಒಳಪಡಿಸಿ ಬಳಸುವುದು ಉತ್ತಮ. ಔಷಧಿಯ ರೂಪದಲ್ಲಿ ಅಥವಾ ನಿಮಗೆ ಬಂದಿರುವ ಪ್ಯಾಕೇಜ್‌ನ ರೂಪ ಬದಲಾಗಿದ್ದರೆ ಇಲ್ಲವೆ ನಿಮಗೆ ಅನುಮಾನ ಮೂಡಿಸಿದ್ದರೆ ಮತ್ತೊಮ್ಮೆ ಪರಿಶೀಲನೆ ಮಾಡಿ ಉಪಯೋಗಿಸಿ. ಕೆಲವೊಮ್ಮೆ ನಕಲಿ ಔಷಧಿ ಕೈಸೇರುವ ಅಪಾಯ ಹೆಚ್ಚಾಗಿರಲಿದೆ.
ಹಾಗೆ ಯಾವ ವೆಬ್‌ಸೈಟ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಅಥವಾ ಸಹಾಯವಾಣಿ ಇಲ್ಲವೋ ಅಂತಹ ವೆಬ್‌ಸೈಟ್ ಮೂಲಕ ಔಷಧಿ ವ್ಯವಹಾರ ಮಾಡುವುದು ಅಪಾಯ ಹೆಚ್ಚಿಸಬಹುದು. ಹಾಗೆ ಅತೀ ಹೆಚ್ಚು ರಿಯಾಯಿತಿ ನೀಡುವ ವೆಬ್‌ಸೈಟ್‌ಗಳನ್ನು ಕೂಡ ಸುಲಭವಾಗಿ ನಂಬಲಾಗುವುದಿಲ್ಲ. ಖರೀದಿ ಮಾಡುವ ಮೊದಲು ಔಷಧಾಲಯದ ಖ್ಯಾತಿಯನ್ನು ಸಂಶೋಧಿಸಿ. LegitScript ಅಥವಾ NABP (ನ್ಯಾಷನಲ್ ಅಸೋಸಿಯೇಷನ್ ಆಫ್ ಫಾರ್ಮಸಿ ಬೋರ್ಡ್ಸ್) ನಂತಹ ವಿಶ್ವಾಸಾರ್ಹ ಸಂಸ್ಥೆಗಳಿಂದ ವಿಮರ್ಶೆಗಳು, ಪ್ರಮಾಣೀಕರಣಗಳು ಮತ್ತು ಮಾನ್ಯತೆಗಾಗಿ ನೋಡುವುದು ಬಹಳ ಉತ್ತಮ. ಹಾಗೆ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿಂದಲೆ ಔಷಧಿ ಖರೀದಿ ಮತ್ತೂ ಉತ್ತಮ ಅಭ್ಯಾಸ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
