Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ತೂಕ ಇಳಿಕೆಗೆ ಈ ಡಿಟಾಕ್ಸ್ ಡ್ರಿಂಕ್ಸ್ ಪರಿಣಾಮಕಾರಿ: ರೋಗ ನಿರೋಧಕ ಶಕ್ತಿ ವೃದ್ಧಿಸುವುದು
ಡಿಟಾಕ್ಸ್ ಪಾನೀಯಾ ತುಂಬಾನೇ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಮಾತ್ರವಲ್ಲ ಮೈ ತೂಕವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ನಾವಿಲ್ಲಿ 7 ಡಿಟಾಕ್ಸ್ ಪಾನೀಯ ರೆಸಿಪಿ ನೀಡಿದ್ದೇವೆ, ತಿಂಗಳಿನಲ್ಲಿ ವಾರಕ್ಕೊಮ್ಮೆ ಅಥವಾ ಒಂದು ವಾರ ಬಿಟ್ಟು ಈ ಡಿಟಾಕ್ಸ್ ನೀರನ್ನು ದಿನಕ್ಕೆ ಒಂದರಂತೆ ಸೇವಿಸುತ್ತಿದ್ದರೆ ನೀವು ತುಂಬಾನೇ ಪ್ರಯೋಜನ ಪಡೆಯಬಹುದು. ಬನ್ನಿ ಈ ಡಿಟಾಕ್ಸ್ ಪಾನೀಯಗಳ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1. ನಿಂಬೆಯಿಂದ ಮಾಡಿದ ಡಿಟಾಕ್ಸ್ ನೀರು
ಬೇಕಾಗುವ ಸಾಮಗ್ರಿ
ನಿಂಬೆಹಣ್ಣಿನ ಅರ್ಧ ಪೀಸ್
10-12 ಪುದೀನಾ ಎಲೆ
1 ಲೀಟರ್ ನೀರು
ಸ್ವಲ್ಪ ಐಸ್ ಕ್ಯೂಬ್ಸ್
ರೆಸಿಪಿ ವಿಧಾನ:
ಒಂದು ಜಗ್‌ಗೆ ನೀರು ಹಾಕಿ, ಅದರಲ್ಲಿ ನಿಂಬೆ ತುಂಡು ಹಾಕಿ ಅದರಲ್ಲಿ ಪುದೀನಾ ಎಲೆ ಹಾಕಿ 2-3 ಗಂಟೆ ಇಟ್ಟು ಆ ನೀರನ್ನು ಕುಡಿಯಿರಿ, ಇದಕ್ಕೆ ಬೇಕಿದ್ದರೆ ಐಸ್ ಕ್ಯೂಬ್ಸ್ ಸೇರಿಸಿ ಕುಡಿಯಬಹುದು
2. ಸೌತೆ ಮತ್ತು ನಿಂಬೆಯ ಡಿಟಾಕ್ಸ್ ನೀರು
1/2 ಸೌತೆ
1 ನಿಂಬೆಹಣ್ಣು(ಅರ್ಧ ಹಾಕಿದರೆ ಸಾಕು)
1 ಲೀಟರ್ ನೀರು
ನೀವು ಒಂದು ಲೀಟರ್ ನೀರಿಗೆ ಸೌತೆಕಾಯಿ ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ನಿಂಬೆಹಣ್ಣು ಕತ್ತರಿಸಿ ಹಾಕಿ ಆ ನೀರನ್ನು ನಿಮಗೆ ಬಾಯಾರಿಕೆಯಾದಾಗ ಕುಡಿಯಿರಿ.
3. ಸೇಬು, ಚಕ್ಕೆ ಡಿಟಾಕ್ಸ್ ನೀರು
1 ಸೇಬು
1 ಚಕ್ಕೆ
1 ಲೀಟರ್ ನೀರು
ನೀವು ಒಂದು ಲೀಟರ್ ನೀರಿಗೆ ಸೇಬು ಕತ್ತರಿಸಿ ಹಾಕಿ, ಅದಕ್ಕೆ ಒಂದು ಚಕ್ಕೆ ತಂಡು ಹಾಕಿ 2 ಗಂಟೆ ಬಿಡಿ ನಂತರ ಈ ನೀರನ್ನು ಕುಡಿಯಿರಿ.
4. ಶುಂಠಿ ಮತ್ತು ನಿಂಬೆಹಣ್ಣಿನ ತುಂಡು
ಬೇಕಾಗುವ ಸಾಮಗ್ರಿ
1 ಚಿಕ್ಕ ತುಂಡು ಶುಂಠಿ
1 ನಿಂಬೆ ತುಂಡು
1 ಲೀಟರ್ ನೀರು
ಬೇಕಾಗುವ ಸಾಮಗ್ರಿ
ಒಂದು ಲೀಟರ್ ನೀರಿಗೆ ಸ್ವಲ್ಪ ಶುಂಠಿ, ನಿಂಬೆಹಣ್ಣು ಹಾಕಿ ಆ ನೀರನ್ನು ಎರಡು ಗಂಟೆ ಇಟ್ಟು ನಂತರ ಆ ನೀರನ್ನು ಕುಡಿಯಿರಿ.
5. ಕಲ್ಲಂಗಡಿ ಮತ್ತು ಪುದೀನಾ ಡಿಟಾಕ್ಸ್ ನೀರು
ಬೇಕಾಗುವ ಸಾಮಗ್ರಿ
1 ಲೋಟ ಕಲ್ಲಂಗಡಿ ಜ್ಯೂಸ್
10 ಪುದೀನಾ ಎಲೆ
ಈ ಜ್ಯೂಸ್ ಕುಡಿಯಿರಿ, ಇದು ಕೂಡ ಅತ್ಯುತ್ತಮವಾದ ಡಿಟಾಕ್ಸ್ ಡ್ರಿಂಕ್ ಆಗಿದೆ, ಆದರೆ ಜ್ಯೂಸ್ ಮಾಡುವಾಗ ಸಕ್ಕರೆ ಸೇರಿಸಬೇಡಿ.
6. ಪೈನಾಪಲ್ ಮತ್ತು ಶುಂಠಿಯ ಡಿಟಾಕ್ಸ್ ನೀರು
1/2 ಕಪ್ ಪೈನಾಪಲ್ ತುಂಡುಗಳು
1 ಇಂಚಿನಷ್ಟು ಶುಂಠಿ
1 ಲೀಟರ್ ನೀರು
ಮಾಡುವ ವಿಧಾನ
1 ಲೀಟರ್ ನೀರಿಗೆ ಪೈನಾಪಲ್ ಹಾಕಿ, ಶುಂಠಿ ಸೇರಿಸಿ ಸ್ವಲ್ಪ ಹೊತ್ತು ಇಟ್ಟು ಆ ನೀರನ್ನು ಕುಡಿಯಿರಿ.
7. ಲೋಳೆಸ ಮತ್ತು ನಿಂಬೆಹಣ್ಣು
1 ಚಮಚ ಲೋಳೆಸರ
1 ನಿಂಬೆಹಣ್ಣು
1 ಲೀಟರ್ ನೀರು
ಮಾಡುವ ವಿಧಾನ
ನೀವು ಒಂದು ಲೀಟರ್ ನೀರಿಗೆ ಲೋಳೆಸರ ಸೇರಿಸಿ, ಅದರಲ್ಲಿ ನಿಂಬೆ ತುಂಡು ತುರಿಸಿ 2 ಗಂಟೆಯ ಬಳಿಕ ಕುಡಿಯಿರಿ.
ಈ ಪಾನೀಯಗಳು ಬಾಡಿ ಡಿಟಾಕ್ಸ್ ಮಾಡಲು ತುಂಬಾನೇ ಸಹಕಾರಿ. ದೇಹದಲ್ಲಿ ಕಶ್ಮಲವನ್ನು ಹೊರ ಹಾಕುತ್ತದೆ ಹಾಗೂ ಈ ಪಾನೀಯಗಳು ತೂಕ ನಿಯಂಣತ್ರಣಕ್ಕೆ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
