ಬಹುತೇಕ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಿರುವ 6 ಪ್ರಮುಖ ಆರೋಗ್ಯ ಸಮಸ್ಯೆಗಳಿವು, ತಜ್ಞರ ಸಲಹೆಯೇನು?

ಬಹುತೇಕ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದೇ ಇಲ್ಲ, ಮಕ್ಕಳ ಆರೈಕೆ, ಗಂಡನ ಬೇಕು-ಬೇಡಗಳ ಕಡೆ ಗಮನಹರಿಸುತ್ತಾ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾರೆ, ಇದರಿಂದಾಗಿ ಎಷ್ಟೋ ಆರೋಗ್ಯ ಸಮಸ್ಯೆಗಳು ಪ್ರಾರಂಭದಲ್ಲಿ ಗಮನಿಸದೆ ರೋಗ ಲಕ್ಷಣಗಳು ಗಂಭೀರವಾದಾಗ ವೈದ್ಯರ ಬಳಿ ಬರುತ್ತಾರೆ.

ತುಂಬಾ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ, ಬಂಜೆತನ, ತೀವ್ರ ರಕ್ತಸ್ರಾವ ಈ ಬಗೆಯ ಸಮಸ್ಯ ಕಾಡುತ್ತಿದೆ. ಅತಿ ಹೆಚ್ಚು ಮಹಿಳೆಯರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳೇನು, ಮಹಿಳೆಯರ ಆರೋಗ್ಯ ಇದರ ಬಗ್ಗೆ ಡಾ. ನಿಶಾ ಬುಚಾಡೆ,ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು,ವಾಸವಿ ಆಸ್ಪತ್ರೆ, ಬೆಂಗಳೂರು ಇವರು ಕೆಲವೊಂದು ಉಪಯುಕ್ತ ಮಾಹಿತಿ ನಮ್ಮ ಓದುಗರಿಗೆ ನೀಡಿದ್ದು, ಇವರ ಈ ಸಲಹೆ ಈ ಆರೋಗ್ಯ ಸಮಸ್ಯೆ ಹೊಂದಿದ್ದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಮಹಿಳೆಯರು ಎಚ್ಚೆತ್ತುಕೊಂಡು ಆರೋಗ್ಯ ರಕ್ಷಣೆ ಮಾಡುವfಲಿ ಸಹಕಾರಿಯಾಗಿದೆ:

women s health

ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗಳೆಂದರೆ
ಬಿಳಿ ಹೋಗುವುದು: ಬಿಳುಪು ಹೋಗುವುದು ಇದು ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವ ಸಮಸ್ಯೆಯಾಗಿದೆ. ಬಿಳಿ ಬಟ್ಟೆ ಹೋಗುವುದು, ಹಳದಿ ಬಣ್ಣದಲ್ಲಿ ಬಿಳುಪು ಹೋಗುವುದು, ಹಸಿರು ಬಣ್ಣದಲ್ಲಿ ಬಿಳುಪು ಹೋಗುವುದು, ತುರಿಕೆ, ವಾಸನೆ ಈ ರೀತಿಯ ಸಮಸ್ಯೆ ಮಹಿಳೆಯರಿಗೆ ಲೈಂಗಿಕ ಸೋಂಕಿನಿಂದ ಬರಬಹುದು, ಈ ರೀತಿ ಕಂಡು ಬಂದಾಗ ವೈದ್ಯರನ್ನು ಬೇಟಿ ಮಾಡಿದರೆ ಅವರು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ, ಕೆಲವೊಮ್ಮೆ ಗಂಡ-ಹೆಂಡತಿ ಇಬ್ಬರೂ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಬಿಳುಪು ಹೋಗುವ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಒಳ್ಳೆಯದು.

  • ಬಿಳುಪು ಈ ರೀತಿ ಹೋಗುತ್ತಿದ್ದರೆ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿ ಮಾಡಬೇಕು
  • ಬಿಳುಪು ಹಳದಿ ಬಣ್ಣದಲ್ಲಿ ಹೋಗುತ್ತಿದ್ದರೆ
  • ಬಿಳುಪು ತುಂಬಾನೇ ದುರ್ವಾಸನೆ ಬೀರುತ್ತಿದ್ದರೆ
  • ಬಿಳುಪಿನಲ್ಲಿ ರಕ್ತ ಕಲೆಗಳು ಕಂಡು ಬಂದರೆ
  • ಕಾಟೇಜ್‌ ಚೀಸ್‌ ರೀತಿ ಬಿಳುಪು ಹೋಗುತ್ತಿದ್ದರೆ
  • ನೀವು ಮನೆಮದ್ದು ಮಾಡದೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ

ಎರಡನೇಯ ಸಮಸ್ಯೆ ಪಿಸಿಓಡಿ: ಈ ಸಮಸ್ಯೆ ಬಹುತೇಕ ಮಹಿಳೆಯರನ್ನು ಕಾಡುತ್ತಿದೆ, ಇದನ್ನು Polycystic Ovarian Disease ಎಂದು ಕರೆಯಲಾಗುವುದು, ಈ ರೀತಿಯಾದಾಗ ಅಂಡಾಶಯದಲ್ಲಿ ಅಂಡಾಣುಗಳ ಉತ್ಪತ್ತಿ ಸರಿಯಾಗಿ ಆಗಲ್ಲ. ಇದರಿಂದ ಶರೀರದಲ್ಲಿ ಹಲವು ಬದಲಾವಣೆಯಾಗುವುದು, ಮುಖದಲ್ಲಿ, ಎದೆಯ ಭಾಗದಲ್ಲಿ ಕೂದಲು ಬರುವುದು, ಕುತ್ತಿಗೆ ಭಾಗ ಕಪ್ಪಾಗುವುದು, ಬಂಜೆತನ ಈ ಬಗೆಯ ಸಮಸ್ಯೆ ಉಂಟಾಗುವುದು. ಪಿಸಿಒಡಿ ಸಮಸ್ಯೆ ಇರುವವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿದರೆ ಅವರು ಸೂಕ್ತ ಡಯಟ್‌ ಹಾಗೂ ವ್ಯಾಯಾಮದ ಬಗ್ಗೆ ತಿಳಿಸಿಕೊಡುತ್ತಾರೆ ಹಾಗೂ ಔಷಧಿಗಳನ್ನು ಸೂಚಿಸುತ್ತಾರೆ. ಈ ಪಿಸಿಒಡಿ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂದು ಸಂಪೂರ್ಣವಾಗಿ ಮಾರ್ಗದರ್ಶನ ನೀಡುತ್ತಾರೆ.

ಹಾಗಾಗಿ ಮಕ್ಕಳಾಗುತ್ತಿಲ್ಲ, ಅನಿಯಮಿತ ಮುಟ್ಟಿನ ಸಮಸ್ಯೆ ಇದೆ ಎಂದಾಗ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾದರೆ ಅವರು ನಿಮಗೆ ಆರೋಗ್ಯ ಮರಳಿ ಪಡೆಯಲು ಸಹಾಯ ಮಾಡುತ್ತಾರೆ. ಅಲ್ಲದೆ ಜೀವನಶೈಲಿ ಮೂಲಕ ಪಿಸಿಒಡಿ ಸಮಸ್ಯೆ ನಿಯಂತ್ರಿಸಿದರೆ ಗರ್ಭಧಾರಣೆಯಾಗಲು ಇದ್ದ ತೊಡಕುಗಳು ದೂರಾಗುವುದು.

ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಮೂರನೇಯ ಸಮಸ್ಯೆಯೆಂದರೆ ಫೈಬ್ರಾಯ್ಡ್ಸ್‌
ಇವುಗಳ ಹೆಚ್ಚಿನವರಲ್ಲಿ ಕ್ಯಾನ್ಸರ್ ಗಡ್ಡೆಗಳು ಆಗಿರುವುದಿಲ್ಲ, ಆದರೆ ಆ ಗಡ್ಡೆಗಳು ಬೆಳೆಯುತ್ತವೆ, ಇದರಿಂದ ಮುಟ್ಟಿನ ಸಮಸ್ಯೆ ಉಂಟಾಗುವುದು, ಅಲ್ಲದೆ ಮೂತ್ರದ ಸಮಸ್ಯೆ, ಮಲವಿಸರ್ಜನೆಯ ಸಮಸ್ಯೆ ಉಂಟಾಗುವುದು. ಈ ಗಡ್ಡೆಗಳು ಬೆಳೆಯುವುದರಿಂದ ಅಧಿಕ ರಕ್ತಸ್ರಾವವಾಗಬಹುದು, ಗರ್ಭಕೋಶದ ಮೇಲೆ ಒತ್ತಡ ಹಾಕಿ ಗರ್ಭಧಾರಣೆಗೆ ತೊಂದರೆಯನ್ನುಂಟು ಮಾಡುವುದು. ನೀವು ತಜ್ಞರನ್ನು ಸಂಪರ್ಕಿಸಿದಾಗ ಅವರು ಗಡ್ಡೆಯ ಗಾತ್ರ ಪರಿಶೀಲಿಸಿ ಸೂಕ್ತ ಚಿಕಿತ್ಸ ನೀಡುತ್ತಾರೆ.

ಫೈಬ್ರಾಯ್ಡ್ ಲಕ್ಷಣಗಳು

  • ಅತ್ಯಧಿಕ ರಕ್ತಸ್ರಾವ ಅಥವಾ ಮುಟ್ಟಾದರೆ ತುಂಬಾ ದಿನಗಳವರೆಗೆ ರಕ್ತಸ್ರಾವ
  • ತಿಂಗಳಿನಲ್ಲಿ ಎರಡು ಬಾರಿ ರಕ್ತಸ್ರಾವ ಉಂಟಾಗುವುದು
  • ಕಿಬ್ಬೊಟ್ಟೆ ತುಂಬಿದ ಅನುಭವ
  • ಪೆಲ್ವಿಕ್ ಭಾಗದಲ್ಲಿ ನೀವು
  • ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆನಿಸುವುದು
  • ಮಲಬದ್ಧತೆ
  • ಲೈಂಗಿಕ ಕ್ರಿಯೆ ವೇಳೆ ನೋವು
  • ರಕ್ತಹೀನತೆ
  • ಸಂತಾನೋತ್ಪತ್ತಿಗೆ ತೊಂದರೆಯಾಗುವುದು

4. ಅಡಿನೋಮಯೋಸಿಸ್
ಇದು ಗರ್ಭಾಶಯದಲ್ಲಿ ಇರಬಹುದು ಅಥವಾ ಅಂಡಾಶಯದಲ್ಲಿರಬಹುದು, ಇಲ್ಲಾ ಗಡ್ಡೆ ರೀತಿಯಾಗಬಹುದು, ಈ ರೀತಿಯಾದಾಗ ಮುಟ್ಟಿನ ಸಮಯದಲ್ಲಿ ತುಂಬಾನೇ ನೋವುಂಟು ಮಾಡುತ್ತದೆ, ರಕ್ತಸ್ರಾವ ಅಧಿಕವಿರುತ್ತದೆ. ಅಡಿನೋಮಯೋಸಿಸ್‌ ಸಮಸ್ಯೆಯಾದರೆ ಸಾಮಾನ್ಯವಾಗಿ ಗರ್ಭಕೋಶ ತೆಗೆಯಲಾಗುವುದು.

  • ಅತ್ಯಧಿಕ ರಕ್ತಸ್ರಾವ
  • ತೀವ್ರವಾದ ಹೊಟ್ಟೆನೋವು
  • ಕಿಬ್ಬೊಟ್ಟೆಯ ಭಾಗದಲ್ಲಿ ನೋವು
  • ಲೈಂಗಿಕ ಕ್ರಿಯೆ ವೇಳೆ ತುಂಬಾನೇ ನೋವುಂಟಾಗುವುದು

5. ಅಬ್‌ನಾರ್ಮಲ್ ಯೂಟ್ರೈನ್ ಬ್ಲೀಡಿಂಗ್
ಹಾರ್ಮೋನ್‌ಗಳ ಅಸಮತೋಲನದಿಂದ ಈ ಸಮಸ್ಯೆ ಉಂಟಾಗುವುದು, ಈ ರೀತಿಯಾದಾಗ ಗರ್ಭಕೋಶದ ಪದರ ದಪ್ಪಾಗಿ ಅಧಿಕ ರಕ್ತಸ್ರಾವ ಉಂಟಾಗುವುದು. ಈ ರೀತಿಯಾದಾಗ ಹಾರ್ಮೋನಲ್‌ ಟ್ರೀಟ್ಮೆಂಟ್‌ ನೀಡುವುದು, ಅದರಲ್ಲಿಯೂ ಕಡಿಮೆಯಾಗದಿದ್ದರೆ ಗರ್ಭಕೋಶ ತೆಗೆಯುವುದು ಈ ಮೂಲಕ ಪ್ರಾಣಕ್ಕೆ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು.

6. ಸ್ತನಗಳಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳು ಕಂಡು ಬರುವುದು
20-30 ವರ್ಷದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿಯಾದಾಗ ಇದು ಏಕೆ ಉಂಟಾಗಿದೆ ಎಂದು ಪರಿಶೀಲಿಸಿ ಚಿಕಿತ್ಸೆ ನೀಡಲಾಗುವುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

6 Common Reproductive Health Concerns For Women

Doctor explained what are the common health problem of women which affect fertility,
X
Desktop Bottom Promotion