Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ವಯಸ್ಕರಿಗೆ ಅಗತ್ಯವಾದ 5 ಲಸಿಕೆಗಳು! ಈ ಇಂಜೆಕ್ಷನ್ ಸಾಕು, ಡಾಕ್ಟರ್ ಬೇಡವೇ ಬೇಡ
ವಯಸ್ಕರು ಮಿಸ್ ಮಾಡದೇ ಹಾಕಿಸಬೇಕಾದ 5 ಲಸಿಕೆಗಳಿವು! 30 ವರ್ಷ ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಂಡರೆ ಡಾಕ್ಟರ್ ಹತ್ತಿರ ಹೋಗೋದೆ ಬೇಡ. ಹೌದು, ಲಸಿಕೆಗಳು (vaccine) ಮಕ್ಕಳಿಗೆ ಮಾತ್ರ ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಆದರೆ, ಆಧುನಿಕ ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಪ್ರಗತಿಯು ವಯಸ್ಕರ ಆರೋಗ್ಯಕ್ಕೂ ಲಸಿಕೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ವಯಸ್ಸಾದಂತೆ ಮಾನವನ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ, ರೋಗಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ವಯಸ್ಕರಿಗೆ ಕೆಲವು ಪ್ರಮುಖ ಲಸಿಕೆಗಳು (5 vaccinations for adults) ಅತ್ಯವಶ್ಯಕ.
ಗುರುಗ್ರಾಮ್‌ನ ದಿ ನ್ಯೂರೋಮೆಡ್ ಕ್ಲಿನಿಕ್‌ನ ಜನರಲ್ ಫಿಸೀಷಿಯನ್ ಹಾಗೂ ನ್ಯೂರಾಲಜಿಸ್ಟ್ (ನರರೋಗ ತಜ್ಞೆ) ಡಾ. ಪ್ರಿಯಾಂಕಾ ಸೆಹ್ರಾವತ್ (Dr. Priyanka Sehrawat) ಅವರು, ವಯಸ್ಕರ ಆರೋಗ್ಯಕ್ಕೆ ಐದು ಪ್ರಮುಖ ಲಸಿಕೆಗಳನ್ನು ಶಿಫಾರಸು ಮಾಡಿದ್ದಾರೆ. ಈ ಲಸಿಕೆಗಳು ಗಂಭೀರ ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ. ಅಷ್ಟೇ ಅಲ್ಲದೆ, ಆರೋಗ್ಯಕರ ಜೀವನ ನಡೆಸಲು ಸಹಕಾರಿ. ಈ ಲೇಖನದಲ್ಲಿ ಡಾ. ಪ್ರಿಯಾಂಕಾ ಅವರು ನೀಡಿರುವ ಸಲಹೆ ಪ್ರಕಾರ, ವಯಸ್ಕರಿಗೆ ಅತ್ಯಗತ್ಯವಾದ 5 ಲಸಿಕೆಗಳ ಬಗ್ಗೆ ತಿಳಿಸಲಾಗಿದೆ.

ವಯಸ್ಕರ ಆರೋಗ್ಯಕ್ಕೆ ಲಸಿಕೆಗಳು ಏಕೆ ಅವಶ್ಯಕ?
ಬಾಲ್ಯದಲ್ಲಿ ಪಡೆದ ಲಸಿಕೆಗಳಿಂದ ಲಭಿಸಿದ ರೋಗನಿರೋಧಕ ಶಕ್ತಿಯು ಕಾಲಾನಂತರದಲ್ಲಿ ಕಡಿಮೆಯಾಗಬಹುದು. ಕೆಲವು ರೋಗಗಳು ವಯಸ್ಸಾದಂತೆ ಹೆಚ್ಚು ಅಪಾಯಕಾರಿಯಾಗಬಹುದು. ವಯಸ್ಕರಲ್ಲಿ ಹೃದಯ, ಶ್ವಾಸಕೋಶ, ಶುಗರ್ ಅಥವಾ ಮಧುಮೇಹ ಸೇರಿದಂತೆ ದೀರ್ಘಕಾಲದ ಕಾಯಿಲೆಗಳು ಸಾಮಾನ್ಯ. ಈ ಸಂದರ್ಭಗಳಲ್ಲಿ ಲಸಿಕೆಗಳು ರೋಗಗಳ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಜೀವಾಪಾಯವನ್ನು ತಪ್ಪಿಸಲು ಸಹಕಾರಿ. ಡಾ. ಪ್ರಿಯಾಂಕಾ ಸೆಹ್ರಾವತ್ ಶಿಫಾರಸು ಮಾಡಿದ ಪ್ರಮುಖ ಲಸಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
1. ಗರ್ಭಕಂಠದ ಕ್ಯಾನ್ಸರ್ ಲಸಿಕೆ
ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಲಸಿಕೆ (HPV vaccine) ಹೆಚ್ಚು ಪರಿಣಾಮಕಾರಿ. ಹ್ಯೂಮನ್ ಪ್ಯಾಪಿಲ್ಲೋಮ ವೈರಸ್ (HPV) ಈ ಕ್ಯಾನ್ಸರ್‌ಗೆ ಕಾರಣ. ಡಾ. ಸೆಹ್ರಾವತ್ ಅವರ ಪ್ರಕಾರ, ಈ ಲಸಿಕೆ ಪಡೆಯಲು ಸೂಕ್ತ ವಯಸ್ಸು 9 ರಿಂದ 26 ವರ್ಷ. ಈ ವಯಸ್ಸಿನೊಳಗೆ ಈ ಲಸಿಕೆ ಹಾಕಿಸಿಕೊಂಡರೆ, ಅದರ ಪರಿಣಾಮಕಾರಿತ್ವ ಉತ್ತಮವಾಗಿರುತ್ತದೆ. 26 ರಿಂದ 45 ವರ್ಷದೊಳಗಿನವರು ಈ ಲಸಿಕೆ ಪಡೆಯುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
2. ಗರ್ಭಿಣಿಯರಿಗೆ ಲಸಿಕೆಗಳು - TT ಅಥವಾ DPT ಬೂಸ್ಟರ್
ಗರ್ಭಿಣಿಯರಿಗೆ ಟಿಟಿ (ಟೆಟನಸ್ ಟಾಕ್ಸಾಯ್ಡ್) ಅಥವಾ ಡಿಪಿಟಿ (ಡಿಫ್ತೀರಿಯಾ, ಪರ್ಟುಸಿಸ್ ಮತ್ತು ಟೆಟನಸ್) ಬೂಸ್ಟರ್ ಲಸಿಕೆಗಳನ್ನು ಪಡೆಯುವುದು ಅತ್ಯಂತ ಮುಖ್ಯ. ಇದು ತಾಯಿ ಮತ್ತು ಮಗು ಇಬ್ಬರಿಗೂ ರಕ್ಷಣೆ ನೀಡುತ್ತದೆ. ಇದು ನವಜಾತ ಶಿಶುಗಳಲ್ಲಿ ಧನುರ್ವಾಯು, ಗಂಟಲುಮಾರಿ, ಮತ್ತು ನಾಯಿಕೆಮ್ಮು ನಂತಹ ಅಪಾಯಕಾರಿ ರೋಗಗಳನ್ನು ತಡೆಯಲು ಸಹಕಾರಿ. ಈ ಲಸಿಕೆಯು ಮಕ್ಕಳ ಆರೋಗ್ಯಕ್ಕೆ ಪೂರ್ವಭಾವಿಯಾಗಿ ರಕ್ಷಣೆ ನೀಡುತ್ತದೆ.

3. ವಾರ್ಷಿಕ ಇನ್‌ಫ್ಲುಯೆಂಜಾ ಲಸಿಕೆ
ಪ್ರತಿ ವರ್ಷವೂ ಇನ್‌ಫ್ಲುಯೆಂಜಾ ವೈರಸ್ ತನ್ನ ಸ್ವರೂಪ ಬದಲಾಯಿಸುತ್ತೆ. ಅದಕ್ಕಾಗಿಯೇ, ಪ್ರತಿ ವರ್ಷವೂ ಈ ಲಸಿಕೆಯನ್ನು (Annual influenza vaccination) ಪಡೆಯುವುದು ಮುಖ್ಯ. ಈ ಲಸಿಕೆಯು ಆ ವರ್ಷ ಹೆಚ್ಚು ಪ್ರಚಲಿತದಲ್ಲಿರುವ ವೈರಸ್ ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ವಯಸ್ಸಾದವರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಈ ಲಸಿಕೆ ಅತ್ಯಗತ್ಯ.
4. ಶಿಂಗಲ್ಸ್ ಲಸಿಕೆ
ಶಿಂಗಲ್ಸ್ ನೋವು ಚಿಕನ್‌ಪಾಕ್ಸ್ ವೈರಸ್‌ನಿಂದ ಉಂಟಾಗುತ್ತದೆ. ಇದು ಚರ್ಮದ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ದೀರ್ಘಕಾಲದ ಯಕೃತ್ತು, ಶ್ವಾಸಕೋಶ ಅಥವಾ ಮೂತ್ರಪಿಂಡದ ಕಾಯಿಲೆಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವೈದ್ಯರ ಸಲಹೆಯ ಮೇರೆಗೆ ಈ ಲಸಿಕೆಯನ್ನು (Shingles Vaccination) ಪಡೆಯಬಹುದು.
5. ನ್ಯುಮೋಕೊಕಲ್ ಲಸಿಕೆ
ಈ ಲಸಿಕೆ (Pneumococcal vaccination) ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ರಕ್ತದಲ್ಲಿನ ಸೋಂಕಿನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ನ್ಯುಮೋಕೊಕಸ್ ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುತ್ತದೆ. ಇದನ್ನು ಪ್ರಮುಖವಾಗಿ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶಿಫಾರಸು ಮಾಡಲಾಗುತ್ತದೆ. ಆದರೆ, 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದೀರ್ಘಕಾಲದ ಯಕೃತ್ತು, ಶ್ವಾಸಕೋಶ, ಮೂತ್ರಪಿಂಡದ ಕಾಯಿಲೆಗಳು ಅಥವಾ ಸ್ವಯಂ ನಿರೋಧಕ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅವರು ಈ ಲಸಿಕೆ ಪಡೆಯುವುದು ಒಳ್ಳೆಯದು.

ಒಟ್ಟಾರೆಯಾಗಿ, ಲಸಿಕೆಗಳು ಕೇವಲ ಮಕ್ಕಳಿಗಲ್ಲ, ಬದಲಾಗಿ ವಯಸ್ಕರ ಆರೋಗ್ಯಕ್ಕೂ ಒಂದು ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ವಯಸ್ಕರ ಲಸಿಕೆಗಳ ಮಹತ್ವವನ್ನು ಕಡೆಗಣಿಸಲಾಗುತ್ತದೆ. ಆದರೆ, ತಜ್ಞರ ಪ್ರಕಾರ, ಹೆಚ್‌ಐವಿ, ಗರ್ಭಾವಸ್ಥೆಯ ಲಸಿಕೆಗಳು, ವಾರ್ಷಿಕ ಫ್ಲೂ ಶಾಟ್, ಶಿಂಗಲ್ಸ್ ಮತ್ತು ನ್ಯೂಮೊಕೋಕಲ್ ಲಸಿಕೆಗಳನ್ನು ಪಡೆಯುವುದರಿಂದ ಹಲವು ಗಂಭೀರ ಕಾಯಿಲೆ ತಡೆಗಟ್ಟಬಹುದು. ಹೀಗಾಗಿ, ಈ ಐದು ಲಸಿಕೆಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ನಿಮ್ಮ ಆರೋಗ್ಯಕ್ಕೆ ಸೂಕ್ತವಾದ ಲಸಿಕೆಗಳನ್ನು ಹಾಕಿಸಿಕೊಳ್ಳಿ. ನೆನಪಿರಲಿ.. ವಯಸ್ಸು, ಆರೋಗ್ಯ ಸ್ಥಿತಿ ಮತ್ತು ವೈದ್ಯರ ಸಲಹೆ ಪಡೆದು ಈ ಲಸಿಕೆ ಪಡೆಯುವುದು ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications