Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯಸ್ಸಾದ ಮಹಿಳೆಯರಿಗೆ ಹೋಲಿಸಿದರೆ 25-34 ವಯಸ್ಸಿನ ಮಹಿಳೆಯಲ್ಲಿ ಆರೋಗ್ಯ ಸಮಸ್ಯೆ ಹೆಚ್ಚು: ಪ್ರಾಕ್ಟೊ ವರದಿ
ವಯಸ್ಸಾದಂತೆ ಆರೋಗ್ಯ ಸಮಸ್ಯೆ ಕಾಡುವುದು ಸಹಜ, ಅದೇ ಮಹಿಳೆಯರಲ್ಲಿ ಹಿರಿಯ ಮಹಿಳೆಯರಿಗಿಂತ ಚಿಕ್ಕ ಪ್ರಾಯದವರಲ್ಲಿ ಅದರಲ್ಲಿಯೂ 25-34 ವಯಸ್ಸಿನವರಲ್ಲಿ ಸ್ತ್ರೀರೋಗ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಪ್ರಾಕ್ಟೊ ವರದಿ ಹೇಳಿದೆ. ಮಿಲೇನಿಯಲ್ ಮಹಿಳೆಯರು ಅಂದರೆ 40 ವರ್ಷದ ಕೆಳಗಿನ ಮಹಿಳೆಯರಲ್ಲಿ ಸ್ತ್ರೀರೋಗ ಸಂಬಂಧಿತ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸ್ತ್ರೀರೋಗ ತಜ್ಞರನ್ನು ಭೇಟಿಯಾಗುವವರಲ್ಲಿ ಚಿಕ್ಕ ಪ್ರಾಯದ ಮಹಿಳೆಯರ ಸಂಖ್ಯೆ ಶೇ, 60ರಷ್ಟಿದೆ. ಅಲ್ಲದೆ ಶೇ. 24ರಷ್ಟು ಮಹಿಳೆಯರು ಆರೋಗ್ಯ ಸಮಸ್ಯೆವಿದ್ದರೂ ಸ್ತ್ರೀ ರೋಗ ತಜ್ಞರನ್ನು ಭೇಟಿ ಮಾಡುತ್ತಿಲ್ಲ ಎಂದು ಪ್ರಾಕ್ಟೋ ವರದಿ ಹೇಳಿದೆ.

ಈ ಬಗೆಯ ಸಮಸ್ಯೆಯಿಂದ ಬರುವವರ ಸಂಖ್ಯೆ ಹೆಚ್ಚಿದೆ:
ಸಂತಾನ ಚಿಕಿತ್ಸೆ, ಗರ್ಭಪಾತ, ಸ್ತನಗಳ ನೋವು, PCOS/PCOD ಮತ್ತು ಅನಿಯಮಿತ ಋತುಚಕ್ರ ಈ ಬಗೆಯ ಸಮಸ್ಯೆಗಳು ಅತಿ ಹೆಚ್ಚಿನ ಮಹಿಳೆಯರನ್ನು ಕಾಡುತ್ತಿದ್ದು ಈ ಕಾರಣಗಳಿಗೆ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗುತ್ತಿದ್ದಾರೆ.
ಅಲ್ಲದೆ ಕೂದಲು ಉದುರುವ ಸಮಸ್ಯೆ, ಚರ್ಮದ ಅಲರ್ಜಿ, ಮೂಲವ್ಯಾಧಿ ಈ ಬಗೆಯ ಸಮಸ್ಯೆಗಳೂ ಮಹಿಳೆಯರನ್ನು ಕಾಡುತ್ತಿದೆ.
ಅಲ್ಲದೆ ಮಹಿಳೆಯರ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗಿದೆ:
ಮಹಿಳೆಯರು ಹಲವು ಕಾರಣಗಳಿಂದಾಗಿ ಅತಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮದುವೆಗೆ ಉಂಟಾಗುವ ಅಡೆತಡೆಗಳು, ಮದುವೆಯ ನಂತರ ಕಾಡುವ ಸಮಸ್ಯೆಗಳು ಕೂಡ ಅವಳ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ.
ಪ್ರಾಕ್ಟೋ ವರದಿ ಪ್ರಕಾರ ವೈದ್ಯರನ್ನು ಭಟಿಯಾಗಲು ಬರುವ ಮಹಿಳೆಯರಲ್ಲಿ
ಶೇ. 60ರಷ್ಟು 25-34 ವರ್ಷದೊಳಗಿನವರು
○ 35- 44 ವಯಸ್ಸಿನವರು 30%
○ 45+ ವಯಸ್ಸಿನವರು 5%
○ 18-24 ವಯಸ್ಸಿನವರು 3%
○ 18ಕ್ಕಿಂತ ಕೆಳಗಿನ ವಯಸ್ಸಿನವರು 2%
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ:
ಈಗ ಬಹುತೇಕ ಮಹಿಳೆಯರು ವಿದ್ಯಾವಂತರಾಗಿದ್ದಾರೆ, ಹೊರಗಡೆ ದುಡಿಯುತ್ತಿದ್ದಾರೆ, ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ಹೀಗಾಗಿ ಆರೋಗ್ಯದ ಕಡೆಗೆ ಕೂಡ ಗಮನಹರಿಸುತ್ತಿದ್ದಾರೆ.
ಚರ್ಮ ಚಿಕಿತ್ಸೆ, ಸಂತಾನ ಚಿಕಿತ್ಸೆ , ಮೂಳ ಚಿಕಿತ್ಸೆ ಅಂತ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ.
ಸ್ತ್ರೀ ರೋಗ ತಜ್ಞರಭೇಟಿ ಮಾಡುವವರಲ್ಲಿ
○ 33% - ದೆಹಲಿ NCR
○ 28% - ಬೆಂಗಳೂರು
○ 12% - ಮುಂಬೈ
○ 11%- ಹೈದೆರಾಬಾದ್
○ 10% - ಪುಣೆ
○ 6% - ಚೆನ್ನೈ
ಈ ನಗರಗಳಿಂದ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬರ್ತಾ ಇದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.
ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿರುವುದು ಒಳ್ಳೆಯ ವಿಷಯ, ಇದರಿಂದ ಅನೇಕ ಮಾರಕ ಕಾಯಿಲೆಯನ್ನು ಪ್ರಾರಂಭದಲ್ಲಿ ಗುರುತಿಸಲು ಸಾಧ್ಯವಾಗ್ತಾ ಇದೆ. ಹಿಂದೆ
ಸ್ತ್ರೀರೋಗ ಸಮಾಲೋಚನೆಗಳು ಎಂದರೆ ಗರ್ಭಾವಸ್ಥೆ ಅಥವಾ ಕೆಲವು ನಿರ್ದಿಷ್ಟ ತುರ್ತು ಪರಿಸ್ಥಿತಿಗಳಾಗಿತ್ತು. ಆದರೆ ಈಗ ಮಹಿಳೆಯರು ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆಗಳುಕಂಡು ಬಂದರೂ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಸೂಚನೆಯನ್ನು ಪಡೆಯುತ್ತಾರೆ.
ಬೊಜ್ಜು ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ
ಎಷ್ಟೋ ಮಹಿಳೆಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಬೊಜ್ಜು. ಬೊಜ್ಜು ಸಮಸ್ಯೆಯಿಂದಾಗಿ ಬಂಜೆತನ, ಮಧುಮೇಹ, ಪಿಸಿಒಡಿ, ಮುಟ್ಟಿನ ಸಮಸ್ಯೆ ಹೀಗೆ ಹಲವು ಸಮಸ್ಯೆ ಕಾಡುತ್ತಿದೆ. ಮಹಿಳೆಯರು ದೈಹಿಕ ಫಿಟ್ನೆಸ್ ಕಡೆ ಗಮನಹರಿಸಿದರೆ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಕೊನೆಯದಾಗಿ
ಈ ಪ್ರಾಕ್ಟೊ ಮಹಿಳಾ ಆರೋಗ್ಯ ತನಿಖೆಗಳು ಮಹಿಳೆಯರ ಆರೋಗ್ಯರೈಕೆ ಆಯ್ಕೆಗಳಲ್ಲಿ ಅತ್ಯಂತ ಗಮನಾರ್ಹ ಬದಲಾವಣೆಯನ್ನು ದೃಢಪಡಿಸುತ್ತದೆ. ಸ್ತ್ರೀರೋಗ ಸಮಾಲೋಚನೆಗಳಲ್ಲಿ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ ಕುರಿತು ಹೆಚ್ಚುತ್ತಿರುವ ಕಾಳಜಿಯು ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ, ಎರಡೂ ಕಡೆಗಿನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಪ್ರಾಕ್ಟೊ ಲಭ್ಯತೆ, ವಿಶ್ವಾಸಾರ್ಹ ಮಾಹಿತಿ ಮತ್ತು ಆರೋಗ್ಯಾರೈಕೆ ಸೇವೆಗಳನ್ನು ಒದಗಿಸುವ ಮೂಲಕ ಈ ಬೆಳೆಯುತ್ತಿರುವ ಬದಲಾವಣೆಗೆ ಬೆಂಬಲಿಸಲು ಬದ್ಧವಾಗಿದೆ. ಈ ಮೂಲಕ ಮಹಿಳೆಯರು ಆರೋಗ್ಯವನ್ನು ಸುಧಾರಿಸುತ್ತಾ ಮಾಹಿತಿಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾಕ್ಟೊ ಅನುವು ಮಾಡಿಕೊಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications