Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
World Ethnic Day 2023: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತೀಯ ಉಡುಪುಗಳು ವಿಭಿನ್ನ ಯಾಕೆ?
ಜೂನ್ 19ರಂದು ವಿಶ್ವ ಜನಾಂಗೀಯ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಭಾರತವು ಇಡೀ ವಿಶ್ವಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದೆ. ಬಹುಶಃ ಭಾರತದಲ್ಲಿದ್ದಷ್ಟು ವಿವಿಧ ಸಂಸ್ಕೃತಿಗಳು, ಆಚಾರ-ವಿಚಾರಗಳು, ವಿಭಿನ್ನ ಶೈಲಿಯ ಉಡುಗೆ ತೊಡುಗೆಗಳು ಬೇರೆಲ್ಲೂ ಇಲ್ಲ ಅನ್ನಿಸುತ್ತೆ.
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಜನ ವೆಸ್ಟರ್ನ್ ಸಂಸ್ಕೃತಿಗೆ ಮಾರು ಹೋಗಿದ್ದರೂ ಕೂಡ ಇನ್ನೂ ಕೂಡ ಅನೇಕರು ಆ ಹಳ್ಳಿಯ ಸೊಬಗನ್ನು ಬಿಟ್ಟು ಕೊಟ್ಟಿಲ್ಲ. ಅದೇ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿದ್ದಾರೆ. ವಿಶ್ವ ಜನಾಂಗೀಯ ದಿನದ ಹಿನ್ನಲೆಯಾಗಿ ಇವತ್ತು ನಾವು ಭಾರತದ ಬೇರೆ ಬೇರೆ ಭಾಗಗಳಲ್ಲಿ ಆಚರಿಸುವ ಆಚರಣೆಗಳು ಮತ್ತು ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿಯೋಣ.

ಉತ್ತರ-ದಕ್ಷಿಣ ಭಾರತದ ವೈವಿಧ್ಯಮಯ ಉಡುಪು!
ಸಾಮಾನ್ಯವಾಗಿ ಉತ್ತರ ಹಾಗೂ ದಕ್ಷಿಣ ಭಾರತದವರು ಎಂದು ಅವರ ಉಡುಪು ನೋಡಿ ನಾವು ಗುರುತಿಸಬಹುದು. ಉತ್ತರ ಭಾರತದಲ್ಲಿ ಮಹಿಳೆಯರು ಸಲ್ವಾರ್ ಕಮೀಸ್, ಲಂಗ, ದಾವಣಿ ಹಾಗೂ ತಲೆಗೊಂದು ದುಪ್ಪಟ್ಟ ಧರಿಸುತ್ತಾರೆ. ಇನ್ನೂ ದಕ್ಷಿಣ ಭಾರತೀಯರ ಸಾಂಸ್ಕೃತಿಕ ಉಡುಗೆ ಸೀರೆ. ಇಲ್ಲಿ ಹೆಚ್ಚಿನ ಮಹಿಳೆಯರೂ ಸೀರೆಯನ್ನೇ ಬಳಸುತ್ತಾರೆ. ಇನ್ನೂ ಉತ್ತರ ಭಾರತದಲ್ಲಿ ಪುರುಷರು ಜುಬ್ಬಾ ಪೈಜಾಮ ಧರಿಸಿದ್ರೆ, ದಕ್ಷಿಣ ಭಾರತದಲ್ಲಿ ಪಂಚೆಯನ್ನು ಧರಿಸುತ್ತಾರೆ.
ವಿಭಿನ್ನ ಕಸೂತಿಯನ್ನು ಹೊಂದಿದೆ
ಉತ್ತರ ಭಾರತೀಯರು ಸಾಮಾನ್ಯವಾಗಿ ರೇಷ್ಮೆ, ಹತ್ತಿ ಹಾಗೂ ಉತ್ತಮವಾದ ಕಸೂತಿಯನ್ನು ಹೊಂದಿರುವ ಬಟ್ಟೆಯನ್ನು ಬಳಕೆ ಮಾಡುತ್ತಾರೆ. ಇನ್ನೂ ಶುಭ ಸಮಾರಂಭಗಳಿಗೆ ಬಳಸುವ ಬಟ್ಟೆಗಳಿಗೆ ಐಷಾರಾಮಿ ಸ್ಪರ್ಶವನ್ನು ನೀಡಲಾಗುತ್ತದೆ. ಇನ್ನೂ ದಕ್ಷಿಣ ಭಾರತೀಯರು ಹೆಚ್ಚಾಗಿ ರೇಷ್ಮೇ ಸೀರೆಯನ್ನೇ ವಿಶೇಷ ಸಂದರ್ಭಗಳಲ್ಲಿ ಬಳಕೆ ಮಾಡುತ್ತಾರೆ. ಈ ಸೀರೆಗಳು ವಿಸ್ತಾರವಾದ ನೇಯ್ದ ವಿನ್ಯಾಸಗಳು ಮತ್ತು ಚಿನ್ನದ ದಾರದಿಂದ ಕೂಡ ಮಾಡಲ್ಪಟ್ಟಿರುತ್ತದೆ.
ಬಣ್ಣ ಮತ್ತು ವಿನ್ಯಾಸ
ಉತ್ತರ ಭಾರತೀಯರ ಉಡುಪುಗಳಲ್ಲಿ ಕಸೂತಿ ಹೆಚ್ಚಾಗಿರುತ್ತದೆ. ಹಾಗೂ ಒಂದೇ ಬಟ್ಟೆಯಲ್ಲಿ ವಿವಿಧ ಬಣ್ಣಗಳನ್ನು ನಾವು ಕಾಣಬಹುದು. ದಕ್ಷಿಣ ಭಾರತೀಯರ ಸೀರೆಗಳಲ್ಲಿ ಚಿನ್ನದ ಬಣ್ಣದ ಜರಿಯ ವಿನ್ಯಾಸ ಹೆಚ್ಚಾಗಿರುತ್ತದೆ. ಹಾಗೂ ಒಂದು ಸೀರೆ ಹೆಚ್ಚಾಗಿ ಒಂದೆರಡು ಬಣ್ಣವನ್ನು ಮಾತ್ರ ಹೊಂದಿರುತ್ತದೆ.
ಸ್ಥಳದ ಹೆಸರಿನಿಂದ ಪ್ರಖ್ಯಾತಿ ಪಡೆದ ಬಟ್ಟೆಗಳು
ಭಾರತದ ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯ ವಿಶೇಷ ಉಡುಪುಗಳು ಪ್ರಖ್ಯಾತಿಯನ್ನು ಪಡೆದಿದೆ. ಉದಾಹರಣೆಗೆ ಇಳಕಲ್ ಸೀರೆ, ಮೊಣಕಾಲ್ಮೂರು ಸೀರೆ, ಬನಾರಾಸಿ ಸೀರೆ, ಕಾಂಜೀವರಂ ಸೀರೆ ಹೀಗೆ ಪ್ರಸಿದ್ಧ ಬಟ್ಟೆಗಳು ಅದರ ಊರಿನ ಹೆಸರಿನೊಂದಿಗೆ ಸಂಬಂಧವನ್ನು ಬೆಸೆದುಕೊಂಡಿದೆ.
ವಿವಿಧತೆಯಲ್ಲಿ ಏಕತೆ ಎನ್ನುವ ಹಾಗೆ ಭಾರತದಲ್ಲಿ ವಿವಿಧ ಸಂಸ್ಕೃತಿ ಹಾಗೂ ಆಚರಣೆಗಳು ಇದ್ದರೂ ಕೂಡ ಭಾರತದ ತನ್ನ ಒಗ್ಗಟ್ಟನ್ನು ಕಾಪಾಡಿಕೊಂಡು ಬಂದಿದೆ.



Click it and Unblock the Notifications
