Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಒಂದು ತುಂಡು ಪೇಪರ್‌ನಿಂದ ಮೈ ಮುಚ್ಚಿಕೊಂಡ ವಿದ್ಯಾಬಾಲನ್..! ಫೋಟೋ ವೈರಲ್
ನಟನೆಗೆ ಮತ್ತೊಂದು ಹೆಸರು ವಿದ್ಯಾಬಾಲನ್ ಅಂದ್ರೆ ತಪ್ಪಾಗೋದಿಲ್ಲ. ವಿದ್ಯಾಬಾಲನ್ ಅವರ ನಟನಾ ಕೌಶಲ್ಯದ ಬಗ್ಗೆ ಮಾತನಾಡೋದೇ ಬೇಡ ಯಾವ ಜಾನರ್‌ನ ಸಿನಿಮಾವಾದ್ರು ಸೈ. ತುಂಬಾನೇ ಅದ್ಭುತ ನಟಿ ಈಕೆ. ದರ್ಟಿ ಪಿಕ್ಚರ್, ಶಂಕುತಲಾ ದೇವಿ ಹೀಗೆ ಈಕೆ ನಟಿಸಿದ ಎಲ್ಲಾ ಸಿನಿಮಾಗಳು ಸಿನಿ ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದವು.

ವಿದ್ಯಾಬಾಲನ್ ತಾವು ಅಭಿನಯಿಸಿದ ಎಲ್ಲಾ ಪಾತ್ರಕ್ಕೂ ಖಂಡಿತ ನ್ಯಾಯ ಒದಗಿಸುತ್ತಾರೆ. ಇದೀಗ ವಿದ್ಯಾಬಾಲನ್ ಮತ್ತೆ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅಷ್ಟಕ್ಕು ಯಾವ ಕಾರಣಕ್ಕೆ ವಿದ್ಯಾ ಅಷ್ಟೊಂದು ವೈರಲ್ ಆಗಿದ್ದಾರೆ ಅನ್ನೋದನ್ನ ಹೇಳ್ತೀವಿ.
ಇತ್ತೀಚಿಗೆ ವಿದ್ಯಾ ಬಾಲನ್ ಫೋಟೋಶೂಟ್ ಒಂದನ್ನ ಮಾಡಿಸಿಕೊಂಡಿದ್ರು. ಆ ಫೋಟೋ ಪಡ್ಡೆ ಹುಡುಗರ ಕಣ್ಣಿಗೆ ಕಿಚ್ಚು ಹತ್ತಿಸುವಂತಿತ್ತು. ಯಾಕಂದ್ರೆ ಈ ಫೋಟೋದಲ್ಲಿ ವಿದ್ಯಾಬಾಲನ್ ಬಟ್ಟೆ ಧರಿಸಿರಲಿಲ್ಲ. ಬದಲಾಗಿ ಇಂಗ್ಲೀಷ್ ಪೇಪರ್ ಒಂದರಿಂದ ತಮ್ಮ ದೇಹವನ್ನು ಮೊಣಕಾಲಿನವರೆಗೂ ಕವರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕೈಯಲ್ಲಿ ಒಂದು ಮಗ್ ಹಿಡ್ಕೊಂಡು ಕೂಲಿಂಗ್ ಗ್ಲಾಸ್ ಹಾಕೊಂಡು ಸ್ಟೈಲ್ ಆಗಿ ಫೋಸ್ ಕೊಟ್ಟಿದ್ದಾರೆ.
ಈ ಫೋಟೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂರತ್ನಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿದ್ಯಾಬಾಲನ್ ಫೋಟೋ ನೋಡಿ ಅಭಿಮಾನಿಗಳು ಒಂದ್ಸಾರಿ ದಂಗ್ ಆಗಿ ಹೋಗಿದ್ದಾರೆ. ಪೋಟೋಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸ್ತಿದ್ದಾರೆ. ಪಾಸಿಟಿವ್ ಕಾಮೆಂಟ್‌ಗಳಿಗಿಂತ ಇಲ್ಲಿ ನೆಗೆಟಿವ್ ಕಮೆಂಟ್‌ಗಳೇ ಹೆಚ್ಚಾಗಿ ಹರಿದಾಡ್ತಿದೆ. ಮೈ ತುಂಬಾ ಬಟ್ಟೆ ಹಾಕೊಳ್ಳಮ್ಮ ಅಂತೆಲ್ಲಾ ಜನ ಕಮೆಂಟ್ ಮಾಡ್ತಿದ್ದಾರೆ.
ಸೆಲೆಬ್ರಿಟಿಗಳ ಡ್ರೆಸ್ಸಿಂಗ್ ಸ್ಟೈಲ್‌ನ ಕೆಲವೊಂದು ಬಾರಿ ಜನ ತುಂಬಾನೇ ಇಷ್ಟಪಡ್ತಾರೆ. ಆದ್ರೀಗ ಸೆಲೆಬ್ರಿಟಿಗಳು ಸ್ಟೈಲ್ ಅನ್ನೋ ಹೆಸರಿನಲ್ಲಿ ಸಿಕ್ಕ ಸಿಕ್ಕ ಬಟ್ಟೆಗಳನ್ನೆಲ್ಲಾ ಮೈಗೇರಿಸಿಕೊಂಡು ಅವಾಂತರ ಸೃಷ್ಟಿಸಿಕೊಳ್ತಿದ್ದಾರೆ. ಇಂತಹ ಚಿತ್ರವಿಚಿತ್ರ ಅವತಾರಗಳನ್ನು ಕಂಡ ಜನರಿಗೆ ಖಂಡಿತ ಅತಿಶಯೋಕ್ತಿ ಅನ್ನಿಸದೇ ಇರೋದಿಲ್ಲ.



Click it and Unblock the Notifications
