Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಲು ಅತ್ಯಾಕರ್ಷಕ ಬ್ಲೌಸ್ ಡಿಸೈನ್‌ಗಳು
ಶ್ರಾವಣ ಮಾಸ ಬಂತು, ಶ್ರಾವಣ ಮಾಸ ಬಂತೆಂದರೆ ಹೆಣ್ಮಕ್ಕಳಿಗೆ ಸಂಭ್ರಮ, ಮನೆ ಗಂಡಸರಿಗೆ ಪಾಕೆಟ್ ಖಾಲಿಯಾಗುತ್ತೆ ಎಂಬ ಚಿಂತೆ. ಹೌದು ಶ್ರಾವಣ ಮಾಸ ಬಂತೆಂದರೆ ಹಬ್ಬಗಳು ಶುರು, ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ನಾಗರ ಪಂಚಮಿ ಬರುತ್ತಿದೆ, ಅದಾದ ಬಳಿಕ ವರಾಮಹಾಲಕ್ಷ್ಮಿ ಹೀಗೆ ಹಬ್ಬಗಳು ಸಾಲುಗಟ್ಟಿ ನಿಂತಿವೆ.
ಈ ಹಬ್ಬಗಳಲ್ಲಿ ಮಹಿಳೆಯರು ಸಾಂಪ್ರದಾಯಕವಾಗಿ ಅಲಂಕಾರ ಮಾಡಿಕೊಳ್ಳಲು ಬಯಸುವುದರಿಂದ ಸೀರೆಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ, ಸೀರೆ ಸರಿಸಾಟಿ ಬೇರೆ ಯಾವುದೇ ಲುಕ್ ಇಲ್ಲ, ಸೀರೆ ಉಟ್ಟು, ಅಲಂಕಾರ ಮಾಡಿಕೊಂಡರೆ ಮುಖದಲ್ಲಿ ಅದೇನೋ ಕಳೆ, ದಪ್ಪವಿರಲಿ, ಸಣ್ಣವಿರಲಿ, ಕಪ್ಪಗೆ ಇರಲಿ, ಬೆಳ್ಳಗೆ ಇರಲಿ ಸೀರೆ ಎಲ್ಲರಿಗೂ ಚೆನ್ನಾಗಿ ಒಪ್ಪುವುದರಿಂದ ಸೀರೆ ಎಲ್ಲಾ ಮಹಿಳೆಯರ ಎವರ್‌ಗ್ರೀನ್ ಫೇವರೆಟ್.

ಸೀರೆಗೆ ಕೊಡುವ ಇಂಪಾರ್ಟೆಂಟ್ ಬ್ಲೌಸ್ ಡಿಸೈನ್‌ಗೂ ಕೊಡ್ತಾರೆ, ಇಲ್ಲಿ ನಾವು ಸಾಮಾಜಿಕ ತಾಣದಲ್ಲಿ ಗಮನ ಸೆಳೆದ ಕೆಲವು ಟ್ರೆಂಡಿ ಬ್ಲೌಸ್ ಡಿಸೈನ್ ಬಗ್ಗೆ ಹೇಳಿದ್ದೇವೆ, ಸಾಂಪ್ರದಾಯಕವಾದ ಸೀರೆಗೆ ಒಪ್ಪುವ , ಸಕತ್ ಸ್ಟೈಲಿಷ್ ಆಗಿರುವ ಈ ಬ್ಲೌಸ್ ಡಿಸೈನ್‌ಗಳು ಗ್ರ್ಯಾಂಡ್ ಲುಕ್ ನೀಡುವುದರ ಜೊತೆಗೆ ನಿಮ್ಮ ದೇಹದ ಅಂದಕ್ಕೆ ಮೆರಗು ನೀಡುವಂತಿದೆ ನೋಡಿ:
ಟ್ರೈಯಾಂಗಲ್ ಡೀಪ್ ಬ್ಲೌಸ್ ಡಿಸೈನ್
ಈ ಬ್ಲೌಸ್ ಡಿಸೈನ್ ನೋಡಿ ತುಂಬಾನೇ ಸಿಂಪಲ್ ಆದರೆ ಅಷ್ಟೇ ಆಕರ್ಷಕವಾಗಿದೆ ಅಲ್ವಾ? ಈ ಬ್ಲೌಸ್ ಡಿಸೈನ್ ಮಾಡಿಸಲು ಸರಳವಾಗಿರುವುದರಿಂದ ಟೈಲರ್ ಹೆಚ್ಚೇನು ಹಣನೂ ಕೇಳಲ್ಲ ಸರಳವಾಗಿ, ಅತ್ಯಾಕರ್ಷಕವಾಗಿದೆ.
ಸಿಂಗಲ್ ಬ್ಯಾಕ್ ಹುಕ್ ಬ್ಲೌಸ್ ಡಿಸೈನ್
ಈ ಬ್ಲೌಸ್ ಡಿಸೈನ್ ನೋಡಿ ಎಷ್ಟೊಂದು ಚೆನ್ನಾಗಿದೆ. ಸಿಂಗಲ್ ಬಟನ್ ಹುಕ್‌ನ ಈ ಬ್ಲೌಸ್ ಡಿಸೈನ್ ಕಾಟನ್, ಸಿಲ್ಕ್, ಸಿಂಥೆಟಿಕ್ ಹೀಗೆ ಯಾವುದೇ ಬಗೆಯ ಸೀರೆಗಾದರೂ ತುಂಬಾನೇ ಚೆನ್ನಾಗಿ ಕಾಣುತ್ತದೆ.
'ಜಿಮುಕಿ ಬ್ಲೌಸ್ ಡಿಸೈನ್
ಈ ಬ್ಲೌಸ್ ಡಿಸೈನ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಥ್ರೆಡ್ಡಿಂಗ್ ವರ್ಕ್ ಜೊತೆ ಜಿಮುಕಿ ಡಿಸೈನ್ ಸೀರೆಗೆ ಮತ್ತಷ್ಟು ಗ್ರ್ಯಾಂಡ್ ಲುಕ್ ನೀಡುವುದು.
ಟ್ರೆಂಡಿ ಡಿಸೈನ್
ಈ ವಿನ್ಯಾಸ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ರೆಡ್, ಮೆರೂನ್, ಬ್ಲ್ಯಾಕ್, ಗ್ರೀನ್ ಈ ಬಗೆಯ ಗಾಢ ಬಣ್ಣದ ಸೀರೆಗೆ ಈ ಬಗೆಯ ವಿನ್ಯಾಸದ ಬ್ಲೌಸ್ ತುಂಬಾ ಚೆನ್ನಾಗಿರುತ್ತದೆ.
ಬಾರ್ಡರ್ ಡಿಸೈನ್ ವರ್ಕ್
ಸೀರೆಯ ಬಾರ್ಡರ್ ಅನ್ನೇ ಈ ಬಗೆಯ ಬ್ಲೌಸ್ ಡಿಸೈನ್‌ನಲ್ಲಿ ಬಳಸಬಹುದು. ಈ ಬ್ಲೌಸ್ ಡಿಸೈನ್ ತುಂಬಾನೇ ಸಿಂಪಲ್ ಆಗಿದ್ದರೂ ಗ್ರ್ಯಾಂಡ್ ಲುಕ್ ನೀಡುವುದು. ಯಾವುದೇ ಬಗೆಯ ಸೀರೆಗೆ ಈ ಬಗೆಯ ಡಿಸೈನ್ ಬ್ಲೌಸ್ ಬಳಸಬಹುದು.



Click it and Unblock the Notifications





