Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುವ ಬಿದಿರಿನ ಬಟ್ಟೆಯ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು
ಫ್ಯಾಷನ್‌ಲೋಕ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ, ಅದರಲ್ಲೂ ಬಟ್ಟೆಗಳ ಗುಣಮಟ್ಟ, ವಿನ್ಯಾಸ, ಆಯ್ಕೆ ಮತ್ತು ಅದರ ವಿವಿಧತೆಗಳು ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಇದೆಲ್ಲದರ ನಡುವೆ ಕೆಲವರು ವಿಭಿನ್ನವಾಗಿ ಪರಿಸರ ಸ್ನೇಹಿ ವಸ್ತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ, ಅಂತಹ ಬಟ್ಟೆಗಳನ್ನೇ ಧರಿಸಲು ಇಚ್ಚಿಸುತ್ತಾರೆ. ಇಷ್ಟು ದಿನ ಈ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗಿ ಹತ್ತಿ ಬಟ್ಟೆ (ಕಾಟನ್) ಮಾತ್ರ ಇತ್ತು, ಇದೀಗ ಬಿದಿರಿನ ಬಟ್ಟೆಗಳು ಕಾಟನ್ ಬಟ್ಟೆಯನ್ನು ಹಿಂದಿಟ್ಟಿದೆ.

ಬಿದಿರಿನಿಂದ ತಯಾರಿಸಲಾದ ಬಟ್ಟೆಗಳು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ವೈಜ್ಞಾನಿಕವಾಗಿ ಬಿದಿರಿನ ಬಟ್ಟೆಗಳು ಕಾಟನ್ ಬಟ್ಟೆಗಳಿಗಿಂತ ಅಪ್ಪಟ ಪರಿಸರ ಸ್ನೇಹಿ ಎನ್ನಬಹುದು. ಕಾಟನ್ ಬಟ್ಟೆಗಳನ್ನು ತಯಾರಿಸಲು ಸಾಕಷ್ಟು ನೀರು, ರಾಸಾಯನಿಕಗಳನ್ನು ಬಳಸಲಾಗುತ್ತದೆ, ಆದರೆ ಬಿದಿರಿನ ಬಟ್ಟೆಗಳು ಹಾಗಿಲ್ಲ. ಹಾಗಾದರೆ ಬಿದಿರಿನ ಬಟ್ಟೆಗಳು ಪರಿಸರ ಸ್ನೇಹಿ, ಯಾವ ರೀತಿ ನಮಗೆ ಧರಿಸಲು ಸಹಕಾರಿ ಮುಂದೆ ತಿಳಿಯೋಣ:

1. ತುಂಬಾ ಮೃದು
ಬಿದಿರಿನ ಬಟ್ಟೆಗಳು ಜವಳಿ ಉದ್ಯಮ ಕ್ಷೇತ್ರಕ್ಕೆ ಒಂದು ವರವಾಗಿದೆ ಎಂದರೆ ತಪ್ಪಾಗಲಾರದು, ಕಾರಣ ಇದು ಪರಿಸರ ಸ್ನೇಹಿಯಾಗಿ ತಯಾರಿಸಬಹುದಾದ ಬಟ್ಟೆಯಾಗಿದೆ. ಬಿದಿರಿನ ನಯವಾದ ಮೇಲ್ಮೈ ಹಾಗೂ ವೃತ್ತಾಕಾರವು ಬಟ್ಟೆಗೆ ಮೃದುತ್ವವನ್ನು ನೀಡುತ್ತದೆ ಹಾಗೂ ಧರಿಸಲು ಇಷ್ಟವೆನಿಸುವಂತಿರುತ್ತದೆ. ಈ ಬಟ್ಟೆಯಲ್ಲಿ ಯಾವುದೇ ಕಾರಣ ತ್ವಚೆಗೆ ಹಾನಿಯಾಗುವಂಥ ಒರಟುತನ ಇರುವುದೇ ಇಲ್ಲ, ಬದಲಾಗಿ ತ್ವಚೆಸ್ನೇಹಿಯಾಗಿರುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದ ಬಟ್ಟೆ ಇದಾಗಿದೆ.

2. ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ
ಬಿದಿರಿನ ಬಟ್ಟೆ ಧರಿಸುವುದರಿಂದ ಆಗುವ ಮತ್ತೊಂದು ಅತ್ಯುತ್ತಮ ಪ್ರಯೋಜನ ಎಂದರೆ ನಿಮ್ಮ ತ್ವಚೆಯನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಬಟ್ಟೆ ಇದಾಗಿದ್ದು, ಸೂರ್ಯನ ಕಿರಣಗಳಿಂದ ರಕ್ಷಣೆ ಜತೆಗೆ, ತ್ವಚೆಗೂ ಮೃದುತ್ವ ಎನಿಸುತ್ತದೆ.

3. ಇಸ್ತ್ರಿಗೆ ನೋ ಎನ್ನಿ!
ಬಿದಿರಿನ ಬಟ್ಟೆಗಳನ್ನು ಐರನ್ ಮಾಡುವ ಅವಶ್ಯಕತೆಯೇ ಇಲ್ಲ! ನಿಜವಾಗಿಯೂ ಈ ವಿಷಯ ಕೇಳಲು ತುಂಬಾ ಹಿತ ಎನಿಸುತ್ತಿದೆ. ನಿಜ, ಬಿದಿರಿನ ಬಟ್ಟೆಗಳ ಸ್ವಾಭಾವಿಕ ಗುಣದಂತೆ ಈ ಬಟ್ಟೆಗಳು ಸುಕ್ಕಾಗುವುದಿಲ್ಲ, ಮುದುಡುವುದಿಲ್ಲ. ನೀವು ಎಷ್ಟೇ ಒಗೆದರೂ ಈ ಬಟ್ಟೆ ತನ್ನ ನಿಜವಾದ ಸ್ವರೂಪದಲ್ಲೇ ಇರುತ್ತದೆ.

4. ದೀರ್ಘಕಾಲ ತಾಜಾ ಎನಿಸುವ ಬಟ್ಟೆ
ಬಿದಿರಿನಬಟ್ಟೆ ದೀರ್ಘ ಸಮಯ ಧರಿಸಿದರೂ ನಿಮಗೆ ತಾಜಾ ಅನುಭವ ನೀಡುತ್ತದೆ, ಕಾರಣ ಬಿದಿರಿನಲ್ಲಿರುವ ಅತೀ ಸಣ್ಣ ರಂಧ್ರಗಳು. ಇದೇ ಕಾರಣಕ್ಕೆ ಇದನ್ನು ಧರಿಸಿದ ನಮಗೂ ತಾಜಾ ಎನಿಸುತ್ತದೆ, ನಿಮ್ಮ ತ್ವಚೆಗೆ ಹೊರಗಿನ ಗಾಳಿ ಸೋಕುವಂತೆ ಮಾಡುತ್ತದೆ. ಅಲ್ಲದೆ ಬಟ್ಟೆಯೂ ತಾಜಾ ಆಗಿಯೇ ಕಾಣುತ್ತದೆ. ಇದರಿಂದ ನೀವು ಎಷ್ಟೇ ಕೆಲಸದ ಒತ್ತಡ, ದಿನಪೂರ್ತಿ ಬ್ಯುಸಿ ಇದ್ದರೂ ಬಟ್ಟೆಯ ತಾಜಾತನದಿಂದ ನೀವು ತಾಜಾ ಆಗಿಯೇ ಇರುತ್ತೀರಿ. ಇಷ್ಟೇ ಅಲ್ಲದೆ ಈ ಬಟ್ಟೆಗಳು ನೀರಿನಂಶವನ್ನು ಸೆಳೆಯುವ ಗುಣವನ್ನು ಸಹ ಹೊಂದಿದೆ.

5. ಬೆವರು ನಿವಾರಕ ಬಟ್ಟೆ
ದೇಹದ ದುರ್ಗಂದ ಎಲ್ಲರನ್ನು ಕಾಡುವ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಪರಿಹಾರ ಯಾವುದೇ ರಾಸಾಯನಿಕವಲ್ಲ, ಬದಲಾಗಿ ಬಿದಿರಿನ ಬಟ್ಟೆ. ಹೌದು, ನಿಮ್ಮ ದೇಹದ ಬೆವರನ್ನು ಸೆಳೆಯುವ ಬಿದಿರಿನ ಬಟ್ಟೆ ನಿಮ್ಮನ್ನು ಸದಾ ಫ್ರೆಶ್ ಆಗಿ ಇಡುತ್ತದೆ.

6. ಅಲರ್ಜಿಯಿಂದ ದೂರ
ನಿಮ್ಮ ತ್ವಚೆಗೆ ಕೆಲವು ಬಟ್ಟೆಗಳು ಆಗುವುದಿಲ್ಲ, ಅವುಗಳನ್ನು ಧರಿಸುವುದರಿಂದ ಅಲರ್ಜಿ ಎನ್ನುವುದಾದರೆ, ಅದರಲ್ಲೂ ಸೂಕ್ಷ್ಮ ಚರ್ಮ ಉಳ್ಳವರು ಒಮ್ಮೆ ಬಿದಿರಿನ ಬಟ್ಟೆ ಧರಿಸಿ ನೋಡಿ. ಕಾರಣ ಈ ಬಟ್ಟೆಗಳು ಚರ್ಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

7. ಶಾಖವನ್ನು ಉತ್ಪತಿ ಮಾಡುತ್ತೆ ಈ ಬಟ್ಟೆ
ಬಿದಿರಿನ ಬಟ್ಟೆಯ ಮತ್ತೊಂದು ಅತ್ಯುತ್ತಮ ಪ್ರಯೋಜನ ಎಂದರೆ ಇದು ಶಾಖವನ್ನು ಉತ್ಪತ್ತಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಬೆವರನ್ನು ಸೆಳೆದು ನಿಮಗೆ ತಾಜಾ ಅನುಭವ ನೀಡಿದರೆ, ಚಳಿಗಾಲದಲ್ಲಿ ಚಳಿಯಿಂದ ನಿಮ್ಮ ತ್ವಚೆಯನ್ನು ರಕ್ಷಿಸುವ ಗುಣವನ್ನು ಇದು ಹೊಂದಿದೆ.

8. ಪರಿಸರ ಪ್ರೇಮಿ
ಬಿದಿರಿನ ಬಟ್ಟೆ ಅಪ್ಪಟ ಪರಿಸರ ಪ್ರೇಮಿಯಾಗಿದೆ. ಇದು ನೀರಿನ ಕೊರತೆ, ಅರಣ್ಯ ನಾಶ, ಮಣ್ಣಿನ ಸವಕಳಿ, ಹಸಿರುಮನೆ ಪರಿಣಾಮಗಳಂಥ ಭೌಗೋಳಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಪರಿಸರದ ರಕ್ಷಣೆಗೆ, ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವುದಕ್ಕಾಗಿ ನಾವೆಲ್ಲಾ ಬಿದಿರಿನ ಬಟ್ಟೆಗಳ ಬಳಕೆ ಹೆಚ್ಚಿಸಬೇಕಿದೆ.



Click it and Unblock the Notifications
