Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್ಲರನ್ನೂ ನಿಬ್ಬೆರಗಾಗಿಸಿದ ಪರಿಣಿತಿ ಚೋಪ್ರಾ ಫ್ಯಾಷನ್ ಸೆನ್ಸ್
ಪರಿಣಿತಿ ಚೋಪ್ರಾ ಬಾಲಿವುಡ್‌ನಲ್ಲಿ ಹೆಚ್ಚು ಟೀಕೆಗೆ ಒಳಗಾದ ನಟಿಯಾಗಿದ್ದಾರೆ. ಫ್ಯಾಷನ್ ಮಾಡಲು ಹೋಗಿ ಮುಖಭಂಗಕ್ಕೆ ಒಳಗಾಗುವ ನಟಿ ಎಂಬ ಹೆಸರನ್ನು ಇವರು ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಖ್ಯಾತಿಯನ್ನು ಪರಿನೀತಿ ಗಳಿಸಿದ್ದರೂ ಕೂಡ ತಮ್ಮ ಫ್ಯಾಷನ್ ತಪ್ಪುಗಳಿಂದ ಆಕೆಗೆ ವಿವಾದಕ್ಕೆ ಟೀಕೆಗೆ ಒಳಗಾಗವುದೇ ಹೆಚ್ಚು. ಮೊದಲು ದಪ್ಪಗಿದ್ದ ಈ ನಟಿ ಬಹಳಷ್ಟು ಕಸರತ್ತನ್ನು ಮಾಡಿ ಸಣ್ಣಗಾಗಿದ್ದಾರೆ. ಆದರೆ ಫ್ಯಾಷನ್ ತಪ್ಪುಗಳನ್ನು ಮಾಡಿ ಎಡವುದರಲ್ಲೂ ಆಕೆ ನಿಸ್ಸೀಮರಾಗಿದ್ದಾರೆ.

ತಮ್ಮ ಫ್ಯಾಷನ್ ಪ್ರಿಯತೆಯಲ್ಲಿ ಪ್ರಯೋಗವನ್ನು ಮಾಡಿ ನೆಲಕ್ಕಚ್ಚುವ ಈ ನಟಿ ಅದಾಗ್ಯೂ ತಾನು ಸ್ಟೈಲಿಸ್ಟ್ ಆಗಿ ಕಾಣಬೇಕೆಂಬ ಬಯಕೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಇತ್ತೀಚೆಗೆ ಪರಿಣಿತಿ ತಮ್ಮ ಉಡುಗೆಯ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಆಕೆ ಕಪ್ಪು ಬಣ್ಣದ ದಿರಿಸು ಎಲ್ಲರನ್ನೂ ಹೌಹಾರುವಂತೆ ಮಾಡಿದೆ. ಆದರೆ ತನ್ನ ಈ ಉಡುಪನ್ನು ಆಕೆ ಸರಳವಾಗಿ ತೋರಿಸಿದ್ದು ಈ ರೀತಿಯ ಉಡುಗೆ ಧರಿಸಿ ಎಲ್ಲರೂ ನಡೆಯುವುದು ಕಷ್ಟವಾಗಿದ್ದರೂ ಪರಿಣಿತಿ ಈ ಸವಾಲನ್ನು ಗೆದ್ದಿದ್ದಾರೆ.
ಪರಿಣಿತಿ ಕಪ್ಪು ಬಣ್ಣದ ರೌಂಡ್ ಕುತ್ತಿಗೆಯ ಟಿಶರ್ಟ್ ಅನ್ನು ಧರಿಸಿದ್ದು ಅದು ಸ್ಲೀವ್‌ಗಳನ್ನು ಹೊಂದಿದೆ ಮತ್ತು ಐವಿಪಿ ಎಂದು ಬಿಳಿ ಬಣ್ಣದ ಪ್ರಿಂಟ್ ಅನ್ನು ಉಡುಗೆ ಹೊಂದಿದೆ. ಮ್ಯಾಚಿಂಗ್ ಸ್ಕರ್ಟ್‌ನಲ್ಲಿ ಆಕೆ ಆಳವಾದ ಸ್ಲಿಟ್ ಅನ್ನು ಹೊಂದಿದ್ದು ಸೆಕ್ಸಿಯಾಗಿ ಕಾಣುತ್ತಿದ್ದರು. ಆಕೆಯ ಕಪ್ಪು ಬಣ್ಣದ ಸ್ಕರ್ಟ್ ಕೂಡ ಐವಿಪಿ ಪಾರ್ಕ್ ಎಂದು ದಪ್ಪಕ್ಷರದಲ್ಲಿ ಬರೆದಿರುವುದನ್ನು ಹೊಂದಿದೆ.
ದೊಡ್ಡ ಬ್ಯಾಗ್ ಅನ್ನು ನಟಿ ಈ ಉಡುಗೆಯೊಂದಿಗೆ ತಂದಿದ್ದು, ಸಣ್ಣ ಪರ್ಸ್ ಬದಲಿಗೆ ಈ ದೊಡ್ಡ ಬ್ಯಾಗ್ ಆಕೆಯ ಸ್ಟೈಲ್ ಸೆನ್ಸ್ ಅನ್ನು ಹೆಚ್ಚಿಸಿತ್ತು. ಕಪ್ಪು ಮತ್ತು ಬಿಳಿ ಪ್ರಿಂಟ್‌ನ ಶೂವನ್ನು ಆಕೆ ಧರಿಸಿದ್ದರು. ಚಿನ್ನದ ಬಣ್ಣದ ಕಿವಿಯೋಲೆ ಮತ್ತು ಗುಲಾಬಿ ಬಣ್ಣದ ತುಟಿಯ ರಂಗು ಆಕೆಯನ್ನು ಇನ್ನಷ್ಟು ಸ್ಟೈಲಿಶ್ ಹಾಗೂ ಸೆಕ್ಸಿಯನ್ನಾಗಿ ಮಾಡಿದೆ.



Click it and Unblock the Notifications

