Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಟ್ರೆಂಡಿಗ್‌ನಲ್ಲಿರುವ ನೈಲ್ ಪಾಲಿಶ್ ಬಣ್ಣ ಹಾಗೂ ವಿನ್ಯಾಸಗಳಿವು
ಫ್ಯಾಷನ್ ವಿಚಾರಕ್ಕೆ ಬಂದಾಗ ನಾವು ಯಾವಾಗಲೂ ಟ್ರೆಂಡ್ ಅಲ್ಲಿ ಏನಿದೆ ಎಂಬುದನ್ನು ನೋಡಿ ನಮ್ಮ ನಮ್ಮ ಫ್ಯಾಷನ್ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುತ್ತೇವೆ. ಅದು ಒಂದು ಸಣ್ಣ ಹೇರ್ ಪಿನ್ ಇಂದ ಉಡುವ ಸೀರೆ, ತೊಡುವ ಬಟ್ಟೆ, ಹೇರ್ ಸ್ಟೈಲ್ ಎಲ್ಲವೂ ಟ್ರೆಂಡ್ ಅನ್ನು ಪಾಲಿಸುತ್ತೇವೆ.
ಇದೇ ರೀತಿ ಇದೀಗ ಟ್ರೆಂಡ್ ಆಗುತ್ತಿರುವುದು ನೈಲ್‌ಪಾಲಿಶ್. ಈಗಾಗಲೇ ಸಾಕಷ್ಟು ಭಿನ್ನ ಭಿನ್ನ ವಿನ್ಯಾಸಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದ ನೈಲ್ ಪಾಲಿಶ್ ಇದೀಗ ಮತ್ತೆ ಹಳೇ ಮಾದರಿಯ ಸಿಂಪಲ್ ವಿನ್ಯಾಸದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ.
ಆದರೆ ಇಲ್ಲಿ ಬಣ್ಣಗಳ ಆಯ್ಕೆಯೇ ವಿಶಿಷ್ಟ ಹಾಗೂ ಐದು ಬೆರಳಿಗೂ ಭಿನ್ನ ಭಿನ್ನ ಬಣ್ಣಗಳ ನೈಲ್ ಪಾಲಿಶ್ ಬಳಸುವ ಮೂಲಕ ವಿಭಿನ್ನ ಟ್ರೆಂಡ್ ಸೃಷ್ಟಿಸುತ್ತಿದೆ.

ಕಪ್ಪು ಹಾಗೂ ಲೈಟ್ ಕಲರ್ ಕಾಂಬಿನೇಷನ್
ಕಪ್ಪು ಹಾಗೂ ತ್ವಚೆಯ ಬಣ್ಣದ ಈ ನೈಲ್ ಪಾಲಿಶ್ ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಇಲ್ಲಿ ವಿಶೇಷ ಎಂದರೆ ಎರಡೂ ಬಣ್ಣಗಳಿದ್ದರೂ ಎರಡರ ಮಿಶ್ರಣ ಬೆರಳುಗಳಲ್ಲಿ ಹೈಲೈಟ್ ಆಗುತ್ತದೆ ಹಾಗೂ ನಿಮಗೆ ಇಷ್ಟವಾದ ವಿನ್ಯಾಸವನ್ನು ಇದೇ ರಚಿಸಿಕೊಳ್ಳಬಹುದು. ಇಲ್ಲಿ ಹೃದಯಾಕಾರ ವಿನ್ಯಾಸವೇ ಆಕರ್ಷಕ ಎನಿಸದೇ ಇರದು.
ಇದು ಈಗಾ ತುಂಬಾ ಟ್ರೆಂಡ್ ಆಗಿರೋ ನೈಲ್ ಪಾಲಿಶ್ ಬಣ್ಣವಾಗಿದೆ, ನೀವು ಒಮ್ಮೆ ಟ್ರೈ ಮಾಡಿ ನೋಡಿ.

ಲೈಟ್ ಪಿಂಕ್ ಮತ್ತು ಗ್ಲಿಟರ್
ಲೈಟ್ ಪಿಂಕ್ ಬಣ್ಣದ ನೈಲ್ ಪಾಲಿಶ್ ಹಚ್ಚಿನ ನಂತರ ಐದು ಬೆರಳುಗಳಲ್ಲಿ ಯಾವುದಾದರೂ ಎರಡು ಅಥವಾ ಮೂರು ಬೆರಳಿಗೆ ಮಾತ್ರ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಗ್ಲಿಟರ್ ಮೂಲಕ ಡಿಸೈನ್ ಮಾಡಿಕೊಂಡರೆ ಸಾಮಾನಕ್ಕಿಂತ ಹೆಚ್ಚು ವಿಭಿನ್ನ ಲುಕ್ ನಿಮ್ಮ ಬೆರುಗಳಿಗೆ ನೀಡುತ್ತದೆ. ನೀವು ಇಲ್ಲಿ ಯಾವುದೇ ಲೈಟ್ ಬಣ್ಣಗಳಿಗೂ ಸಹ ಗಾಢ ಬಣ್ಣದ ಗ್ಲಿಟರ್ ಬಳಸಿ ಈ ಶೈಲಿ ಪ್ರಯತ್ನಿಸಬಹುದು.

ಸೋಬರ್ ಕಲರ್
ನೀವು ಸಿಂಪಲ್ ಹಾಗೂ ಕ್ಲಾಸಿ ಲುಕ್ ಬಣ್ಣ ಇಷ್ಟಪಡುವವರಾದರೆ ತಿಳಿ ಬೂದು ಬಣ್ಣದ ನೈಲ್ ಪಾಲಿಶ್ ಖಂಡಿತ ಇಷ್ಟವಾಗುತ್ತದೆ. ಇದೇ ರೀತಿ ತಿಳಿ ಗ್ರೀನ್, ನೀಲಿ, ಹಳದಿ ಅಂಥಾ ಸೋಬರ್ ಬಣ್ಣಗಳು ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗ್ತಿದೆ.

ಪಿಂಕ್ ಮತ್ತು ಗೋಲ್ಡನ್
ಪಿಂಕ್ ಹಾಗೂ ಗೋಲ್ಡನ್ ಬಣ್ಣದ ಕಾಂಬಿನೇಷನ್ ನೀವು ಒಮ್ಮೆ ಟ್ರೈ ಮಾಡಲೇಬೇಕು. ಹಬ್ಬಗಳು, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಹೆಚ್ಚು ಆಪ್ತವಾಗಿದೆ ಹಾಗೂ ರಿಚ್ ಲುಕ್ ನೀಡುತ್ತದೆ. ಇಲ್ಲಿ ವಿಭಿನ್ನತೆ ಎಂದರೆ ಸಂಪೂರ್ಣ ಪಿಂಕ್ ಬಣ್ಣ ಅನ್ವಯಿಸಿದ ನಂತರ ಗೋಲ್ಡನ್ ಬಣ್ಣದಲ್ಲಿ ಕೇವಲ ಅಂಚನ್ನು ಮಾತ್ರ ರಚಿಸಿ. ಒಂದು ಬೆರಳಿಗೆ ಮಾತ್ರ ಗೋಲ್ಡನ್ ಬಣ್ಣ ಅನ್ವಯಿಸಿ. ಇದು ಬೆರಳುಗಳ ಅಂದ ಖಂಡಿತವಾಗಿ ದ್ವಿಗುಣಗೊಳಿಸುತ್ತದೆ.

ಗ್ಲಿಟರ್
ಗ್ಲಿಟರ್ ಯಾವಾಗಲೂ ಟ್ರೆಂಡಿಗ್ ಆದರೆ ಯಾವ ಬಣ್ಣದ್ದು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಪಾಚಿ ಗ್ರೀನ್, ನೇರಳೆ, ರೆಡ್ ಹಾಗೂ ಪಿಂಕ್ ಬಣ್ಣ ಗ್ಲಿಟರ್ ನೈಲ್ ಪಾಲಿಶ್ ಇದೀಗ ಹೆಚ್ಚು ಟ್ರೆಂಡಿಗ್ ಇದೆ.



Click it and Unblock the Notifications
