Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಲ್ಯಾಕ್ಮೆ ಫ್ಯಾಷನ್-ಹೃದಯಬಡಿತವನ್ನೇ ನಿಲ್ಲಿಸಿದ ಮನಿಷಾ ಕೊಯಿರಾಲ!
ಈ ವರ್ಷದ ಲ್ಯಾಕ್ಮೆ ಫ್ಯಾಷನ್ ವೀಕ್-ವಿಂಟರ್ ಫೆಸ್ಟಿವ್ 2016ರ ಸಂದರ್ಭದಲ್ಲಿ ಹಲವು ಅಚ್ಚರಿಯ ಘಟನೆಗಳು ನಡೆದಿವೆ. ಈ ಬಾರಿ ಪ್ರಮುಖ ವಿನ್ಯಾಸಕಾರ್ತಿ ಸೊಹಾಯ ಮಿಶ್ರಾರವರ ವಿನ್ಯಾಸಗಳನ್ನು ತೊಟ್ಟು ವೇದಿಕೆಯ ಸಂಭ್ರಮವನ್ನು ಹೆಚ್ಚಿಸಿದವರು ಬೇರಾರೂ ಅಲ್ಲ, ಅಪ್ರತಿಮ ನಟಿ, ನೇಪಾಳದ ದೊರೆಯಿಂದ ಗೋರ್ಖಾ ದಕ್ಷಿಣ ಬಹೂ ಎಂಬ ಬಿರುದನ್ನು ಪಡೆದ ಮನಿಷಾ ಕೊಯಿರಾಲ.

ಸುಮಾರು ನಾಲ್ಕು ವರ್ಷಗಳ ಹಿಂದೆ ಇವರು ಚಿತ್ರರಂಗದಿಂದ ಕೊಂಚ ಹಿಂದೆ ಸರಿದ ಬಳಿಕ ಇವರನ್ನು ಹೆಚ್ಚೂ ಕಡಿಮೆ ನಾವೆಲ್ಲರೂ ಮರೆತೇ ಬಿಟ್ಟಿದ್ದೆವು. ಆದರೆ ಲ್ಯಾಕ್ಮೆ ಫ್ಯಾಷನ್ ವೀಕ್ 2016ದ ಮೂರನೆಯ ದಿನ ಇವರು ಏಕಾಏಕಿ ಅಪ್ರತಿಮ ಉಡುಗೆಯನ್ನು ತೊಟ್ಟು ವೇದಿಕೆಯನ್ನು ಅಲಂಕರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಇಂದಿನ ವಿನ್ಯಾಸಗಳ ಸಂಗ್ರಹದ ಬಗ್ಗೆ ಮಾತನಾಡುವುದಾದರೆ ಚೋಳಾ ವಿನ್ಯಾಸ ಸಂಸ್ಥೆಯಿಂದ ವಿವಿಧ ಹತ್ತಿಯ ಉಡುಗೆಗಳ ಪ್ರದರ್ಶನ ನಡೆಯಿತು. ವಿಶೇಷವಾಗಿ ಹತ್ತಿನ ಮ್ಯಾಕ್ಸಿ ಉಡುಗೆಗಳ ಬಗ್ಗೆ ವಿಶಿಷ್ಟ ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು. ಕಸ ಗುಡಿಸುವಷ್ಟು ನೀಳವಾಗಿರುವ ಉಡುಗೆ ಮತ್ತು ವಿವಿಧ ಚಳಿಗಾಲದ ಕೋಟುಗಳನ್ನೂ ಪ್ರದರ್ಶಿಸಲಾಯಿತು.
ಈ ವಿನ್ಯಾಸಗಳಲ್ಲಿ ಗಾಢವರ್ಣಗಳೇ ಹೆಚ್ಚು ಪ್ರಮುಖವಾಗಿದ್ದವು. ಗಾಢಬೂದು, ಗಾಢಕೆಂಪು ಮತ್ತು ಗಾಢನೀಲಿ ಬಣ್ಣದ ಉಡುಗೆಗಳೇ ಹೆಚ್ಚು ಕಂಡುಬಂದವು. ಈ ವಿನ್ಯಾಸ ನಮಗೆಷ್ಟು ಇಷ್ಟವಾಯಿತೋ ಅಷ್ಟೇ ನಿಮಗೂ ಇಷ್ಟವಾಗಬಹುದು ಎಂದುಕೊಂಡಿದ್ದೇವೆ.
ಈ ಪ್ರದರ್ಶನದಲ್ಲಿ ಮುಂದಿನ ಪ್ರದರ್ಶನದಲ್ಲಿ ಕಂಡುಬರುವ ವಿನ್ಯಾಸಗಳ ಬಗ್ಗೆ ಅರಿಯಲು ಈ ಅಂಕಣವನ್ನು ಗಮನಿಸುತ್ತಿರಿ.



Click it and Unblock the Notifications



