Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ?
ಲ್ಯಾಕ್ಮೆ ಫ್ಯಾಷನ್ ವೀಕ್-ಬ್ಯಾನರ್ಜಿಯವರ ಕೈಚಳಕಕ್ಕೆ ಬಹುಪರಾಕ್
ಬೇಸಿಗೆಯಲ್ಲಿ ಬಂದಿರುವ ಲ್ಯಾಕ್ಮೆ ಫ್ಯಾಷನ್ ವೀಕ್ 2016-ಸಮ್ಮರ್ ರಿಸಾರ್ಟ್‌ನಲ್ಲಿ ತಮ್ಮ ಅಮೋಘ ವಸ್ತುಭಂಡಾರವನ್ನು ಪ್ರದರ್ಶಿಸಿದ ಪರೋಮಿತ ಬ್ಯಾನರ್ಜಿಯವರು ತಮ್ಮ ಮಹತ್ವಾಕಾಂಕ್ಷೆಯ 'ಸಾಲ್ಟ್ ಆಫ್ ಲೈಫ್' ವಸ್ತ್ರವಿನ್ಯಾಸವನ್ನು ಪ್ರದರ್ಶಿಸಿದರು. ಇದರಲ್ಲಿ ಬಿಸಿಲನ್ನು ಪ್ರತಿಫಲಿಸದ ಬಣ್ಣಗಳಾದ ಕಡುನೀಲಿ, ಎಲೆಹಸಿರು, ಸಾಸಿವೆಯ ಗಾಢಕಂದು ಮತ್ತು ಕಂದುಬಣ್ಣಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆದವು.
ಈ ಬಣ್ಣಗಳು ಮಣ್ಣಿನ ಬಣ್ಣವನ್ನು ಪ್ರತಿಬಿಂಬಿಸುವಂತಿದ್ದು ಬೇಸಿಗೆಯ ಪ್ರಖರ ಬೆಳಕಿನಲ್ಲಿ ಕಣ್ಣು ಕೋರೈಸದೇ ತಂಪಿನ ಅನುಭವ ನೀಡಿದವು. ಬೇಸಿಗೆಗೆ ಸಡಿಲ ಬಟ್ಟೆಗಳೇ ಸೂಕ್ತವಾಗಿದ್ದು ಪರೋಮಿತಾರಿಗಿಂತ ಈ ವಿಷಯವನ್ನು ಹೆಚ್ಚು ಅರಿತಿರುವವರು ಇರಲಾರರು. ಬೇಸಿಗೆಗೆ ಸೂಕ್ತವಾಗುವಂತೆ ಅವರ ಎಲ್ಲಾ ವಿನ್ಯಾಸಗಳು ಸಡಿಲವಾಗಿದ್ದು ಎಲ್ಲೂ ದೊಗಲೆಯಾಗದ ವಿನ್ಯಾಸ ಅಪ್ಪಟ ಭಾರತೀಯ ಶೈಲಿಯ ಪ್ರೇರಕವಾಗಿತ್ತು. ಸುಂದರ ಪೈಜಾಮಾ, ಕುರ್ತಾಗಳ ಜೊತೆಗೇ ಈ ಬಟ್ಟೆಗಳ ಮೇಲೆ ಮೂಡಿಸಲಾಗಿದ್ದ ಮುದ್ರಿತ ವಿನ್ಯಾಸಗಳು ಬಟ್ಟೆಗೆ ಹೆಚ್ಚಿನ ಕಳೆ ನೀಡಿತ್ತು.
ಇವರ ವಿನ್ಯಾಸಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲಾ ರೂಪದರ್ಶಿಯರು ತಮ್ಮ ತಲೆಗೂದಲನ್ನು ಬಿಡಿಯಾಗಿ ಬಿಟ್ಟಿರುವುದನ್ನು ಕಾಣಬಹುದು. ಏಕೆಂದರೆ ಜಡೆ ಅಥವಾ ಕೇಶವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ವಸ್ತ್ರಕ್ಕೆ ಪ್ರೇಕ್ಷಕರ ಗಮನ ಕಡಿಮೆಯಾಗುತ್ತದೆ ಎಂಬುದನ್ನು ಪರೋಮಿತ ಬ್ಯಾನರ್ಜಿಯರು ಚೆನ್ನಾಗಿ ಅರಿತಿರುವುದು ಈ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬನ್ನಿ ಇವರ ಸುಂದರ ವಿನ್ಯಾಸಗಳಲ್ಲಿ ಪ್ರಮುಖವಾದವುಗಳನ್ನು ನೋಡೋಣ...

ಲಾಡಿಯಲ್ಲಿ ಕಟ್ಟಿದ ಕುರ್ತಾ
ಸಾಮಾನ್ಯವಾಗಿ ಕುರ್ತಾವನ್ನು ಪಟ್ಟಿಯಿಂದ ಅಥವಾ ಹುಕ್ಸ್ ಗಳಿಂದ ಬಂಧಿಸಿದರೆ ಸಾಸಿವೆ ಬಣ್ಣದ ಈ ಕುರ್ತಾವನ್ನು ತೆಳುವಾದ ಲಾಡಿಯನ್ನು ಬಳಸಿ ಬಂಧಿಸಿರುವುದು ಪರೋಮಿತಾರವರ ನೈಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಚೋಲಿಗಳನ್ನು ಮತ್ತೊಮ್ಮೆ ನೋಡಬೇಕೆನಿಸುತ್ತದೆ
ಕಣ್ಮರೆಯಾಗುತ್ತಿರುವ ಚೋಲಿಗಳನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಇವರ ಪ್ರಯತ್ನ ಎದ್ದು ಕಾಣುತ್ತಿದೆ. ಸಾಸಿವೆ ಬಣ್ಣದ ಹೊರ ಮತ್ತು ಗಾಢ ಕಂದು ಬಣ್ಣದ ಒಳಭಾಗ ಹೊರಮಡಿಚಿದ್ದು ವಿಶಿಷ್ಟ ಅನುಭವ ನೀಡುತ್ತಿದೆ.

ಬೇಸಿಗೆಗೆ ಹೊಸತನ ನೀಡುತ್ತಿದೆ
ಈ ರೂಪದರ್ಶಿ ಧರಿಸಿರುವ ಈ ದಿರಿಸು ರಾಜಸ್ಥಾನದ ಪಾರಂಪರಿಕ ಉಡುಗೆಯಂತೆ ಕಂಡರೂ ಮನಸೆಳೆಯುವುದು ಗಾಢ ಹಸಿರು ಪ್ರಿಂಟ್ ಗಳಿರುವ ಮೊಣಕಾಲಿನವರೆಗಿನ ಸ್ಕರ್ಟ್.

ಅರ್ಧ ಸೀರೆ ಸುಂದರಿ
ಸೇರೆಯನ್ನೇ ಮಡಚಿ ಅರ್ಧ ಮಾತ್ರ ಉಟ್ಟಂತೆ ಕಾಣುವ ಈ ಉಡುಗೆಯಲ್ಲಿ ಗಾಢಹಸಿರು ಪೂರ್ಣತೋಳಿನ ಚೋಲಿಗಿಂತಲೂ ಮನಸೆಳೆಯುವುದು ಚಿನ್ನದ ಬಣ್ಣದ ಜರಿಯ ಕುಸುರಿ.

ಓಂಬ್ರೆ ಸೀರೆ
ಈ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚಿನ ಗಮನ ಸೆಳೆದ ಸೀರೆ.

ಬೇಸಿಗೆಯಲ್ಲಿ ಕುತ್ತಿಗೆಗೆ ಮಫ್ಲರ್
ಚಳಿಗಾಲದಲ್ಲಿ ಮಫ್ಲರ್ ಸುತ್ತಿಕೊಂಡಂತೆ ತೆಳುವಾದ ಬಟ್ಟೆಯನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದರೂ ಬೇಸಿಗೆಯ ಸಡಿಲ ಬಟ್ಟೆ ವೀಕ್ಷಕರಿಗೆ ಹೆಚ್ಚಿನ ಅಚ್ಚರಿ ನೀಡಿತ್ತು.

ಪ್ರಜ್ವಲಿಸಿದ ನೀಲಿ ಜ್ವಾಲೆ
ಬೇಸಿಗೆಯ ಬಿಸಿಲು ಪ್ರತಿಫಲಿಸದ ನೀಲಿ ಬಣ್ಣಕ್ಕೆ ಕೊಂಚ ಚಿನ್ನದ ಲೇಪನ ನೀಡಿ ಇದರೊಂಗಿದೆ ಕೊಂಚ ಬಿಳಿ ಮತ್ತು ಕೇಸರಿ ಸೇರಿಸಿದರೆ ಹೇಗಾಗುತ್ತದೆ ಎಂಬ ಕಲ್ಪನೆ ಇಲ್ಲಿ ಸಾಕಾರವಾಗಿದೆ.

ನೀಲಿ ಮತ್ತು ಸಾಸಿವೆ ಬಣ್ಣದ ಸಂಕಲನ
ಎರಡು ಭಿನ್ನ ಬಣ್ಣಗಳ ಬಟ್ಟೆಗಳ ಸಂಕಲದ ಮೂಲಕ ಸಡಿಲ ಬಟ್ಟೆಯೂ ಆಕರ್ಷಕವಾಗಿದೆ ಎಂದು ಈ ವಸ್ತ್ರ ನಿರೂಪಿಸುತ್ತಿದೆ.



Click it and Unblock the Notifications











