Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವರ್ಣಮಯ ಲೋಕವನ್ನೇ ಸೃಷ್ಟಿಸಿದ, ಕಲರ್ ಕಲರ್ ಬೆಡಗಿಯರು!
ಲ್ಯಾಕ್ಮೆ ಫ್ಯಾಷನ್ ವೀಕ್ 2016 ನ ಮೂರನೇ ದಿನದಂದು ವಸ್ತ್ರ ವಿನ್ಯಾಸಗಳ ಅಪೂರ್ವ ಸಂಗ್ರಹವೇ ಕಣ್ಣು ಕೋರೈಸಿತು. ಭಾರತದ ಬೇಸಿಗೆಗೆ ಸರಿಹೊಂದುವ ವಸ್ತ್ರ ವಿನ್ಯಾಸಗಳು ಫ್ಯಾಷನ್ ದಿನದಂದು ನಾವು ಕಾಣಲಿದ್ದು ಇದೊಂದು ಅದ್ಭುತ ಲೋಕವನ್ನೇ ನಮ್ಮ ಮುಂದಿರಿಸಿತು. ಭಿನ್ನಭಿನ್ನ ಬಣ್ಣಗಳ ವಿವಿಧ ಮಾದರಿಯ ವಸ್ತ್ರಗಳು ಇಲ್ಲಿ ನಮಗೆ ಕಾಣಸಿಗುತ್ತದೆ. ಬಿಳಿ, ತಿಳಿ ಹಸಿರು, ತಿಳಿ ಕಂದು ಬಣ್ಣ ಹೀಗೆ ಬಣ್ಣಗಳ ವರ್ಣಮಯ ಲೋಕವೊಂದು ಅಲ್ಲಿ ತೆರೆದುಕೊಂಡಿತ್ತು.
ಸಮಾರಂಭಕ್ಕೆ ಆಗಮಿಸಿದ್ದ ಪ್ರೇಕ್ಷಕರ ಮುಖದಲ್ಲಿ ತೃಪ್ತಿಯ ಭಾವನೆ ಕಂಡುಬರುತ್ತಿದ್ದು, ಲ್ಯಾಕ್ಮೆ ಫ್ಯಾಷನ್ ಬೆಡಗಿಯರಿಗೆ ನೆರೆದಿದ್ದವರು ಮಾರುಹೋಗಿದ್ದು ಮಾತ್ರ ಸುಳ್ಳಲ್ಲ. ಫ್ಯಾಷನ್ ವೀಕ್ ನ ಮೂರನೇ ದಿನದಂದು ಬೆಡಗಿಯರು ಫ್ಯಾಷನ್ ಜಗತ್ತಿನ ವಿಸ್ಮಯಕ್ಕೆ ಸಾಕ್ಷಿಯಾದರು..! ವಿನ್ಯಾಸಗಾರರಾದ ಅಂತರ್ ಅಗ್ನಿ ಅವರ ವಿನ್ಯಾಸದ ದಿರಿಸುಗಳು ನಿಜಕ್ಕೂ ಅದ್ಭುತವಾಗಿದ್ದು ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನೇ ಪಡೆದುಕೊಂಡಿದೆ. ನೀಲಿ, ಬಿಳಿ ಮತ್ತು ಕಂದು ಬಣ್ಣಗಳಲ್ಲಿ ಅವರು ಮೋಡಿಯನ್ನೇ ಮಾಡಿದ್ದಾರೆ. ದಿರಿಸುಗಳ ಬಟ್ಟೆ ತುಂಬಾ ತಿಳಿ ಬಣ್ಣದ್ದಾಗಿದ್ದು ಬಳಸಲು ಯೋಗ್ಯವಾಗಿದೆ. ಹಾಗಿದ್ದರೆ ಈ ವಸ್ತ್ರ ಸಂಗ್ರಹದ ಇನ್ನಷ್ಟು ಝಲಕ್ ಅನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ತೋರಿಸುತ್ತಿದ್ದೇವೆ, ಮುಂದೆ ಓದಿ...

ಇಂಡಿಗೊ ಮೋಹಕತೆ
ಪುರುಷ ರೂಪದರ್ಶಿ ತೊಟ್ಟಿದ್ದ ಹಾಲಿನ ಬಣ್ಣದ ಬಿಳಿ ಸೂಟ್ ನಿಜಕ್ಕೂ ಮನಕ್ಕೊಪ್ಪುವಂತಿದ್ದು ವಾಹ್ ಎಂಬ ಉದ್ಗಾರ ನೋಡುಗರಿಂದ ಬಂದಿದ್ದಂತೂ ಸುಳ್ಳಲ್ಲ.

ಮಾಡರ್ನ್ ದಿರಿಸು
ಸಾಮಾನ್ಯ ಕುರ್ತಾಗಳಿಂದ ನಿಮಗೆ ಬೇಜಾರು ಬಂದಿದೆ ಎಂದಾದಲ್ಲಿ ಈ ಹೊಸ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಿ.

ರೇಷ್ಮೆ ಬಿಳಿ ದಿರಿಸು
ಕಣ್ಣಿಗೆ ಸೋಜಿಗವನ್ನುಂಟು ಮಾಡುವ ಈ ದಿರಿಸು ವಸ್ತ್ರ ವಿನ್ಯಾಸಕರ ಅದ್ಭುತ ಕಲೆಯನ್ನು ಹೊರಚೆಲ್ಲಿದೆ.

ಕಟ್ ಔಟ್ಸ್
ಕಂದು ಬಣ್ಣದ ಕುರ್ತಾವು ಮುಖ್ಯ ಕಟ್ ಔಟ್‌ಗಳನ್ನು ಹೊಂದಿದೆ. ಬೇಸಿಗೆಯನ್ನು ನಿಯಂತ್ರಿಸಲು ವಿನ್ಯಾಸಕ ಈ ಮಾದರಿಯನ್ನು ಅನುಸರಿಸಿದ್ದಾರೆ.

ಹಗುರ ಟ್ರೌಸರ್‌ಗಳು
ಬೇಸಿಗೆಗೆ ಈ ದಿರಿಸು ಹೇಳಿ ಮಾಡಿಸಿದ್ದಾಗಿದೆ. ಹಗುರವಾದ ಟ್ರೌಸರ್‌ಗಳು ಮತ್ತು ಜಾಕೆಟ್ ಇದಕ್ಕೆ ಸರಿಹೊಂದುವಂತಿದೆ.



Click it and Unblock the Notifications
