Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಐಸಿಡಬ್ಲ್ಯೂ 2016: ಫ್ಯಾಷನ್ ಲೋಕದಲ್ಲಿ ಗೌರವ್ ಗುಪ್ತಾರ ಕೈಚಳಕ
ಭಾರತದ ದಿರಿಸುಗಳ ಹಬ್ಬ (ಇಂಡಿಯನ್ ಕೌಚರ್ ವೀಕ್ 2016) ಆರಂಭವಾಗಿ ನವನವೀನ ಮಾದರಿಯ ದಿರಿಸುಗಳ ಪ್ರದರ್ಶನವನ್ನು ಫ್ಯಾಷನ್ ಪ್ರಿಯರಿಗೆ ಉಣಬಡಿಸುತ್ತಿದೆ. ಸೆಲೆಬ್ರಿಟಿಗಳು ತಮ್ಮ ಮೆಚ್ಚಿನ ಫ್ಯಾಷನ್ ವಿನ್ಯಾಸಕಾರರ ದಿರಿಸುಗಳನ್ನು ಧರಿಸಿ ರಾಂಪ್ನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಈ ಬಾರಿ ಗೌರವ್ ಗುಪ್ತಾ ತಮ್ಮ ವಿನ್ಯಾಸ ಪಡಿಸಿದ ದಿರಿಸುಗಳನ್ನು ಫ್ಯಾಷನ್ ಮೇಳದಲ್ಲಿ ಪ್ರಸ್ತುತಪಡಿಸಿದ್ದು ಫ್ಯಾಷನ್ ಪ್ರಿಯರ ಮನವನ್ನು ಇದು ಹೆಚ್ಚು ಆಕರ್ಷಿಸಿದೆ.
ಈ ಬಾರಿ ಗೌರವ್ ಸ್ವರೋಸ್ಕಿ ಕ್ರಿಸ್ಟಲ್ಗಳನ್ನು ತಮ್ಮ ವಿನ್ಯಾಸಗಳಲ್ಲಿ ಬಳಸಿಕೊಂಡಿದ್ದಾರೆ. ಹೊಳೆಯುವ ಈ ಮಣಿಗಳ ಸೌಂದರ್ಯ ದಿರಿಸುಗಳನ್ನು ಇನ್ನಷ್ಟು ನೂತನಗೊಳಿಸಿದೆ. ಆಫ್ ಶೋಲ್ಡರ್ ದಿರಿಸುಗಳ ಸಂಭ್ರಮ ನೆರೆದಿದ್ದವರ ನೋಟವನ್ನು ಆಕರ್ಷಿಸಿದೆ. ಬಾಲ್ ಗೌನ್ಸ್, ಸ್ಟ್ರಕ್ಚರ್ ಗೌನ್ಸ್, ಸಾರೀ ಗೌನ್ಸ್, ಸಾರೀ ಡ್ರೇಪ್ಸ್ ಮತ್ತು ಅಸಾಮಾನ್ಯ ಪೇಟ್ರನ್ ಸೀರೆಗಳನ್ನು ಇದು ಪಡೆದುಕೊಂಡಿದೆ. ಈ ಬಾರಿಯೂ ಇದು ಭಾರತೀಯ ದಿರಿಸುಗಳ ಸಂಭ್ರಮವನ್ನು ನಮ್ಮ ಕಣ್ಣೆದುರಿಗೆ ತರುವಲ್ಲಿ ಸಹಕಾರಿಯಾಗಿದೆ.
ಆಧುನಿಕ ಮದುವಣಗಿತ್ತಿಯರಿಗೆ ಹೋಲುವ ದಿರಿಸುಗಳನ್ನೇ ಗೌರವ್ ಈ ಬಾರಿ ಪ್ರದರ್ಶಿಸಿದ್ದು ಅವರ ಮನಸ್ಸನ್ನು ಆಕರ್ಷಿಸುವಂತಿದೆ. ಬನ್ನಿ ಇವರು ವಿನ್ಯಾಸ ಪಡಿಸಿರುವ ಇನ್ನಷ್ಟು ದಿರಿಸುಗಳ ನೋಟವನ್ನು ಕಣ್ತುಂಬಿಕೊಳ್ಳಿ.




Click it and Unblock the Notifications





