For Quick Alerts
ALLOW NOTIFICATIONS  
For Daily Alerts

IFFIಯಲ್ಲಿ ರಾಯಲ್ ಲುಕ್‌ನಲ್ಲಿ ಕಂಗೊಳಿಸಿದ ರಶ್ಮಿಕಾ

|

ಕರ್ನಾಟಕದ ಕ್ರಷ್‌ ಆಗಿರುವ ರಶ್ಮಿಕಾ ಮಂದಣ್ಣ ವಿಭಿನ್ನ ಔಟ್‌ಫಿಟ್‌ ಮೂಲಕ ಫ್ಯಾಷನ್‌ ಪ್ರಿಯರ ಗಮನ ಸೆಳೆಯುವಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ಇನ್‌ಸ್ಟಾಗ್ರಾಮ್ ನೋಡಿದರೆ ಅವರು ಡ್ರೆಸ್ಸಿಂಗ್‌ ಸ್ಟೈಲ್‌ ಒಂದಕ್ಕೊಂದು ಮಿಗಿಲು ಎಂಬಂತೆ ಆಕರ್ಷಕವಾಗಿದ್ದು ಫ್ಯಾಷನಬಲ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಡಾರ್ಕ್‌ ಗ್ರೇ ಕಲರ್‌ ಗೌನ್‌ನಲ್ಲಿ ಗಮನ ಸೆಳೆದರು. ಗ್ರ್ಯಾಂಡ್‌ ಗೌನ್‌ಗೆ ತೂಗುದೀಪದ ಶೈಲಿಯ ದೊಡ್ಡ ಕಿವಿಯೋಲೆ ಧರಿಸಿ, ಮೇಲೆ ಎತ್ತಿ ಜುಟ್ಟು ಹಾಕಿ, ಮಿನಿಮಮ್‌ ಮೇಕಪ್‌ ಹಾಕಿದ್ದ ರಶ್ಮಿಕಾ ರಾಯಲ್ ಲುಕ್‌ನಲ್ಲಿ ಕಂಗೊಳಿಸಿದರು.

ಕೈಗಳಲ್ಲಿ ವರ್ಕ್‌ ಇರುವ ಔಟ್‌ಫಿಟ್‌ಗೆ ಮ್ಯಾಚ್‌ ಆಗಿರುವ ಕಿವಿಯೋಲೆ ರಶ್ಮಿಕಾರ ಲುಕ್‌ಗೆ ಮತ್ತಷ್ಟು ಮೆರಗು ನೀಡುವಂತಿದೆ. ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮನೆಮಗಳಂತೆ ಕಾಣುವ ರಶ್ಮಿಕಾ ಮಂದಣ್ಣ ಗ್ಲಾಮರಸ್‌ ಲುಕ್‌ನಲ್ಲಿ ಅಷ್ಟೇ ಸೆಕ್ಸಿಯಾಗಿ ಕಾಣುತ್ತಾರೆ.

ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ರಶ್ಮಿಕಾ ಫುಲ್‌ ಸ್ಲೀವ್ ಹಾಗೂ ಮೈ ತುಂಬಾ ಮುಚ್ಚಿದ ಗೌನ್‌ ಧರಿಸಿದರೂ ಅದರ ಸೈಡ್‌ ಕಟ್ ನೆಕ್‌ ಡಿಸೈನ್ ಹಾಗೂ ಅದರ ಮೇಲಿರುವ ಪರ್ಲ್ ಅಂಡ್‌ ಸ್ಟೋನ್ ವರ್ಕ್ಸ್ ಗ್ಲಾಮರಸ್‌ ಟಚ್‌ ನೀಡಿ, ರಶ್ಮಿಕಾರಿಗೆ ರಾಯಲ್‌ ಲುಕ್‌ ನೀಡಿದೆ.

Read more about: fashion dressing
English summary

Rashmika mandanna outfit at IFFI50 2019

Rashmika mandanna draw the attention in IFFI50 2019 with royal look gown. She wore dark gray colour worked gown and hangings and shined with minimum make up.
X