Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮಿಸ್ ಮಾಡ್ದೆ ನೋಡಿ ಚಂದನ್ ನಿವೇದಿತಾ ಜೋಡಿಯ ಸ್ಟನ್ನಿಂಗ್ ಡ್ರೆ್ಸ್ಸಿಂಗ್ಸ್ ಲುಕ್ಸ್
ಸಾಮಾಜಿಕ ಜಾಲತಾಣದಲ್ಲಿ ಜೀವನದ ಪ್ರತಿಯೊಂದು ಅಮೂಲ್ಯ, ವಿಶಿಷ್ಟ ಹಾಗೂ ವಿಶೇಷ ಘಟನೆಗಳನ್ನು ಅಪ್‌ಡೇಟ್ ಮಾಡುವ ಈ ಜೋಡಿಗಳು ಇತರ ಜೋಡಿಗಳಿಗಿಂತ ತುಂಬಾನೆ ಭಿನ್ನರು ಎನ್ನಬಹುದು.
ತನ್ನ ಪತ್ನಿಗೆ ಪ್ರಪೋಸ್ ಮಾಡೋದರಿಂದ ಇಲ್ಲಿಯವರೆಗೆ ಸದಾ ಸರ್ಪ್ರೈಸ್ ಕೊಡುತ್ತಲೇ ಪತ್ನಿಯ ಜೀವನದ ಪ್ರತಿಯೊಂದು ಕ್ಷಣವನ್ನು ಖುಷಿಪಡಿಸುವ ಗಂಡ, ತನ್ನ ಮುದ್ದು ಮುದ್ದು ಮಾತುಗಳಿಂದಲೇ ಗಂಡನನ್ನು ಹಿಡಿತದಲ್ಲಿಟ್ಟುಕೊಂಡಿರುವ ಹೆಂಡತಿ ಸದಾ ಟ್ರೆಂಡಿಂಗ್‌ನಲ್ಲಿರುತ್ತಾರೆ. ಈ ಕ್ಯೂಟ್ ಕ್ಯೂಟ್ ಜೋಡಿ ಮತ್ತ್ಯಾರು ಅಲ್ಲ, ನಮ್ಮ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ.

ಇದೀಗ ಖಾಸಗೀ ವಾಹಿನಿಯ ರಿಯಾಲಿಟಿ ಷೋ ಒಂದರಲ್ಲಿ ದಂಪತಿಗಳಾಗಿ ಸ್ಪರ್ಧಿಸುತ್ತಿರುವ ಚಂದನ್ ಹಾಗೂ ನಿವೇದಿತಾ ಈ ಕಾರ್ಯಕ್ರಮದಲ್ಲಿ ಹಾಕಿರುವ ಎಲ್ಲಾ ಡ್ರೆಸ್‌ಗಳು ಎಂಥವರ ಕಣ್ಣು ಕುಕ್ಕುವಂತಿದೆ. ಈ ಮುದ್ದು ಜೋಡಿ ಕಪಲ್ ಡ್ರೆಸಿಂಗ್‌ನ ಸಣ್ಣ ಝಲಕ್ ಇಲ್ಲಿದೆ ನೋಡಿ:
ಚಂದನ್ ನೋಟಕ್ಕೆ ನಾಚಿ ನೀರಾದ ನಿವೇದಿತಾ
ಮರೂನ್ ಕಾಂಬಿನೇಷನ್‌ನಲ್ಲಿ ಮಿಂಚುತ್ತಿರುವ ಇಬ್ಬರೂ ಕ್ಯಾಮೆರಾಗೆ ಸಕತ್ ಪೋಸ್ ಕೊಟ್ಟಿದ್ದಾರೆ. ಚಂದನ್‌ನ ನೋಟಕ್ಕೆ ನಿವೇದಿತಾ ನಾಚಿ ನೀರಾಗುವಂಥ ಈ ಫೋಟೋದಲ್ಲಿ ಇಬ್ಬರ ಡ್ರೆಸ್ ಕಲರ್ ಸಹ ತುಂಬಾ ಚೆನ್ನಾಗಿ ಹೊಂದುತ್ತಿದೆ. ಅದರಲ್ಲೂ ನಿವೇದಿತಾ ಸ್ಯಾರಿ ಉಟ್ಟಿರುವ ಶೈಲಿ ಹಾಗೂ ಅದರ ಬ್ಲೌಸ್, ಮ್ಯಾಚಿಂಗ್ ಓಲೆ ತುಂಬಾನೆ ಡಿಫರಂಟ್ ಆಗಿದೆ.
ನೀ ಹೀಂಗ ನೋಡಬ್ಯಾಡ ನನ್ನ
ಎವರ್‌ಗ್ರೀನ್ ಜೋಡಿಯಾಗಿರುವ ಚಂದನ್ ಹಾಗೂ ನಿವೇದಿತಾ ಹಸಿರು ಬಣ್ಣದ ಕಾಂಬಿನೇಷನ್‌ನಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. ನೀ ಹೀಂಗ ನೋಡಬ್ಯಾಡ ನನ್ನ ಎನ್ನುವಂತಿರುವ ಈ ಪೋಸ್‌ನಲ್ಲಿ ಇಬ್ಬರ ಡ್ರೆಸ್ ಡಿಸೈನಿಂಗ್ ಸ್ಟೈಲ್‌ಗೆ ಒಂದು ಮೆಚ್ಚುಗೆ ಕೊಡಲೇಬೇಕು. ಹೇರ್‌ಸ್ಟೈಲ್‌ನಿಂದ ಚಪ್ಪಲಿವರೆಗೂ ಎಲ್ಲವೂ ಪರ್ಫೆಕ್ಟ್ ಅಲ್ಲವೇ?.
ಎಂದೂ ಬಿಡೆನು ಈ ಕೈಯನು
ನಿವೇದಿತಾಳ ಬ್ಯಾಕ್ ಲಾಂಗ್ ಗೌನ್ ಹಾಗೂ ಚಂದನ್ ಬ್ಲಾಕ್, ವೈಟ್ ಅಂಡ್ ಸಿಲ್ವರ್ ಕಾಂಬಿನೇಷನ್ ಅದಕ್ಕೆ ಹೊಂದುವ ನಿವೇದಿತಾ ಹೇರ್‌ಸ್ಟೈಲ್ ಎಲ್ಲವೂ ಉತ್ತಮವಾಗಿ ಹೊಂದಾಣಿಕೆಯಾಗಿದೆ. ಯಾವುದೇ ವಿನ್ಯಾಸದ ಡ್ರೆಸ್ಸಿಂಗ್ ಸ್ಟೈಲ್‌ಗೂ ಈ ಜೋಡಿ ತುಂಬಾ ಚೆನ್ನಾಗಿ ಒಪ್ಪುತ್ತದೆ. ಎಲ್ಲರ ನಡುವೆ ಈ ಪೋಸ್ ಡ್ರೆಸ್‌ಗೆ ಇನ್ನಷ್ಟು ಅಂದವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ.
ದೂರಾ ಇನ್ನೂ ದೂರ ಕರೆದುಕೊಂಡು ಹೋಗು ಮಾಯಗಾರ
ವೈಟ್ ಅಂಡ್ ವೈಟ್ ಕಾಂಬಿನೇಷನ್ ಸ್ಟನ್ನಿಂಗ್ ಆಗಿ ಕಾಣುತ್ತಿರುವ ಈ ಜೋಡಿಗೆ ಯಾರ ದೃಷ್ಟಿ ಆಗದಿರಲಿ ಎನ್ನಬೇಕು!. ಒಟ್ಟಾಗಿ ಕೈ ಕೈ ಹಿಡಿದು ಎಷ್ಟು ದೂರಾ ಬೇಕಾದರೂ ಜೊತೆಯಲ್ಲಿ ಸಾಗೋಣ ಎನ್ನುವಂತಿದೆ ಈ ಫೋಟೋ.
ಗೊಂಬೆ ಈ ವೈಯಾರದ ರಂಭೆ
ನಿವೇದಿತಾ ಗೌಡ ಅವರ ಅದ್ಭುತವಾದ ರೆಡ್ ಗೌನ್‌ಗೆ ಚಂದನ್ ರೆಡ್ ಸೂಟ್ ಸಖತ್ ಆಗಿದೆ. ಇಬ್ಬರೂ ರೆಡ್ ಅಂಡ್ ರೆಡ್ ಅಲ್ಲಿ ಹಾಟ್ ಜೋಡಿಯಾಗಿ ಮಿಂಚುತ್ತಿದ್ದಾರೆ. ನಿವೇದಿತಾ ಈ ಗೌನ್‌ನಲ್ಲಿ ಜೀವ ಇರುವ ವೈಯಾರದ ಗೊಂಬೆಯಂತೆ ಕಾಣುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆ ಅಲ್ಲ.
ಹೇಗಿದೆ ನಮ್ ಪೋಸು
ನಿವೇದಿತಾ ಅವರ ರೋಸ್ ಗೌನ್ ಮತ್ತು ಚಂದನ್ ಅವರ ಪ್ರಿಂಟೆಡ್ ಸೂಟ್ ಸೆಟ್ ಹಾಗೂ ರೆಡ್ ಶೂ ಇಬ್ಬರ ಲುಕ್‌ಗೆ ಇನ್ನಷ್ಟು ಮೆರುಗು ತಂದಿದೆ. ನಾನಂತು ಚಂದನ್ ಕೈ ಬಿಡಲ್ಲ ಅಂತಾ ನಿವೇದಿತಾ ಬಿಗಿಯಾಗಿ ಕೈಹಿಡಿದರೆ, ಚಂದನ್ ಹೇಗಿದೆ ನಮ್ ಪೋಸು ಅಂತ ಕ್ಯಾಮೆರಾಗೆ ಹೇಳ್ತಿದ್ದಾರೆ.



Click it and Unblock the Notifications
