Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಯ್ಯಂಗಾರಿ ಸ್ಯಾರಿ ಲುಕ್ನಲ್ಲಿ ಮಿಂಚಿದ ಧನುಶ್ರೀ
ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಧನುಶ್ರೀ ಇತ್ತೀಚೆಗೆ ಮಾಡಿಸಿರುವ ಫೋಟೋ ಶೂಟ್ ನೆಟ್ಟಿಗರ ಮನ ಗೆದ್ದಿದೆ. ಅಯ್ಯಂಗಾರಿ ಮದುಮಗಳ ಲುಕ್ನಲ್ಲಿ ಕಾಣಿಸಿಕೊಂಡಿರುವ ಧನುಶ್ರೀ ಈ ಲುಕ್ನಲ್ಲಿ ಸಕತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.

ಭಾರತೀಯ ನಾರಿಯ ಉಡುಗೆ ಸೀರೆಯಾದರೂ ಆ ಸೀರೆಯನ್ನು ಹಲವು ರೀತಿಯಲ್ಲಿ ಧರಿಸಲಾಗುವುದು. ಕನ್ನಡ ಸೀರೆ, ಕಚ್ಚೆ ಸೀರೆ, ಕೊಡವ ಸೀರೆ, ಗೌಡ ಸೀರೆ, ಅಯ್ಯಂಗಾರಿ ಸೀರೆ, ಕೇರಳ ಸೀರೆ ಹೀಗೆ ವಿವಿಧ ಕಡೆ ವಿಧ ಬಗೆಯಲ್ಲಿ ಸೀರೆ ಧರಿಸಲಾಗುವುದು.
ಧನುಶ್ರೀ ಅವರು ಧರಿಸಿರುವುದು ಪಕ್ಕಾ ಅಯ್ಯಂಗಾರಿ ಸ್ಟೈಲ್. ಅಯ್ಯಂಗಾರಿ ಸೀರೆಯನ್ನು ಎರಡು ರೀತಿಯಲ್ಲಿ ಧರಿಸುತ್ತಾರೆ. ಕೆಲವರು ಕಚ್ಚೆ ರೀತಿ, ನೆರಿಗೆ ರೀತಿ ಕೂಡ ಬಳಸಲಾಗುವುದು. ಅದರಲ್ಲಿ ಸೀರೆಯ ಸೆರಗನ್ನು ಮಾಮೂಲಿ ಸೀರೆಗೆ ಹಾಕುವಂತೆ ಹಾಕಿ ನಂತರ ಮುಂದೆ ತಂದು ಸಿಕ್ಕಿಸಲಾಗುವುದು. ಧನುಶ್ರೀ ಗೋಲ್ಡನ್, ಪಿಂಕ್ ಕಾಂಬಿನೇಷನ್ನಲ್ಲಿ ಮಿಂಚಿದ್ದಾರೆ. ಇನ್ನು ಹೇರ್ ಸ್ಟೈಲ್ ಕೂಡ ಒಂದು ಬದಿಗೆ ತುರುಬು ಕಟ್ಟಿ ಸಕತ್ ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ದಾರೆ. ನಿಮಗೆ ಏನು ಅನಿಸ್ತು ಈ ಲುಕ್ ಬಗ್ಗೆ?



Click it and Unblock the Notifications
