Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಲೇಜು ಕನ್ಯೆಯರಿಗೆ ಫ್ಯಾಷನ್ ಟಚ್ ನೀಡುವ ದಿರಿಸು
2016ರ ಹೊಸ ವರುಷಕ್ಕೆ ಕಾಲಿಟ್ಟಿದ್ದೇವೆ, ಎಲ್ಲೆಲ್ಲೂ ಹೊಸತನದ ರಂಗುಚೆಲ್ಲಿ ಬದುಕಿನ ಭರವಸೆಯ ಕಿರಣವನ್ನು ಉದಯಿಸಿದೆ. ಈ ವರ್ಷದಲ್ಲಿ ನೀವು ಕೈಗೊಳ್ಳಬೇಕಾಗಿರುವ ನಿರ್ಧಾರಗಳು, ಮಾಡಬೇಕಾಗಿರುವ ಕೆಲಸಗಳು, ಹಳೆಯ ಹೊಸ ನೆನಪುಗಳು ಹೀಗೆ ನಿಮ್ಮ ಹೊಸ ವರ್ಷದ ಆರಂಭ ಭರ್ಜರಿಯಾಗಿಯೇ ನಡೆದಿರಬಹುದು ಅಲ್ಲವೇ? ಕಚೇರಿಗೆ ಹೋಗುವವರು, ವ್ಯವಹಾರಸ್ಥರು, ಹೀಗೆ ಪ್ರತಿಯೊಬ್ಬ ವರ್ಗದವರಿಗೂ ಹೊಸ ವರ್ಷ ಹೊಸತನದ ಸವಿಯನ್ನು ಉಣ್ಣಿಸುತ್ತದೆ. ಅಂತೆಯೇ ಹೊಸ ಕಾಲೇಜಿನಲ್ಲಿ ಹೊಸ ವಾತಾವರಣದಲ್ಲಿ ಹೊಸ ಸ್ನೇಹಿತರನ್ನು ತಮ್ಮದಾಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಹೊಸ ವರ್ಷ ಫ್ಯಾಷನ್ ಲೋಕದ ಹೊಸತನವನ್ನು ಉಣ್ಣಿಸಲಿದೆ.

ನಿಮ್ಮ ಹೊಸವರ್ಷನ್ನು ಕಳೆಕಳೆಯಾಗಿ ಆರಂಭಿಸಬೇಕೆನ್ನುವ ಯೋಜನೆ ನಿಮ್ಮದಾಗಿಬಹುದು ಅಲ್ಲವೇ? ಕಾಲೇಜಿಗೆ ಹೋಗುವಾಗ ಎಲ್ಲರನ್ನೂ ಸೆಳೆಯುವಂತೆ ಆಕರ್ಷಕ ಮಾದರಿಯಲ್ಲಿ ದಿರಿಸು ಧರಿಸಿಕೊಳ್ಳಬೇಕೆನ್ನುವ ನಿಮ್ಮ ಇಂಗಿತ ನಮಗೆ ಅರ್ಥವಾಗುತ್ತದೆ. ಅದಕ್ಕೆಂದೇ ನಿಮ್ಮ ಫ್ಯಾಷನ್ ಪ್ರಿಯತೆಗೆ ಇಂಬು ಕೊಡುವ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ನಿಮ್ಮ ಕಾಲೇಜು ಜೀವನಕ್ಕೆ ಫ್ಯಾಷನ್ ಟಚ್ ನೀಡುವ ಸ್ಟೈಲಿಶ್ ದಿರಿಸುಗಳನ್ನು ನೀಡುತ್ತಿದ್ದು ಇಲ್ಲಿದೆ ಆ ಸಲಹೆಗಳು. ಇನ್ನು ಈ ದಿರಿಸುಗಳು ನಿಮ್ಮಲ್ಲಿಲ್ಲ ಎಂದಾದಲ್ಲಿ ಅವುಗಳನ್ನು ಖರೀದಿ ಕೂಡ ಮಾಡಬಹುದಾಗಿದೆ.
ಪೀಟರ್ ಪ್ಯಾನ್ ಕಾಲರ್ಸ್
ನೋಡಲು ಈ ದಿರಿಸು ಸರಳವಾಗಿದ್ದರೂ ಫ್ಯಾಷನ್ ಟ್ರೆಂಡ್ ಇದಾಗಿದೆ. ಶರ್ಟ್ನ ಮೇಲೂ ಇದನ್ನು ಧರಿಸಿ ನಿಮಗೆ ಹೊಸ ಫ್ಯಾಷನ್ ಟ್ರೆಂಡ್ ಅನ್ನು ಹುಟ್ಟುಹಾಕಬಹುದಾಗಿದೆ. ಸುಂದರ ದಿರಿಸಿಗೆ ಪೀಟರ್ ಪ್ಯಾನ್ ಕಾಲರ್ಸ್ ನಿಜಕ್ಕೂ ಉತ್ತಮ ಕಾಂಬಿನೇಷನ್ ಆಗಿದೆ. ಗ್ರೇ, ಹಳದಿ ಮತ್ತು ಕೆಂಪು ಬಣ್ಣಗಳಿಗೆ ಪೀಟರ್ ಪ್ಯಾನ್ ಕಾಲರ್ಸ್ ಹೇಳಿಮಾಡಿಸಿದ್ದಾಗಿದೆ.
ವೈಡ್ ಲೆಗ್ ಪ್ಯಾಂಟ್ಸ್
ದೊಗಲೆ ಪ್ಯಾಂಟ್ಗಳು ಈ ಕಾಲದ ಫ್ಯಾಷನ್ ಮಂತ್ರವಾಗಿದ್ದು ಪ್ಯಾಲೋಜೊ ಎಂಬುದಾಗಿ ಇದರ ಹೆಸರಾಗಿದೆ. ನಿಮ್ಮ ಆಯ್ಕೆಯ ದಿರಿಸಿಗೆ ಇದನ್ನು ಧರಿಸಿ ಸ್ಟೈಲಿಶ್ ಆಗಿ ಕಾಣಬಹುದಾಗಿದೆ. ಸೊಂಟದ ಬಳಿ ಹೆಚ್ಚಿನ ನೆರಿಗೆಯನ್ನು ಈ ಪ್ಯಾಂಟ್ ಪಡೆದುಕೊಂಡಿದ್ದು ದಪ್ಪ ದೇಹದವರಿಗೂ ಇದು ಆರಾಮದಾಯಕವಾಗಿದೆ.
ಸ್ಟ್ರಿಪ್ಸ್
ಸ್ಟಿಪ್ಸ್ ಧರಿಸಿ ಕಾಲೇಜಿನ ಫ್ಯಾಷನ್ ಕ್ವೀನ್ ನೀವಾಗಿ. ಟಿ ಶರ್ಟ್ ದಿರಿಸಿಗೂ ಈ ಸ್ಟ್ರಿಪ್ಸ್ ಅನ್ನು ಧರಿಸಿಕೊಳ್ಳಬಹುದಾಗಿದೆ. ಸ್ವಾಗ್ ಫ್ಯಾಷನ್ ಎಂದೇ ಈ ಉಡುಗೆ ಜನಜನಿತವಾಗಿದ್ದು ಹ್ಯಾಟ್ ಮತ್ತು ಸ್ನೀಕರ್ಸ್ ಅನ್ನು ಧರಿಸಿಕೊಳ್ಳಬಹುದು. ಅಂತೂ ಈ ದಿರಿಸುಗಳಿಂದ ನಿಮ್ಮ ಕಾಲೇಜು ಜೀವನದ ಶುಭಾರಂಭವನ್ನು ನೀವು ಮಾಡಿದ್ದರೆ ತಪ್ಪದೇ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ!!!



Click it and Unblock the Notifications

