Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಅಂದವನ್ನು ಹೆಚ್ಚಿಸುತ್ತೆ ಈ ಮಾರ್ಡನ್ ಬ್ಲೌಸ್ ಗಳು!
ನಾರಿಗೆ ಸೀರೆ ಅಂದ. ಹುಡುಗಿಯರು ಸೀರೆಯಲ್ಲಿ ಕಾಣುವಷ್ಟು ಸುಂದರವಾಗಿ ಬಹುಶಃ ಯಾವುದೇ ಬಟ್ಟೆಯಲ್ಲಿ ಕಾಣಿಸೋದಿಲ್ಲ ಅನ್ನಿಸುತ್ತೆ. ಮಹಿಳೆಯರು ಸೀರೆ ಉಟ್ಟುಕೊಂಡು ಬಂದರೆ ಮಹಾಲಕ್ಷ್ಮೀಯ ಕಳೆ ಬರುತ್ತೆ. ಅದ್ರಲ್ಲೂ ಈಗಂತೂ ಮಾರುಕಟ್ಟೆಯಲ್ಲಿ ಸಾವಿರಾರು ವೆರೈಟಿಯಲ್ಲಿ ಟ್ರೆಂಡಿ ಕಲೆಕ್ಷನ್ ಗಳು ಲಗ್ಗೆ ಇಟ್ಟಿದೆ. ಇದೇ ಕಾರಣಕ್ಕೆ ಇತ್ತೀಚಿಗೆ ಎಲ್ಲಾ ವಯೋಮಾನದ ಹೆಂಗಳೆಯರೂ ಸೀರೆಯತ್ತ ಆಕರ್ಷಿತರಾಗುತ್ತಿದ್ದಾರೆ.
ಬರೀ ಸೀರೆ ಚೆನ್ನಾಗಿದ್ದರೆ ಸಾಲೋದಿಲ್ಲ. ಸೀರೆಗೆ ತಕ್ಕ ಹಾಗೆ ಬ್ಲೌಸ್ ಹೊಲಿಸಿದ್ರೆ ಮಾತ್ರ ಆ ಸೀರೆ ಉಟ್ಟವರಿಗೆ ಒಂದು ಕಳೆ ಬರೋದಕ್ಕೆ ಸಾಧ್ಯ. ಇತ್ತೀಚಿಗೆ ಮಧ್ಯ ವಯಸ್ಕರು ಹಾಗೆ ಅದಕ್ಕಿಂತ ಮೇಲಿನವರು ಟ್ರೆಡಿಷನಲ್ ಸೀರೆಯತ್ತ ಆಕರ್ಷಿತರಾದರೆ, ಇತ್ತ ಯುವತಿಯರು ಮಾರ್ಡರ್ ಸೀರೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿಭಿನ್ನ ಶೈಲಿಯ ಡಿಸೈನರ್ ಬ್ಲೌಸ್ ಗಳು ಲಗ್ಗೆ ಇಟ್ಟಿದ್ದು, ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಿದೆ. ಅಷ್ಟಕ್ಕು ನಿಮ್ಮ ಸೀರೆಗೆ ಒಪ್ಪುವಂತಹ ಡಿಸೈನರ್ ಬ್ಲೌಸ್ ಕಲೆಕ್ಷನ್ ಹೇಗಿದೆ ಅಂತ ನೋಡೋಣ.

ಫುಲ್ ಸ್ಲೀವ್ ಕಪ್ಪು ಬಣ್ಣದ ಬ್ಲೌಸ್
ಕಪ್ಪು ಬಣ್ಣದ ಬ್ಲೌಸ್ ಸಾಮಾನ್ಯವಾಗಿ ಎಲ್ಲರ ಬಳಿ ಇದ್ದರೆ ಒಳ್ಳೆಯದು. ಯಾಕಂದ್ರೆ ಹೆಚ್ಚು ಕಡಿಮೆ ಎಲ್ಲಾ ಬಣ್ಣದ ಸೀರೆಯ ಜೊತೆಗೆ ಈ ಬ್ಲೌಸ್ ಮ್ಯಾಚ್ ಆಗುತ್ತೆ. ಕಪ್ಪು ಬಣ್ಣದ ಬ್ಲೌಸ್ ಅನ್ನು ಉದ್ದ ಕೈ ಇರುವಂತೆ ಹೊಲಿಸಿ. ಹಾಗೂ ಹಿಂದುಗಡೆ ಈ ರೀತಿ ಸ್ಟೈಲ್ ಆಗಿ ಹೊಲಿಸಿದರೆ ತುಂಬಾನೇ ಚೆನ್ನಾಗಿ ಕಾಣುತ್ತೆ.
ಫ್ಲವರ್ ಹ್ಯಾಂಡ್ ಬ್ಲೌಸ್
ಸೀರೆಯ ಬ್ಲೌಸ್ ಗೆ ಫ್ಲವರ್ ಹಾಂಡ್ ಡಿಸೈನ್ ಇದ್ದರೆ ತುಂಬಾನೇ ಚೆನ್ನಾಗಿ ಕಾಣುತ್ತೆ. ಈ ಡಿಸೈನ್ ಸೀರೆಗೆ ಟ್ರೆಂಡಿ ಹಾಗೂ ಕ್ಲಾಸಿ ಲುಕ್ ಕೊಡುತ್ತೆ.
ಬ್ಲೌಸ್ ವಿತ್ ಬೆಲ್ಟ್
ನಟಿ ಕೃತಿ ಸನೋನ್ ಉಟ್ಟಿರುವ ಸೀರೆ ಲುಕ್ ತುಂಬಾನೇ ಚೆನ್ನಾಗಿದೆ. ಇಲ್ಲಿ ಸೀರೆಗಿಂತ ಬ್ಲೌಸ್ ತುಂಬಾನೇ ಅಟ್ರ್ಯಾಕ್ಟಿವ್ ಆಗಿದೆ. ಲಾಂಗ್ ಫ್ಲವರ್ ಹ್ಯಾಂಡ್ ಬ್ಲೌಸ್ ಜೊತೆಗೆ ಬೆಲ್ಟ್ ಕೂಡ ಇದ್ದು, ತುಂಬಾನೇ ಸುಂದರವಾಗಿದೆ.
ಟ್ರೈ ಆಂಗಲ್ ಬಾಕ್ ಡಿಸೈನ್
ನಿಮ್ಮಲ್ಲಿ ಫ್ಯಾನ್ಸಿ ಸೀರೆ ಇದ್ದರೆ ನೀವು ಈ ರೀತಿ ಬ್ಲೌಸ್ ಹೊಲಿಸಿಕೊಳ್ಳಬಹುದು. ಬ್ಲೌಸ್ ಹಿಂದುಗಡೆ ಟ್ರೈ ಆಂಗಲ್ ಶೇಪ್ ಕೊಟ್ಟು, ರವಕೆಯ ಕೈಯಲ್ಲಿ ಈ ರೀತಿ ಡಿಸೈನ್ ಮಾಡಿಕೊಳ್ಳಿ.
ಶರ್ಟ್ ಕಾಲರ್ ಬ್ಲೌಸ್
ಇತ್ತೀಚಿಗೆ ಶರ್ಟ್ ಕಾಲರ್ ಬ್ಲೌಸ್ ತುಂಬಾನೇ ಫೇಮಸ್ ಆಗ್ತಿದೆ. ಹಿಂದಿನ ಕಾಲದಲ್ಲಿ ಈ ರೀತಿ ಬ್ಲೌಸ್ ಗಳು ಟ್ರೆಂಡಿಂಗ್ ನಲ್ಲಿದ್ದವು. ಇದೀಗ ಮತ್ತೆ ಹೆಂಗಳೆಯರು ಈ ಶರ್ಟ್ ಕಾಲರ್ ಬ್ಲೌಸ್ ನತ್ತ ಆಕರ್ಷಿತರಾಗುತ್ತಿದ್ದಾರೆ.
ಹೀಗೆ ಒಂದಾ? ಎರಡಾ? ಸಿಕ್ಕಾಪಟ್ಟೆ ಡಿಸೈನರ್ ಬ್ಲೌಸ್ ಗಳು ಮಾರುಕಟ್ಟೆಗೆ ಬಂದಿದೆ. ನಿಮ್ಮ ಸೀರೆಯ ಶೈಲಿಗೆ ಹೋಲುವಂತೆ ಬ್ಲೌಸ್ ಹೊಲಿಸಿಕೊಳ್ಳಬಹುದು. ಓಲ್ಡ್ ಈಸ್ ಗೋಲ್ಡ್ ಎನ್ನವಂತೆ ನಮ್ಮ ಅಮ್ಮನ ಕಾಲದ ಟಾಪ್ ಬ್ಲೌಸ್ ಡಿಸೈನ್ ಗಳು ಕೂಡ ಈಗ ಸದ್ದು ಮಾಡ್ತಿವೆ.



Click it and Unblock the Notifications
