Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
Smriti Mandhana : ಯಾವ ಬಾಲಿವುಡ್ ಹೀರೋಯಿನ್ ಗೂ ಕಮ್ಮಿಯಿಲ್ಲ ಸ್ಮೃತಿ ಮಂದಾನ ಬ್ಯೂಟಿ!
ಸ್ಮೃತಿ ಮಂದಾನ ಭಾರತದ ನ್ಯಾಷನಲ್ ಕ್ರಷ್. ಯಾವ ಬಾಲಿವುಡ್ ಹೀರೋಯಿನ್ ಗೂ ಇರದ ಕ್ರೇಜ್ ಈಕೆಗಿದೆ. ಭಾರತೀಯ ಮಹಿಳಾ ಕ್ರಿಕೆಟರ್ ಆಗಿರುವ ಈಕೆ ಗ್ರೌಂಡ್ ಗಿಳಿದ್ರೆ ಸಾಕು ಹೊಡಿ ಬಡಿ ಆ ಶುರು. ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಕೂಡ ಸ್ಮೃತಿ ಕಮಾಲ್ ಮಾಡ್ತಾರೆ. ಸಾಮಾನ್ಯವಾಗಿ ಪುರುಷರ ಕ್ರಿಕಿಟ್ ಬಗ್ಗೆ ಜನರಿಗೆ ಕ್ರೇಜ್ ಹೆಚ್ಚಿರುತ್ತೆ. ಕ್ರಿಕೆಟರ್ ಗಳನ್ನು ಜನ ಆರಾಧ್ಯ ದೈವಗಳಂತೆ ಪೂಜಿಸ್ತಾರೆ.
ಆದ್ರೆ ಇತ್ತೀಚಿಗೆ ಟ್ರೆಂಡ್ ಬದಲಾಗಿದ್ದು, ಮಹಿಳೆಯರ ಕ್ರಿಕೆಟ್ ಗೂ ಜನ ಅಷ್ಟೇ ಪ್ರಾಮುಖ್ಯತೆಯನ್ನು ನೀಡ್ತಾರೆ. ಕಾರಣ ಪುರುಷರಂತೆ ಮಹಿಳೆಯರೂ ಕೂಡ ಸ್ಫೋಟಕ ಆಟ ಆಡ್ತಾರೆ. ಅದ್ರಲ್ಲೂ ಮಹಿಳಾ ಕ್ರಿಕೆಟರ್ ಆಗಿರುವ ಸ್ಮೃತಿಗೆ ಭಾರತದಲ್ಲಿ ಬೇರೆಯದ್ದೇ ಕ್ರೇಜ್ ಇದೆ. ಒಂದು ಇವರ ಆಟ ಮತ್ತೊಂದು ಕಾರಣ ಇವರ ಬ್ಯೂಟಿ. ಸ್ಮೃತಿ ಕ್ರಿಕೆಟ್ ಜರ್ಸಿ ಬಿಟ್ಟು ಟ್ರೆಡಿಷನಲ್ ಲುಕ್ ನಲ್ಲೂ ಕೂಡ ಮುದ್ದು ಮುದ್ದಾಗಿ ಕಾಣ್ತಾರೆ. ಅಷ್ಟಕ್ಕೂ ಸ್ಮೃತಿಯ ಟ್ರೆಡಿಷನಲ್ ಲುಕ್ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ.

27ನೇ ವಸಂತಕ್ಕೆ ಕಾಲಿಟ್ಟ ಸ್ಮೃತಿ!
ಇವತ್ತು ಸ್ಮೃತಿ ಮಂದಾನ ತಮ್ಮ 27ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಅಭಿಮಾನಿಗಳಿಂದ ಸ್ಮೃತಿಗೆ ಶುಭಾಷಯಗಳ ಸುರಿ ಮಳೆ ಹರಿದು ಬರ್ತಿದೆ. ಹೌದು, ಸ್ಮೃತಿ ಆಟದ ಹೊರತಾಗಿ ಅವರ ಕ್ಯೂಟ್ ನೆಸ್ ಅನ್ನು ಜನ ತುಂಬಾನೇ ಇಷ್ಟ ಪಡ್ತಾರೆ. ನೋ ಮೇಕಪ್ ಲುಕ್ ನಲ್ಲಿ ಗ್ರೌಂಡ್ ಗೆ ಇಳಿಯೋ ಸ್ಮೃತಿ ಬಾಲಿವುಡ್ ಹಿರೋಯಿನ್ ಗಳನ್ನು ಮೀರಿಸುವಂತಹ ಸೌಂದರ್ಯವತಿ.
ಸ್ಮೃತಿ ಅವರ ಪರ್ಸನಾಲಿಟಿ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಿದೆ. ಉದ್ದವಾದ ಮೈಕಟ್ಟಿನೊಂದಿಗೆ ಫಿಟ್ ಆಗಿರೋ ಸ್ಮೃತಿಗೆ ಕ್ರಿಕೆಟ್ ಜರ್ಸಿ ಚೆನ್ನಾಗಿ ಒಪ್ಪುತ್ತೆ. ಆದ್ರೆ ಸ್ಮೃತಿ ಟ್ರೆಡಿಷನಲ್ ಲುಕ್ ನಲ್ಲಿಯೂ ನಾನೇನು ಕಡಿಮೆ ಇಲ್ಲ ಅನ್ನೋದನ್ನು ತೋರಿಸಿದ್ದಾರೆ.
ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಸ್ಮೃತಿ ಲುಕ್ ಗೆ ಫಿದಾ ಆಗದವರಿಲ್ಲ. ಸಾಂಪ್ರದಾಯಿಕ ಉಡುಗೆಗಳು ಕೂಡ ಸ್ಮೃತಿಗೆ ತುಂಬಾ ಚೆನ್ನಾಗಿ ಒಪ್ಪುತ್ತೆ. ವಿಶೇಷ ದಿನಗಳಲ್ಲಿ ತೆಗೆದ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಲೆಹೆಂಗಾ, ಚೂಡಿದಾರ್ ಹೀಗೆ ಯಾವುದೇ ಉಡುಗೆಯಾದ್ರೂ ಕೂಡ ಸ್ಮೃತಿಗೆ ಚೆನ್ನಾಗಿಯೇ ಒಪ್ಪುತ್ತದೆ. ಇನ್ನೂ ಇದಕ್ಕೆ ತಕ್ಕ ಒಡವೆಗಳನ್ನು ಹಾಕಿದ್ದು, ಸ್ಮೃತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಆನ್ ದಿ ಫೀಲ್ಡ್ ಆಗ್ಲಿ ಅಥವಾ ಆಫ್ ದಿ ಫೀಲ್ಡ್ ಆಗ್ಲಿ ಸ್ಮೃತಿ ಸೌಂದರ್ಯಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ. 27ನೇ ಹುಟ್ಟುಹಬ್ಬವನ್ನು ಆಚರಣೆ ಮಾಡ್ತಿರೋ ಸ್ಮೃತಿ ಬಾಳಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸೋಣ.



Click it and Unblock the Notifications
