Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಿಲನ್ ಫ್ಯಾಷನ್ ವೀಕ್‌ನಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದ ರಶ್ಮಿಕಾ ಮಂದಣ್ಣ ಡ್ರೆಸ್ಸಿಂಗ್
ರಶ್ಮಿಕಾ ಮಂದಣ್ಣ ತಮ್ಮ ಟ್ರೆಂಡಿಂಗ್ ಲುಕ್‌ನಿಂದಾನೇ ಆಗಾಗ್ಗೇ ಸುದ್ದಿಯಲ್ಲಿರ್ತಾರೆ. ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮುಟ್ಟಿದೆಲ್ಲಾ ಚಿನ್ನ ಎಂಬಂತಾಗಿದೆ. ತೆಲುಗು, ತಮಿಳಿನ ನಂತರ ಈಗ ಬಾಲಿವುಡ್‌ನಲ್ಲೂ ಸೌಂಡ್ ಮಾಡುತ್ತಿರುವ ರಶ್ಮಿಕಾ ರೇಂಜ್ ಬದಲಾಗಿದೆ. ಇತ್ತೀಚಿಗೆ ವಿದೇಶಿ ಸ್ಟಾರ್‌ಗಳ ಜೊತೆಗೂ ಇರೋ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರ ಹುಬ್ಬೇರಿಸುವಂತಿದೆ.

ಹೌದು, ಇತ್ತೀಚಿಗೆ ರಶ್ಮಿಕಾ ಥೈಲ್ಯಾಂಡ್‌ನಲ್ಲಿ ನಡೆದಿದ್ದ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡಿದ್ರು. ಈ ವೇಳೆ ತೆಗೆದ ಕೆಲ ಫೋಟೋಗಳನ್ನು ತಮ್ಮ ಇನ್ಸ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವೇಳೆ ರಶ್ಮಿಕಾ ಸೌತ್ ಕೊರಿಯನ್ ನಟರಾದ ಜುಂಗ್ ವೋ(Jung II-Woo), ಥೈ ಸ್ಟಾರ್ ಗಲ್ಫ್ ಕನಾಪುಟ್ ಟ್ರೈಪಿಪಟ್ಟಂಪೋಂಗ್(Kanawut Traipipattanpong) ಜೊತೆಗೆ ಫೋಟೋಗೆ ಫೋಸ್ ನೀಡಿದ್ರು. ಇನ್ನೂ ಆ ಫೋಟೋದ ಕೆಳಗಡೆ '' ವಿ ದ ಏಷಿಯನ್ಸ್" ಎಂದು ಬರೆದುಕೊಂಡಿದ್ದಾರೆ.
ಮಿಲನ್ ಫ್ಯಾಷನ್ ವೀಕ್‌ನಲ್ಲಿ ರಶ್ಮಿಕಾ ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ಅದಕ್ಕೆ ತಕ್ಕಂತೆ ಮೇಕಪ್ ಕೂಡ ಮಾಡಿಕೊಂಡಿದ್ದು ತುಂಬಾನೇ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದರು.
ಮಿಲನ್ ಫ್ಯಾಷನ್ ವೀಕ್‌ಗಾಗಿ ಸ್ಪೆಷಲ್ ಆಗಿ ಡಿಸೈನ್ ಮಾಡಿದ್ದ ಬಟ್ಟೆಯನ್ನೇ ರಶ್ಮಿಕಾ ಧರಿಸಿದ್ದರು. ಬಿಳಿ ಬಣ್ಣದ ಸ್ಫೋರ್ಟಿ ಕ್ಯಾಶುವಲ್ ಔಟ್‌ಫಿಟ್‌ನಲ್ಲಿ ಕಾಣಿಸಿದ್ದರು. ಬ್ಲಾಕ್ ಟಾಪ್ ಗೆ ಬಿಳಿ ಬಣ್ಣದ ಸ್ಲೀವ್‌ಲೆಸ್ ಜಾಕೆಟ್ ಹಾಗೂ ವೈಟ್ ಪ್ಯಾಂಟ್ ಧರಿಸಿದ್ದರು.
ಇನ್ನೂ ಈ ಲುಕ್‌ಗೆ ಹೋಲುವಂತೆ ಸಿಂಪಲ್ ಆಭರಣಗಳನ್ನು ಧರಿಸಿದ್ದು, ಬಿಳಿ ಬಣ್ಣದ ಸ್ನೀಕರ್ ಬಟ್ಟೆಗೆ ಒಪ್ಪುವಂತಿತ್ತು. ಇನ್ನೂ ಮೇಕಪ್ ಕೊಂಚ ಭಿನ್ನವಾಗಿದ್ದು ಗಾಢವಾಗಿ ಐ ಲೈನರ್ ಧರಿಸಿದ್ದರು. ಇಲ್ಲಿ ಕಣ್ಣಿನ ಹುಬ್ಬು ಆಕರ್ಷಿತವಾಗಿ ಕಾಣುವಂತೆ ಮೇಕಪ್ ಮಾಡಿಕೊಂಡಿದ್ದರು. ಹೇರ್ ಸ್ಟೈಲ್ ವಿಷಯಕ್ಕೆ ಬಂದ್ರೆ ಪೋನಿಟೈಲ್ ಹಾಕಿದ್ದು, ಈ ಸ್ಟೈಲ್ ರಶ್ಮಿಕಾರಿಗೆ ಬೇರೆಯದ್ದೇ ಲುಕ್ ನೀಡಿದೆ.
ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಹಾಟ್ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಡ್ರೆಸ್ಸಿಂಗ್ ಸ್ಟೈಲ್‌ನಲ್ಲಿ ಕೊಂಚ ಬದಲಾವಣೆಗಳು ಆಗಿರೋದನ್ನು ಗಮನಿಸಬಹುದು.
All Images Credits : Instagram



Click it and Unblock the Notifications



