Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ವೈರಲ್ ಆಗ್ತಿದೆ ಗೋಣಿಚೀಲದಿಂದ ಮಾಡಿದ ದುಬಾರಿ ಪ್ಯಾಂಟ್, ಇದರ ಬೆಲೆ ಎಷ್ಟು ಗೊತ್ತೇ
ಫ್ಯಾಷನ್ ಲೋಕಕ್ಕೆ ಇಂತಹದ್ದೇ ಮಿತಿ ಅನ್ನೋದು ಇಲ್ಲ. ನೀವು ಯಾವ ರೀತಿ ಬಟ್ಟೆ ತೊಟ್ಟರು ಅದು ಸ್ಟೈಲ್ ಅನ್ನುವಂತಾಗಿದೆ. ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಮಹಿಳೆಯರು ಹಾಗೂ ಪುರುಷರು ಧರಿಸುವ ಬಟ್ಟೆಗಳನ್ನು ನೋಡಿ ಅನೇಕ ಬಾರಿ ನಕ್ಕಿದ್ದು ಉಂಟು. ಸ್ಟೈಲ್ ಎಂಬ ಹೆಸರಿನಲ್ಲಿ ಸಿಕ್ಕ ಸಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಜನ ಓಡಾಡುತ್ತಾರೆ. ಈ ಹಿಂದೆಯೆಲ್ಲಾ ಸಿಕ್ಕ ಸಿಕ್ಕ ಬಟ್ಟೆಗಳನ್ನು ಧರಿಸಿದ್ರೆ ಹುಚ್ಚ ಅನ್ನುತ್ತಿದ್ದರೂ ಆದ್ರೆ ಇದೀಗ ನೀವು ಏನು ಹಾಕೊಂಡ್ರು ಅದು ಸ್ಟೈಲ್ ಎಂಬಂತಾಗಿದೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ವಿಭಿನ್ನವಾದ ಪ್ಯಾಂಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ನೀವೆಲ್ಲಾ ಗೋಣಿಚೀಲ ನೋಡಿರ್ತೀರಾ ಅಲ್ವಾ? ಮನೆಗಳಲ್ಲಿ ಅಕ್ಕಿ, ರಾಗಿ, ಬೆಳೆ ಹೀಗೆ ಅನೇಕ ಸಾಮಾಗ್ರಿಗಳನ್ನು ಅದರಲ್ಲಿ ತುಂಬಿಡುತ್ತೇವೆ. ಕೊನೆಗೆ ಅದರ ಬಳಕೆ ಮುಗಿದ ಮೇಲೆ ಕಾಲು ಒರೆಸೋ ಬಟ್ಟೆ ಮಾಡಿಕೊಳ್ಳುತ್ತೇವೆ. ಆದ್ರೆ ಇತ್ತೀಚಿಗೆ ಕಾಲ ಕೆಟ್ಟೋಗಿದೆ. ಸಿಕ್ಕ ಸಿಕ್ಕದನ್ನೆಲ್ಲಾ ಫ್ಯಾಷನ್ ಅನ್ನೋ ಹೆಸರಿನಲ್ಲಿ ಅಂಗಡಿಯವರು ಮಾರಾಟ ಮಾಡ್ತಿದ್ದಾರೆ.
ಇತ್ತೀಚಿಗೆ ಓರ್ವ ಯುವತಿ ಶಾಪಿಂಗ್‌ಗೆ ಹೋದ ಸಮಯದಲ್ಲಿ ಕಣ್ಣಿಗೆ ಬಿದ್ದ ವಿಚಿತ್ರವಾದ ಬಟ್ಟೆಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಅದು ಕೆಲವೇ ಕ್ಷಣದಲ್ಲಿ ವೈರಲ್ ಕೂಡ ಆಗಿತ್ತು.
ಈ ವಿಡಿಯೋದಲ್ಲಿ ಕಾಣ್ತಿರೋ ಪಾಲಾಜೋ (Palazzo) ಪ್ಯಾಂಟ್ ನೋಡಿದ್ರೇನೆ ನಗು ಬರುವ ಹಾಗಿದೆ. ಗೋಣಿ ಚೀಲದಿಂದ ಪಾಲಜೋ ಪ್ಯಾಂಟ್ ಅನ್ನು ಹೊಲಿಯಲಾಗಿದೆ. ಸಾಮಾನ್ಯವಾಗಿ ಗೋಣಿಚೀಲದ ಮೂಟೆಯಲ್ಲಿ ಪ್ರಿಂಟ್ ನೋಡಿರ್ತೀವಿ. ಈ ಪ್ಯಾಂಟ್‌ನ ಕಾಲಿನ ಭಾಗದಲ್ಲೂ ನೀವು ಇದನ್ನು ಕಾಣಬಹುದು. ಇದೇ ಪ್ಯಾಂಟ್ ಅನ್ನ ಬಟ್ಟೆಯ ಅಂಗಡಿಯಲ್ಲಿ ಸೇಲ್‌ಗೆ ಇಡಲಾಗಿದೆ.
60,000 ಬೆಲೆ ಬಾಳುವ ದುಬಾರಿ ಪ್ಯಾಂಟ್
ಶೆಲ್ಮಿ ಎನ್ನುವ ಯುವತಿ ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ 7,20,000 ಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅದ್ರಲ್ಲೂ ಈ ದುಬಾರಿ ಪ್ಯಾಂಟ್ ಬೆಲೆ ಬರೋಬ್ಬರಿ 60,000 ರೂಪಾಯಿ. ಹೀಗಂತ ಯುವತಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮನೆಯಲ್ಲಿ ಬಳಸಿ ಎಸೆಯೋ ಬಟ್ಟೆಗೆ ಇಷ್ಟೊಂದು ಬೆಲೆನಾ ಅಂತ ಜನ ಶಾಕ್ ಆಗಿದ್ದಾರೆ.
ಇಷ್ಟೊಂದು ದುಬಾರಿಯಾಗಿರೋ ಈ ಪ್ಯಾಂಟ್ ನ ಯಾರು ಖರೀದಿಸುತ್ತಾರೆ? ಇದಕ್ಕೇನಾದರೂ ಚಿನ್ನದ ಎಳೆಯನ್ನು ಪೋಣಿಸಿದ್ದಾರಾ? ಅಂತೆಲ್ಲಾ ಜನ ಮಾತ್ನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಪ್ಯಾಂಟ್ ಟಾಕ್ ಆಫ್ ದಿ ಟೌನ್ ಆಗಿದೆ.
ಅದೇನೇ ಇರಲಿ ಫ್ಯಾಷನ್ ಅನ್ನೋದು ಯಾವ ಹಂತಕ್ಕೆ ಬೇಕಾದ್ರು ಹೋಗಬಹುದು ಅನ್ನುವುದಕ್ಕೆ ಈ ವಿಡಿಯೋವೊಂದೆ ಸಾಕ್ಷಿ.



Click it and Unblock the Notifications
