Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Lakme Fashion Week 2023: ಅರೇ ಸೀರೆಯನ್ನು ಹೀಗೆ ಧರಿಸಬಹುದೇ, ನಮಗೆ ಗೊತ್ತೇ ಇರಲಿಲ್ಲ, ಬ್ಲೌಸ್ ಅಗ್ಯತವೇ ಇಲ್ಲ!
ನಮ್ಮ ಭಾರತದಲ್ಲಿ ನಾರಿಯರ ಮೆಚ್ಚುಗೆ ಉಡುಗೆ ಅಂದರೆ ಅದು ಸೀರೆ, ಸೀರೆಯಲ್ಲಿ ಮಾಡುವಷ್ಟು ಫ್ಯಾಷನ್ ಬೇರೆ ಯಾವ ಡ್ರೆಸ್‌ನಲ್ಲೂ ನಿಮಗೆ ಮಾಡಲಾಗುವುದು. ಒಂದೇ ಸೀರೆಯನ್ನು ಹಲವು ರೀತಿಯಲ್ಲಿ ಬಳಸಬಹುದು. ಭಾರತದಲ್ಲಿ ಸೀರೆಯನ್ನು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಾಗಿ ವಿವಿಧ ಶೈಲಿಯಲ್ಲಿ ಧರಿಸಿರುವುದನ್ನು ನೋಡಿರುತ್ತೀರಿ.

ಇದೀಗ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್‌ಗಳು ಸೀರೆ ಧರಿಸಿರುವ ರೀತಿ ನೋಡಿ ಅಯ್ಯೊಯ್ಯೋ ಈ ರೀತಿಯೆಲ್ಲಾ ಸೀರೆ ಉಡಬಹುದಾ ಎಂದು ಅಚ್ಚರಿಪಡುವುದು ಗ್ಯಾರಂಟಿ. ಇವುಗಳಲ್ಲಿ ಕೆಲವೊಂದು ನೋಡಿ ನಿಜವಾಗಲೂ ಸೀರೆಯಿಂದ ಈ ರೀತಿ ಉಟ್ಟಿದ್ದಾರಾ ಎಂದನಿಸಿದರೆ ಇನ್ನು ಕೆಲವು ಫ್ಯಾಷನ್ ಟ್ರೈ ಮಾಡಿದರೆ ಹೇಗೆ ಯುವತಿಯರಿಗೆ ಅನಿಸಿದೆ ಇರಲ್ಲ.

ಸೀರೆ ಕಂ ಬ್ಲೌಸ್
ಇಲ್ಲಿ ನೋಡಿ ಸೀರೆಯನ್ನೇ ಬ್ಲೌಸ್ ರೀತಿ ಬಳಸಿದ್ದಾರೆ. ನೋಡಕ್ಕೂ ತುಂಬಾ ಸ್ಟೈಲಿಷ್ ಆಗಿದೆ, ಬ್ಲೌಸ್ ಸ್ಟಿಚ್ಚಿಂಗ್ ಚಾರ್ಜ್ ಮಿಕ್ಕಿತು ಅಲ್ವಾ?

ಸೀರೆ ಉಟ್ಟಿದ್ದಾ, ಸುತ್ತಿದ್ದಾ?
ಈ ಮಾಡೆಲ್‌ನ ನೋಡಿ ಯಾರೋ ಸೀರೆ ಉಡಲು ಬಾರದವರು ಸುತ್ತಿದಂತೆ ಇದೆಯಲ್ಲಾ, ಆದರೆ ಇದು ಪ್ರತಿಷ್ಠಿತ ಡಿಸೈನರ್ ವಿನ್ಯಾಸಗೊಳಿಸಿದ ಫ್ಯಾಷನ್ ಇದು, ನಿಮಗೆ ಇಷ್ಟವಾಯ್ತೇ? ಈ ಸೀರೆಗೂ ಬ್ಲೌಸ್ ಅಗ್ಯತವಿಲ್ಲ.

ಹೀಗೂ ಒಂದು ಸ್ಯಾರಿ ಫ್ಯಾಷನ್
ಕೆಲವೊಂದು ಬುಕಟ್ಟು ಸಮುದಾಯದಲ್ಲಿ ಬ್ಲೌಸ್ ಧರಿಸಲ್ಲ, ಸೀರೆಯನ್ನು ಈ ರೀತಿಯಾಗು ಧರಿಸಿರುತ್ತಾರೆ, ಅದೇ ರೀತಿ ಫ್ಯಾಷನ್‌ನಲ್ಲಿ ಈ ಮಾಡೆಲ್ ಮಿಂಚಿದ್ದಾರೆ. ಕಾಲೇಜು ಯುವತಿಯರೇ ಕಾಲೇಜಿನಲ್ಲಿ ಫ್ಯಾಷನ್ ಶೋ ಇದ್ದರೆ ಹೀಗೆ ಟ್ರೈ ಮಾಡಬಹುದು.

ಸ್ಕರ್ಟ್, ಬ್ಲೌಸ್ ಅಲ್ವೇ ಅಲ್ಲ
ನೀವು ಸೀರೆಯನ್ನು ಆಕರ್ಷಕ ಮಿಡಿ ಅಥವಾ ಲಾಂಗ್ ಸ್ಕರ್ಟ್ ರೀತಿ ಬಳಸಲು ಇಷ್ಟಪಡುವುದಾದರೆ ಈ ರೀತಿ ಡ್ರೆಸ್ಸಿಂಗ ಮಾಡಬಹುದು, ಇದಕ್ಕೂ ಕೂಡ ನಿಮಗೆ ಬ್ಲಭಸ್ ಬೇಕಾಗಿಲ್ಲ, ಸೀರೆ, ಕಂ ಬ್ಲೌಸ್ ಆಗಿ ಧರಿಸಬಹುದು.
ಈ ಸಾಲಿನ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಸೀರೆಯ ಈ ಫ್ಯಾಷನ್ ನಿಮಗೆ ಖಂಡಿತ ಗಮನ ಸೆಳೆದಿರಬಹುದು ಅಲ್ವಾ?



Click it and Unblock the Notifications
