Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಲ್ಯಾಕ್ಮೆ ಫ್ಯಾಷನ್ ವೀಕ್ 2023: ಹಾಟ್ ಲುಕ್‌ನಲ್ಲಿ ಫೋಸ್ ಕೊಟ್ಟ ರೂಪದರ್ಶಿಯರು
ಲಾಕ್ಮೆ ಫ್ಯಾಶನ್ ವೀಕ್‌ಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು ರೂಪದರ್ಶಿಯರ ಜೊತೆಗೆ ಸೆಲೆಬ್ರಿಟಿಗಳು ಕೂಡ ನಾವೇನು ಕಡಿಮೆ ಇಲ್ಲ ಅನ್ನು ರೀತಿಯಲ್ಲಿ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಾ ಮಿಂಚಿದ್ದಾರೆ.

ಅಂತಹದ್ದೇ ಕೆಲವೊಂದು ಸುಂದರ ಕ್ಷಣಗಳ ಝಲಕ್ ನಿಮ್ಮ ಮುಂದೆ
ರೂಪದರ್ಶಿಗಳು ಅಂದ ಮೇಲೆ ನೋಡೋದಕ್ಕೆ ಸುಂದರವಾಗಿರ್ತಾರೆ ನಿಜ. ಇನ್ನೂ ಅವರು ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕೋದನ್ನ ನೋಡೋದಕ್ಕೆ ಎರಡು ಕಣ್ಣು ಸಾಲೋದಿಕ್ಕ.
ಸ್ಟೈಲಿಷ್ ಡಿಸೈನರ್‌ವೇರ್ ಬಟ್ಟೆಗಳನ್ನು ಧರಿಸಿದ ರೂಪದರ್ಶಿಗಳು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಶೋ ಟಾಪರ್‌ಗಳು ಆ ದಿನದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಖಂಡಿತ ತಪ್ಪಾಗೋದಿಲ್ಲ.
ಇನ್ನೂ ಸೆಲೆಬ್ರಿಟಿಗಳು ಕೂಡ ತಾವೇನು ಕಡಿಮೆ ಇಲ್ಲ ಅನ್ನುವಂತೆ ತಮ್ಮ ಮೋಹಕ ಲುಕ್‌ನಿಂದಾನೇ ಜನರನ್ನು ಮನಸೂರೆಗೊಳಿಸಿದ್ದಾರೆ.
ಫ್ಯಾಷನ್ ಲೋಕ ತುಂಬಾ ಆಸಕ್ತಿ ಹಾಗೂ ಕುತೂಹಲದಿಂದ ಎದುರು ನೋಡುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ಮಾರ್ಚ್ 9ರಿಂದ ಪ್ರಾರಂಭವಾಗಿ ಮಾರ್ಚ್ 12ಕ್ಕೆ ಮುಕ್ತಾಯವಾಗಲಿದೆ.
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಮೊದಲ ದಿನ ನೇಹಾ ಧುಫಿಯಾ ಸೇರಿದಂತೆ ಹಲವಾರು ಶೋ ಟಾಪರ್‌ಗಳು ಕಾಣಿಸಿಕೊಂಡಿದ್ದರು. ಈ ದಿನ ಉಣ್ಣೆ ಹಾಗೂ ಖಾದಿ ಬಟ್ಟೆಗಳು ಗಮನ ಸೆಳೆದೆವು.
ಈ ಫ್ಯಾಷನ್ ಶೋಗೆ ಪ್ರಸಿದ್ಧ ಫ್ಯಾಷನ್ ಡಿಸೈನ್‌ರ್‌ಗಳು, ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಡಿಸೈನರ್‌ಗಳ ನವೀನ ವಿನ್ಯಾಸದ ಉಡುಪುಗಳನ್ನು ಧರಿಸಿ ಸೆಲೆಬ್ರಿಟಿಗಳು ಹಾಗೂ ಮಾಡೆಲ್‌ಗಳು ಹೆಜ್ಜೆ ಹಾಕುವುದನ್ನು ಇಡೀ ಫ್ಯಾಷನ್ ಲೋಕ ಎದುರು ನೋಡುತ್ತಿದೆ. ಭಾರತದ ಫ್ಯಾಷನ್ ಲೋಕ ಈ 4 ದಿನಗಳು ತಮ್ಮ ನವೀನ ಡಿಸೈನ್‌ಗಳ ಮೂಲಕ ಗಮನ ಸೆಳೆಯಲಿದ್ದಾರೆ.
ನಾಲ್ಕು ದಿನದ ಸ್ಟೈಲ್ ಹಬ್ಬ ಮುಂಬೈಯ ಜಿಯೋ ವರ್ಲ್ಡ್ ಗಾರ್ಡನ್‌ನಲ್ಲಿ ನಡೆಯುತ್ತಿದ್ದು ಮಾರ್ಚ್ 12ಕ್ಕೆ ಮನೀಶ್ ಮಲ್ಹೋತ್ರಾ ಪ್ರೆಟ್ ಕಲೆಕ್ಷನ್ ಆದ ಡಿಫ್ಯೂಸ್‌ನೊಂದಿಗೆ ಮುಕ್ತಾಯವಾಗಲಿದೆ.
ರಾಹುಲ್ ಮಿಶ್ರಾ, ರುದ್ರಾಕ್ಷಾ ದ್ವಿವೇದಿ, ಮಸಾಬ ಗುಪ್ತಾ, ಸುಧೀರ್ ರಾಜ್‌ಭಾರ್ . ಭಾವ್ಯಾ ಗೋಯಿನಿಕಾ ಮುಂತಾದ ಪ್ರಸಿದ್ಧ ಸೆಲೆಬ್ರಿಟಿಗಳು ತಮ್ಮ ಡಿಸೈನ್‌ಗಳ ಕಲೆಕ್ಷನ್ ಅನ್ನು ಮಾಡೆಲ್ ಹಾಗೂ ಸೆಲೆಬ್ರಿಟಿಗಳ ಮೂಲಕ ಪ್ರದರ್ಶನ ಮಾಡಲಿದ್ದಾರೆ.
ಫ್ಯಾಷನ್ ಶೋ ಲೈವ್ ನೋಡಬಹುದೇ?
ನೀವು ಲ್ಯಾಕ್ಮೆ ಫ್ಯಾಷನ್ ವೀಕ್ ಅನ್ನು ಲೈವ್ ಆಗಿ ಜಿಯೋ ಟಿವ್ ಒಟಿಟಿ ಹಾಗೂ Voot, ಲ್ಯಾಕ್ಮೆ ಫ್ಯಾಷನ್ ವೀಕ್ ಸಾಮಾಜಿಕ ತಾಣದಲ್ಲಿ ನೋಡಬಹುದು.



Click it and Unblock the Notifications







