Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
Lakme Fashion Week 2023 : ಅಭಿಮಾನಿಗಳನ್ನು ಇಂಪ್ರೆಸ್ ಮಾಡೋದ್ರಲ್ಲಿ ಸೋತ ಅತಿಯಾ ಹಾಗೂ ಶನಾಯ!
ಇತ್ತೀಚಿಗಷ್ಟೇ ಕ್ರಿಕೆಟರ್ ಕೆ.ಎಲ್ ರಾಹುಲ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅತಿಯಾ ಶೆಟ್ಟಿ ಕೂಡ ಈ ಬಾರಿ ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಅತಿಯಾ ಶೆಟ್ಟಿಯ ಡಿಸೈನರ್ ವೇರ್ ಔಟ್‌ಫಿಟ್ ಹೇಗಿತ್ತು? ಇದೇ ದಿನ ಶೋ ಟಾಪರ್ ಆಗು ಕಾಣಿಸಿಕೊಂಡ ಮತ್ತೊಬ್ಬ ಸೆಲೆಬ್ರಿಟಿ ಯಾರು ಅನ್ನೋದನ್ನ ಹೇಳ್ತೀವಿ.
ಮದುವೆಯ ಬಳಿಕ ಇದೇ ಮೊದಲ ಬಾರಿಗೆ ಅತಿಯಾ ಶೆಟ್ಟಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು. ಮದುವೆಯ ನಂತರ ಕೊಂಚ ಬ್ಯುಸಿ ಇದ್ದ ನಟಿ ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಶೋ ಟಾಪರ್ ಆಗಿದ್ದ ಅತಿಯಾ ನೇರಳೆ ಬಣ್ಣದ ಹೊಳೆಯುವ ಜೆಮ್ ಸೂಟ್ ಧರಿಸಿದ್ದ ನಟಿ ತುಂಬಾನೇ ಸ್ಟೈಲಿಷ್ ಆಗಿ ಕಾಣಿಸಿಕೊಂಡ್ರು. ಇನ್ನೂ ತುಂಬಾನೇ ಸಿಂಪಲ್ ಲುಕ್ ಇದಾಗಿದ್ದು, ಯಾವುದೇ ರೀತಿಯ ಆಭರಣ ಧರಿಸಿರಲಿಲ್ಲ. ಲೂಸ್ ಹೇರ್‌ನಲ್ಲಿ ಕಾಣಿಸಿಕೊಂಡರು.
ಆತಿಯಾ ಶೆಟ್ಟಿ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಬದಲು ನಾರ್ಮಲ್ ಆಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಅಷ್ಟೊಂದು ಇಷ್ಟ ಆಗಿಲ್ಲ.
ಇನ್ನೂ ಈ ವಿಡಿಯೋವನ್ನು ಅವರ ಪತಿ ಕ್ರಿಕೆಟರ್ ಕೆ.ಎಲ್ ರಾಹುಲ್ ಕೂಡ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಇದೇ ದಿನ ಮತ್ತೊಬ್ಬ ಸೆಲೆಬ್ರಿಟಿ ಮಗಳು ಶನಾಯ ಕಪೂರ್ ಕೂಡ ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಶೋ ಟಾಪರ್ ಆಗಿ ಕಾಣಿಸಿಕೊಂಡರು.
ಶನಯಾ ಕಪೂರ್ ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದು, ಇವರು ಹಿರಿಯ ನಟ ಸಂಜಯ್ ಕಪೂರ್ ಮಗಳು. ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಶನಾಯ ಲುಕ್ ಅನ್ನು ಕೆಲವರು ಇಷ್ಟ ಪಟ್ರೆ ಇನ್ನೂ ಕೆಲವರು ಟ್ರೋಲ್ ಮಾಡ್ತಿದ್ದಾರೆ.
ಹಳದಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಶನಾಯ ಅದಕ್ಕೆ ಮ್ಯಾಚ್ ಆಗೋ ಟ್ಯೂಬ್ ಟಾಪ್ ಧರಿಸಿದ್ರು.
ಇನ್ನೂ ಮೇಕಪ್ ಹಾಗೂ ಹೇರ್ ಸ್ಟೈಲ್ ತುಂಬಾನೇ ಸಿಂಪಲ್ ಆಗಿತ್ತು. ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಶನಾಯ ನಾರ್ಮಲ್ ಆಗಿ ವಾಕ್ ಮಾಡಿದ್ದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.
ಒಟ್ಟಿನಲ್ಲಿ ನಟಿ ಅತಿಯಾ ಹಾಗೂ ಶನಾಯ ಲುಕ್ ಚೆನ್ನಾಗಿದ್ರು. ಆದ್ರೆ ಎಲ್ಲೋ ಒಂದು ಕಡೆ ಜನರನ್ನು ಇಂಪ್ರೆಸ್ ಮಾಡೋದ್ರಲ್ಲಿ ಅವರಿಬ್ಬರು ಸೋತಿದ್ದಾರೆ.



Click it and Unblock the Notifications






