Latest Updates
-
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ!
ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ದಪ್ಪ ಇರುವವರು ಸಣ್ಣ ಕಾಣುತ್ತಾರೆ
ಬಣ್ಣಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಅನ್ನುತ್ತಾರೆ. ಆದರೆ ಇದೇ ಬಣ್ಣದ ಬಟ್ಟೆಗಳು ನಮ್ಮನ್ನು ಸಣ್ಣದಾಗಿ ಹಾಗೂ ದಪ್ಪದಾಗಿ ಕಾಣುವಂತೆ ಸಹ ಮಾಡುತ್ತದೆ ಎಂದರೆ ನೀವು ನಂಬಲೇಬೇಕು.

ಅದರಲ್ಲೂ ಸ್ಲಿಮ್ ಆಗಿ ಕಾಣಲು ಯಾರಿಗೆ ತಾನೆ ಇಷ್ಟ ಇಲ್ಲ. ಸಣ್ಣ ಇದ್ದರೆ ಯಾರೂ ನಮ್ಮನ್ನು ರೇಗಿಸುವುದಿಲ್ಲ, ಇಷ್ಟ ಆದ ಎಲ್ಲಾ ಬಟ್ಟೆಗಳನ್ನು ಧರಿಸಬಹುದು, ಇದು ನಮ್ಮಲ್ಲಿ ಒಂದಷ್ಟು ಧೈರ್ಯವನ್ನು ಸಹ ತರುತ್ತದೆ, ಕೀಳರಿಮೆ ಇರುವುದಿಲ್ಲ, ಆತ್ಮವಿಶ್ವಾಸ ಹೆಚ್ಚಿಸುತ್ತದೆ..... ಹೀಗೆ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಕೆಲವರಿಗೆ ವಂಶವಾಹಿಯಿಂದ, ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ, ತಪ್ಪಾದ ಔಷಧಿ ಸೇವಿಸಿರುವುದರಿಂದ, ಅನಗತ್ಯವಾಗಿ ಅತಿಯಾದ ಆಹಾರ ಸೇವನೆ, ಒಬೆಸಿಟಿ ಹೀಗೆ ಸಾಕಷ್ಟು ಕಾರಣಗಳಿಂದ ದಪ್ಪಗಾಗಿರುತ್ತಾರೆ.
ಇವರು ಎಷ್ಟೇ ಪ್ರಯತ್ನಿಸಿದರೂ ಸಣ್ಣಗಾಗುವ ಎಲ್ಲ ಪ್ರಯತ್ನಗಳು ವಿಫಲವಾಗಿರುತ್ತದೆ. ಆದರೆ ಇವರಿಗೂ ಸಣ್ಣ ಕಾಣುವ ಆಸೆ ಇದ್ದೇ ಇರುತ್ತದೆ. ಇಂಥವರಿಗಾಗಿಯೇ ನಾವಿಂದು ಈ ಲೇಖನದಲ್ಲಿ ದಪ್ಪದಾಗಿ ಇರುವವರು ಎಂಥಾ ಬಣ್ಣದ ಬಟ್ಟೆ ಧರಿಸಬೇಕು, ಈ ಬಣ್ಣದ ಬಟ್ಟೆಗಳಿಂದ ಇವರು ಹೇಗೆ ಸಣ್ಣ ಕಾಣುತ್ತಾರೆ ಎಂಬುದನ್ನು ತಿಳಿಸಿಕೊಡಲಿದ್ದೇವೆ:

ಕಪ್ಪು
ಬಣ್ಣಗಳಲ್ಲೇ ಕಪ್ಪು ಇತರೆ ಎಲ್ಲಾ ಬಣ್ಣಗಳಿಗಿಂತ ಗಾಢವಾದ ಹಾಗೂ ಹೆಚ್ಚು ಬೇಡಿಕೆಯಿರುವ ಬಣ್ಣವಾಗಿದೆ, ಬಹತೇಕರ ನೆಚ್ಚಿನ ಬಣ್ಣವೂ ಹೌದು. ಫ್ಯಾಷನ್ ಡಿಸೈನರ್ ಪ್ರಕಾರ ಕಪ್ಪು ಉಡುಪನ್ನು ಧರಿಸಿದ ವ್ಯಕ್ತಿಯು ಇವರು ವಾಸ್ತವಕ್ಕಿಂತ ಕೆಲವು ಪೌಂಡ್‌ಗಳಷ್ಟು ಕಡಿಮೆ ಸಣ್ಣ ಕಾಣಿಸಿಕೊಳ್ಳುತ್ತಾರೆ ಹಾಗೂ ಧರಿಸಿದ ವ್ಯಕ್ತಿಗೂ ತಾನು ಸಣ್ಣದಾಗ ಕಾಣುತ್ತೇನೆ ಎಂಬ ಭಾವನೆ ಉಂಟುಮಾಡುತ್ತದೆ ಅಂತೆ. ಆದ್ದರಿಂದ ತಾವು ಇರುವುದಕ್ಕಿಂತ ಸಣ್ಣ ಕಾಣಲು ಹಲವು ಸೆಲೆಬ್ರಿಟಿಗಳು ಈ ತಂತ್ರವನ್ನು ಪ್ರಯತ್ನಿಸುತ್ತಾರೆ.
ಕಪ್ಪು ಬಣ್ಣಕ್ಕೆ ಸಮೀಪವಿರುವ ಕಂದು, ಕಡು ನೀಲಿ, ಚಾಕೊಲೇಟ್ ಬಣ್ಣಗಳು ಸಹ ಧರಿಸಿದವರಿಗೆ ಸ್ಲಿಮ್ ಕಾಣುತ್ತೇವೆ ಎಂಬ ಭ್ರಮೆ ಮೂಡಿಸುತ್ತದೆ. ತಾತ್ವಿಕವಾಗಿ ಹೇಳಬೇಕೆಂದರೆ, ನೀವು ಧರಿಸಿರುವ ಬಟ್ಟೆಯ ಬಣ್ಣ ಗಾಢವಾದಷ್ಟು ನೀವು ತೆಳ್ಳನೆ ಕಾಣಬಹುದು.

ಒಂದೇ ಬಣ್ಣದ ಬಟ್ಟೆ
ನಿಮ್ಮ ಎತ್ತರವನ್ನು ಎದ್ದು ಕಾಣಲು ಮತ್ತು ನೀವು ತೆಳ್ಳಗೆ ಕಾಣಿಸಿಕೊಳ್ಳಲು ಬಯಸಿದರೆ, ಮೇಲಿನಿಂದ ಕೆಳಕ್ಕೆ ಏಕವರ್ಣದ ಬಟ್ಟೆಯನ್ನು ಧರಿಸಿ. ಇದು ನೋಡುವವರ ಕಣ್ಣಿಗೆ ಲಂಬ ರೇಖೆಯನ್ನು ರಚಿಸಲು ಸಹಾಯ ಮಾಡುತ್ತದೆ, ಇದರಿಂದ ನೀವು ದಪ್ಪ ಇದ್ದರೂ ಅದನ್ನು ಮರೆಮಾಚಿ ನಿಮ್ಮ ಎತ್ತರಕ್ಕೆ ಹೆಚ್ಚು ಆದ್ಯತೆ ಸಿಗುತ್ತದೆ.

ಹಲವು ಬಣ್ಣಗಳ ಬಟ್ಟೆಗಳು
ಸಣ್ಣ ಕಾಣುವ ಒಂದೇ ಕಾರಣಕ್ಕೆ ಪ್ರತಿ ಬಾರಿ ಒಂದೇ ವಿನ್ಯಾಸದ ಅಂದರೆ ಗಾಢಬಣ್ಣದ ಅಥವಾ ಒಂದೇ ವರ್ಣದ ಬಟ್ಟೆಗಳನ್ನು ಬಟ್ಟೆಗಳನ್ನು ಧರಿಸುವ ಅಗತ್ಯವಿಲ್ಲ. ಬಣ್ಣಬಣ್ಣದ ಕಲರ್‌ಫುಲ್ ಟಾಪ್‌ಗಳಿಗೆ ಡಾರ್ಕ್ ಬಣ್ಣದ ಬಾಟಮ್ ಇದೇ ರೀತಿಯ ವಿಭಿನ್ನ ಆಯ್ಕೆಗಳನ್ನು ಸಹ ನೀವು ಧರಿಸಬಹುದು. ಇದಲ್ಲದೆ, ಕೆಂಪು ಅಥವಾ ಗುಲಾಬಿ ಬಣ್ಣಗಳು ಸಹ ನಿಮ್ಮನ್ನು ತೆಳ್ಳನೆ ಕಾಣವಂತೆ ಮಾಡಬಹುದು.



Click it and Unblock the Notifications











