Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಕೇನ್ಸ್ 2023: ಕೇನ್ಸ್ ಚಲನಚಿತ್ರೋತ್ಸವದ ಕುರಿತು ಒಂದಿಷ್ಟು ಆಸಕ್ತಿಕರ ಸಂಗತಿಗಳು
ಸಿನಿರಂಗದ ಅತ್ಯಂತ ಪ್ರತಿಷ್ಠಿತ #CannesFilmFestival 2023ಕ್ಕೆ ಕೌಂಟ್‌ಟೌನ್ ಶುರುವಾಗಿದೆ. 10 ದಿನಗಳ ಈ ಕೇನ್ಸ್ ಫೆಸ್ಟಿವಲ್‌ನಲ್ಲಿ ವಿವಿಧ ದೇಶದ ಹೆಸರಾಂತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಭಾರತದಿಂದಲೂ ಹಲವಾರು ಸೆಲೆಬ್ರಿಟಿಗಳು ಈ ಕೇನ್ಸ್ ಫೆಸ್ಟಿವಲ್‌ಗೆ ಪ್ರತಿವರ್ಷ ಭಾಗವಹಿಸುತ್ತಾರೆ. ಹೀಗೆ ಭಾಗವಹಿಸುವ ಸೆಲೆಬ್ರಿಟಿಗಳು ತಮ್ಮ ಫ್ಯಾಷನ್ ಲುಕ್‌ನಿಂದ ಸಾಕಷ್ಟು ಗಮನ ಸೆಳೆಯುವುದು ಈ ಫೆಸ್ಟಿವಲ್‌ನ ಮತ್ತೊಂದು ವಿಶೇಷತೆ.
ಈಗಷ್ಟೆ ಮೆಟ್‌ಗಾಲಾ ಫ್ಯಾಷನ್ ಶೋ ನಡೆದಿತ್ತು, ಆ ಪ್ರತಿಷ್ಠಿತ ಶೋಗೆ ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ, ಆಲಿಯಾ ಭಟ್ ಭಾಗವಹಿಸಿ ಗಮನ ಸೆಳೆದಿದ್ದರು. ಇದೀಗ ಈ ಬಾರಿಯ ಚಲನ ಚಿತ್ರೋತ್ಸವಕ್ಕೆ ಭಾರತದಿಂದ ಸನ್ನಿ ಲಿಯೋನ್, ಪತಿ ವಿರಾಟ್ ಕೊಹ್ಲಿ ಜೊತೆಗೆ ಅನಿಷ್ಕಾ ಶರ್ಮಾ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಕಳೆದ ಬಾರಿ #Cannes ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ತಮ್ಮನ್ನಾ ಭಾಟಿಯಾ ಇವರೆಲ್ಲಾ ತುಂಬಾನೇ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ ಭಾಗವಹಿಸುವ ಸೆಲೆಬ್ರಿಟಿಗಳ ಲುಕ್ ಹೇಗಿರಲಿದೆ ಎಂಬ ಕುತೂಹಲದೊಂದಿಗೆ ಫ್ಯಾಷನ್ ಲೋಕ ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದೆ.

ಕೇನ್ಸ್ ಚಲನಚಿತ್ರೋತ್ಸವ ಎಲ್ಲಿ ನಡೆಸಲಾಗುವುದು
ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದ ಕ್ಯಾನೆಸ್ ಪಟ್ಟಣದಲ್ಲಿ ಈ ಕೇನ್ಸ್ ಚಲನ ಚಿತ್ರೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಇದನ್ನು ನೀವು festivaldecannes ಮುಂತಾದ ಸಾಮಾಜಿಕ ತಾಣಗಳಲ್ಲಿ ನೋಡಬಹುದು.
#CannesFilmFestival ಕುರಿತ ಕೆಲ ಕುತೂಹಲಕಾರಿ ಸಂಗತಿ ನೋಡುವುದಾದರೆ
* 1946ರಿಂದ 1959ರವರೆಗೆ ಕೇನ್ಸ್ ಫೆಸ್ಟಿವಲ್‌ನ ಜ್ಯೂರಿಯಾಗಿ ಬರೀ ಫ್ರೆಂಚ್ ಸೆಲೆಬ್ರಿಟಿಗಳಷ್ಟೇ ಕೂರುತ್ತಿದ್ದರು. ಬೆಲೆಜಿಯನ್ ಜಾರ್ಜ್ ಸೈಮೆನನ್ ಈ ಟ್ರೆಂಡ್ ಬ್ರೇಕ್ ಮಾಡಿದರು. ಇವರೊಬ್ಬ ಆಸ್ಟ್ರೇಲಿಯನ್.
* ಮೊದಲ ಕೇನ್ಸ್ ಫಿಲ್ಮಂ ಫೆಸ್ಟಿವಲ್‌ನ ಪೋಸ್ಟರ್ ಅನ್ನು ಲೌಲೂಸ್ ಲಾರೆಟ್ ಕಸಿನ್ಸ್, ಜೀನ್ ಗಾರ್ಬ್ರೈಯಲ್ ಡೋಮೆರ್ಗ್ ಸಿದ್ಧಪಡಿಸಿದ್ದರು, ಆದರೆ ಎರಡನೇ ಮಹಾಯುದ್ಧದ ಕಾರಣ ಮೊದಲ ಫಿಲ್ಮಂ ಫೆಸ್ಟಿವಲ್ ರದ್ದು ಮಾಡಲಾಯಿತು.
* ಈ ಫಿಲ್ಮಂ ಫೆಸ್ಟಿವಲ್‌ಗೆ ಭಾಗವಹಿಸುವ ಟಾಪ್ ಸೆಲೆಬ್ರಿಟಿಗಳು 60 ಮೀಟರ್ ಕಾರ್ಪೆಟ್‌ನಲ್ಲಿ 24 ಹೆಜ್ಜೆಗಳನ್ನು ಇಡುತ್ತಾರೆ. ಈ ಚಲನ ಚಿತ್ರೋತ್ಸವ ನಡೆಯುವಾಗ ದಿನದಲ್ಲಿ ಮೂರು ಬಾರಿ ಇದನ್ನು ಬದಲಾಯಿಸಲಾಗುವುದು.
* ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 20.000 ಯುರೋ ಪಾವತಿಸಬೇಕು.



Click it and Unblock the Notifications
