Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೇನ್ಸ್ ಚಲನಚಿತ್ರೋತ್ಸವ 2023: ಮಾಜಿ ವಿಶ್ವಸುಂದರಿ ನೋಟಕ್ಕೆ ಮರುಳಾಗದವರಿಲ್ಲ!
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬ್ಯೂಟಿಗೆ ಮರುಳಾಗದೇ ಇರುವವರು ಯಾರು ಇಲ್ಲ. ವಯಸ್ಸು 49 ಆದ್ರೂ ಕೂಡ ಐಶ್ವರ್ಯಾ ಸೌಂದರ್ಯಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐಶ್ವರ್ಯಾ ರೈ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ಲುಕ್ ಹೇಗಿತ್ತು ಅನ್ನೋದನ್ನು ನೋಡೋಣ.
ಸಿಲ್ವರ್ ಗೌನ್ ನಲ್ಲಿ ಮಿಂಚಿದ ಐಶ್ವರ್ಯಾ
ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಖ್ಯಾತ ತಾರೆಯರು ತಮ್ಮದೇ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ಎಲ್ಲರ ಕಣ್ಮನ ಸೆಳೆದಿದ್ದು ಮಾತ್ರ ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ. ಸಿಲ್ವರ್ ಮತ್ತು ಕಪ್ಪು ಬಣ್ಣದ ಗೌನ್ ತೊಟ್ಟ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ ಮಾಜಿ ವಿಶ್ವ ಸುಂದರಿಯನ್ನು ಕಂಡು ಎಲ್ಲರೂ ಒಂದು ಸಾರಿ ಬೆರಗಾಗಿ ಹೋಗಿದ್ರು.

ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಚೆಂದುಳ್ಳಿ ಚೆಲುವೆಯಂತೆ ಕಾಣಿಸಿಕೊಂಡಿದ್ರು. ಅವರು ತೊಟ್ಟಿದ್ದ ಡಿಸೈನರ್ ಗೌನ್ ಕೂಡ ತುಂಬಾನೇ ವಿಭಿನ್ನವಾಗಿದ್ದು, ಐಶ್ವರ್ಯಾ ಬ್ಯೂಟಿಗೆ ಹೇಳಿ ಮಾಡಿಸಿದಂತಿತ್ತು.
ಐಶ್ವರ್ಯಾ ಕಣ್ಣೋಟಕ್ಕೆ ಸೋತ ಪ್ರೇಕ್ಷಕರು!
ನಟಿ ಐಶ್ವರ್ಯಾ ರೈ ಅವರು ತಮ್ಮ ನೀಲಿ ಕಣ್ಣುಗಳಿಂದಲೇ ಜನಪ್ರಿಯರಾಗಿದ್ದವರು. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅವರ ಕಣ್ಣು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು ಅಂದ್ರೆ ತಪ್ಪಾಗೋದಿಲ್ಲ. ಅವರು ಧರಿಸಿದ್ದ ಗೌನ್ ಗೆ ಮ್ಯಾಚ್ ಆಗುವಂತೆ ಕಣ್ಣಿಗೆ ಮೇಕಪ್ ಮಾಡಲಾಗಿತ್ತು. ಇದರಿಂದ ಅವರ ಕಣ್ಣುಗಳು ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದವು.
ಒಟ್ಟಿನಲ್ಲಿ ಐಶ್ವರ್ಯಾ ರೈ ಕೇನ್ಸ್ ಚಲನಚಿತ್ರೋತ್ಸದ ಅಂಗವಾಗಿ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದು ಮಾತ್ರ ಆ ಕಾರ್ಯಕ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.



Click it and Unblock the Notifications

